ಸಾಲ ವಸೂಲಿಗಾರರೇ ಎಚ್ಚರ; ಮೈಕ್ರೋ ಫೈನಾನ್ಸ್ ವಿಧೇಯಕ್ಕೆ ಅಂಗೀಕಾರ.. ಸಾಲಗಾರರಿಗೆ ಕಿರುಕುಳ ನೀಡಿದರೆ 5 ಲಕ್ಷ ವರೆಗೂ ದಂಡ

ಸಾಲ ವಸೂಲಿಗಾರರೇ ಎಚ್ಚರ...ಸಾಲ ಪಡೆಯುವ ಮತ್ತು ನಂತರದ ಸಾಲಗಳಲ್ಲಿಯೇ ಮುಳುಗಿಹೋಗಿರುವರನ್ನು ರಕ್ಷಿಸುವ ಉದ್ದೇಶದ 2025ನೇ ಸಾಲಿನ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರವನ್ನು ನೀಡಲಾಗಿದೆ.. ನೀವು ನಿಯಮ ಉಲ್ಲಂಘಿಸಿ ಸಾಲ ವಸೂಲಿ ಮಾಡಿದ್ದರೆ ದಂಡ ಕಟ್ಟಬೇಕಾಗುತ್ತದೆ.

ಹೌದು, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ (Micro Finance) ಸಂಬಂಧ ಸಾಕಷ್ಟು ಜನರು ಕಿರುಕುಳ ಅನುಭವಿಸಿದ್ದರು ಅಲ್ಲದೆ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೆಲ್ಲಾ ಆದ ನಂತರ ಎಚ್ಚೆತ್ತುಕೊಂಡ ಸರ್ಕಾರ ಮೈಕ್ರೋ ಫೈನಾನ್ಸ್‌ಗಳ ಕಾನೂನು ಬಾಹಿರ ಹಣ ವಸೂಲಿಗೆ ಇದೀಗ ಬ್ರೇಕ್‌ ಹಾಕಿದೆ.

ಸಾಲ ವಸೂಲಿಗಾರರೇ ಎಚ್ಚರ; ಮೈಕ್ರೋ ಫೈನಾನ್ಸ್ ವಿಧೇಯಕ್ಕೆ  ಅಂಗೀಕಾರ

ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಮೈಕ್ರೋ ಫೈನಾನ್ಸ್ ತಡೆಗೆ ಮಸೂದೆಯನ್ನು ಮಂಡನೆ ಮಂಡನೆ ಮಾಡಿದ್ದರು. ಇದೀಗ ಸ್ಪೀಕರ್ ಯುಟಿ ಖಾದರ್ ವಸೂದೆಯನ್ನು ಅಂಗೀಕಾರ ಮಾಡಿದ್ದಾರೆ.

ಮೇಲಾಧಾರ ಅಥವಾ ಕ್ರೆಡಿಟ್ ಸ್ಕೋರ್ ಅವಶ್ಯಕತೆಗಳ ತೊಂದರೆಯಿಲ್ಲದೆ ತ್ವರಿತ ಸಾಲವನ್ನು ನೀಡಲಾಗುತ್ತದೆ. ಆದರೆ ಸಾಲಗಾರರನ್ನು ಬಲವಂತದ ವಸೂಲಾತಿ ಪದ್ಧತಿಗಳಿಗೆ ಒಡ್ಡುತ್ತದೆ. ಪರಿಣಾಮ ಸರ್ಕಾರವು ಇತ್ತೀಚೆಗೆ ಮೈಕ್ರೋ ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ತಡೆಗಟ್ಟುವಿಕೆ) ಮಸೂದೆ, 2025 ಅನ್ನು ಮಂಡಿಸಿದೆ. ಇದು ಪರವಾನಗಿ ಪಡೆಯದ ಮತ್ತು ನೋಂದಾಯಿಸದ ಕಿರುಬಂಡವಾಳ ಸಂಸ್ಥೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಿದೆ.

ನೋಂದಾಯಿಸದ ಸಾಲದಾತರು ಸಂಗ್ರಹಿಸಿದ ಯಾವುದೇ ಭದ್ರತೆಗಳನ್ನು ಬಿಡುಗಡೆ ಮಾಡಬೇಕೆಂದು ಮಸೂದೆಯು ಆದೇಶವನ್ನು ನೀಡಿದೆ. ಬಡ್ಡಿ ಸೇರಿದಂತೆ ಯಾವುದೇ ಮರುಪಾವತಿ ಬಾಧ್ಯತೆಗಳಿಂದ ಪರಿಣಾಮಕಾರಿಯಾಗಿ ಬಿಡುಗಡೆ ಮಾಡಲಾಗುತ್ತದೆ.

ಕರ್ನಾಟಕದಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳು 1 ಕೋಟಿಗೂ ಹೆಚ್ಚು ವ್ಯಕ್ತಿಗಳಿಗೆ ಬೆಂಬಲ ನೀಡುತ್ತಿದ್ದು, 63 ಲಕ್ಷ ಸಾಲಗಾರರು ಮೈಕ್ರೋಕ್ರೆಡಿಟ್ ಸಾಲಗಳನ್ನು ಅವಲಂಬಿಸಿದ್ದಾರೆ.

ಈ ವಿಧೇಯಕ ಕುರಿತು ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಮಾತನಾಡಿ, ಈಗ ಜಾರಿಯಲ್ಲಿರುವ ಕಾಯ್ದೆಗಳ ಮೂಲಕವೇ ಹಣಕಾಸು ದಂಧೆಕೋರರನ್ನು ಬಗ್ಗು ಬಡಿಯಬಹುದಾಗಿತ್ತು. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಯಿತು. ಕೆಲವು ಬಡಜನರ ಪ್ರಾಣ ನಷ್ಟವಾಗಿತ್ತು ಎಂದು ಮಾತನಾಡಿದ್ದಾರೆ.

ಈ ಉದ್ದೇಶಿತ ಕಾನೂನಿನಿಂದ ನ್ಯಾಯಾಲಯದಲ್ಲಿ ವಿಳಂಬವಾಗದಂತೆ ನೋಡಿಕೊಳ್ಳಬೇಕು. ನ್ಯಾಯಯುತವಾಗಿ ಸಾಲ ನೀಡುವವರಿಗೂ ತೊಂದರೆಯಾಗದಂತೆ ಗಮನ ಹರಿಸಬೇಕು ಎಂಬ ಸಲಹೆಯನ್ನ ಸರ್ಕಾರಕ್ಕೆ ನೀಡಿದ್ದಾರೆ.

ವಿರೋಧಪಕ್ಷದ ಉಪನಾಯಕ ಅರವಿಂದ ಬೆಲ್ಲದ್‌ ಮಾತನಾಡಿ, ಫೈನಾನ್‌್ಸ ದಂಧೆ ತೀವ್ರವಾಗಿದೆ. ಇಸ್ಪೀಟ್‌ ದಂಧೆ, ಗಾಂಜಾ ಮಾಫಿಯಾ ಸೇರಿದಂತೆ ಕೆಟ್ಟ ದಂಧೆಕೋರರು ಫೈನಾನ್‌್ಸ ನಡೆಸುತ್ತಾರೆ. ಶೇ.10 ರಷ್ಟು ಬಡ್ಡಿ ವಿಧಿಸುವ ದೊಡ್ಡ ಜಾಲವೂ ಇದೆ. ಪರೋಕ್ಷವಾಗಿ ಪೊಲೀಸರ ಸಹಕಾರವೂ ಇರುತ್ತದೆ. ಕಾನೂನಿನ ಮೂಲಕ ಬಡಜನರ ಮೇಲೆ ದೌರ್ಜನ್ಯವಾಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಅವರು ಮಾತನಾಡಿದ್ದರು.

ಕಾಂಗ್ರೆಸ್‌‍ ಶಾಸಕರಾದ ಲಕ್ಷ್ಮಣ್‌ ಸವದಿ, ರಂಗನಾಥ್‌, ನಂಜೇಗೌಡ ಸೇರಿದಂತೆ ಬಿಜೆಪಿ ಶಾಸಕರು ಚರ್ಚೆಯಲ್ಲಿ ಪಾಲ್ಗೊಂಡು ಸಲಹೆ ನೀಡಿದರು.ನಂತರ ಪ್ರತಿಕ್ರಿಯಿಸಿದ ಕಾನೂನು ಸಚಿವರು, ಆರ್ಥಿಕವಾಗಿ ದುರ್ಬಲ ಗುಂಪುಗಳು ಮತ್ತು ವ್ಯಕ್ತಿಗಳು ವಿಶೇಷವಾಗಿ ಮಹಿಳೆಯರು, ಮಹಿಳಾ ಸ್ವಸಹಾಯ ಸಂಘವನ್ನು ರಕ್ಷಿಸಲು ಉದ್ದೇಶವನ್ನು ನೀಡಲಾಗಿದೆ.

ಮೈಕ್ರೋಫೈನಾನ್‌್ಸ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು ಸಂಸ್ಥೆಗಳನ್ನು ನಿಯಂತ್ರಿಸಲು ಪರಿಣಾಮಕಾರಿ ಕಾರ್ಯ ವ್ಯವಸ್ಥೆಯನ್ನು ಜಾರಿಗೆ ತರುವ ವಿಧೇಯಕಗಳನ್ನು ಒಳಗೊಂಡಿದೆ ಎಂದು ಅವರು ಹೇಳಿದ್ದರು.

ಇನ್ನೂ ನೋಂದಾಯಿತವಲ್ಲದ ಲೇವಾದೇವಿದಾರರನ್ನು ನಿಯಂತ್ರಿಸುವುದು, ಮೂಲಭೂತ ಹಕ್ಕುಗಳ ರಕ್ಷಣೆಯನ್ನು ಖಚಿತಪಡಿಸುವುದು ಮೊದಲಾದ ಅಂಶಗಳನ್ನು ಅವರು ಒಳಗೊಂಡಿದ್ದಾರೆ.

ಕಾನೂನು ಬದ್ಧ ಲೇವಾದೇವಿಯನ್ನು ನಿಷೇಧಿಸುವುದಿಲ್ಲ ಆದರೆ ಬಲವಂತವಾದ ಸಾಲ ವಸೂಲಾತಿಯನ್ನು ನಿರ್ಬಂಧಿಸಲಿದೆ. ಅಮಾನವೀಯ ಸಾಲ ವಸೂಲಾತಿಯಲ್ಲಿ ತಪ್ಪಿತಸ್ತರಿಗೆ 10 ವರ್ಷದವರೆಗೆ ವಿಸ್ತರಿಸುವ ಸೆರೆವಾಸ, 5 ಲಕ್ಷ ರೂ. ದಂಡ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಈಗಾಗಲೇ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗಿತ್ತು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+