ಆನ್ಲೈನ್ ಮೂಲಕ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ತಲುಪಿಸುವ ಸ್ವಿಗ್ಗಿ, ಜೊಮಾಟೊ ಕಂಪನಿಗಳು ಗ್ರಾಹಕರಿಗೆ ಉತ್ತಮ ಸೇವೆ ನೀಡುವ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳದಿದ್ದರೆ ಸರ್ಕಾರ ಮಧ್ಯಪ್ರವೇಶಿ ಮಾಡಬೇಕಾಗುತ್ತದೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಆನ್ಲೈನ್ ಪ್ಲಾಟ್ಫಾರ್ಮ್ ಗಳಿಗೆ ಮೂಗುದಾರವನ್ನು ಹಾಕಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು,ಆನ್‌ಲೈನ್ ಆನ್ಲೈನ್ ಪ್ಲಾಟ್ಫಾರ್ಮ್ ಕಂಪನಿಗಳು ಗ್ರಾಹಕರಿಗೆ ಸೇವೆ ನೀಡುವ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು. ತಂತ್ರಜ್ಞಾನ ಆಧಾರಿತ ಸೂಚನೆನ್ನು ದುರಪಯೋಗ ಮಾಡಿಕೊಲ್ಳತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತೀವೆ ಇದೆಲ್ಲಾವನ್ನು ಮೊದಲು ನಿಲ್ಲಿಸಬೇಕು ಇಲ್ಲವಾದಲ್ಲೇ ಸರ್ಕಾರವೇ ನೇರವಾಗಿ ಮಧ್ಯಪ್ರವೇಶ ಮಾಡುತ್ತದೆ ಎಂದು ಹೇಳಿದ್ದಾರೆ.

ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಿ
ಕಂಪನಿಗಳು ತಮ್ಮ ಸೇವಾ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಲು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ಆ ಮೂಲಕ, ಗ್ರಾಹಕರಿಗೆ ಸೇವೆಯನ್ನು ವ್ಯವಸ್ಥೆವಾಗಿ ಒದಗಿಸಬೇಕು. ಅವರು ಕೊಡುವ ಭರವಸೆಗಳಿಗೆ ಪೂರವಾಗಿ ಸ್ಪಂದಿಸಬೇಕು. ಈ ವಿಚಾರಗಳಿಗೆ ಸಂಬಂಧಿಸಿದಂತೆ ಕಂಪನಿಗಳ ಜೊತೆ ಚರ್ಚೆ ನಡೆಸಲು ಯಾವುದೇ ಸಮಸ್ಯೆಗಳಿಲ್ಲ ಎಂದಿದ್ದಾರೆ.
ಕೃತಕ ಬುದ್ದಿಮತ್ತೆ (ಎಐ) ತಂತ್ರಜ್ಞಾನವನ್ನು ಉಪಯೋಗ ಮಾಡಿಕೊಂಡು ಗ್ರಾಹಕರ ಹಲವಾರು ಸಮಸ್ಯೆಗಳನ್ನು ಬೇಗನೆ ಪರಿಹಾರವನ್ನು ಒದಗಿಸಬಹುದು. ಆದರೆ, ನಿಜವಾದ ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸಲು ತಂತ್ರಜ್ಞಾನಗಳು ಸಹ ಉಪಯೋಗಕ್ಕೆ ಬರುತ್ತಿಲ್. ಸ್ಟಿಗ್ಗಿ, ಜೊಮಾಟೊ ಸೇರಿದಂತೆ ಇತರ ತ್ವರಿತ ವಾಣಿಜ್ಯ ಮತ್ತು ಇ-ಕಾಮರ್ಸ್ ವೇದಿಕೆಗಳು ತಮ್ಮ ಗ್ರಾಹಕ ಸೇವೆಯನ್ನು ಸುಧಾರಿಸಿಕೊಳ್ಳದಿದ್ದರೆ, ಉತ್ತಮ ಸೇವೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ನಿಯಮಗಳನ್ನು ರೂಪಿಸಬೇಕುತ್ತದೆ ಎಂದು ಎಚ್ಚರಿಕೆಯಗಂಟೆಯನ್ನು ನೀಡಿದೆ.
ತಂತ್ರಜ್ಞಾನ ಆಧಾರಿತ ಪರಿಹಾರಗಳ ಮೂಲಕ ಹಣವನ್ನು ಉಳಿಸುವ ಮೂಲಕ ಈ ಕಂಪನಿಗಳು ಶ್ರೀಮಂತವಾಗುತ್ತಿದ್ದರೂ, ಗ್ರಾಹಕರು ತೊಂದರೆ ಅನುಭವಿಸುತ್ತಾರೆ ಮತ್ತು ಅವರ ಕಡೆಯಿಂದ ಯಾವುದೇ ಹೊಣೆಗಾರಿಕೆ ಇರುವುದಿಲ್ಲ.
ಈ ಕುರಿತು ಸಾಮಾಜಿಕ ಜಾಲತಾಣ ಮಾಹಿತಿ
ತಂತ್ರಜ್ಞಾನ ಆಧಾರಿತ ಚಾಟ್‌ಬಾಟ್‌ಗಳು ಮತ್ತು ಸ್ಮಾರ್ಟ್ ಪ್ರಾಂಪ್ಟ್‌ಗಳು ಕೆಲವು ಸಮಸ್ಯೆಗಳನ್ನು ನಿಭಾಯಿಸಬಹುದಾದರೂ, ನಿಜವಾದ ಗ್ರಾಹಕ ಅಥವಾ ನಾಗರಿಕ ಕುಂದುಕೊರತೆಗಳನ್ನು ಬಗ್ಗೆಹರಿಸುವಲ್ಲಿ ಅವು ವಿಫಲವಾಗುತ್ತವೆ.
ಜೊಮಾಟೊ ಮತ್ತು ಇತರ ತ್ವರಿತ ವಾಣಿಜ್ಯ ಮತ್ತು ಇ-ಕಾಮರ್ಸ್ ವೇದಿಕೆಗಳು ತಮ್ಮ ಗ್ರಾಹಕ ಸೇವೆ ಮತ್ತು ವಿತರಣಾ ಅನುಭವವನ್ನು ಸುಧಾರಿಸಬೇಕು, ಇಲ್ಲದಿದ್ದರೆ, ನಾಗರಿಕರಿಗೆ ಉತ್ತಮ ಸೇವೆ ಮತ್ತು ಕಾರ್ಯವನ್ನು ಖಚಿತಪಡಿಸಿಕೊಳ್ಳಲು ಸರ್ಕಾರಗಳು ನಿಯಮಗಳೊಂದಿಗೆ ಹೆಜ್ಜೆ ಹಾಕಬೇಕಾಗಬಹುದು ಎಂದು ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಫುಡ್ ಡೆಲಿವರಿಗೆ ಯೆಲ್ಲೋ ಬೋರ್ಡ್ ಕಡ್ಡಾಯ
ಹೊಟ್ಟೆ ಪಾಡಿಗಾಗಿ ಬೈಕ್‌ಗಳ ಮೂಲಕ ಆಹಾರವನ್ನು ಮನೆ ಮನೆಗೆ ವಿತರಣೆ ಮಾಡುವ ಡೆಲಿವರಿ ಬಾಯ್‌ಗಳಿಗೆ ಬೆಂಗಳೂರು ನಗರ ಪೊಲೀಸರು ಶಾಕ್ ನೀಡಿದ್ದಾರೆ. ಸ್ವಿಗ್ಗಿ, ಝೋಮ್ಯಾಟೋ ಸೇರಿದಂತೆ ಫುಡ್ ಡೆಲಿವರಿ ಬಾಯ್‌ಗಳ ಬೈಕ್ ವಶಕ್ಕೆ ತೆಗೆದುಕೊಂಡೊದ್ದಾರೆ.
ಡೆಲಿವರಿ ಬಾಯ್‌ಗಳ ಬೈಕ್ ವಶಕ್ಕೆ ಯಾಕೆ?
ನಿಯಮದ ಪ್ರಕಾರ ಬಿಳಿ ನಂಬರ್ ಪ್ಲೇಟ್ (ವೈಟ್ ಬೋರ್ಡ್) ಹೊಂದಿರುವ ಯಾವ ವಾಹನಗಳು ವಾಣಿಜ್ಯ ಉದ್ದೇಶಗಳಿಗಾಗಿ ಬಳಕೆ ಮಾಡಕೂಡದು. ಇವು ಖಾಸಗಿ ಬಳಕೆಗೆ ಮಾತ್ರ ಬಳಕಸಬೇಕಿದೆ. ಕೇವಲ ಹಳದಿ ನಂಬರ್ ಪ್ಲೇಟ್ ಹೊಂದಿದ ವಾಹನಗಳನ್ನು ಇತರ ಉದ್ದೇಶಗಳಿಗೆ ಬಾಡಿಗೆ, ವಾಣಿಜ್ಯ ಸಂಚಾರಕ್ಕೆ ಬಳಕೆ ಮಾಡಬಹುದಾಗಿದೆ. ಡೆಲಿವರಿ ಬಾಯ್‌ಗಳ ಬಳಿ ಇರುವ ವೈಟ್ ನಂಬರ್ ಪ್ಲೇಟ್‌ನ ವಾಹನಗಳಿಂದಲೇ ದುಡಿಮೆ ಮಾಡುತ್ತಿರುವುದು ಇದು ನಿಯಮ ಉಲ್ಲಂಘನೆ ಎಂಬ ಕಾರಣಕ್ಕೆ ಸಂಚಾರಿ ಪೊಲೀಸರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ
More From GoodReturns

Weather Today: ಮುಂದಿನ ವಾರದಿಂದ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು; ಜನರೇ ಎಚ್ಚರ

Bengaluru Gold: ಬೆಂಗಳೂರಿನ ಚಿನ್ನ ಪ್ರಿಯರಿಗೆ ಶಾಕ್; ದಿಢೀರ್ 7000 ರೂ. ಏರಿಕೆ ಕಂಡ ಬಂಗಾರ

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Budget 2026 Live Updates: ಕರ್ನಾಟಕ ಬಜೆಟ್ನ ಪ್ರಮುಖ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications