For Quick Alerts
ALLOW NOTIFICATIONS  
For Daily Alerts

ಜುಲೈನಲ್ಲಿ 46ಕ್ಕೆ ತಲುಪಿದ PMI; ಸತತ 4ನೇ ತಿಂಗಳು ಕುಸಿತ

|

ಭಾರತೀಯ ಉತ್ಪಾದನೆ ವಲಯ ಜುಲೈ ತಿಂಗಳಲ್ಲಿ ನಿಧಾನವಾಗಿದೆ. ದೇಶಾದ್ಯಂತ ಘೋಷಣೆ ಮಾಡಲಾಗಿದ್ದ ಎರಡು ತಿಂಗಳ ಲಾಕ್ ಡೌನ್ ನಿಂದಾಗಿ ಬೇಡಿಕೆ ಹಾಗೂ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ತೀವ್ರ ಗತಿಯಲ್ಲಿ ಆರ್ಥಿಕತೆ ಕುಗ್ಗುವ ಅವಕಾಶಗಳಿವೆ ಎಂದು ಖಾಸಗಿ ವ್ಯಾಪಾರ ಸಮೀಕ್ಷೆ ಸೋಮವಾರ ತಿಳಿಸಿದೆ.

ದೇಶದಾದ್ಯಂತ ಲಾಕ್ ಡೌನ್ ವಿಸ್ತರಣೆ ಹಿನ್ನೆಲೆಯಲ್ಲಿ ಬೇಡಿಕೆ ಕಡಿಮೆ ಆಗುವಂತೆ ಮಾಡಿದ್ದು, ಜುಲೈನಲ್ಲಿ ಉತ್ಪಾದನೆ ಕುಗ್ಗಿದೆ. ಐಎಚ್ ಎಸ್ ಮಾರ್ಕಿಟ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (PMI) ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

ಕೊರೊನಾವೈರಸ್ ಲಾಕ್‌ಡೌನ್ ಎಫೆಕ್ಟ್: 30 ಲಕ್ಷ ಕೋಟಿ ರುಪಾಯಿ ನಷ್ಟದ ಅಂದಾಜು

ಉತ್ಪಾದನೆ PMI ಜುಲೈನಲ್ಲಿ 46 ತಲುಪಿದೆ. ಜೂನ್ ತಿಂಗಳಲ್ಲಿ 47.2 ಇತ್ತು. PMI 50ರ ಸಂಖ್ಯೆ ದಾಟಿದರೆ ಅದರರ್ಥ ವಿಸ್ತರಣೆ. ಅದಕ್ಕಿಂತ ಕಡಿಮೆ ಇದ್ದಲ್ಲಿ ಕುಗ್ಗಿದೆ ಎಂದರ್ಥ. ಏಪ್ರಿಲ್ ತಿಂಗಳಲ್ಲಿ PMI ಐತಿಹಾಸಿಕ ಕುಸಿತವಾದ 27.4ಕ್ಕೆ ತಲುಪಿತ್ತು. ಆ ನಂತರ ಸ್ಥಿರವಾಗಿ ಏರಿಕೆ ಕಾಣುತ್ತಾ ಬಂತು.

ಜುಲೈನಲ್ಲಿ 46ಕ್ಕೆ ತಲುಪಿದ PMI; ಸತತ 4ನೇ ತಿಂಗಳು ಕುಸಿತ

 

ಈ ಸಂಖ್ಯೆಯಿಂದ ಮತ್ತೆ ಉತ್ಪಾದನೆಗೆ ಚಾಲನೆ ಸಿಕ್ಕಿರುವುದು ಗೊತ್ತಾಗುತ್ತದೆ. ಹೊಸ ಆರ್ಡರ್ ಗಳು ಬರುತ್ತಿವೆ. ಕಳೆದ ಎರಡು ತಿಂಗಳಿಂದ ಸ್ಥಿರತೆ ಬರುತ್ತಿದೆ. ಕೊರೊನಾಗೆ ಲಸಿಕೆ ಬಂದು, ಚಟುವಟಿಕೆಗಳು ಮತ್ತೆ ಆರಂಭವಾಗಿ, ನಿರ್ಬಂಧಗಳನ್ನು ಸಂಪೂರ್ಣ ತೆರವು ಮಾಡಿದಲ್ಲಿ ಬೇಡಿಕೆ ಚಿಗಿತುಕೊಳ್ಳುತ್ತದೆ ಎನ್ನುತ್ತಾರೆ ಆರ್ಥಿಕ ತಜ್ಞರು. ಅದೇ ಕೊರೊನಾ ಪ್ರಕರಣ ಹೆಚ್ಚಾಗಿ, ಮತ್ತೆ ಲಾಕ್ ಡೌನ್ ತಂದಲ್ಲಿ ಆರ್ಥಿಕತೆಗೆ ಸರಿಯಾದ ಪೆಟ್ಟು ಬೀಳುತ್ತದೆ ಅಂತಲೂ ಎಚ್ಚರಿಸುತ್ತಾರೆ.

ಮಾರ್ಚ್ ಕೊನೆಯಿಂದ ಲಾಕ್ ಡೌನ್ ಜಾರಿ ಮಾಡಿದ ಮೇಲೆ ವ್ಯವಹಾರ ಕುಸಿದುಹೋಯಿತು. ರಫ್ತು ಕಡಿಮೆ ಆಯಿತು. ಅಷ್ಟೇ ಏಕೆ, ಇಡೀ ವಿಶ್ವದ ಆರ್ಥಿಕತೆ ಕುಸಿಯಿತು. PMI ಸಮೀಕ್ಷೆ ಪ್ರಕಾರ ಉತ್ಪಾದಕರು ಉದ್ಯೋಗ ಕಡಿತ ಮಾಡುತ್ತಿದ್ದಾರೆ. ಜೂನ್ ನಲ್ಲೂ ಅದೇ ಪ್ರಮಾಣದಲ್ಲಿ ಆಗಿದೆ.

ಸತತವಾಗಿ ನಾಲ್ಕನೇ ತಿಂಗಳು ಹೊಸದಾಗಿ ಆರ್ಡರ್ ಗಳು ಬಂದಿಲ್ಲ. ಕಾರ್ಮಿಕರ ಹಾಗೂ ಕಚ್ಚಾ ವಸ್ತುಗಳ ಕೊರತೆ ಮತ್ತು ಸಾಗಾಟ ಸಮಸ್ಯೆ ಕೂಡ ಇದ್ದೇ ಇದೆ. ಇನ್ನು ಉತ್ಪಾದನಾ ವಲಯದಲ್ಲಿ ಜೂನ್ ನಿಂದ ಬಿರುಸು ಕಾಣಿಸಿಕೊಂಡಿದೆ. ಆದರೆ ಈಗಿನ ಬಿಕ್ಕಟ್ಟಿನ ಕಾರಣಕ್ಕೆ ನಿಧಾನ ಗತಿಯಲ್ಲಿದೆ.

ಮಾರಾಟ ಕಡಿಮೆ ಆಗಿದೆ ಎಂಬುದನ್ನು ಪ್ರಸ್ತಾವ ಮಾಡುವ ವೇಳೆಯಲ್ಲಿಯೇ ವ್ಯಾಪಾರ- ವ್ಯವಹಾರ ಬಾಗಿಲು ಹಾಕಿರುವುದನ್ನು ಕೂಡ ತಿಳಿಸಲಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೇಡಿಕೆ ಕಡಿಮೆ ಆದ ಮೇಲೆ ಪರಿಸ್ಥಿತಿ ಮತ್ತಷ್ಟು ಗಂಭಿರವಾಯಿತು. ಭಾರತ ಅತಿ ಹೆಚ್ಚು ವಸ್ತುಗಳನ್ನು ರವಾನಿಸುವ ಯು.ಎಸ್., ಗಲ್ಫ್ ರಾಷ್ಟ್ರಗಳು ಹಾಗೂ ಯುರೋಪಿಯನ್ ಒಕ್ಕೂಟದಲ್ಲೂ ಕೊರೊನಾ ವೈರಾಣು ಬಿಕ್ಕಟ್ಟು ಸೃಷ್ಟಿಸಿದೆ.

ಸಮೀಕ್ಷೆಯಲ್ಲಿ ಭಾಗವಹಿಸಿದ್ದವರು ಹೇಳುವ ಪ್ರಕಾರ, ಕೊರೊನಾ ಇನ್ನೆಷ್ಟು ಸಮಯ ಇರುತ್ತದೆ ಎಂಬ ಬಗ್ಗೆ ಗೊತ್ತಿಲ್ಲದಿರುವ ಕಾರಣ ಗ್ರಾಹಕರು ಆರ್ಡರ್ ನೀಡಲು ಹಿಂಜರಿಯುತ್ತಿದ್ದಾರೆ. ಈಗ ರಫ್ತಿನಲ್ಲಿ ಕಡಿಮೆ ಆಗಿರುವುದು ಕಳೆದ ನಾಲ್ಕು ತಿಂಗಳಲ್ಲೇ ಕನಿಷ್ಠ ಪ್ರಮಾಣದ್ದು ಎನ್ನಲಾಗುತ್ತಿದೆ.

PMI ಸಮೀಕ್ಷೆ ಪ್ರಕಾರ, ಮುಂದಿನ ಒಂದು ವರ್ಷದ ನಂತರ ಹೇಗಿರುತ್ತದೆ ಎಂದು ನೋಡಿದರೆ ಉತ್ಪಾದಕರು ಸಕಾರಾತ್ಮಕ ಆಲೋಚನೆ ಹೊಂದಿದ್ದಾರೆ. ಜನರಲ್ಲಿ ಆಶಾಭಾವ ಮೂಡುತ್ತಿದೆ. ಈ ಪ್ರಮಾಣ ಐದು ತಿಂಗಳಲ್ಲೇ ಗರಿಷ್ಠ ಮಟ್ಟದಲ್ಲಿದೆ.

English summary

July Month PMI touched 46; Overall Activity Shrinks For Consecutive 4th Month

Due to Corona impact July month PMI touched 46. Overall activity shrinks consecutive 4th month.
Company Search
COVID-19