For Quick Alerts
ALLOW NOTIFICATIONS  
For Daily Alerts

ನೆಕ್ಸಸ್‌ ಮಾಲ್‌ಗಳಲ್ಲಿ ಜಿಯೋ-ಬಿಪಿಯ ಇವಿ ಚಾರ್ಜಿಂಗ್‌ ಸ್ಟೇಷನ್‌

|

ಮುಂಬೈ, ಜೂನ್ 22: ರಿಲಯನ್ಸ್‌ ಮತ್ತು ಬಿಪಿ ಜಂಟಿ ಸಂಸ್ಥೆಯಾಗಿರುವ ಜಿಯೋ-ಬಿಪಿ ಅಡಿಯಲ್ಲಿ ನೆಕ್ಸಸ್‌ ಮಾಲ್‌ಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಸ್ಥಾಪಿಸಲಿದೆ. 13 ನಗರಗಳಲ್ಲಿ ನೆಕ್ಸಸ್‌ನ 17 ಮಾಲ್‌ಗಳು ಇದ್ದು, ಇದರಲ್ಲಿ ಅತ್ಯಾಧುನಿಕ ಚಾರ್ಜಿಂಗ್‌ ಸ್ಟೇಷನ್‌ಗಳು ಮತ್ತು ಬ್ಯಾಟರಿ ಸ್ವ್ಯಾಪಿಂಗ್‌ ಸ್ಟೇಷನ್‌ಗಳನ್ನು ಸ್ಥಾಪಿಸಲಾಗುತ್ತದೆ.

 

ಎಲೆಕ್ಟ್ರಾನಿಕ್ ವಾಹನಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಜಿಯೋ-ಬಿಪಿ ಶ್ರಮಿಸುತ್ತಿದೆ. ಕಳೆದ ವರ್ಷ ಭಾರತದಲ್ಲೇ ಎರಡು ಅತಿದೊಡ್ಡ ಇವಿ ಚಾರ್ಜಿಂಗ್‌ ಹಬ್‌ಗಳನ್ನು ಕಂಪನಿ ಸ್ಥಾಪಿಸಿದೆ. ನೆಕ್ಸಸ್‌ ಮಾಲ್‌ಗಳ ಜೊತೆಗಿನ ಈ ಸಹಭಾಗಿತ್ವದ ಅಡಿಯಲ್ಲಿ ದಿನವಿಡೀ ಕೆಲಸ ಮಾಡುವ ಚಾರ್ಜಿಂಗ್‌ ಮೂಲಸೌಕರ್ಯವನ್ನು ಸ್ಥಾಪಿಸಲಾಗುತ್ತದೆ.

 

ಇದು ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಚಾರ್ಜಿಂಗ್‌ ಮತ್ತು ಬ್ಯಾಟರಿ ಸ್ವ್ಯಾಪಿಂಗ್‌ ವ್ಯವಸ್ಥೆ ಇರಲಿದೆ. ಮೊದಲ ಹಂತದಲ್ಲಿ, ನವಿ ಮುಂಬೈ, ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಅಹಮದಾಬಾದ್‌ನಲ್ಲಿರುವ ನೆಕ್ಸಸ್‌ ಮಾಲ್‌ಗಳಲ್ಲಿ ಜೂನ್ 2022 ರಿಂದ ಚಾರ್ಜಿಂಗ್‌ ಸ್ಟೇಷನ್‌ಗಳು ಲಭ್ಯವಾಗಿರಲಿವೆ.

ನೆಕ್ಸಸ್‌ ಮಾಲ್‌ಗಳಲ್ಲಿ ಜಿಯೋ-ಬಿಪಿಯ ಇವಿ ಚಾರ್ಜಿಂಗ್‌ ಸ್ಟೇಷನ್‌

ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಹೆಚ್ಚು ಜನರು ಬಳಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, ತಮ್ಮ ಮಾಲ್‌ಗಳಲ್ಲಿ ವಾಹನಗಳನ್ನು ಚಾರ್ಜ್‌ ಮಾಡಿಸಿಕೊಳ್ಳುವಂತೆ ತಮ್ಮ ಗ್ರಾಹಕರಿಗೆ ನೆಕ್ಸಸ್‌ ಪ್ರೋತ್ಸಾಹಿಸಲಿದೆ. 13 ನಗರಗಳಲ್ಲಿ 17 ಮಾಲ್‌ಗಳನ್ನು ಹೊಂದಿರುವ ನೆಕ್ಸಸ್‌ ಮಾಲ್‌ಗಳು ಸದ್ಯ ದೇಶದ ಅತಿದೊಡ್ಡ ಮಾಲ್‌ಗಳಲ್ಲಿ ಒಂದಾಗಿದೆ. ಇದು ಈಗಾಗಲೇ 100% ವಹಿವಾಟು ಚೇತರಿಕೆಯನ್ನು ಗಳಿಸಿದೆ.

ಸಾಂಕ್ರಾಮಿಕ ರೋಗದ ಸಮಯದಲ್ಲಿ ನೆಕ್ಸಸ್‌ ಮಾಲ್‌ಗಳು ಗ್ರಾಹಕರಲ್ಲಿ ವಿಶ್ವಾಸ ಮೂಡಿಸಲು ಹಲವು ಕ್ರಮಗಳನ್ನು ತೆಗೆದುಕೊಂಡಿತ್ತು. ಇದರಿಂದಾಗಿ ಮಾಲ್‌ಗಳಲ್ಲಿ ವಹಿವಾಟು ಅತ್ಯಂತ ಬೇಗ ಚೇತರಿಸಿಕೊಂಡಿದೆ.

ಜಿಯೋ-ಬಿಪಿ ಪಲ್ಸ್‌ ಅಡಿಯಲ್ಲಿ ಭಾರತೀಯ ಗ್ರಾಹಕರಿಗೆ ಚಾರ್ಜಿಂಗ್‌ ಮೂಲಸೌಕರ್ಯವನ್ನು ಜಿಯೋ-ಬಿಪಿ ಜಂಟಿ ಸಂಸ್ಥೆಯು ಒದಗಿಸುತ್ತಿದೆ. ಜಿಯೋ-ಬಿಪಿ ಪಲ್ಸ್‌ ಮೊಬೈಲ್‌ ಆಪ್‌ ಬಳಸಿಕೊಂಡು ಗ್ರಾಹಕರು ತಮ್ಮ ಸಮೀಪದಲ್ಲಿ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಹುಡುಕಬಹುದು ಮತ್ತು ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಸುಲಭವಾಗಿ ಚಾರ್ಜ್‌ ಮಾಡಿಕೊಳ್ಳಬಹುದು.

English summary

Jio-bp to power Nexus Malls EV journey in Bengaluru

Jio-bp to power Nexus Malls electric vehicle journey in Bengaluru
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X