ನವದೆಹಲಿ, ನ. 21: ವಿದ್ಯುತ್ ಜಾಲ ಪ್ರಭಾವಿತ ಮರುಬಳಕೆ ಇಂಧನದ (Grid Interactive Renewable Energy) ಉತ್ಪಾದನಾ ಸಾಮರ್ಥ್ಯದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಆರ್‌ಬಿಐನ ಪ್ರಕಟಣೆಯೊಂದು ಮಾಹಿತಿ ನೀಡಿದೆ. ರಾಜ್ಯದಲ್ಲಿ 15,463 ಮೆಗಾವ್ಯಾಟ್ ಮರುಬಳಕೆ ಇಂಧನ ಉತ್ಪಾದನೆಯ ಸಾಮರ್ಥ್ಯದಷ್ಟು ಘಟಕಗಳು ಸ್ಥಾಪನೆ ಆಗಿವೆ. ಇದು ತಮಿಳುನಾಡು ಮತ್ತು ಗುಜರಾತ್ ರಾಜ್ಯಗಳಿಗಿಂತ ಹೆಚ್ಚು ಎನ್ನಲಾಗಿದೆ.
ಭಾರತೀ ರಿಸರ್ವ್ ಬ್ಯಾಂಕ್ 2021-22ರ ಭಾರತೀಯ ರಾಜ್ಯಗಳ ಅಂಕಿ ಅಂಶಗಳ ಕೈಪಿಡಿಯನ್ನು ಪ್ರಕಟಿಸಿದ್ದು, ಅದರಲ್ಲಿ ಈ ಮಾಹಿತಿ ಇದೆ ಎಂದು ಎಎನ್‌ಐ ವರದಿ ಮಾಡಿದೆ. ಈ ಹ್ಯಾಂಡ್‌ಬುಕ್ ಪ್ರಕಾರ ಕರ್ನಾಟಕದಲ್ಲಿ ಗ್ರಿಡ್ ಇಂಟರಾಕ್ಟಿವ್ ಮರುಬಳಕೆಯ ಇಂಧನ ಉತ್ಪಾದನೆ ಸಾಮರ್ಥ್ಯ 15,463 ಮೆಗಾವ್ಯಾಟ್ ಇದ್ದರೆ ತಮಿಳುನಾಡಿನಲ್ಲಿ 15,225 ಮೆಗಾವ್ಯಾಟ್ ಸಾಮರ್ಥ್ಯ ಇದೆ. ಗುಜರಾತ್ 13,153 ಮೆಗಾ ವ್ಯಾಟ್ ಮತ್ತು ಮಹಾರಾಷ್ಟ್ರ 10,267 ಮೆಗಾ ವ್ಯಾಟ್ ಸಾಮರ್ಥ್ಯ ಹೊಂದಿದ್ದು ಕ್ರಮವಾಗಿ 3 ಮತ್ತು 4ನೇ ಸ್ಥಾನ ಪಡೆದಿವೆ.
ಇದು 2021 ಮಾರ್ಚ್‌ವರೆಗಿನ ಅಂಕಿ ಅಂಶವಾಗಿದೆ. ಕೇಂದ್ರ ಸರ್ಕಾರದ ಅಂಕಿ ಅಂಶ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದ ಇಂಧನ ಅಂಕಿಅಂಶಗಳಿಂದ ಮಾಹಿತಿಯನ್ನು ಆರ್‌ಬಿಐ ಶನಿವಾರ ಪ್ರಕಟಿಸಿದ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಮರುಬಳಕೆ ಇಂಧನ ಯಾವುವು?
ರಿನಿವಬಲ್ ಎನರ್ಜಿ ಅಥವಾ ನವೀಕರಿಸಬಹುದಾದ ಇಂಧನ ಎಂಬುದು ಕಲ್ಲಿದ್ದಲು ಘಟಕಗಳಿಂದ ಉತ್ಪಾದನೆಯಾಗುವ ವಿದ್ಯುತ್ ಅಲ್ಲ. ಸೌರಶಕ್ತಿ, ಸಣ್ಣ ಜಲವಿದ್ಯುತ್ ಘಟಕ, ವಾಯುಶಕ್ತಿ, ಜೈವಿಕ ಇಂಧನ, ಕಸಗಳಿಂದ ಉತ್ಪತ್ತಿ ಮಾಡುವ ಇಂಧನ ಮೊದಲಾದ ಪರಿಸರಸ್ನೇಹಿ ವ್ಯವಸ್ಥೆಯಡಿ ತಯಾರಾಗುವುದು ಮರುಬಳಕೆ ಇಂಧನದ ವಿಭಾಗಕ್ಕೆ ಬರುತ್ತವೆ.
ಮರುಬಳಕೆ ಇಂಧನ ಉತ್ಪಾದನೆಯ ರಾಜ್ಯಗಳು
(2021 ಮಾರ್ಚ್‌ವರೆಗಿನ ಅಂಕಿ ಅಂಶಗಳು)
1) ಕರ್ನಾಟಕ: 14,463 ಮೆಗಾವ್ಯಾಟ್
2) ತಮಿಳುನಾಡು: 15,225 ಮೆ ವ್ಯಾ
3) ಗುಜರಾತ್: 13,153 ಮೆ ವ್ಯಾ
4) ಮಹಾರಾಷ್ಟ್ರ: 10,267 ಮೆ ವ್ಯಾ
5) ರಾಜಸ್ಥಾನ: 10,205 ಮೆ ವ್ಯಾ
6) ಆಂಧ್ರ ಪ್ರದೇಶ: 8,969 ಮೆ ವ್ಯಾ
7) ಮಧ್ಯಪ್ರದೇಶ: 5,206 ಮೆ ವ್ಯಾ
8) ತೆಲಂಗಾಣ: 4,378 ಮೆ ವ್ಯಾ
9) ಉತ್ತರಪ್ರದೇಶ: 3,879 ಮೆ ವ್ಯಾ
10) ಪಂಜಾಬ್: 1,617 ಮೆ ವ್ಯಾ
11) ಹಿಮಾಚಲಪ್ರದೇಶ: 988 ಮೆ ವ್ಯಾ
12) ಉತ್ತರಾಖಂಡ್: 713 ಮೆಗಾ ವ್ಯಾಟ್
ಆರ್‌ಬಿಐನ ಭಾರತಿಯ ರಾಜ್ಯಗಳ ಅಂಕಿಅಂಶಗಳ ಕೈಪಿಡಿಯಲ್ಲಿ ಮರುಬಳಕೆ ಇಂಧನ ಮಾತ್ರವಲ್ಲ ಇನ್ನೂ ಹಲವಾರು ರೀತಿಯ ಅಂಕಿ ಅಂಶಗಳನ್ನು ಬಹಿರಂಗಪಡಿಸಲಾಗಿದೆ. 1951ರಿಂದ ಪ್ರಸಕ್ತ ಸಮಯದವರೆಗಿನ ವಿವಿಧ ಕಾಲಘಟ್ಟಗಳಲ್ಲಿ ದೇಶಾದ್ಯಂತ ಸಾಮಾಜಿಕ ಜನಸಂಖ್ಯೆ, ರಾಜ್ಯವಾರು ಉತ್ಪಾದನೆ, ಕೃಷಿ, ಬೆಲೆ ಮತ್ತು ವೇತನ, ಕೈಗಾರಿಕೆ, ಸೌಕರ್ಯ (ಇನ್‌ಫ್ರಾಸ್ಟ್ರಕ್ಚರ್), ಬ್ಯಾಂಕಿಂಗ್, ವಿತ್ತೀಯ ವರ್ಷದ ಸೂಚಕಗಳು ಮುಂತಾದವನ್ನು ನಿಯಮಿತವಾಗಿ ಪ್ರಕಟಿಸುತ್ತದೆ. ಮೊನ್ನೆಯ ಕೈಪಿಡಿಯಲ್ಲಿ ಆರೋಗ್ಯ ಮತ್ತು ಪರಿಸರ ವಿಭಾಗಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ.
ಇದೇ ವೇಳೆ, ನಿನ್ನೆ ಪ್ರಕಟವಾದ ಎಎನ್‌ಐ ವರದಿಯಲ್ಲಿ ಇಂಡಿಯನ್ ಎನರ್ಜಿ ಎಕ್ಸ್‌ಚೇಂಜ್‌ನ ಅಂಕಿ ಅಂಶವನ್ನೂ ಉಲ್ಲೇಖಿಸಲಾಗಿದೆ. ಐಇಎಕ್ಸ್ ಪ್ರಕಾರ ಮರುಬಳಕೆ ಇಂಧನದ ಮಾರಾಟ ವಿಚಾರದಲ್ಲಿ ಕರ್ನಾಟಕದ ವಿದ್ಯುತ್ ವಿತರಣಾ ಕಂಪನಿಗಳು (ಡಿಸ್ಕಾಂಗಳು) ಅಗ್ರಸ್ಥಾನ ಪಡೆದಿವೆ.
ಗ್ರಿಡ್ ಇಂಟರಾಕ್ಟಿವ್ ಸೌರಶಕ್ತಿ ಎಂದರೇನು?
ಸೂರ್ಯ, ನೀರು, ಗಾಳಿ ಇತ್ಯಾದಿ ಅಸೀಮಿತ ನೈಸರ್ಗಿಕ ಶಕ್ತಿಗಳಿಂದ ಪಡೆಯುವ ಇಂಧನವನ್ನು ಗ್ರೀನ್ ಎನರ್ಜಿ ಅಥವಾ ಮರುಬಳಕೆಯ ಇಂಧನವೆಂದು ಪರಿಗಣಿಸಲಾಗುತ್ತದೆ. ಬಯೋ ಫುಯೆಲ್ ಅಥವಾ ಜೈವಿಕ ಇಂಧನ, ಕಸದಿಂದ ತಯಾರಿಸುವ ವಿದ್ಯುತ್ ಕೂಡ ಗ್ರೀನ್ ಎನರ್ಜಿಯಾಗುತ್ತದೆ.
ಫೋಟೋ ವೋಲ್ಟಾಯಿಕ್ ಅಥವಾ ಪಿವಿ ಸೆಲ್‌ಗಳ ಮೂಲಕ ಸೌರ ಶಕ್ತಿ ಉತ್ಪಾದನೆ ಮಾಡಲಾಗುತ್ತದೆ. ಇನ್ವರ್ಟರ್ ಮೂಲಕ ಈ ಸೌರಶಕ್ತಿಯನ್ನು ಎಲೆಕ್ಟ್ರಿಸಿಟಿ ಗ್ರಿಡ್ ಅಥವಾ ವಿದ್ಯುತ್ ತಂತಿಗಳ ಜಾಲಕ್ಕೆ ಸಂಪರ್ಕ ಮಾಡಲಾಗುತ್ತದೆ. ವಿಂಡ್ ಎನರ್ಜಿ ಅಥವಾ ವಾಯು ಶಕ್ತಿಯಿಂದ ಉತ್ಪಾದನೆಯಾಗುವ ವಿದ್ಯುತ್ ಅನ್ನೂ ಇನ್ವರ್ಟರ್ ಮೂಲಕ ಪವರ್ ಗ್ರಿಡ್‌ಗೆ ಸಂಪರ್ಕ ಮಾಡಲಾಗುತ್ತದೆ. ಒಂದು ವೇಳೆ ಗ್ರಿಡ್ ಸಂಪರ್ಕ ಕಡಿತಗೊಂಡರೆ, ಅಥವಾ ಪವರ್ ಶಟ್‌ಡೌನ್ ಆದರೆ ಸೌರಶಕ್ತಿ ಉತ್ಪಾದನೆ ನಿಲ್ಲದ ರೀತಿಯಲ್ಲಿ ಗ್ರಿಡ್ ಇಂಟರಾಕ್ಟಿವ್ ಪಿವಿ ತಂತ್ರಜ್ಞಾನ ಕೆಲಸ ಮಾಡುತ್ತದೆ.
ವಿದ್ಯುತ್ ತಂತಿ ಜಾಲದ ಸಂಪರ್ಕ ಇಲ್ಲದೇ ಸ್ವತಂತ್ರವಾಗಿ ತನ್ನಂತಾನೆ ವಿದ್ಯುತ್ ಉತ್ಪಾದನೆ ಮಾಡಬಲ್ಲುದು. ಮನೆಗಳ ಛಾವಣಿಗಳ ಮೇಲೆ ಹಾಕಲಾಗಿರುವ ಪಿವಿ ಸೆಲ್‌ಗಳು ಇದಕ್ಕೆ ಉದಾಹರಣೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications