ಭಾರತವು ಪ್ರತಿಭಾವಂತ ಸಕಾರಾತ್ಮಕ ರಾಜ್ಯಗಳ ಪಟ್ಟಿಯಲ್ಲಿ ಒಂಬತ್ತು ರಾಜ್ಯಗಳನ್ನ ಒಳಗೊಂಡಿದೆ. ಇದರಲ್ಲಿ ಐಟಿ ಹಬ್ ಕರ್ನಾಟಕ ಅಗ್ರ ಸ್ಥಾನದಲ್ಲಿ ಹೊರಹೊಮ್ಮಿದೆ ಎಂದು ವರದಿಯೊಂದು ಪ್ರಕಟ ಮಾಡಿದೆ.
ಕರ್ನಾಟಕ ಎಲ್ಲಾ ರಾಜ್ಯದ ಉದ್ಯೋಗಿಗಳನ್ನ ಸ್ವಾಗತ ಮಾಡುವುದಲ್ಲದೆ, ಎಲ್ಲರಿಗೂ ಉದ್ಯೋಗ ಅವಕಾಶ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಪ್ರತಿಭೆಗಳನ್ನ ಉಳಿಸಿಕೊಳ್ಳುವಲ್ಲಿ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕ ಉನ್ನತ ಸ್ಥಾನ ಪಡೆದುಕೊಂಡಿದೆ ಹಾಗೆ ಎಲ್ಲಾ ರಾಜ್ಯಗಳಿಗಿಂತ ಮೊದಲ ಸ್ಥಾನದಲ್ಲಿದೆ ಎಂದು ಎಕ್ಸ್ಪೆನೋ ವರದಿ ಮಾಡಿದೆ. ಈಗಾಲೇ ಕರ್ನಾಟಕ 1,36,500 ಉದ್ಯೋಗಗಳನ್ನು ಸೃಷ್ಟಿಸಿದೆ ಮತ್ತು ಪ್ರತಿಭಾವಂತರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ಕರ್ನಾಟಕ ರಾಜ್ಯವು ಮೂಲಸೌಕರ್ಯಗಳನ್ನ ಒದಗಿಸುವಲ್ಲಿ, ಉತ್ತಮ ಉದ್ಯೋಗಾವಕಾಶ ಮತ್ತು ಆಕರ್ಷಕ ವೇತನಗಳನ್ನ ನೀಡುವಲ್ಲಿ ಹಾಗೆ ಉತ್ತಮ ಪ್ರತಿಭೆಗಳನ್ನ ತನ್ನಲ್ಲಿಯೇ ಉಳಿಸಿಕೊಳ್ಳುವಲ್ಲಿ ಕರ್ನಾಟಕ ಅಗ್ರ ಸ್ಥಾನವನ್ನ ಪಡೆದುಕೊಂಡಿದೆ. ಇದಕ್ಕೆ ಸಂಬಂಧಪಟ್ಟಂತೆ ಎಕ್ಸ್ಪೆನೋ ಸಂಸ್ಥೆ ಸಮಿಕ್ಷೆಯ ವರದಿಯನ್ನ ಬಹಿರಂಗ ಪಡಿಸಿದೆ. ಇನ್ನು ಈ ವರದಿಯನ್ನ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಬಿಡುಗಡೆ ಮಾಡಿದರು.
ಎಕ್ಸ್‌ಫೆನೊ ವರದಿ ಮಾಡಿರುವ ಪ್ರತಿಭಾನ್ವಿತ ಕಾರಿಡಾರ್‌ಗಳು ಮತ್ತು ಟ್ಯಾಲೆಂಟ್ ಎಕ್ಸ್‌ಚೇಂಜ್ ಪ್ಯಾಟರ್ನ್ಸ್‌ಗಾಗಿ ಭಾರತೀಯ ರಾಜ್ಯಗಳ ವಾರ್ಷಿಕ ಅಧ್ಯಯನದಲ್ಲಿ ಉಲ್ಲೇಖಿಸಿರುವ ಪ್ರಕಾರ, ಈ ವಿಶೇಷ ಸಿಬ್ಬಂದಿ ಕಂಪನಿಯ ಪ್ರಕಾರ, ಹರಿಯಾಣ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗುಜರಾತ್‌ಗಳು ಕೂಡ ಕರ್ನಾಟಕದಂತೆ ಹೆಚ್ಚಿನ ಪ್ರತಿಭಾ ಸಮತೋಲನವನ್ನ ಹೊಂದಿದೆ ಎನ್ನಲಾಗ್ತಿದೆ.
'ಪಾಸಿಟಿವ್ ಟ್ಯಾಲೆಂಟ್ ಬ್ಯಾಲೆನ್ಸ್' ವಿಚಾರದಲ್ಲಿ ಕರ್ನಾಟಕ ದೇಶದಲ್ಲೇ ಅಗ್ರ ಸ್ಥಾನವನ್ನ ಪಡೆದುಕೊಂಡಿದೆ. ಕಳೆದ ವರ್ಷದಲ್ಲಿ ಕರ್ನಾಟಕ ಕಾರ್ಪೊರೇಟ್ ವಲಯದಲ್ಲಿ 1,36,500 ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದೆ. ಅಲ್ಲದೆ ಈ ಸಮಯದಲ್ಲಿ ಇಲ್ಲಿಂದ 73 ಸಾವಿರ ಜ ಉದ್ಯೋಗಿಗಳು ಬೇರೆಡೆಗೆ ಹೋಗಿದ್ದಾರೆ ಎಂದು ವರದಿ ಮೂಲಕ ತಿಳುದುಬಂದಿದೆ. ಈ ಅಧ್ಯಯನದ ಪ್ರಕಾರ ಪ್ರತಿಭೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ಹರಿಯಾಣ ಮತ್ತು ತೆಲಂಗಾಣ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನ ಪಡೆದುಕೊಂಡಿವೆ.
ಭಾರತದ ಟ್ಯಾಲೆಂಟ್ ಪಾಸಿಟಿವ್ ಆಗಿ ಹೊರಹೊಮ್ಮಿದ ಒಂಬತ್ತು ಭಾರತೀಯ ರಾಜ್ಯಗಳಲ್ಲಿ ಕರ್ನಾಟಕ ಉತ್ತಮ ಧನಾತ್ಮಕ ಪ್ರತಿಭೆಯ ನೆಲೆಯೊಂದಿಗೆ (ಪಿಟಿಬಿ) ಮೈಲಿಗಲ್ಲು ಸಾಧಿಸಿದೆ. ಈ 12-ತಿಂಗಳ ಅವಧಿಯಲ್ಲಿ ಕರ್ನಾಟಕ 63,500 PTBಯನ್ನು ಸಾಧಿಸಿದೆ. ಹಾಗೆ ಹರಿಯಾಣದಲ್ಲಿ 22,200, ತೆಲಂಗಾಣದಲ್ಲಿ 20,200, ಮಹಾರಾಷ್ಟ್ರದಲ್ಲಿ 10,800 ಮತ್ತು ಗುಜರಾತ್‌ನಲ್ಲಿ 7,400 ಪಿಟಿಬಿ ಇದೆ.
ಮೂಲಸೌಕರ್ಯದಲ್ಲಿ ನಿರಂತರ ಹೂಡಿಕೆಗಳು, ಫಾರ್ವರ್ಡ್ ಲುಕಿಂಗ್ ನೀತಿಗಳು ಮತ್ತು ಉದ್ದೇಶಿತ ವ್ಯಾಪಾರ ಪ್ರೋತ್ಸಾಹಗಳ ಮೂಲಕ, ಕರ್ನಾಟಕವು ಪ್ರಮುಖ ಜಾಗತಿಕ ಪ್ರತಿಭೆ ಬ್ರ್ಯಾಂಡ್ ಆಗಿ ತನ್ನ ಭದ್ರಕೋಟೆಯನ್ನು ಬಲಪಡಿಸಿದೆ ಎಂದು Xpheno ನ ಸಹ-ಸಂಸ್ಥಾಪಕರಾದ ಕಮಲ್ ಕಾರಂತ್ ಹೇಳಿದ್ರು.
ಬೆಂಗಳೂರು ಮೂಲದ ಎಕ್ಸ್‌ಫೀನೋ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಕರ್ನಾಟಕವು ಅತ್ಯಧಿಕ ಧನಾತ್ಮಕ ಟ್ಯಾಲೆಂಟ್ ಬ್ಯಾಲೆನ್ಸ್ (ಪಿಟಿಬಿ) ಹೊಂದಿದ್ದು, ಭಾರತದ ನಂ.1 ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗೆ ಕರ್ನಾಟಕದಲ್ಲಿ ವಿವಿಧ ಕ್ಷೇತ್ರಗಳಲ್ಲಿ 59.7 ಲಕ್ಷ ಮಂದಿ ವೈಟ್ ಕಾಲರ್ ಹುದ್ದೆಗಳಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ. ಹಾಗೆ ಇವರುಗಳಲ್ಲಿ 64% ನಷ್ಟು ಜನರು ಒಂದು ವರ್ಷದ ವೃತ್ತಿ ಅನುಭವವನ್ನ ಹೊಂದಿದವರು ಇದ್ದಾರೆ. ಇವರಲ್ಲಿ 34 ಲಕ್ಷ ಮಂದಿ ಬೆಂಗಳೂರಿನಲ್ಲೇ ಇದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಬೆಂಗಳೂರು 3.4 ಮಿಲಿಯನ್ ಅನುಭವಿ ವೈಟ್ ಕಾಲರ್ ಟ್ಯಾಲೆಂಟ್ ಪೂಲನ್ನು ಹೊಂದಿರುವ ಕರ್ನಾಟಕದ ಪ್ರಮುಖ ಸ್ಥಳವಾಗಿದೆ. ರಾಜ್ಯದ ಸಕ್ರಿಯ ವೈಟ್ ಕಾಲರ್ ಪ್ರತಿಭಾವಂತರ ಸಂಖ್ಯೆ ಈಗ ಒಟ್ಟು 5.97 ಮಿಲಿಯನ್ ಆಗಿದೆ. ಹೀಗಾಗಿ ಉದ್ಯೋಗಾಕಾಂಕ್ಷಿಗಳ ಆಸಕ್ತಿ ಕೂಡ ಪ್ರಬಲವಾಗಿದೆ, ಭಾರತದಾದ್ಯಂತ 3.2 ಮಿಲಿಯನ್ ಅಭ್ಯರ್ಥಿಗಳು ಇತರ ಮೆಗಾಸಿಟಿಗಳಿಂದ 1.7 ಮಿಲಿಯನ್ ಸೇರಿದಂತೆ ಕರ್ನಾಟಕದ ಅವಕಾಶಗಳಿಗೆ ಆದ್ಯತೆಯನ್ನು ವ್ಯಕ್ತಪಡಿಸಿದ್ದಾರೆ.
ಸಕ್ರಿಯ ವೈಟ್ ಕಾಲರ್ ಪ್ರತಿಭೆಗಳಿಗೆ ಕರ್ನಾಟಕದ ಐಟಿ/ಐಟಿಇಎಸ್ ವಲಯವು ಪ್ರಮುಖ ಉದ್ಯೋಗ ಕ್ಷೇತ್ರವಾಗಿದೆ. ಮೂರನೇ ಒಂದು ಭಾಗದಷ್ಟು (1.43 ಮಿಲಿಯನ್) ಐಟಿ/ಐಟಿಇಎಸ್ ವಲಯದಲ್ಲಿ ಸಕ್ರಿಯ ಅನುಭವಿ ಟ್ಯಾಲೆಂಟ್ ಪೂಲ್ ತೊಡಗಿಸಿಕೊಂಡಿದೆ.
ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ, ಕೇರಳ ಮತ್ತು ಆಂಧ್ರಪ್ರದೇಶ ಸೇರಿದಂತೆ ಬೆಂಗಳೂರಿನಲ್ಲಿ ಪ್ರತಿಭಾವಂತರನ್ನ ಒಳಗೊಂಡಿರುವ ಉನ್ನತ ರಾಜ್ಯಗಳಾಗಿ ಗುರುತಿಸಿಕೊಂಡಿವೆ. ಅಲ್ಲದೆ ಕರ್ನಾಟಕದಲ್ಲಿ ಇರುವ ಒಟ್ಟು ಪ್ರತಿಭೆಗಳಲ್ಲಿ ಸುಮಾರು 59% ನಷ್ಟು ಜನರು ಈ ರಾಜ್ಯಗಳಿಂದಲೇ ಬಂದವರು.
ಕರ್ನಾಟಕವು ಪ್ರತಿಭೆಯನ್ನು ಕಳೆದುಕೊಳ್ಳುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ, ತೆಲಂಗಾಣ, ತಮಿಳುನಾಡು, ಹರಿಯಾಣ ಮತ್ತು ದೆಹಲಿ ನಂತರದ ಸ್ಥಾನದಲ್ಲಿವೆ.
ಅಂತರರಾಷ್ಟ್ರೀಯ ಪ್ರದೇಶಗಳಿಂದ ಪ್ರತಿಭೆಗಳನ್ನು ಆಕರ್ಷಿಸುವ ವಿಷಯಕ್ಕೆ ಬಂದಾಗ, ಕರ್ನಾಟಕವು ಒಟ್ಟು 68%ನಷ್ಟು ಪ್ರತಿಭೆಗಳು ಅಗ್ರ 5 ಕಾರಿಡಾರ್‌ಗಳಲ್ಲಿ US, UAE, UK, ಜರ್ಮನಿ ಮತ್ತು ಕೆನಡಾ ಸೇರಿವೆ.
ಪ್ರತಿಭಾನ್ವಿತ ಋಣಾತ್ಮಕ ರಾಜ್ಯಗಳು ಅಥವಾ ಋಣಾತ್ಮಕ ಪ್ರತಿಭಾ ಸಮತೋಲನ (NTB) ಹೊಂದಿರುವ ರಾಜ್ಯಗಳೊಂದಿಗೆ ಶ್ರೇಯಾಂಕದ ಇನ್ನೊಂದು ತುದಿಯು ಆಂಧ್ರ ಪ್ರದೇಶ, ತಮಿಳುನಾಡು, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಬಿಹಾರಗಳು ಋಣಾತ್ಮಕ 9,000 ಮತ್ತು ಋಣಾತ್ಮಕ 18,000 ನಡುವೆ NTB ಗಳನ್ನು ಹೊಂದಿದೆ.
More From GoodReturns

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ



Click it and Unblock the Notifications