Karnataka 2nd PUC Result: 2025-2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದವರಿಗೆ ಗುಡ್ ನ್ಯೂಸ್ ಪಿಯುಸಿ ಫಲಿತಾಂಶ ದಿನಾಂಕ ಪ್ರಕಟದ ಬಿಗ್ ಅಪ್ಡೇಟ್‌ವೊಂದು ಸಿಕ್ಕಿದೆ.ಈಗಾಗಲೇ ಸಕೆಂಡ್ ಪಿಯುಸಿ ಪರೀಕ್ಷೆಯು ಮಾರ್ಚ್ 1ರಂದು ಪ್ರಾರಂಭವಾಗಿ ಮಾರ್ಚ್ 20ವರೆಗೆ ನಡೆದಿದೆ.ಹಾಗಾದ್ರೆ ಪಲಿತಾಂಶ ವೀಕ್ಷಿಸುವುದು ಹೇಗೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಹೌದು,ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಏಪ್ರಿಲ್‌ನಲ್ಲಿ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2025 ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಆದರೆ ನಿಖರವಾದ ಮಾಹಿತಿಯನ್ನು ಇನ್ನೂ ಪರೀಕ್ಷಾ ಮಂಡಳಿ ಪ್ರಕಟ ಮಾಡಿಲ್ಲ. ವಿದ್ಯಾರ್ಥಿಗಳು ಪರೀಕ್ಷೆಯ ಫಲಿತಾಂಶದ ಹೊಸ ಅಪ್ಡೇಟ್‌ಗಳಿಗಾಗಿ ಅಧಿಕೃತ ವೆಬ್‌ಸೈಟ್‌ಗಳಾದ kseab.karnataka.gov.in/english ಮತ್ತು karresults.nic.in ಅನ್ನು ಪರಿಶೀಲನೆ ಮಾಡಬೇಕು ಎಂದು ಶಿಕ್ಷಣ ಮಂಡಳಿ ಮಾಹಿತಿಯನ್ನು ತಿಳಿಸಿದೆ.

ಪ್ರಸ್ತುತ ದ್ವಿತೀಯ ಪಿಯುಸಿ ಪರೀಕ್ಷೆ 2025 ರ ಮೌಲ್ಯಮಾಪನ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಹಿಂದಿನ ವರ್ಷಕ್ಕೆ ಗಮನಿಸಿದರೆ, ಫಲಿತಾಂಶಗಳನ್ನು ಸಾಮಾನ್ಯವಾಗಿ ಏಪ್ರಿಲ್‌ನಲ್ಲಿ ಘೋಷಿಸಲಾಗುತ್ತದೆ. ಕಳೆದ ವರ್ಷ ಫಲಿತಾಂಶವನ್ನು ಏಪ್ರಿಲ್ 10, 2024 ರಂದು ಪ್ರಕಟಿಸಲಾಯಿತು ಮತ್ತು 2023 ರಲ್ಲಿ ಏಪ್ರಿಲ್ 21 ರಂದು ಪ್ರಕಟಿಸಲಾಯಿತು.ಈ ಬಾರಿಯೂ ಇದೇ ತಿಂಗಳು ಪ್ರಕಣ ಮಾಡುವ ಸಾಧ್ಯತೆ ಹೆಚ್ಚಾಗಿ ಇದೆ.
ಪಲಿತಾಂಶ ವೀಕ್ಷಿಸುವುದು ಹೇಗೆ?
ಪಿಯುಸಿ ಫಲಿತಾಂಶ ಘೋಷಿಸಿದ ನಂತರ, ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗಳಾದ kseab.karnataka.gov.in/english ಮತ್ತು karresults.nic.in ಭೇಟಿ ನೀಡಿ ವಿದ್ಯಾರ್ಥಿಯ ನೋಂದಣಿ ಸಂಖ್ಯೆ ಹುಟ್ಟಿದ ದಿನಾಂಕ ಮತ್ತು ಕ್ಯಾಪ್ಚಾ ಕೋಡ್ ಬಳಸಿ ತಮ್ಮ ಫಲಿತಾಂಶವನ್ನು ವೀಕ್ಷಣೆ ಮಾಡಬಹುದು.
ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2025 ಪರಿಶೀಲಿಸುವುದು ಹೇಗೆ?
ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಆನ್‌ಲೈನ್‌ನಲ್ಲಿ ಪಡೆಯಲು ಕೆಳಗಿನ ಹಂತಗಳನ್ನು ಅನುಸರಿಬೇಕಾಗುತ್ತದೆ.
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: kseab.karnataka.gov.in/english ಅಥವಾ karresults.nic.in
- '2ನೇ ಪಿಯುಸಿ ಫಲಿತಾಂಶ 2025' ಎಂದು ಹೇಳುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ರೋಲ್ ಸಂಖ್ಯೆ, ನೋಂದಣಿ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
- ವಿಭಾಗ( ಕೋರ್ಸ) ಆಯ್ಕೆಯನ್ನು ಆರಿಸಿ: ವಿಜ್ಞಾನ, ವಾಣಿಜ್ಯ ಅಥವಾ ಕಲೆ
- ಸಲ್ಲಿಸು ಕ್ಲಿಕ್ ಮಾಡಿ
- ನಿಮ್ಮ ಪರದೆಯ ಮೇಲೆ ಫಲಿತಾಂಶ ಕಾಣುತ್ತದೆ. ಈ ಪುಟವನ್ನು ಡೌನ್‌ಲೋಡ್ ಮಾಡಿಟ್ಟುಕೊಳ್ಳಿ. ಅಂಕಪಟ್ಟಿ ತಡವಾಗಿ ಸಿಗುವುದರಿಂದ ಇದನ್ನು ಪ್ರಿಂಟ್ ಮಾಡಿಟ್ಟುಕೊಳ್ಳಿ. ಇದು ನಿಮಗೆ ಮುಂದಿನ ಶಿಕ್ಷಣದ ಹಂತಕ್ಕೆ ಸೇರಲು ಸಹಾಯಕವಾಗುತ್ತದೆ.
ಕರ್ನಾಟಕ ದ್ವಿತೀಯ ಪಿಯುಸಿ ಅಂಕಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು, ರೋಲ್ ನಂಬರ್, ಒಟ್ಟು ಅಂಕಗಳು, ವಿಷಯವಾರು ಅಂಕಗಳು ಹಾಗೂ ಫಲಿತಾಂಶ ಇರುತ್ತದೆ.
ದ್ವಿತೀಯ ಪಿಯುಸಿ ಪರೀಕ್ಷೆ ಯಾವಾಗ ಆರಂಭವಾಗಿತ್ತು?
ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯು ಮಾರ್ಚ್ 1ರಂದು ಆರಂಭವಾಗಿ ಮಾರ್ಚ್ 20ವರೆಗೆ ನಡೆದಿತ್ತು. ಎಲ್ಲಾ ಪರೀಕ್ಷಾ ದಿನಗಳಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ಪರೀಕ್ಷೆಗಳು ನಡೆದಿದ್ದವು.
ಹಿಂದಿನ ವರ್ಷದ ಫಲಿತಾಂಶ ದಿನಾಂಕಗಳ ವಿವರ ಹೀಗಿದೆ
ವರ್ಷ ಫಲಿತಾಂಶ ದಿನಾಂಕ
2024 ಏಪ್ರಿಲ್ 10
2023 ಏಪ್ರಿಲ್ 21
2022 ಜೂನ್ 18
ಕಳೆದ ವರ್ಷ ಏಪ್ರಿಲ್ 10ರಂದು ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದಲ್ಲಿ ಶೇಕಡ 81.15ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಪದವಿಪೂರ್ವ ಮಂಡಳಿಯು ಸಾಮಾನ್ಯವಾಗಿ ಯಾವಾಗಲೂ ಪ್ರಿಲ್‌ನಲ್ಲಿ ಫಲಿತಾಂಶಗಳನ್ನು ಪ್ರಕಟಿಸುವ ಸಾಧ್ಯತೆಯಿದೆ.
ಕರ್ನಾಟಕದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವು ಯಾವಾಗ ಬಿಡುಗಡೆಯಾಗಲಿದೆ ಎನ್ನುವ ಕುತೂಹಲ ವಿದ್ಯಾರ್ಥಿಗಳಲ್ಲಿ ಇದೆ ಆದ್ರೆ ಫಲಿತಾಂಶ ಬರುವವರೆಗೂ ತಾಳ್ಮೆಯಿಂದ ಕಾದುನೋಡಬೇಕಿದೆ.


Click it and Unblock the Notifications