ಇತ್ತೀಚೆಗೆ ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್‌ಗಳು ಅನುಭವಿಸಿದ ಸಂಕಷ್ಟ ಏನೆಂದು ತಿಳಿದೇ ಇದೆ. ಅಂದರೆ ಸಾಕಷ್ಟು ಮಂದಿ, ಮೈಕ್ರೋ ಫೈನಾನ್ಸ್‌ನವರು ಸಾಲ ವಸೂಲಿಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪ ಮಾಡಿದ್ದರು. ಅಲ್ಲದೇ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಕೂಡ ಹಾಕಿದ್ದರು. ಈ ಸಾಲ ಮರುಪಾವತಿ ದರ ಕುಸಿತದಿಂದಾಗಿ, ಕರ್ನಾಟಕದ ಮೈಕ್ರೋಫೈನಾನ್ಸ್ ಸಂಸ್ಥೆಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ.

ಮಾರ್ಚ್ 2024ರಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಒಟ್ಟು ಸಾಲದ ಪುಸ್ತಕ ₹42,000 ಕೋಟಿ ಇದ್ದರೂ, ಡಿಸೆಂಬರ್ 2024ರ ವೇಳೆಗೆ ಇದು ₹34,000 ಕೋಟಿಗೆ ಕುಸಿಯಿತು. ರಾಜ್ಯದಲ್ಲಿ ಮರುಪಾವತಿ ದರ ಶೇಕಡ 98ರಷ್ಟು ಇತ್ತು. ಆದರೆ ಇದೀಗ ಇದು ಕುಸಿತ ಕಂಡಿದೆ . ಅಂದರೆ ಸಾಲ ಮರುಪಾವತಿಯ ದರ ಶೇಕಡ 90ಕ್ಕೆ ಇಳಿಮುಖವಾಗಿದೆ. ಈ ಕುಸಿತದ ಪ್ರಮುಖ ಕಾರಣಗಳಲ್ಲಿ ಸಾಲಗಾರರ ಮೇಲೆ ಹೆಚ್ಚುವರಿ ಸಾಲದ ಒತ್ತಡ, ಕರ್ನಾಟಕ ಸರ್ಕಾರದ ಸುಗ್ರೀವಾಜ್ಞೆಯಿಂದ ಉಂಟಾದ ಗೊಂದಲ, ಮತ್ತು ಆರ್ಥಿಕ ಅಸ್ಥಿರತೆಯನ್ನು ಉಲ್ಲೇಖಿಸಬಹುದು.
ಅಂದಹಾಗೆ 2025ರ ಫೆಬ್ರವರಿಯಲ್ಲಿ ಕರ್ನಾಟಕ ಸರ್ಕಾರ ಮೈಕ್ರೋ ಫೈನಾನ್ಸ್ ಸಂಬಂಧ, ಸುಗ್ರೀವಾಜ್ಞೆಯನ್ನು ಹೊರಡಿಸಿತು. ಅನಧಿಕೃತ ಸಾಲದಾತರು ಮತ್ತು ಬಲವಂತದ ಸಾಲ ವಸೂಲಾತಿ ಮಾಡಿದರೆ ಕ್ರಮ ಕೈಗೊಳ್ಳುವ ಬಗ್ಗೆ ಸುಗ್ರೀವಾಜ್ಞೆ ಜಾರಿಯಾಗಿತ್ತು. ಇದಕ್ಕೆ ಕಠಿಣ ಕ್ರಮ ಎಂದರೆ ಬಲವಂತವಾಗಿ ಸಾಲ ವಸೂಲಿ ಮಾಡಿದರೆ, ಅವರು ₹5 ಲಕ್ಷದ ದಂಡ ಮತ್ತು 10 ವರ್ಷಗಳ ಜೈಲು ಶಿಕ್ಷೆ ವಿಧಿಸುವಂತೆ ಸುಗ್ರೀವಾಜ್ಞೆಯಲ್ಲಿ ನಿಗದಿಯಾಗಿದೆ. ಇದರಿಂದಾಗಿ ಸಾಲಗಾರರು ತಪ್ಪಾಗಿ ಅರ್ಥೈಸಿಕೊಂಡು ಸಾಲ ಮರುಪಾವತಿಗೆ ತೋರಿಸುವ ನಿರ್ಲಕ್ಷ್ಯ ಹೆಚ್ಚಾಗಿದೆ. ರಾಜ್ಯದಲ್ಲಿ 64 RBI-ನೋಂದಾಯಿತ ಮೈಕ್ರೋ ಫೈನಾನ್ಸ್‌ಗಳಿದ್ದು, ಅವುಗಳಲ್ಲಿ 35 ಪ್ರಮುಖ ಕಂಪನಿಗಳು ಐದು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಆದರೆ, ಈ ಸುಗ್ರೀವಾಜ್ಞೆ ಅಸಂಘಟಿತ ಸಾಲದಾತರಿಗೆ ಮಾತ್ರ ಅನ್ವಯಿಸಿದರೂ, ಸಂಘಟಿತ ಮೈಕ್ರೋ ಫೈನಾನ್ಸ್‌ಗಳಿಗೂ ಪರಿಣಾಮ ಬೀರುತ್ತಿದೆ.
ಅಂದಹಾಗೆ ಮೈಕ್ರೋ ಫೈನಾನ್ಸ್ ಉದ್ಯಮದ ಪ್ರಮುಖ ವ್ಯಕ್ತಿಗಳು ಈ ಸನ್ನಿವೇಶದ ಬಗ್ಗೆ, ಭೀತಿ ವ್ಯಕ್ತಪಡಿಸಿದ್ದಾರೆ. ಆರ್‍ಬಿಐ ನೋಂದಾಯಿತ ಮೈಕ್ರೋ ಫೈನಾನ್ಸ್‌ನ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಕರ್ನಾಟಕದಲ್ಲಿನ ಸಾಲ ಮರುಪಾವತಿ ದರ ಇತರ ರಾಜ್ಯಗಳಿಗಿಂತ ಹೆಚ್ಚಿನ ಕುಸಿತ ಕಂಡಿದೆ. ಐಐಎಫ್‌ಎಲ್ ಸಮಸ್ತ ಫೈನಾನ್ಸ್ ಲಿಮಿಟೆಡ್‌ನ ಎಂಡಿ ವೆಂಕಟೇಶ್ ಎನ್ ಪ್ರಕಾರ, ಜನವರಿ ಮತ್ತು ಫೆಬ್ರವರಿಯಲ್ಲಿ ಮರುಪಾವತಿ ದರ ಶೇಕಡಾ 99 ಇಂದ 95-96 ರಷ್ಟಕ್ಕೆ ಇಳಿದಿದೆ. ಇದರ ಅರ್ಥ ಹೆಚ್ಚುವರಿಯಾಗಿ 2-3% ಸಾಲಗಾರರು ಪಾವತಿಗಳನ್ನು ವಿಳಂಬ ಮಾಡುತ್ತಿದ್ದಾರೆ. ಇನ್ನೂ ಕೆಲವು ಮೈಕ್ರೋ ಫೈನಾನ್ಸ್‌ಗಳು ಶೇಕಡ 85 ರಿಂದ 90% ಗೆ ಸುಧಾರಣೆಯನ್ನು ವರದಿ ಮಾಡಿದ್ದರೂ, ಸಂಕಷ್ಟ ಇನ್ನೂ ನಿರಂತರವಾಗಿದೆ.
ಇತ್ತ ಕನಿಷ್ಠ 8% ಸಾಲಗಾರರು ಐದು ಅಥವಾ ಹೆಚ್ಚಿನ ಸಂಸ್ಥೆಗಳಿಂದ ಸಾಲ ಪಡೆದಿದ್ದಾರೆ. ಇದರಿಂದ ಅವರಿಗೆ ಸಾಲದ ಹೊರೆ ಅತಿಯಾಗಿದ್ದ, ಅವರು ಕೂಡ ಸಂಕಷ್ಟಕ್ಕೊಳಗಾಗಿದ್ದಾರೆ. ಈ ಸಾಲಗಾರರಲ್ಲಿಯೂ 10% ಮಂದಿ ಬೇಜವಾಬ್ದಾರಿಯಾಗಿ ಮೂರರಿಂದ ನಾಲ್ಕು ವಿವಿಧ, ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾಲ ಪಡೆದಿದ್ದಲ್ಲದೇ, ತಮ್ಮ ಮರುಪಾವತಿ ಸಾಮರ್ಥ್ಯ ಮಿತಿಮೀರಿಸಿದ್ದಾರೆ. ಬಿಸಿಲಿನ ಅಲೆ, ಹಣದುಬ್ಬರ, ಕಡಿಮೆಯಾದ ಆರ್ಥಿಕ ಚಟುವಟಿಕೆಗಳು ಈ ಸಮಸ್ಯೆಗೆ ಮತ್ತಷ್ಟು ಕಾರಣಗಳಾಗಿವೆ. ಕೆಲವು ಹಳ್ಳಿಗಳಲ್ಲಿ, ಸಾಲಗಾರರು ತಮ್ಮ ಸಾಲವನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಬಲವಂತದ ಸಾಲ ವಸೂಲಾತಿಯನ್ನು ತೀವ್ರವಾಗಿ ನಿಯಂತ್ರಿಸಲು ಈ ಸುಗ್ರೀವಾಜ್ಞೆಯನ್ನು ಜಾರಿಗೆ ತರಲಾಯಿತು. ಆದರೆ ಇದರಿಂದ ಸಂಘಟಿತ ಮೈಕ್ರೋಫೈನಾನ್ಸ್ ಸಂಸ್ಥೆಗಳಿಗೂ ಅನಾಹುತ ಉಂಟಾಗಿದೆ.ತಗಲುತ್ತಿರುವ ಸಾಲ ಮರುಪಾವತಿ ದರಗಳು ಮೈಕ್ರೋಫೈನಾನ್ಸ್ ಸಂಸ್ಥೆಗಳ ಸ್ಥಿರತೆಗೆ ಅಪಾಯ ಉಂಟುಮಾಡುತ್ತಿವೆ. ಈ ಸಂದರ್ಭದಲ್ಲಿಯೇ, ಸರ್ಕಾರ ಈ ಸುಗ್ರೀವಾಜ್ಞೆಯ ಪರಿಣಾಮವನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದು, MFIs ಮತ್ತು ಸಾಲಗಾರರ ನಡುವೆ ಸಮತೋಲನ ಸಾಧಿಸಲು ಮುಂದಾಗಿದೆ. ಆದರೆ, ಸಾಲ ಮರುಪಾವತಿ ದರ ಪುನಃ ಸುಧಾರಿಸಲು ಮತ್ತು MFIsನ ಆರ್ಥಿಕ ಸ್ಥಿರತೆಯನ್ನು ಉಳಿಸಲು ಅಗತ್ಯವಿರುವ ತಕ್ಷಣದ ನೀತಿಪರ ಕ್ರಮಗಳು ಯಾವುವು ಎಂಬುದು ಮಹತ್ವದ ಪ್ರಶ್ನೆಯಾಗಿಯೇ ಉಳಿದಿದೆ.


Click it and Unblock the Notifications