ಕರ್ನಾಟಕದ ನೂತನ ಸರ್ಕಾರವು 2023-24 ನೇ ಸಾಲಿನ ರಾಜ್ಯದ ಪರಿಷ್ಕ್ರೃತ ಆಯವ್ಯಯ ಮಂಡನೆಯನ್ನು ಇಂದು (ಜುಲೈ 7) ಮಾಡಿದೆ. ಕರ್ನಾಟಕದ ಮುಖ್ಯಮಂತ್ರಿಯಾದ ಸಿದ್ಧರಾಮಯ್ಯ ತನ್ನ 14ನೇ ದಾಖಲೆಯ ಬಜೆಟ್ ಮಂಡಿಸಿದ್ದು ಈ ಬಾರಿಯ ಬಜೆಟ್ ಗಾತ್ರ ಹೆಚ್ಚಳವಾಗಿದೆ. ಅದಕ್ಕೆ ಪ್ರಮುಖ ಕಾರಣ ಐದು ಗ್ಯಾರಂಟಿ ಯೋಜನೆಗಳಾಗಿದೆ.
ಮಾರ್ಚ್ ತಿಂಗಳಿನಲ್ಲಿ ಅಂದಿನ ಕರ್ನಾಟಕ ರಾಜ್ಯ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ 3,09,182 ಕೋಟಿ ರೂಪಾಯಿ ಗಾತ್ರದ ಬಜೆಟ್ ಅನ್ನು ಮಂಡನೆ ಮಾಡಿದ್ದಾರೆ. ಅದಾದ ಬಳಿಕ ಚುನಾವಣೆ ನಡೆದು ಹೊಸ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಈಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈ ಬಜೆಟ್ ಗಾತ್ರವು ಈ ಹಿಂದಿನ ಬಜೆಟ್‌ನ ಗ್ರಾತಕ್ಕಿಂತ ಅಧಿಕವಾಗಿದೆ. ಬಜೆಟ್ ಗಾತ್ರದಲ್ಲಿ 18,565 ಕೋಟಿ ರೂಪಾಯಿ ಹೆಚ್ಚಳ ಕಂಡು ಬಂದಿದೆ. ಈ ಬಾರಿ 3,27,747 ಕೋಟಿ ರೂಪಾಯಿ ಗಾತ್ರದ ಬಜೆಟ್ ಅನ್ನು ಮಂಡನೆ ಮಾಡಲಾಗಿದೆ.

ಇಲಾಖಾವಾರು ಹಂಚಿಕೆ ಹೇಗಿದೆ ನೋಡಿ
* ಶಿಕ್ಷಣ - 37,587 ಕೋಟಿ ರೂಪಾಯಿ
* ಆರೋಗ್ಯ - 14,950 ಕೋಟಿ ರೂಪಾಯಿ
* ಕೃಷಿ - 5,860 ಕೋಟಿ ರೂಪಾಯಿ
* ಪಶುಸಂಗೋಪನೆ ಮತ್ತು ಮೀನುಗಾರಿಕೆ - 3,024 ಕೋಟಿ ರೂಪಾಯಿ
* ಗ್ರಾಮೀಣಾಭಿವೃದ್ಧಿ - 18,038 ಕೋಟಿ ರೂಪಾಯಿ
* ಆಹಾರ ಮತ್ತು ನಾಗರೀಕ ಪೂರೈಕೆ - 10,460 ಕೋಟಿ ರೂಪಾಯಿ
* ಮಹಿಳಾ ಮತ್ತು ಮಕ್ಕಳ ಕಲ್ಯಾಣ - 24,166 ಕೋಟಿ ರೂಪಾಯಿ
* ನೀರಾವರಿ - 19,044 ಕೋಟಿ ರೂಪಾಯಿ
* ಇಂಧನ - 22,773 ಕೋಟಿ ರೂಪಾಯಿ
* ಒಳಾಡಳಿತ ಮತ್ತು ಸಾರಿಗೆ - 16,638 ಕೋಟಿ ರೂಪಾಯಿ
* ಸಮಾಜ ಕಲ್ಯಾಣ - 11,173 ಕೋಟಿ ರೂಪಾಯಿ
* ಕಂದಾಯ - 16,167 ಕೋಟಿ ರೂಪಾಯಿ
* ಲೋಕೋಪಯೋಗಿ - 10,143 ಕೋಟಿ ರೂಪಾಯಿ
* ಇತರೆ - 1,09,639 ಕೋಟಿ ರೂಪಾಯಿ


Click it and Unblock the Notifications