ಕರ್ನಾಟಕದಲ್ಲಿ ಕೊರೊನಾ ಲಾಕ್ ಡೌನ್ ಕಾರಣಕ್ಕೆ ಮಾರ್ಚ್ 24ನೇ ತಾರೀಕಿನಿಂದ ಮದ್ಯ ಮಾರಾಟ ಮಳಿಗೆಗಳು ಮುಚ್ಚಿವೆ. ಮತ್ತು ಮೇ 3ನೇ ತಾರೀಕಿನ ತನಕ ತೆರೆಯುವ ಸಾಧ್ಯತೆ ಕೂಡ ಇಲ್ಲ. ಈ ಅವಧಿಯಲ್ಲಿ ಕರ್ನಾಟಕ ಅಬಕಾರಿ ಇಲಾಖೆಗೆ 2050 ಕೋಟಿ ರುಪಾಯಿ ನಷ್ಟವಾಗಿದೆ.
"ನಮಗೆ ದಿನಕ್ಕೆ 50 ಕೋಟಿ ರುಪಾಯಿ ನಷ್ಟ. ಲಾಕ್ ಡೌನ್ ಜಾರಿಯಾದ ಮಾರ್ಚ್ 24ನೇ ತಾರೀಕಿನಿಂದ ಮದ್ಯ ಮಾರಾಟ ಮಳಿಗೆಗಳು ಮುಚ್ಚಿವೆ. ಮತ್ತು ಮೇ 3ನೇ ತಾರೀಕಿನ ತನಕವಾದರೂ ಮುಚ್ಚಿರುತ್ತದೆ. ಅಂದಾಜು 41 ದಿನಗಳಿಗೆ 2050 ಕೋಟಿ ರುಪಾಯಿ ನಷ್ಟವಾಗಿದೆ" ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿ ಬುಧವಾರ ಪಿಟಿಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಮೇ 3ನೇ ತಾರೀಕಿನ ನಂತರವಾದರೂ ಮದ್ಯ ಮಾರಾಟ ಮಳಿಗೆಗಳು ಆರಂಭವಾಗಬಹುದಾ ಎಂಬ ಬಗ್ಗೆ ಈಗಲೂ ಅನುಮಾನ ಇದೆ. ಮತ್ತೆ ಮಳಿಗೆಗಳು ಶುರುವಾಗಬೇಕಾ ಅನ್ನೋ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಈ ಹಿಂದಿನ ಅವಧಿಯಲ್ಲಿ ಅಬಕಾರಿ ಇಲಾಖೆಗೆ ಬಂದಿರುವ ಆದಾಯದ ಬಗ್ಗೆ ವೆಬ್ ಸೈಟ್ ನಲ್ಲಿ ಮಾಹಿತಿ ಇದೆ. 2017-18ರ ಏಪ್ರಿಲ್ ನಲ್ಲಿ 997.55 ಕೋಟಿ ಆದಾಯ ಬಂದಿತ್ತು ಎಂಬುದನ್ನು ಬಿಟ್ಟರೆ ಇತ್ತೀಚಿನ ನಾಲ್ಕೈದು ವರ್ಷದಲ್ಲಿ ಮಾರ್ಚ್- ಏಪ್ರಿಲ್ ತಿಂಗಳಲ್ಲಿ 1000 ಕೋಟಿ ರುಪಾಯಿಗೂ ಹೆಚ್ಚಿನ ಆದಾಯ ಬಂದಿದೆ.
More From GoodReturns

Weather Today: ಮುಂದಿನ ವಾರದಿಂದ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು; ಜನರೇ ಎಚ್ಚರ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Karnataka Budget 2026 Live Updates: ಕರ್ನಾಟಕ ಬಜೆಟ್ನ ಪ್ರಮುಖ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

Bengaluru Gold: ಬೆಂಗಳೂರಿನ ಚಿನ್ನ ಪ್ರಿಯರಿಗೆ ಶಾಕ್; ದಿಢೀರ್ 7000 ರೂ. ಏರಿಕೆ ಕಂಡ ಬಂಗಾರ

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications