ಧೂಮಪಾನ ಮಾಡುವರಿಗೆ ಶಾಕ್..! ಸಾರ್ವಜನಿಕ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಒಂದು ಮಹತ್ವಪೂರ್ಣ ನಿರ್ಧಾರವನ್ನು ವಿಶ್ವ ತಂಬಾಕು ರಹಿತ ದಿನದಂದು ಹೊಸ ಕಾನೂನು ತಿದ್ದಪಡಿಯನ್ನು ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೊಗೆ ರಹಿತ ತಂಬಾಕು ಬಳಕೆಯನ್ನು ಈಗಾಗಲೇ ನಿಷೇಧವನ್ನು ಮಾಡಲಾಗಿದೆ. ಆದರೆ ಇದೀಗ ಸಿಗರೇಟ್ ಹಾಗೂ ಇತರ ತಂಬಾಕು ಉತ್ಪನ್ನಗಳನ್ನು ಖರೀದಿಸಲು ಕಾನೂನುಬದ್ಧ ಕಾಯ್ದೆಯನ್ನು ತಿದ್ದಪಡಿ ಮಾಡಲಾಗಿದೆ.ತಂಬಾಕು ಖರೀದಿಸುವ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಏರಿಕೆ ಮಾಡಲಾಗಿದೆ. ಸಾವಿರ ರೂಪಾಯಿ ದಂಡವನ್ನು ಕೂಡ ವಿಧಿಸಲಾಗುತ್ತದೆ.
ಹೌದು, ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ (COTPA), 2003ಕ್ಕೆತಿದ್ದುಪಡಿಗಳನ್ನು ಜಾರಿಗೆ ತಂದಿದೆ.ಈಗ COTPA (ಕರ್ನಾಟಕ ತಿದ್ದುಪಡಿ)ಕಾಯ್ದೆ, 2024 ಎಂದು ಕರೆಯಲ್ಪಡುವ ಕಾನೂನಿಗೆ ಮೇ 23 ರಂದು ರಾಷ್ಟ್ರಪತಿಗಳ ಅನುಮೋದನೆ ಕೂಡ ದೊರೆತಿದೆ. ಮೇ 30 ರಂದು ರಾಜ್ಯ ಗೆಜೆಟ್‌ನಲ್ಲಿ ಕೂಡ ಪ್ರಕಟವಾಗಿದೆ.

ತಿದ್ದುಪಡಿಯಡಿಯಲ್ಲಿ ಪ್ರಮುಖ ಬದಲಾವಣೆಗಳೆಂದರೆ ತಂಬಾಕು ಉತ್ಪನ್ನಗಳನ್ನು ಖರೀದಿಸುವ ಕಾನೂನುಬದ್ಧ ವಯಸ್ಸನ್ನು 18 ರಿಂದ 21 ಕ್ಕೆ ಏರಿಸುವುದು ಮತ್ತು ಬಿಡಿ ಸಿಗರೇಟ್ ಅಥವಾ ಒಂಟಿ ಕಡ್ಡಿಗಳ ಮಾರಾಟವನ್ನು ನಿಷೇಧಿಸುವುದು. ಶಿಕ್ಷಣ ಸಂಸ್ಥೆಯ 100 ಮೀಟರ್ ಒಳಗೆ ತಂಬಾಕು ಉತ್ಪನ್ನಗಳ ಮಾರಾಟವನ್ನು ಈಗ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಇನ್ನು ಮುಂದೆ ಹೋಗೆ ರಹಿತ ತಂಬಾಕು ಪದಾರ್ಥಗಳ ಸೇವನೆ ಹಾಗೂಗುಟ್ಕಾ ಉಗುವುದುನ್ನು ನಿಷೇಧವನ್ನು ಮಾಡಲಾಗಿದೆ.
ರೆಸ್ಟೋರೆಂಟ್‌ಗಳು, ಪಬ್‌ಗಳು ಅಥವಾ ಕೆಫೆಗಳಲ್ಲಿ ಹುಕ್ಕಾ ಬಾರ್‌ಗಳು ಇದ್ದರೂ ಸಹ ರಾಜ್ಯವು ಅವುಗಳ ಮೇಲೆ ಸಂಪೂರ್ಣ ನಿಷೇಧವನ್ನು ವಿಧಿಸಿದೆ. ಹೊಸದಾಗಿ ಸೇರಿಸಲಾದ ಸೆಕ್ಷನ್ 4A ಪ್ರಕಾರ, ಹುಕ್ಕಾ ಬಾರ್ ಅನ್ನು ನಿರ್ವಹಿಸುವುದರಿಂದ ಈಗ ಒಂದರಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಕಾಯಿದೆಯ ಸೆಕ್ಷನ್ 21A ಅಡಿಯಲ್ಲಿ 50,000 ರೂ.ಗಳಿಂದ 1 ಲಕ್ಷ ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ.
ತಂಬಾಕು "ಬಳಕೆ"ಯ ವ್ಯಾಖ್ಯಾನವನ್ನು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮತ್ತು ಉಗುಳುವುದು ಎರಡನ್ನೂ ಸೇರಿಸಲು ವಿಸ್ತರಿಸಲಾಗಿದೆ. ದೊಡ್ಡ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಗೊತ್ತುಪಡಿಸಿದ ಧೂಮಪಾನ ಪ್ರದೇಶಗಳನ್ನು ಇನ್ನೂ ಅನುಮತಿಸಲಾಗಿದ್ದರೂ, ಉಲ್ಲಂಘನೆಗಳಿಗೆ ದಂಡವನ್ನು ಕೂಡ ಹೆಚ್ಚಿಸಲಾಗಿದೆ ಸೆಕ್ಷನ್ 21, 24 ಮತ್ತು 28 ರ ಅಡಿಯಲ್ಲಿ 200 ರೂ.ಗಳಿಂದ 1,000 ರೂ.ಗಳಿಗೆ ಏರಿಕೆ ಮಾಡಲಾಗಿದೆ.
ಈ ಹಿಂದೆ ನಿಷೇಧ ಹೇರಿದ್ದರೂ, ಬೆಂಗಳೂರಿನ ಕೆಲವು ಭಾಗಗಳಲ್ಲಿ ಇನ್ನೂ ಅಕ್ರಮವಾಗಿ ಹುಕ್ಕಾ ಬಾರ್‌ಗಳು ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ. ಕೇಂದ್ರ ಅಪರಾಧ ವಿಭಾಗವು ಇತ್ತೀಚೆಗೆ ಅಂತಹ 20 ಸ್ಥಾಪನೆಗಳ ಮೇಲೆ ದಾಳಿ ನಡೆಸಿ, 12 ಲಕ್ಷ ರೂ.ಗಳಿಗೂ ಹೆಚ್ಚು ಮೌಲ್ಯದ ಹುಕ್ಕಾ ಮಡಕೆಗಳು ಮತ್ತು ಫ್ಲೇವರ್‌ಗಳನ್ನು ವಶಪಡಿಸಿಕೊಂಡಿದೆ.
ಕರ್ನಾಟಕ ಹೈಕೋರ್ಟ್, ಏಪ್ರಿಲ್ 2024 ರ ತೀರ್ಪಿನಲ್ಲಿ, ಸಾರ್ವಜನಿಕ ಆರೋಗ್ಯವನ್ನು ಕಾಪಾಡಲು ರಾಜ್ಯ ಕ್ರಮ ಕೈಗೊಳ್ಳುವಂತೆ ಆದೇಶಿಸುವ ಸಂವಿಧಾನದ 47 ನೇ ವಿಧಿಯ ಅಡಿಯಲ್ಲಿ ನಿಷೇಧದ ಕಾನೂನುಬದ್ಧತೆಯನ್ನು ಎತ್ತಿ ಹಿಡಿದಿದೆ ನಿಕೋಟಿನ್ ಮತ್ತು ಮೊಲಾಸಸ್‌ನಂತಹ ಹಾನಿಕಾರಕ ಪದಾರ್ಥಗಳು ಇರುವುದರಿಂದ 'ಗಿಡಮೂಲಿಕೆ' ಹುಕ್ಕಾಗಳು ಸಹ ನಿಷೇಧದ ಅಡಿಯಲ್ಲಿ ಬರುತ್ತವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರಮುಖ ತಿದ್ದುಪಡಿಗಳ ವಿವರ
1. ತಂಬಾಕು ಖರೀದಿಸುವ ವಯಸ್ಸು 18ರಿಂದ 21ಕ್ಕೆ ಏರಿಕೆ: ಇನ್ಮುಂದೆ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ತಂಬಾಕು ಉತ್ಪನ್ನಗಳನ್ನು ಖರೀದಿಸುವುದು ಅಥವಾ ಸೇವನೆ ಮಾಡುವುದನ್ನು ನಿಷೇಧ ಮಾಡಲಾಗಿದೆ. ಇದು ಯುವ ಪೀಳಿಕೆಯ ಆರೋಗ್ಯದ ದೃಷ್ಟಿಯಿಂದ ಹಾಗೂ ತಂಬಾಕು ವ್ಯಸನ ತಡೆಗಟ್ಟುಲು ಈ ಕ್ರಮವನ್ನು ಕೈಗೊಳ್ಳಲಾಗಿದೆ.
2. ಹುಕ್ಕಾ ಬಾರ್‌ಗಳು ಸಂಪೂರ್ಣ ನಿಷೇಧ: ರಾಜ್ಯದಲ್ಲಿ ಎಲ್ಲ ಹುಕ್ಕಾ ಬಾರ್‌ಗಳನ್ನು ನಿಷೇಧವನ್ನು ಮಾಡಲಾಗಿದೆ. ಸಾರ್ವಜನಿಕರಿಗೆ ಧೂಮಪಾನಿಂದ ಉಂಟಾಗುವ ಹಾನಿಯಿಂದ ರಕ್ಷಣೆಯನ್ನು ನೀಡಲು ಈ ಕ್ರಮವನ್ನು ಕೈಗೊಳಲಾಗಿದೆ. ರೆಸ್ಟೋರೆಂಟ್,ಕಾಫಿ ಶಾಪ್,ಲೌಂಜ್, ಬಾರ್‌ಗಳಲ್ಲಿ ಹುಕ್ಕಾ ಸೇವನೆಯನ್ನು ಮಾಡುವಂತಿಲ್ಲ.
3. ಸಾರ್ವಜನಿಕ ಧೂಮಪಾನಕ್ಕೆ ದಂಡ: ತಂಬಾಕು ನಿಷೇಧ ಕಾಯ್ದೆ ಅಡಿಯಲ್ಲಿ ಈಗವರೆಗೆ 200ರೂ ರಷ್ಟು ದಂಡವಿತ್ತು.ಆದರೆ ಹೊಸ ಕಾನೂನಿನ ಅಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ಸಾವಿರ ದಂಡವನ್ನು ವಿಧಿಸಲಾಗುತ್ತದೆ. ನಿಯಮ ಉಲ್ಲಂಘನೆಗೆ ಮಾಡಬೇಡಿ ಎಂದು ಎಚ್ಚರಿಕೆಯನ್ನು ಸಹ ನೀಡಲಾಗಿದೆ.
ಕಾಯ್ದೆಯ ಉದ್ದೇಶವೇನು..?
- ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ.
- ತಂಬಾಕು ವ್ಯಸನವನ್ನು ನಿರ್ವಾಹರಣೆ ಮಾಡುವುದು.
- ಕ್ಯಾನ್ಸರ್, ಉಸಿರಾಟದ ರೋಗಗಳು ಮುಂತಾದ ತಂಬಾಕು ಸಂಬಂಧಿತ ಕಾಯಿಲೆಗಳಿಗೆ ತಡೆಕಟ್ಟುವ ಉದ್ದೇಶ.


Click it and Unblock the Notifications