For Quick Alerts
ALLOW NOTIFICATIONS  
For Daily Alerts

ಜಿಯೋದಿಂದ ಡಿಸ್ನಿ+ ಹಾಟ್ ಸ್ಟಾರ್‌ನೊಂದಿಗೆ ಮೂರು ತಿಂಗಳ ಭರ್ಜರಿ ಆಫರ್

|

ರಿಲಯನ್ಸ್ ಜಿಯೋ ಹೊಸದಾಗಿ ನಾಲ್ಕು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಕಟಿಸಿದೆ. ರೂ 151, ರೂ 333, ರೂ 583 ಮತ್ತು ರೂ 783 ಯೋಜನೆಗಳಾಗಿವೆ. ಈ ಎಲ್ಲಾ ಯೋಜನೆಗಳು ಬಳಕೆದಾರರಿಗೆ ಮೂರು ತಿಂಗಳ ಉಚಿತ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ನೀಡುತ್ತದೆ.

 

ಡಿಸ್ನಿ+ ಹಾಟ್ ಸ್ಟಾರ್ ಜೊತೆಗಿನ ಈ ಪಾಲುದಾರಿಕೆಯ ಮೂಲಕ, ಜಿಯೋ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ಆಯ್ದ ರೀಚಾರ್ಜ್‌ಗಳೊಂದಿಗೆ ಡಿಸ್ನಿ+ ಹಾಟ್ ಸ್ಟಾರ್ 3-ತಿಂಗಳ ಮೊಬೈಲ್‌ ಚಂದಾದಾರಿಕೆಯನ್ನು ಯಾವುದೇ ಹೆಚ್ಚುವರಿ ವೆಚ್ಚ ವಿಲ್ಲದೆ ನೀಡಲು ಮುಂದಾಗಿದೆ.

ಗ್ರಾಹಕರು 3 ತಿಂಗಳವರೆಗೆ ಉಚಿತ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಪಡೆದಲು ವಿವಿಧ ಜಿಯೋ ರೀಚಾರ್ಜ್ ಪ್ಲಾನ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆಯ್ಕೆ ಮಾಡಿದ ಪ್ಲಾನ್‌ನ ಆಧಾರದ ಮೇಲೆ ಜಿಯೋ ಬಳಕೆದಾರರು ಅನಿಯಮಿತ ಧ್ವನಿ, ಡೇಟಾ, ಎಸ್ ಎಮ್ ಎಸ್ ಮತ್ತು ಇತರ ಪ್ರಯೋಜನಗಳನ್ನು ಸಹ ಪಡೆಯಬಹುದು.

ರೂ. 151ರ ರೀಚಾರ್ಜ್ ಪ್ಲಾನ್

ರೂ. 151ರ ರೀಚಾರ್ಜ್ ಪ್ಲಾನ್

ರೂ 151 ಯೋಜನೆಯು ಡೇಟಾ-ಮಾತ್ರ ಯೋಜನೆಯಾಗಿದ್ದು, ಬಳಕೆದಾರರಿಗೆ 8GB ಡೇಟಾವನ್ನು ನೀಡುತ್ತದೆ. ಈ ಯೋಜನೆಯ ಲಾಭ ಪಡೆಯಲು, ಬಳಕೆದಾರರಿಗೆ ಸಕ್ರಿಯ ಬೇಸ್ ಪ್ಲಾನ್ ಕೂಡ ಅಗತ್ಯವಿದೆ. ಈ ಯೋಜನೆಯು ಬಳಕೆದಾರರಿಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯ ಮೂರು ತಿಂಗಳ ಚಂದಾದಾರಿಕೆಯನ್ನು ಬಂಡಲ್ ಮಾಡುತ್ತದೆ.

ರೂ. 333ರ ರೀಚಾರ್ಜ್ ಪ್ಲಾನ್

ರೂ. 333ರ ರೀಚಾರ್ಜ್ ಪ್ಲಾನ್

ಈ ಪ್ಲಾನ್ ರೀಚಾರ್ಜ್ ಮಾಡಿಸುವ ಗ್ರಾಹಕರು 28 ದಿನಗಳ ವ್ಯಾಲಿಡಿಟಿಯೊಂದಿಗೆ ದಿನಕ್ಕೆ ಉಚಿತವಾಗಿ 100 SMS ಕಳುಹಿಸಬಹುದಾಗಿದೆ. ಅಲ್ಲದೇ ದಿನಕ್ಕೆ 1.5GB 4G ವೇಗದ ಡೇಟಾದೊಂದಿಗೆ ಹೊಸ ಬಳಕೆದಾದರರು ಉಚಿತವಾಗಿ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳಲಿದ್ದಾರೆ. ಇದಲ್ಲದೇ ಜಿಯೋ ಆಪ್ ಗಳನ್ನು ಉಚಿತವಾಗಿ ಬಳಸಿಕೊಳ್ಳುವುದರ ಜೊತೆಗೆ ಈ ಯೋಜನೆಯು ಬಳಕೆದಾರರಿಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯ ಮೂರು ತಿಂಗಳ ಚಂದಾದಾರಿಕೆಯನ್ನು ಬಂಡಲ್ ಮಾಡುತ್ತದೆ.

ರೂ. 583ರ ರೀಚಾರ್ಜ್ ಪ್ಲಾನ್
 

ರೂ. 583ರ ರೀಚಾರ್ಜ್ ಪ್ಲಾನ್

ಈ ಪ್ಲಾನ್ ರೀಚಾರ್ಜ್ ಮಾಡಿಸುವ ಗ್ರಾಹಕರು 56 ದಿನಗಳ ವ್ಯಾಲಿಡಿಟಿಯೊಂದಿಗೆ ದಿನಕ್ಕೆ ಉಚಿತವಾಗಿ 100 SMS ಕಳುಹಿಸಬಹುದಾಗಿದೆ. ಅಲ್ಲದೇ ದಿನಕ್ಕೆ 1.5GB 4G ವೇಗದ ಡೇಟಾ ಪಡೆಬಹುದು. ಈ ಪ್ಲಾನ್ ನಲ್ಲಿ ಹೊಸ ಬಳಕೆದಾರರು ರೂ. 99 ಪಾವತಿಸಿ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳಬಹುದು, ಹಳೇ ಬಳಕೆದಾರರಿಗೆ ಯಾವುದೇ ಶುಲ್ಕವಿಲ್ಲ . ಇದಲ್ಲದೇ ಜಿಯೋ ಆಪ್ ಗಳನ್ನು ಉಚಿತವಾಗಿ ಬಳಸಿಕೊಳ್ಳುವುದರ ಜೊತೆಗೆ ಈ ಯೋಜನೆಯು ಬಳಕೆದಾರರಿಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯ ಮೂರು ತಿಂಗಳ ಚಂದಾದಾರಿಕೆಯನ್ನು ಬಂಡಲ್ ಮಾಡುತ್ತದೆ.

ರೂ. 783ರ ರೀಚಾರ್ಜ್ ಪ್ಲಾನ್

ರೂ. 783ರ ರೀಚಾರ್ಜ್ ಪ್ಲಾನ್

ಈ ಪ್ಲಾನ್ ರೀಚಾರ್ಜ್ ಮಾಡಿಸುವ ಗ್ರಾಹಕರು 84 ದಿನಗಳ ವ್ಯಾಲಿಡಿಟಿಯೊಂದಿಗೆ ದಿನಕ್ಕೆ ಉಚಿತವಾಗಿ 100 SMS ಕಳುಹಿಸಬಹುದಾಗಿದೆ. ಅಲ್ಲದೇ ದಿನಕ್ಕೆ 1.5GB 4G ವೇಗದ ಡೇಟಾ ಪಡೆಬಹುದು. ಈ ಪ್ಲಾನ್ ನಲ್ಲಿ ಹೊಸ ಬಳಕೆದಾರರು ರೂ. 99 ಪಾವತಿಸಿ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳಬಹುದು, ಹಳೇ ಬಳಕೆದಾರರಿಗೆ ಯಾವುದೇ ಶುಲ್ಕವಿಲ್ಲ . ಇದಲ್ಲದೇ ಜಿಯೋ ಆಪ್ ಗಳನ್ನು ಉಚಿತವಾಗಿ ಬಳಸಿಕೊಳ್ಳುವುದರ ಜೊತೆಗೆ ಈ ಯೋಜನೆಯು ಬಳಕೆದಾರರಿಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯ ಮೂರು ತಿಂಗಳ ಚಂದಾದಾರಿಕೆಯನ್ನು ಬಂಡಲ್ ಮಾಡುತ್ತದೆ.

English summary

Jio launches new plans with 3-month Disney+ Hotstar subscription: Details here

Telecom major Reliance Jio on Wednesday launched new plans with unlimited data, voice and three-month Disney+ Hotstar subscription starting at Rs 333.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X