ಡಿಸೆಂಬರ್ 6ರಂದು 'ಆಲ್ ಇನ್ ಒನ್' ಪ್ಲಾನ್ ಘೋಷಿಸುವ ಮೂಲಕ ಹಳೆಯ ಪ್ರಿಪೇಯ್ಡ್ ಯೋಜನೆಗಳಿಂದ ಹೊರಬಂದಿದ್ದ ಜಿಯೋ, ಮತ್ತೆ ಪುನಃ ಹಳೆಯ 98, 148 ರುಪಾಯಿಯ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಕಟಿಸಿದೆ.
ಜಿಯೋ ಪ್ರಕಟಿಸಿರುವ 2 ಹೊಸ ಯೋಜನೆಗಳಲ್ಲಿ ಒಂದಾದ 98 ರುಪಾಯಿ ರೀಚಾರ್ಜ್ ಮಾಡಿದರೆ ಪ್ರತಿದಿನ 2ಜಿಬಿ ಮೊಬೈಲ್ ಡೇಟಾ, 300 ಎಸ್‌ಎಂಎಸ್, ಜಿಯೋ ಅಪ್ಲಿಕೇಶನ್, ಜಿಯೋನಿಂದ ಜಿಯೋಗೆ ಉಚಿತ ಕರೆಗಳು ಸಿಗಲಿದೆ. ಆದರೆ ಐಯುಸಿ ನಿಮಿಷಗಳನ್ನು ಸೇರಿಸಿಲ್ಲ. ಮೊಬೈಲ್ ಡೇಟಾ ತಿಂಗಳ ಯೋಜನೆಯನ್ನು ಮೀರಿದರೆ 64 kbps ವೇಗದಲ್ಲಿ ಇಂಟರ್ನೆಟ್ ಬಳಸಬಹುದು. ಇದರ ವ್ಯಾಲಿಡಿಟಿ 28 ದಿನಗಳು.

ಜಿಯೋ 149 ಪ್ರಿಪೇಯ್ಡ್ ಯೋಜನೆಯಲ್ಲಿ ಪ್ರತಿದಿನ 1 ಜಿಬಿ ಡೇಟಾ ಸಿಗಲಿದೆ. ಹಾಗೂ ಜಿಯೋನಿಂದ ಜಿಯೋಗೆ ಉಚಿತ ಕರೆಗಳು, 100 ಎಸ್‌ಎಂಎಸ್, ಜಿಯೋ ಅಪ್ಲಿಕೇಶನ್ ಸೌಲಭ್ಯವಿದ್ದು ಇದರ ವ್ಯಾಲಿಡಿಟಿ 24 ದಿನಗಳು ಮಾತ್ರ.
ಡಿಸೆಂಬರ್ 3ರಂದು ಕರೆ ಹಾಗೂ ಡೇಟಾ ದರಗಳನ್ನು ಏರಿಸಿದ ಬಳಿಕ ಇತ್ತೀಚೆಗಷ್ಟೇ ಏರ್‌ಟೆಲ್, ವೊಡಾಫೋನ್ ಐಡಿಯಾ ಕಂಪನಿಯು ಉಚಿತ ಕರೆ ಮೇಲೆ ಹೇರಿದ್ದ ಮಿತಿಯನ್ನು ತೆಗೆದು ಹಾಕಿರುವುದಾಗಿ ಘೋಷಿಸಿದ್ದವು. ಈ ಮೂಲಕ ಏರ್‌ಟೆಲ್, ವೊಡಾಫೋನ್ ಐಡಿಯಾ ಅನ್‌ಲಿಮಿಟೆಡ್ ಯೋಜನೆಗಳಲ್ಲಿ ಅನ್‌ಲಿಮಿಟೆಡ್ ಕರೆಗಳು ಮಾಡಬಹುದು.
ಏರ್‌ಟೆಲ್ ಹಾಗೂ ವೊಡಾಫೋನ್ ಐಡಿಯಾಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಜಿಯೋ ತನ್ನ ಹಳೆಯ ಪ್ರಿಪೇಯ್ಡ್ ಯೋಜನೆಗಳನ್ನು ಪುನಃ ಪ್ರಕಟಿಸಿದೆ.


Click it and Unblock the Notifications