ಹಿರಿಯ ನಾಗರಿಕರಿಗೆ ಬೆಂಗಳೂರಲ್ಲಿ ಉದ್ಯೋಗ ಮೇಳ

ಬೆಂಗಳೂರು, ಆಗಸ್ಟ್‌ 21: ಇದೊಂದು ವಿಶೇಷ ಪ್ರಯತ್ನವಾಗಿದ್ದು ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ಹಿರಿಯ ನಾಗರಿಕರಿಗಾಗಿ ಆ.25 ಭಾನುವಾರ ಉದ್ಯೋಗ ಮೇಳ ಆಯೋಜಿಸಿದೆ. ಲ್ಯಾಂಗ್‌ಫೋರ್ಡ್ ಟೌನ್‌ನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.
ದೈಹಿಕವಾಗಿ ಸದೃಢರಾಗಿರುವ 55-70 ವರ್ಷದೊಳಗಿನ ಹಿರಿಯ ನಾಗರಿಕರು ಮೇಳದಲ್ಲಿ ಪಾಲ್ಗೊಳ್ಳಬಹುದು. ಕೌಶಲ್ಯ ಇದು ಮತ್ತು ಕೆಲಸ ಮಾಡಲು ಉತ್ಸುಕರಾಗಿರುವವರಿಗೆ ಮೇಳದಲ್ಲಿ ವಿವಿಧ ಅವಕಾಶ ದೊರೆಯಲಿದೆ.

ಅನುಭವಿ ಎಂಜಿನಿಯರ್‌ಗಳು, ತಂತ್ರಜ್ಞರು, ಮೇಲ್ವಿಚಾರಕರು, ನಿರ್ವಾಹಕರು, ಶಿಕ್ಷಕರು, ಅಕೌಂಟೆಂಟ್‌ಗಳು, ರಿಟೇಲ್ ಆಸಕ್ತರು, ಮಾರುಕಟ್ಟೆ ಸಿಬ್ಬಂದಿ ಮತ್ತು ಟೆಲಿ-ಕಾಲರ್‌ಗಳಿಗೆ ಅವಕಾಶಗಳು ಲಭ್ಯವಿದೆ.

ಹಿರಿಯ ನಾಗರಿಕರಿಗೆ ಬೆಂಗಳೂರಲ್ಲಿ ಉದ್ಯೋಗ ಮೇಳ

ನಿರಂತರ ಉದ್ಯೋಗ ಮೇಳ:

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ 'ಯೂನಿಟಿ ಜಾಬ್ ಫೇರ್' ಸಹ ಆಯೋಜನೆ ಮಾಡಲಾಗಿತ್ತು. ಮಾಹಿಮ್ ದರ್ಗಾ ಇತರ ಎನ್‌ಜಿಒಗಳೊಂದಿಗೆ ಕೈಜೋಡಿಸಿ ಮೇಳ ಆಯೋಜಿಸಿತ್ತು. ಆಗಸ್ಟ್ 17 ರಂದು ಸಾಂತಾಕ್ರೂಜ್‌ನ ಸೇಕ್ರೆಡ್ ಹಾರ್ಟ್ ಬಾಯ್ಸ್ ಸ್ಕೂಲ್‌ನಲ್ಲಿ ನಡೆದ ಯುನಿಟಿ ಉದ್ಯೋಗ ಮೇಳಕ್ಕೆ ಮುಸ್ಲಿಂ ವೃತ್ತಿಪರರ ಸಂಘ ಮತ್ತು ಬಾಂಬೆ ಕ್ಯಾಥೋಲಿಕ್ ಸಭಾ ಸಹಯೋಗ ನೀಡಿತ್ತು. ಮೇಳಕ್ಕೆ 100 ಕಾರ್ಪೊರೇಟ್‌ಗಳು ಕಂಪನಿಗಳು 2000 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.

ರಾಮನಗರ ಜಿಲ್ಲೆ ಚೆನ್ನಪಟ್ಟಣದಲ್ಲಿ ಉದ್ಯೋಗ ಮೇಳ:

ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಆಗಸ್ಟ್‌ 30ರಂದು ಆಯೋಜಿಸಲಾಗಿದೆ. 5 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಉದ್ಯೋಗವಕಾಶವಿದ್ದು, ಆಸಕ್ತರು ಅಗತ್ಯ ದಾಖಲೆಗಳ ಜೊತೆ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಜಿಲ್ಲಾಡಳಿತ ರಾಮನಗರ ಇವರ ಸಹಯೋಗದಲ್ಲಿ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಗಸ್ಟ್ 30ರಂದು ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ 150ಕ್ಕೂ ಹೆಚ್ಚಿನ ಪ್ರತಿಷ್ಠಿತ ಕಂಪನಿಗಳು ಭಾಗಿಯಾಗಲಿದ್ದು, 10 ಸಾವಿರಕ್ಕೂ ಅಧಿಕ ಉದ್ಯೋಗಾವಕಾಶವಿದೆ. ಮಹಿಳೆಯರಿಗೆ 5 ಸಾವಿರಕ್ಕೂ ಅಧಿಕ ಉದ್ಯೋಗಾವಕಾಶವಿದೆ. ಆಸಕ್ತರು ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಕರೆ ನೀಡಲಾಗಿದೆ. ವಿದ್ಯಾರ್ಹತೆ ವಿವರ: ಚನ್ನಪಟ್ಟಣದಲ್ಲಿ ನಡೆಯುವ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಎಸ್‌ಎಸ್‌ಎಲ್‌ಸಿ (ಉತ್ತೀರ್ಣ/ ಅನುರ್ತೀರ್ಣ), ಪಿಯುಸಿ, ಐಟಿಐ, ಡಿಪ್ಲೊಮಾ ಮತ್ತು ಎಲ್ಲಾ ಪದವೀಧರರು ಪಾಲ್ಗೊಳ್ಳಬಹುದು ಎಂದು ತಿಳಿಸಲಾಗಿದೆ.

ಯುವಕ/ ಯುವತಿಯರು ಅಗತ್ಯ ದಾಖಲೆಗಳ ಜೊತೆಗೆ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು. ಆಸಕ್ತರು ನೋಂದಣಿ ಮಾಡಿಕೊಳ್ಳಲು https://skillconnect.kaushalkar.com/ ಲಿಂಕ್ ಅನ್ನು ಬಳಕೆ ಮಾಡಬಹುದು.

ಚಿತ್ರದುರ್ಗದಲ್ಲಿ ಉದ್ಯೋಗ ಮೇಳ:

ಚಿತ್ರದುರ್ಗ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಆಗಸ್ಟ್ 23ರಂದು ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ. ಬೆಳಗ್ಗೆ 10.30 ರಿಂದ ಮಧ್ಯಾಹ್ನ 3ರ ತನಕ ನೇರ ನೇಮಕಾತಿಗಾಗಿ ಸಂದರ್ಶನ ನಡೆಯಲಿದೆ. ಈ ಉದ್ಯೋಗ ಮೇಳದಲ್ಲಿ ಖಾಸಗಿ ಕಂಪನಿಗಳು ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಪುರುಷ, ಮಹಿಳಾ ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆಮಾಡಿಕೊಳ್ಳಲಿವೆ.

ಈ ಉದ್ಯೋಗ ಮೇಳದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ, ಡಿಪ್ಲೊಮಾ, ಐಟಿಐ, ಯಾವುದೇ ಪದವಿ ಹೊಂದಿರುವ 18 ರಿಂದ 30 ವರ್ಷದೊಳಗಿರುವ ಅಭ್ಯರ್ಥಿಗಳು ಭಾಗವಹಿಸಬಹುದು. ಸಂದರ್ಶನಕ್ಕೆ ಆಗಮಿಸುವಾಗ 5 ಪ್ರತಿ ಬಯೋಡೇಟಾ, ವಿದ್ಯಾರ್ಹತೆ ಪ್ರಮಾಣ ಪತ್ರ ಹಾಗೂ ಫೋಟೋಗಳನ್ನು ತರಬೇಕು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ನಗರದ ಸ್ಟೇಡಿಯಂ ರಸ್ತೆ ತಿರುವಿನಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕಚೇರಿಗೆ ಭೇಟಿ ನೀಡಬಹುದು. ದೂರವಾಣಿ ಸಂಖ್ಯೆ 7022459064, 8105619020, 9945587060ಗೆ ಸಂಪರ್ಕಿಸಬಹುದು.

ಪದ್ಮನಾಭನಗರದಲ್ಲಿ ಬೃಹತ್ ಉದ್ಯೋಗ ಮೇಳ:

ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್. ಆರ್. ರಮೇಶ್ ರವರ ನೇತತ್ವದಲ್ಲಿ, ಎಂ.ಎಲ್.ಆರ್. ಕುಟುಂಬದ ಸಹಯೋಗದೊಂದಿಗೆ ಪದ್ಮನಾಭನಗರದ ಪುಟ್ಟಲಿಂಗಯ್ಯ ಆಟದ ಮೈದಾನ ಮತ್ತು ಕಾರ್ಮೆಲ್ ಶಾಲೆಯ ಸಭಾಂಗಣದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿತ್ತು.

ಉದ್ಯೋಗ ಮೇಳವನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಉದ್ಘಾಟಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 12,000ಕ್ಕೂ ಹೆಚ್ಚು ಮಂದಿ ಉದ್ಯೋಗಕಾಂಕ್ಷಿಗಳು ಆಗಮಿಸಿದ್ದು ವಿಶೇಷವಾಗಿತ್ತು. ಈ ವೇಳೆ 200ಕ್ಕೂ ಹೆಚ್ಚು ಕಾರ್ಪೊರೇಟ್ ಮತ್ತು ಎಂ.ಎನ್.ಸಿ ಕಂಪನಿಗಳ ಮುಖ್ಯಸ್ಥರು ಭಾಗವಹಿಸಿದ್ದರು.

ವಂಚಕರಿದ್ದಾರೆ ಎಚ್ಚರ:

ಉದ್ಯೋಗ ಮೇಳ ಆಯೋಜನೆ ಮಾಡಿದ್ದ ಎನ್. ಆರ್. ರಮೇಶ್, ಎಂ.ಎಲ್.ಆರ್. ಕುಟುಂಬ ಮುಖ್ಯ ಸಂಗತಿಯೊಂದನ್ನು ತಿಳಿಸಿದೆ. ಈ ಕಾರ್ಯಕ್ರಮವನ್ನು ಕೇವಲ ನಿರುದ್ಯೋಗಿ ಯುವಕ / ಯುವತಿಯರಿಗೆ ಉಚಿತವಾಗಿ ಉದ್ಯೋಗ ದೊರಕಿಸಿಕೊಡಬೇಕೆಂಬ ಸಾಮಾಜಿಕ ಕಳಕಳಿಯೊಂದಿಗೆ ನಡೆಸಲಾಗಿದ್ದು, ಸದರಿ ಕಾರ್ಯಕ್ರಮಕ್ಕೆ ಭಾಗವಹಿಸಿ ಉದ್ಯೋಗ ಪಡೆದುಕೊಳ್ಳುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶುಲ್ಕಗಳನ್ನು ವಿಧಿಸಿರುವುದಿಲ್ಲ ಹಾಗೂ ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ನೀಡಲಾಗಿರುವುದಿಲ್ಲ ಎಂಬ ಸ್ಪಷ್ಟನೆ ನೀಡಿದೆ.

ಆದರೆ, ಕೆಲವು ವಂಚಕರು / ಮಧ್ಯವರ್ತಿಗಳು ಈ ಬೃಹತ್ ಉದ್ಯೋಗ ಮೇಳದ ಹೆಸರಿನಲ್ಲಿ ಹಲವಾರು ಅಭ್ಯರ್ಥಿಗಳಿಗೆ ಕೆಲಸ ಕೊಡಿಸುವ ಆಮಿಷದೊಂದಿಗೆ ದೂರವಾಣಿ ಮತ್ತು Online Link ಗಳ ಮೂಲಕ ಶುಲ್ಕದ ರೂಪದಲ್ಲಿ ಹಣ ನೀಡುವಂತೆ ಬೇಡಿಕೆ ಇಟ್ಟಿರುವುದು ತಿಳಿದುಬಂದಿರುತ್ತದೆ. ಆದ ಕಾರಣ ಯಾವುದೇ ಅಭ್ಯರ್ಥಿಗಳೂ ಸಹ ಈ ರೀತಿ ಕೆಲಸ ಕೊಡಿಸುವುದಾಗಿ ಹೇಳಿ ದೂರವಾಣಿ ಮೂಲಕ ಮತ್ತು Online link ಗಳ ಮೂಲಕ ಹಣದ ಬೇಡಿಕೆ ಇಡುತ್ತಿರುವವರ ಆಮಿಷಗಳಿಗೆ ಒಳಗಾಗಿ ಹಣ ನೀಡಬಾರದೆಂದು ಸಂಘಟಕರು ಮನವಿ ಮಾಡಕೊಂಡಿದ್ದಾರೆ. ಪೊಲೀಸ್ ದೂರು ದಾಖಲಿಸಲು ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+