ಕರ್ನಾಟಕ ರಾಜ್ಯ ಮುಖ್ಯಮಂತ್ರಿ, ಹಣಕಾಸು ಸಚಿವರೂ ಆಗಿರುವ ಸಿದ್ಧರಾಮಯ್ಯ ತನ್ನ 15ನೇ ಬಜೆಟ್ ಮಂಡನೆಯನ್ನು ಮಾಡುತ್ತಿದ್ದಾರೆ. ಈ ಬಜೆಟ್ ಸಂದರ್ಭದಲ್ಲಿ ರಾಜ್ಯದಲ್ಲಿ ಈ ಒಂದು ವರ್ಷದ ಅವಧಿಯಲ್ಲಿ ಹಲವಾರು ಕಡೆ ಕೆಫೆ ಸಂಜೀವಿನಿ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಬಜೆಟ್ ಮಂಡನೆಯಲ್ಲಿ ಮದ್ಯಪ್ರಿಯರಿಗೆ ಮತ್ತೆ ಸರ್ಕಾರ ಶಾಕ್ ನೀಡಿದೆ. ಮದ್ಯದ ಬೆಲೆ ಈಗಾಗಲೇ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಈಗ ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಸಿಎಂ ಹೇಳಿಕೊಂಡಿದ್ದಾರೆ. ಈ ನಡುವೆ ಕೆಫೆ ಸಂಜೀವಿನಿ ಆರಂಭದ ಬಗ್ಗೆ ಘೋಷಣೆ ಮಾಡಲಾಗಿದೆ. ಏನಿದು?, ಇಲ್ಲಿದೆ ವಿವರ ಮುಂದೆ ಓದಿ...

ಏನಿದು ಕೆಫೆ ಸಂಜೀವಿನಿ?
"ಈ ಹಣಕಾಸು ವರ್ಷದಲ್ಲಿ ರಾಜ್ಯದೆಲ್ಲೆಡೆ ಸುಮಾರು 7.50 ಕೋಟಿ ರೂಪಾಯಿ ವೆಚ್ಚದಲ್ಲಿ ಕೆಫೆ ಸಂಜೀವಿನಿಯನ್ನು ಆರಂಭಿಸಲಾಗುತ್ತದೆ. ಇದು ಸುಮಾರು 50 ಮಹಿಳೆಯರು ನಡೆಸುವಂತಹ ಕೆಫೆ ಆಗಿರಲಿದೆ," ಎಂದು ಬಜೆಟ್ ಮಂಡನೆ ವೇಳೆ ಸಿದ್ಧರಾಮಯ್ಯ ಮಾಹಿತಿ ನೀಡಿದ್ದಾರೆ.
"ಈ ಕ್ಯಾಂಟೀನ್‌ಗಳು ಗ್ರಾಮೀಣ ಪ್ರದೇಶದಲ್ಲಿ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರವನ್ನು ಮತ್ತಷ್ಟು ಕಡಿಮೆ ಮಾಡಲಿದೆ. ಹಾಗೆಯೇ ಕೈಗೆಟುಕುವ ದರದಲ್ಲಿ ಆರೋಗ್ಯಕರ, ನೈರ್ಮಲ್ಯಯಯಕ್ತ ಸ್ಥಳೀಯ ಆಹಾರವನ್ನು ಈ ಕ್ಯಾಂಟೀನ್‌ನಲ್ಲಿ ಪೂರೈಸಲಾಗುತ್ತದೆ," ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಇಂದಿರಾ ಕ್ಯಾಂಟೀನ್
ಈ ಕೆಫೆ ಸಂಜೀವಿನಿ ಸ್ಥಳೀಯ ಮಹಿಳೆಯರಿಗೆ ಉದ್ಯೋಗ ನೀಡುವ ಗುರಿಯೊಂದಿಗೆ, ಸ್ಥಳೀಯ ಆಹಾರವನ್ನು ಒದಗಿಸುವ ಗುರಿಯನ್ನು ಹೊಂದಿರುವಂತಿದೆ. ಇದಕ್ಕೆ ವ್ಯತಿರಿಕ್ತವಾಗಿ ಇಂದಿರಾ ಕ್ಯಾಂಟೀನ್ಸ್ ಅಥವಾ ನಮ್ಮ ಕ್ಯಾಂಟೀನ್‌ನಲ್ಲಿ ನಾಗರಿಕರಿಗೆ ಕಡಿಮೆ ದರದಲ್ಲಿ ತಿಂಡಿ ಮತ್ತು ಊಟ ವಿತರಿಸಲಾಗುತ್ತದೆ.


Click it and Unblock the Notifications