ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೆಬ್ರವರಿ 17ರಂದು ಕರ್ನಾಟಕ ಬಜೆಟ್ 2023-24 ಮಂಡನೆ ಆರಂಭಿಸಿದ್ದಾರೆ. ಆರಂಭದಲ್ಲೇ ವಿಪಕ್ಷಕ್ಕೆ ಟಾಂಗ್ ನೀಡಿ, ಸದನದಲ್ಲಿ ಗದ್ದಲ ಉಂಟಾಗಿದ್ದು, ಬಳಿಕ ಬಜೆಟ್ ಭಾಷಣ ಮುಂದುವರಿಸಿದ್ದಾರೆ.
ರೈತರಿಗೆ ಬಂಪರ್ ಗಿಫ್ಟ್ ಘೋಷಣೆ ಮಾಡಲಾಗಿದೆ. ರೈತರಿಗೆ 5 ಲಕ್ಷ ರೂಪಾಯಿ ಸಾಲ ನೀಡುವ ಘೋಷಣೆ ಮಾಡಲಾಗಿದೆ. ಶೂನ್ಯ ಬಡ್ಡಿದರದಲ್ಲಿ ಸಾಲವನ್ನು ನೀಡುವ ಘೋಷಣೆ ಮಾಡಲಾಗಿದೆ. ಸಾಲ ಮಿತಿಯನ್ನು 3 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ.
ಒಂದು ತೋಟ ಒಂದು ಬೆಲೆ ಯೋಜನೆ ಆರಂಭ ಘೋಷಣೆ ಮಾಡಿದ್ದಾರೆ. ಒಟ್ಟು ಬಜೆಟ್ ಗಾತ್ರ 309182 ಕೋಟಿ ರೂ ಗಾತ್ರವನ್ನು ಹೊಂದಿದ್ದು, ಇದು ಸರ್‌ಪ್ಲಸ್ ಬಜೆಟ್ ಆಗಿದೆ. 2022-23ನೇ ಸಾಲಿನ ರಾಜ್ಯ ಬಜೆಟ್ ಗಾತ್ರ 2 ಲಕ್ಷದ 66 ಸಾವಿರ ಕೋಟಿ ರೂಪಾಯಿ ಆಗಿದ್ದು, ಈ ಬಾರಿಯ ಅಂದರೆ 2023-24ನೇ ಸಾಲಿನ ಕರ್ನಾಟಕ ಬಜೆಟ್ 3 ಲಕ್ಷ ಕೋಟಿ ರೂಪಾಯಿಗಳ ಗಡಿಯನ್ನು ತಲುಪುವ ನಿರೀಕ್ಷೆಯಿತ್ತು.

ಶಿಕ್ಷಣ, ಉದ್ಯೋಗ, ಸಬಲೀಕರಣ ಮಂತ್ರದೊಂದಿಗೆ, ದೀನದುರ್ಬಲ ಸಮುದಾಯಗಳಿಗೆ, ಎಸ್ಸಿ ಮತ್ತು ಎಸ್ಟಿಗೆ ಸರ್ಕಾರ ಉತ್ತೇಜನ ನೀಡಿದೆ. ಅರ್ಹ ಫಲಾನುಭವಿಗಳಿಗೆ ನೇರವಾಗಿ ಸರ್ಕಾರದ ಸೌಲಭ್ಯ ದೊರೆಯುವಂತೆ ಮಾಡಲು ಪಾರದರ್ಶಕತೆ ಕಾಯ್ದುಕೊಂಡಿದ್ದೇವೆ. ಕಾರ್ಮಿಕ ವರ್ಗಕ್ಕು ಕಾಳಜಿ ವಹಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
2024ರಲ್ಲಿ ಚುನಾವಣೆ ನಡೆಯಲಿದೆ, ಇದರಿಂದಾಗಿ ಬಜೆಟ್‌ನಲ್ಲಿ ಹಲವಾರು ಕೊಡುಗೆಯನ್ನು ಸರ್ಕಾರ ನೀಡುವ ನಿರೀಕ್ಷೆಯನ್ನು ಜನರು ಹೊಂದಿದ್ದಾರೆ.


Click it and Unblock the Notifications