ಕೇಂದ್ರ ಸರ್ಕಾರದ ವಿರುದ್ಧ ಮೈಕ್ರೋಬ್ಲಾಗಿಂಗ್ ಆಪ್ ಟ್ವಿಟ್ಟರ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದ್ದು, ಸುಮಾರು 50 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆಯ್ದ ಖಾತೆಗಳನ್ನು ನಿರ್ಬಂಧಿಸುವುದರ ವಿರುದ್ಧವಾಗಿ ಟ್ವಿಟ್ಟರ್ ಇಂಕ್ ಮನವಿಯನ್ನು ಸಲ್ಲಿಸಿದೆ. ಈ ಮನವಿಯನ್ನು ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠವು ವಜಾಗೊಳಿಸಿದೆ.
ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರನ್ನು ಒಳಗೊಂಡ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠವು ಟ್ವಿಟ್ಟರ್‌ನ ಅರ್ಜಿಯನ್ನು ವಜಾಗೊಳಿಸಿರುವುದು ಮಾತ್ರವಲ್ಲದೆ ಟ್ವಿಟರ್ ಇಂಕ್‌ಗೆ 50 ಲಕ್ಷ ರೂಪಾಯ ದಂಡವನ್ನು ವಿಧಿಸಿದೆ. ಸಾಮಾಜಿಕ ಮಾಧ್ಯಮ ಕಂಪನಿಯು ಸರ್ಕಾರದ ಆದೇಶಗಳನ್ನು ಅನುಸರಿಸದೆ ನ್ಯಾಯಾಲಯವನ್ನು ಸಂಪರ್ಕಿಸಿದೆ ಎಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಹೇಳಿದರು.

ಮೇ 23 ರಂದು ಪ್ರಕರಣದ ತೀರ್ಪನ್ನು ಕಾಯ್ದಿರಿಸಲಾಗಿದ್ದು, ಶುಕ್ರವಾರ ತೀರ್ಪು ಪ್ರಕಟಿಸಲಾಯಿತು. ಟ್ವಿಟ್ಟರ್ ವಿದೇಶಿ ಕಂಪನಿಯಾಗಿ ಭಾರತದ ಸಂವಿಧಾನದ 19 ಮತ್ತು 21 ನೇ ವಿಧಿಯ ಅಡಿಯಲ್ಲಿ ಭಾರತದ ನಾಗರಿಕರಿಗೆ ಇರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕುಗಳ ಲಾಭ ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸೂಚಿಸಿದೆ. ಆದೇಶದ ಸಂಪೂರ್ಣ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಟ್ವಿಟ್ಟರ್‌ನಲ್ಲಿ ಪ್ರಧಾನಿ ಮೋದಿಯನ್ನು ಫಾಲೋ ಮಾಡಿದ ಮಸ್ಕ್, ಟೆಸ್ಲಾ ಭಾರತಕ್ಕೆ ಬರುತ್ತಾ?
ಹಲವಾರು ಖಾತೆಗಳಿಗೆ ಸಂಬಂಧಿಸಿದಂತೆ ನೀಡಿರುವ ನಿರ್ಬಂಧದ ಆದೇಶವನ್ನು ಪ್ರಶ್ನಿಸಿ ಟ್ವಿಟ್ಟರ್ ಕರ್ನಾಟಕ ಹೈಕೋರ್ಟ್‌ನ ಮೊರೆ ಹೋಗಿದೆ. ಸರ್ಕಾರವು ಟ್ವಿಟ್ಟರ್‌ನ ಸ್ಥಾನವನ್ನು ವಿದೇಶಿ ಕಂಪನಿಯಾಗಿ ಪ್ರಶ್ನಿಸಿದೆ. ಆರ್ಟಿಕಲ್ 19 ಮತ್ತು ಆರ್ಟಿಕಲ್ 21 ರ ಲಾಭವನ್ನು ಪಡೆಯಲು ಸಾಧ್ಯವಿಲ್ಲ ಎಂದು ವಾದಿಸಿದರು. ಟ್ವಿಟ್ಟರ್ ಮತ್ತು ಅದರ ಬಳಕೆದಾರರ ನಡುವೆ ಯಾವುದೇ ಸಂಬಂಧ ಇಲ್ಲ ಎಂದು ಸರ್ಕಾರ ವಾದಿಸಿತು.
ದಂಡದ ಹಣವನ್ನು 45 ದಿನಗಳಲ್ಲಿ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು. ದಂಡ ಪಾವತಿಸಲು ತಪ್ಪಿದಲ್ಲಿ ಪ್ರತಿನಿತ್ಯ 5 ಸಾವಿರ ದಂಡ ವಿಧಿಸುವುದಾಗಿಯೂ ಹೈಕೋರ್ಟ್ ಎಚ್ಚರಿಕೆ ನೀಡಿದೆ. ಸುಳ್ಳು ಸುದ್ದಿ ಹಾಗೂ ಕೋಮು ಸೌಹಾರ್ದತೆಗೆ ದಕ್ಕೆ ತರುವಂತಹ ಆಕ್ಷೇಪಾರ್ಹ ಪೋಸ್ಟ್ ಗಳನ್ನು ಬ್ಲಾಕ್ ಮಾಡುವಂತೆ ಕೇಂದ್ರ ಸರ್ಕಾರ ಟ್ವಿಟರ್ ಸಂಸ್ಥೆಗೆ ಸೂಚನೆ ನೀಡಿತ್ತು. ಇಲ್ಲವಾದರೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕ್ರಮದ ಎಚ್ಚರಿಕೆ ನೀಡಿತ್ತು.
ಆದರೆ ಕೇಂದ್ರ ಸರ್ಕಾರದ ಕ್ರಮ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಹೇಳಿದ್ದ ಟ್ವಿಟ್ಟರ್ ಸಂಸ್ಥೆ ಹೈಕೋರ್ಟ್‌ಗೆ ರಿಟ್ ಅರ್ಜಿಯನ್ನು ಸಲ್ಲಿಸಿತ್ತು. ಯಾವುದೇ ವ್ಯಕ್ತಿಗೂ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಕೇಂದ್ರ ಸರ್ಕಾರದ ಸೂಚನೆಗಳನ್ನು ಪಾಲಿಸಿದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಲಿದೆ ಎಂದು ಟ್ವಿಟ್ಟರ್ ಸಂಸ್ಥೆ ಪರ ವಕೀಲರು ವಾದ ಮಾಡಿದ್ದಾರೆ. ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವ ಮೊದಲು ಟ್ವೀಟ್ ಮಾಡುವ ವ್ಯಕ್ತಿಗೆ ನೋಟಿಸ್ ಕಳುಹಿಸಿ ವಾದ ಆಲಿಸಿದ ನಂತರವೇ ಕ್ರಮ ಕೈಗೊಳ್ಳಬೇಕೆಂದು ವಾದಿಸಲಾಗಿತ್ತು.
ಇನ್ನು ಟ್ವಿಟ್ಟರ್ ಸಂಸ್ಥೆ ವಾದವನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ತಳ್ಳಿ ಹಾಕಿದ್ದಾರೆ. ಕೇಂದ್ರ ಸರ್ಕಾರದ ಆದೇಶವನ್ನು ಟ್ವಿಟ್ಟರ್ ಅನುಸರಣೆ ಮಾಡಿಲ್ಲ. ಈ ಸೂಚನೆಯನ್ನು ಪಾಲನೆ ಮಾಡದಿದ್ದರೆ, 7 ವರ್ಷ ಶಿಕ್ಷೆ, ದಂಡವನ್ನು ವಿಧಿಸಲಾಗುತ್ತದೆ. ಆದರೂ ಟ್ವಿಟ್ಟರ್ ಈ ಸೂಚನೆಯನ್ನು ಪಾಲನೆ ಮಾಡಿಲ್ಲ. ಒಂದು ವರ್ಷದ ವಿಳಂಬದ ನಂತರ ಸೂಚನೆ ಪಾಲಿಸಿ ಕೋರ್ಟ್ ಗೆ ಬಂದಿದ್ದೀರಿ. ನೀವು ರೈತರಲ್ಲ, ಶ್ರೀಮಂತ ಸಂಸ್ಥೆ ಎಂಬುದು ತಿಳಿದಿರಲಿ ಎಂದು ಟ್ವಿಟ್ಟರ್ ಸಂಸ್ಥೆಗೆ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಟ್ವಿಟ್ಟರ್ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


Click it and Unblock the Notifications