ರಾಜ್ಯ ಸರ್ಕಾರದಿಂದ ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಅದೇನು ಅಂತೀರಾ? ಇಷ್ಟುದಿನ ಬೆಂಗಳೂರಿನಲ್ಲಿ ಒಂದೇ ಕ್ರಿಕೆಟ್ ಸ್ಟೇಡಿಯಂ ಇತ್ತು. ಇದೀಗ ಮತ್ತೊಂದು ಹೊಸ ಸ್ಟೇಡಿಯಂ ತಲೆ ಎತ್ತಲಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸೂರ್ಯನಗರದಲ್ಲಿ, ಕರ್ನಾಟಕ ಸರ್ಕಾರ 2,350 ಕೋಟಿ ರೂ. ವೆಚ್ಚದ ಬೃಹತ್ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ತಾತ್ಕಾಲಿಕ ಅನುಮೋದನೆ ನೀಡಿದೆ.

ಭಾರದತಲ್ಲಿ ಅತಿದೊಡ್ಡ ಸ್ಟೇಡಿಯಂ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ. ಸುಮಾರು 1,32,000 ಆಸನ ಸಾಮರ್ಥ್ಯ ಇದೆ. ಈಗ ಆನೇಕಲ್‌ನಲ್ಲಿ ನಿರ್ಮಾಣ ಆಗಲಿರುವ ಈ ಹೊಸ ಸ್ಟೇಡಿಯಂ ಭಾರತದ ಎರಡನನೇ ಅತಿದೊಡ್ಡ ಸ್ಟೇಡಿಯಂ ಆಗಲಿದೆ. ಅಂದರೆ ಸದ್ಯ ಕೋಲ್ಕತ್ತದ ಈಡನ್ ಈಡನ್ ಗಾರ್ಡನ್ ಸ್ಟೇಡಿಯಂ 68,000 ಆಸನಗಳ ಸಾಮರ್ಥ್ಯ ಹೊಂದಿದ್ದು, ಭಾರತದ ಎರಡನೇ ಅತಿದೊಡ್ದ ಸ್ಟೇಡಿಯಂ ಆಗಿದೆ. ಆನೇಕಲ್‌ನಲ್ಲಿ ನಿರ್ಮಾಣವಾಗಲಿರುವ ಹೊಸ ಸ್ಟೇಡಿಯಂ 80,000 ಪ್ರೇಕ್ಷಕರ ಆಸನ ಸಾಮರ್ಥ್ಯ ಹೊಂದಿದ್ದು, ಕ್ರೀಡೆಗೆ ಮಾತ್ರವಲ್ಲ, ಸಂಗೀತ ಕಾರ್ಯಕ್ರಮಗಳು, ಸಮ್ಮೇಳನಗಳು ಮತ್ತು ಸಾರ್ವಜನಿಕ ಸಭೆಗಳಿಗೆ ಸಹ ವೇದಿಕೆಯಾಗಲಿದೆ.
ಈ ಯೋಜನೆಯ ಪ್ರಮುಖ ಉದ್ದೇಶ, ಹಳೆಯ ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎದುರಿಸುತ್ತಿರುವ ಆಸನ ಸೀಮಿತತೆಯನ್ನು ನಿವಾರಣೆ ಮಾಡುವುದು. ಬೆಂಗಳೂರಿನ ಸ್ಟೇಡಿಯಂ 32,000 ಆಸನ ಮಾತ್ರ ಹೊಂದಿರುವುದರಿಂದ, ದೇಶದ ಆಧುನಿಕ ಕ್ರಿಕೆಟ್ ಮೈದಾನಗಳಿಗೆ ಹೋಲಿಸಿದರೆ ಇದು ಕಡಿಮೆ. ಹೊಸ ಸ್ಟೇಡಿಯಂ ನಿರ್ಮಾಣದಿಂದ ದೇಶದ ದೊಡ್ಡ ಪಂದ್ಯಗಳು, ಅಂತಾರಾಷ್ಟ್ರೀಯ ಟೆಸ್ಟ್, ಟಿ20 ಹಾಗೂ ಒಡಿ ಪಂದ್ಯಗಳನ್ನು ಕರ್ನಾಟಕದಲ್ಲಿ ಆಯೋಜಿಸಲು ಉತ್ತಮ ಅವಕಾಶ ಸೃಷ್ಟಿಯಾಗಲಿದೆ.
ಸರ್ಕಾರವು ಯೋಜನೆಯ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಲು ವಿವರವಾದ ಯೋಜನಾ ವರದಿ (DPR) ಪಡೆಯುವ ನಿರ್ಧಾರ ಮಾಡಿದೆ. ಅಂತಿಮ ವೆಚ್ಚ ಮತ್ತು ಯೋಜನೆ ಅನುಮೋದನೆ DPR ಪರಿಶೀಲನೆಯ ನಂತರ ಮಾತ್ರ ನಿರ್ಧರಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಈ ಹೊಸ ಮೈದಾನವು ಕ್ರೀಡಾಪ್ರೇಮಿಗಳಷ್ಟೇ ಅಲ್ಲ, ಸ್ಥಳೀಯ ಆರ್ಥಿಕತೆಗೆ ಸಹ ಸಹಾಯ ಮಾಡಲಿದೆ. ಸ್ಟೇಡಿಯಂ ನಿರ್ಮಾಣ ಮತ್ತು ನಡವಳಿ ಪ್ರಕ್ರಿಯೆಯಲ್ಲಿ ಸಾವಿರಾರು ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ. ಸ್ಥಳೀಯ ವ್ಯಾಪಾರಿಗಳು, ಹೋಟೆಲ್ ಮಾಲೀಕರು ಮತ್ತು ತಂತ್ರಜ್ಞರು ಇದರಿಂದ ಲಾಭ ಪಡೆಯುವ ನಿರೀಕ್ಷೆ ಇದೆ. ಕ್ರೀಡಾ ಮತ್ತು ಮನರಂಜನೆ ಕ್ಷೇತ್ರದಲ್ಲಿ ಹೊಸ ಬೃಹತ್ ಹುದ್ದೆಗಳು ಸೃಷ್ಟಿಯಾಗುತ್ತವೆ.
ಇದೇ ವೇಳೆ, ಸರ್ಕಾರವು ಸರ್ಕಾರಿ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿ ಸಂಬಂಧಿ ಪ್ರಮುಖ ನಿರ್ಧಾರವನ್ನು ಕೂಡ ತೆಗೆದುಕೊಂಡಿದೆ. ಕನ್ನಡ ಭಾಷಾ ಪರೀಕ್ಷೆಯಲ್ಲಿ ಕನಿಷ್ಠ ಅಂಕಗಳನ್ನು ಪಡೆಯದೇ ಯಾರೂ ಆಯ್ಕೆಗೆ ಅರ್ಹರಾಗುವುದಿಲ್ಲ. ಎಸ್‌ಎಸ್‌ಎಲ್‌ಸಿ ಅಥವಾ ಐಚ್ಛಿಕವಾಗಿ ಕನ್ನಡವನ್ನು ಕಲಿತವರು ಕೂಡ ಈ ಕಡ್ಡಾಯ ಪರೀಕ್ಷೆಯಿಂದ ವಿನಾಯಿತಿ ಪಡೆಯಲಾರರು. ಇದು ಕನ್ನಡ ಭಾಷಾ ಜ್ಞಾನವನ್ನು ಹೆಚ್ಚಿಸುವುದಕ್ಕೆ ಸಹಾಯಕವಾಗಿದೆ.
ಹೀಗೆಯೇ, ನಗರ ಪ್ರದೇಶಗಳಲ್ಲಿ 1,200 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದ ಕಟ್ಟಡಗಳು ಅಥವಾ ಎರಡು-ಮೂರು ಅಂತಸ್ತಿನ ಸಂಕೀರ್ಣಗಳಿಗೆ ಆಕ್ಯುಪೆನ್ಸಿ ಪ್ರಮಾಣಪತ್ರ (OC) ವಿನಾಯಿತಿ ನೀಡಲಾಗಿದೆ. ಸಂಬಂಧಪಟ್ಟ ನಗರ ಪ್ರಾಧಿಕಾರದಿಂದ ಅನುಮೋದನೆ ಇದ್ದರೆ ಈ ವಿನಾಯಿತಿ ಅನ್ವಯಿಸುತ್ತದೆ. ಇದು ನಗರಗಳಲ್ಲಿ ಆಸ್ತಿ ನಿರ್ಮಾಣವನ್ನು ಸುಗಮಗೊಳಿಸುವ ನಿರ್ಧಾರವಾಗಿದೆ.
ಸಂಕ್ಷಿಪ್ತವಾಗಿ ಹೇಳಬೇಕಾದರೆ, ಸೂರ್ಯನಗರದ ಹೊಸ ಕ್ರಿಕೆಟ್ ಸ್ಟೇಡಿಯಂ ಕರ್ನಾಟಕದಲ್ಲಿ ಕ್ರೀಡಾ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುತ್ತದೆ. ದೇಶದ ಪ್ರಮುಖ ಪಂದ್ಯಗಳು ಇಲ್ಲಿ ಆಯೋಜನೆಯಾಗುವ ನಿರೀಕ್ಷೆ ಇದೆ. ಕ್ರಿಕೆಟ್ ಪ್ರೇಮಿಗಳು, ಸ್ಥಳೀಯ ಉದ್ಯೋಗಿಗಳು ಮತ್ತು ವ್ಯವಹಾರ ಕ್ಷೇತ್ರಗಳವರಿಗೆ ಇದು ದೊಡ್ಡ ಸಕಾರಾತ್ಮಕ ಸುದ್ದಿ. ಮುಂದಿನ ವರ್ಷಗಳಲ್ಲಿ ಭಾರತ ಮತ್ತು ಅಂತರರಾಷ್ಟ್ರೀಯ ತಂಡಗಳ ಪ್ರಮುಖ ಪಂದ್ಯಗಳನ್ನು ಈ ಸ್ಟೇಡಿಯಂದಲ್ಲಿ ನೋಡಲು ಅವಕಾಶ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.


Click it and Unblock the Notifications