ರಾಜ್ಯಾದ್ಯಂತ ಇಂದು ಬಂದ್ ಬಂದ್ ಬಂದ್!.. ಹೌದು, ಬೆಳಗಾವಿಯಲ್ಲಿ ಮರಾಠಿ ಪುಂಡರ ಹಾವಳಿ ಖಂಡಿಸಿ ಕನ್ನಡ ಪರ ಸಂಘಟನೆಗಳು ಬಂದ್ ಕರೆ ನೀಡಿದ್ದರು . ಇದಕ್ಕೆ ಓಲಾ, ಉಬರ್ ಸೇರಿದಂತೆ ಹಲವು ವಾಹನಗಳ ಒಕ್ಕೂಟಗಳು ಹಾಗೂ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಕೆಲ ಸಂಘಟನೆಗಳು ಬಂದ್‌ಗೆ ಬೆಂಬಲ ಕೊಟ್ಟಿವೆ. ಇದು ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಬಂದ್ ನಡೆಯಲಿದ್ದು, ವ್ಯವಹಾರಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸಾರಿಗೆ ಸೇವೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿದೆ.
ಒಂದಲ್ಲ, ಒಂದು ಕಿರಿಕ್‌ನ್ನು ಮಹಾ ಪುಂಡರು ಮಾಡುತ್ತಾಳೆ ಇರುತ್ತಾರೆ. ಇದನ್ನು ಖಂಡಿಸಿ ಕನ್ನಡಿಗರು ಕೆರಳಿ ಕೆಂಡವಾಗಿವಾಗಿದ್ದಾರೆ.

ಬಂದ್ ಮಾಡಲು ಕಾರಣವೇನು?
ಇತ್ತೀಚೆಗಷ್ಟೇ ಮರಾಠಿ ಮಾತನಾಡಿ ಎಂದು ಕರ್ನಾಟಕದ ಸಾರಿಗೆ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಹಾಗೂ ಡ್ರೈವರ್ ಮುಖಕ್ಕೆ ಮಸಿ ಬಳಿ ಮರಾಠಿ ಪುಂಡರು ಹುಚ್ಚಾಟ ಮೆರದಿದ್ದರು.ಇದಲ್ಲದೇ ಹಲ್ಲೆಯನ್ನೂ ಸಹ ನಡೆಸಿದ್ದರು.ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮಾರ್ಚ್ 22 ಕರ್ನಾಟಕ ಬಂದ್ ಕರೆ ನೀಡಿದ್ದಾರೆ. ಇದಕ್ಕೆ ಆಟೋ, ಕ್ಯಾಬ್ ಓಲಾ ಉಬರ್ ಟಾಕ್ಸಿ, ಕನ್ನಡ ಸಂಘಟನೆಗಳು ಸಾಥ್ ನೀಡಿದ್ದಾರೆ.
ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್‌ಗೆ, ರಾಜ್ಯದ ಹಲವು ಭಾಗಗಳಲ್ಲಿ ಬೆಂಬಲ ವ್ಯಕ್ತವಾಗುತ್ತಿದೆ. ಈ ಬಂದ್‌ನ
ಮುಖ್ಯ ಉದ್ದೇಶ ಮಹಾರಾಷ್ಟ್ರದ ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ನಡೆದ ದೌರ್ಜನ್ಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುವು ಆಗಿದೆ. ಆದರೆ ಇಂದು ಕರ್ನಾಟಕ ಬಂದ್‌ಗೆ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ರಾಜ್ಯದಲ್ಲಿ ಹೇಗಿದೆ ಬಂದ್ ಬಿಸಿ?
ಬೆಂಗಳೂರಿನಲ್ಲಿ ಬಂದ್ ಇದ್ದರೂ ಸಹ ಪ್ರಯಾಣಿಕರು ನಗರದಲ್ಲಿನ ಬಸ್ ನಿಲ್ದಾಣಗಳಿಗೆ ತೆರಳುತ್ತಾರೆ. ಬಂದ್ ಸಮಯದಲ್ಲಿ ಬಸ್‌ಗಳು ಸಂಚರಿಸುತ್ತಲೇ ಇರುತ್ತವೆ.ಬೆಂಗಳೂರಿನಲ್ಲಿ ಯಾವುದೇ ತೀವ್ರ ಮಟ್ಟದಲ್ಲಿ ಕಿಚ್ಚು ಕಾಣುತ್ತಿಲ್ಲ.
ಕಲಬುರ್ಗಿಯಲ್ಲಿ ಪೊಲೀಸ್ ಪಡೆಗಳ ನಿಯೋಜನೆ, ಬಿಗಿ ಭದ್ರತೆ ಬೆಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಕರ್ನಾಟಕ ಬಂದ್ ಸಮಯದಲ್ಲಿ ಬ್ಯಾಂಕುಗಳು ತೆರೆದಿರುತ್ತವೆಯೇ?
ಬಂದ್ ಪರವಾಗಿ ಅಥವಾ ವಿರುದ್ಧವಾಗಿ ಬ್ಯಾಂಕುಗಳು ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ತಿಂಗಳ ನಾಲ್ಕನೇ ಶನಿವಾರವಾದ್ದರಿಂದ, ಬ್ಯಾಂಕುಗಳು ಸಹ ಬಂದ್ ಆಗಿರುತ್ತೇವೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸರ್ಕಾರ ಬಂದ್‌ಗೆ ಬೆಂಬಲ ನೀಡಿಲ್ಲ ಮತ್ತು ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಮೇಲಿನ ಹಲ್ಲೆಯನ್ನು ಎದುರಿಸಲು ಇದು ಸರಿಯಾದ ವಿಧಾನವಲ್ಲ ಎಂದು ಸಹ ಹೇಳಿಕೆಯನ್ನು ನೀಡಿದ್ದಾರೆ.
ಇಂದು ಸಾರಿಗೆ ಓಡಾಟ ಹೇಗಿದೆ?
ಬೆಂಗಳೂರಿನಲ್ಲಿ KSRTC BMTC ಬಸ್‌ಗಳು ಎಂದಿನಂತೆ ಸಂಚಾರ ಮಾಡುತ್ತಿವೆ. ಮತ್ತೊಂದು ಕಡೆ ನಗರದ ಕೆ.ಆರ್.ಮಾರುಕಟ್ಟೆ ಎಂದಿನಂತೆ ತೆರೆದಿದೆ ಮೆಜೆಸ್ಟಿಕ್‌ನಲ್ಲೂ ಬಂದ್ ಪರಿಣಾಮ ಕಂಡುಬಂದಿದೆ. ಆದರೆ 9 ಗಂಟೆಯ ನಂತರ ಬೆಂಗಳೂರಿನಲ್ಲಿ ಪ್ರತಿಭಟನೆ ಆರಂಭವಾಗುವ ಸಾಧ್ಯತೆ ಇದೆ. ಬೆಂಗಳೂರು ಪ್ರಮುಖ ಭಾಗಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ.
ಬಂದ್‌ಗೆ ಯಾರೆಲ್ಲಾ ಬೆಂಬಲ
ಓಲಾ- ಉಬರ್ ಚಾಲಕರ ಸಂಘ, ಶಿವರಾಮೇಗೌಡ ಬಣ, ಕರವೇ ಗಜಕೇಸರಿ ಸೇನೆ, ಡಾ.ರಾಜ್ ಕುಮಾರ್ ಅಭಿಮಾನಿ ಸಂಘ, ವೀರ ಕನ್ನಡಿಗರ ಸೇನೆ, ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು, ರೂಪೇಶ್ ರಾಜಣ್ಣ ಬಣ, ಬೆಂಗಳೂರು ಆಟೋ ಸೇನೆ, ಜಯಭಾರತ್ ಚಾಲಕರ ಸಂಘ, ಕರ್ನಾಟಕ ಜನಪರ ವೇದಿಕೆ, ಆದರ್ಶ ಆಟೋ ಯೂನಿಯನ್, ಗೂಡ್ಸ್ ಚಾಲಕರ ಸಂಘ ಬೆಂಬಲವನ್ನು ನೀಡಿದೆ. BMTC-KSRTC ನೌಕರರ ಸಂಘ, ಲಾರಿ ಚಾಲಕರ ಸಂಘ, ಮದ್ಯ ಮಾರಾಟಗಾರರ ಸಂಘ, ಕೆಲ ಮಾಲ್ ಅಸೋಸಿಯೇಷನ್, ಗಾರ್ಮೆಂಟ್ಸ್ ಅಸೋಸಿಯೇಷನ್, ಹೋಲ್ ಸೆಲ್ ಬಟ್ಟೆ ವ್ಯಾಪಾರಸ್ಥರು, ಹೋಟೆಲ್ ಅಸೋಸಿಯೇಷನ್, ಬೆಂಗಳೂರು ಸಂಚಾರಿ ಆಟೋ ಸೇನೆ, APMC ಮಾರುಕಟ್ಟೆಗಳ ಒಕ್ಕೂಟ, ಖಾಸಗಿ ಸಾರಿಗೆ ಒಕ್ಕೂಟ, ಕರ್ನಾಟಕ ರಕ್ಷಣಾ ವೇದಿಕೆ ಅಭಿಮಾನಿ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಧ್ವನಿ, ಬೀದಿ ಬದಿ ವ್ಯಾಪಾರಿಗಳ ಸಂಘಟನೆ, ಕರ್ನಾಟಕ ರಾಜ್ಯ ರೈತ ಸಂಘಟನೆ, ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್ಸ್, ಖಾಸಗಿ ಶಾಲೆಗಳ ಒಕ್ಕೂಟ ಕೃಪಾ, ಖಾಸಗಿ ಶಾಲೆಗಳ ಒಕ್ಕೂಟ ರುಪ್ಸ ಪೋಷಕರ ಸಮನ್ವಯ ಸಮಿತಿ, ಪೀಸ್ ಆಟೋ ಸಂಘಟನೆ ಮತ್ತು ಕರುನಾಡು ಕಾರ್ಮಿಕ ಸೇನೆ ಬೆಂಬಲ ನೈತಿಕ ಬೆಂಬಲವನ್ನು ನೀಡಿದೆ.


Click it and Unblock the Notifications