KEA ನೇಮಕಾತಿ 2025: 2800ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ! ಈಕೂಡಲೇ ಅರ್ಜಿ ಸಲ್ಲಿಸಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಹಲವಾರು ನೇಮಕಾತಿಯನ್ನ ಆರಂಭಿಸಿದೆ. ಇನ್ನು ಈ ಕುರಿತು ತನ್ನ ಅಧಿಕೃತ ವೆಬ್‌ಸೈಟ್‌ cetonline.karnataka.gov.inನಲ್ಲಿ ಅಧಿಸೂಚನೆಯನ್ನ ಬಿಡುಗಡೆ ಮಾಡಿದೆ. ಸರ್ಕಾರಿ ಕೆಲಸಗಳಿಗಾಗಿ ಎದುರು ನೋಡುತ್ತಿರುವವರಿಗಾಗಿ ಇದು ಒಳ್ಳೆಯ ಅವಕಾಶವಾಗಿದೆ. ಅಲ್ಲದೆ ವಿವಿಧ ಇಲಾಖೆಗಳ ವಿವಿಧ ಹದ್ದೆಗಳಿಗೆ ಈ ನೇಮಕಾತಿಯನ್ನ ಮಾಡಲಾಗ್ತಿದೆ. ಈ ಬಾರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2882 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಇನ್ನು ಈ ಹುದ್ದೆಗಳ ವಿವರವನ್ನ ಇಲ್ಲಿ ತಿಳಿಯಿರಿ.

ಜೂನಿಯರ್‌ ಅಧಿಕಾರಿಗಳು, ಗ್ರಂಥಾಲಯ ಸಹಾಯಕರು, ಹಣಕಾಸು ಅಧಿಕಾರಿಗಳು, ಮಾರ್ಕೇಟಿಂಗ್‌ ಅಧಿಕಾರಗಳು, ಆಪರ್‌ರೇಟರ್‌ಗಳು ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಲ್ಲಾ ಹದ್ದೆಗಳ ನೇಮಕಾತಿಗಳು ಕೂಡ ನಿರ್ದಿಷ್ಟ ಅರ್ಹತಾ ಮಾನದಂಡಗಳ ಆಧಾರದ ಮೇಲೆ ಇರುತ್ತದೆ. ಇದಲ್ಲದೆ ವಿವಿಧ ಶೈಕ್ಷಣಿಕ ಹಿನ್ನೆಲೆಯನ್ನ ಹೊಂದಿರುವವರು ಕೆಲವು ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಬಹುದು.

KEA ನೇಮಕಾತಿ: 2800ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ!

ಸಧ್ಯಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಹುದ್ದೆಗಳಿಗಾಗಿ ಅಧಿಸೂಚನೆಯನ್ನ ಬಿಡುಗಡೆ ಮಾಡಿದೆ. ಆದ್ರೆ ಅರ್ಜಿ ಸಲ್ಲಿಸುವ ದಿನಾಂಕ ಹಾಗೆ ಕೊನೆಯ ದಿನಾಂಕವನ್ನ ಇನ್ನೂ ತಿಳಿಸಿಲ್ಲ. ಅಭ್ಯರ್ಥಿಗಳು ಈ ಕುರಿತಾಗಿ KEA ಅಧಿಕೃತ ವೆಬ್‌ಸೈಟ್‌ನಲ್ಲಿ ಪರೀಕ್ಷೆ ಕರಿತ ಹೆಚ್ಚಿನ ಅಪ್‌ಡೇಟ್‌ಳನ್ನ ನೋಡಬಹುದು.

ಶೈಕ್ಷಣಿಕ ಅರ್ಹತೆಗಳು

KEA ನೇಮಕಾತಿಗಾಗಿ ಶೈಕ್ಷಣಿಕ ಅರ್ಹತೆಗಳು ಮಖ್ಯವಾಗುತ್ತವೆ. ಹುದ್ದೆಗಳ ಆಧಾರದ ಮೇಲೆ ನಿಮ್ಮ ಶೈಕ್ಷಣಿಕ ಅರ್ಹತೆ ಇರಬೇಕೇಗುತ್ತದೆ. ಹತ್ತನೇ ತರಗತಿ ಉತ್ತೀರ್ಣರಾಗಿ ಜೊತೆಗೆ ಸರ್ಟಿಫಿಕೇಟ್‌ ಹೊಂದಿದವರು ಹಾಗೆ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನ ಪಡೆದಿರುವವರು ಈ ಹುದ್ದಗಳಿಗಾಗಿ ಅರ್ಜಿ ಸಲ್ಲಿಸಬಹುದು. ಅಲ್ಲದೆ ಇಂಜನಿಯರಿಂಗ್‌ ಪದವಿ, ಎಂಬಿಎ ಪದವಿ ಅಥವಾ ಡಿಪ್ಲೊಮಾ ಪದವಿ ಪಡದವರಿಗೂ ಕೂಡ ಹುದ್ದೆಗಳನ್ನ ಇಡಲಾಗಿದೆ.

ನಿಮ್ಮ ವಿದ್ಯಾರ್ಹತೆಗೆ ತಕ್ಕಂತೆ ಹದ್ದೆಗಳ ಪಟ್ಟಿ ಇಲ್ಲಿದೆ

ಜೂನಿಯರ್‌ ಪ್ರೋಗ್ರಾಮರ್‌: ಇಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್‌ ಪದವಿ(ಎಲೆಕ್ಟ್ರಾನಿಕ್ಸ್‌/ಕಂಪ್ಯೂಟರ್‌ ಸೈನ್ಸ್‌) ಅಥವಾ ಎಂಸಿಎ.

ಸಹಾಯಕ ಇಂಜಿನಿಯ್‌: ಸಿವಿಲ್‌ ಇಂಜಿನಿಯರಿಂಗ್‌ನಲ್ಲಿ ಪದವಿ

ಸಹಾಯಕ ಮತ್ತು ಜೂನಿಯರ್‌ ಸಹಾಯಕ: ಪದವಿ ಅಥವಾ ಪಿಯುಸಿ

ಸಹಾಯಕ ಲೈಬ್ರರಿಯನ್‌: ಕಂಪ್ಯೂಟರ್‌ ಜ್ಞಾನದ ಜೊತೆಗೆ ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ.

ವಯಸ್ಸಿನ ಮಿತಿ: KEA ನೇಮಕಾತಿಗಾಗಿ ಕನಿಷ್ಠ ವಯಸ್ಸು 18 ವರ್ಷ ಆಗಿರಬೇಕು. ಹಾಗೆ ಗರಿಷ್ಠ ವಯಸ್ಸು 35 ವರ್ಷ ಇರಬೇಕು. ಆದ್ರೆ ಇತರೆ ಪತ್ಯೇಕ ವರ್ಗಗಳಿಗೆ ಅಂದರೆ ಎಸ್ಸಿ, ಎಸ್ಟಿ ಹಾಗೆ ಒಬಿಸಿ ಮತ್ತು ವಿಕಲ ಚೇತನ ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ ಇರಲಿದೆ.

ನೋಂದಣಿ ಶುಲ್ಕ ಎಷ್ಟು?

ಈ ಅರ್ಜಿ ಸಲ್ಲಿಸಲು ಅರ್ಜಿದಾರರು ನೋಂದಣಿ ಶುಲ್ಕವನ್ನ ಪಾವತಿಸಬೇಕಾಗುತ್ತದೆ. ಈ ಶುಲ್ಕ ಕೂಡ ಪ್ರತೀ ವರ್ಗಕ್ಕೆ ವಿಭಿನ್ನವಾಗಿರುತ್ತದೆ. ಸಾಮಾನ್ಯ ವರ್ಗದವರಿಗೆ ಅರ್ಜಿ ಶುಲ್ಕ 500 ರೂಪಾಯಿ ಇರುತ್ತದೆ ಹಾಗೆ ಎಸ್ಸಿ ಅಥವಾ ಎಸ್ಟಿ ಅಭ್ಯರ್ಥಿಗಳಿಗೆ 250 ರೂ. ಇರುತ್ತದೆ. ಹಾಗೆ PWD ಅಬ್ಯರ್ಥಿಗಳಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.

ಇನ್ನು ಈ ಅರ್ಜಿ ಶುಲ್ಕವನ್ನ ಅಭ್ಯರ್ಥಿಗಳು ನೆಟ್‌ ಬ್ಯಾಂಕಿಂಗ್‌, ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಅಥವಾ ಯುಪಿಐ ಅನ್ನು ಬಳಸಿಕೊಂಡು ಆನ್‌ಲೈನ್‌ ಮೂಲಕ ಶುಲ್ಕವನ್ನ ಪಾವತಿಸಬಹುದು. ನೀವು ಈ ಕುರಿತು ಹೆಚ್ಚಿನ ಮಾಹಿತಿಯನ್ನ ನೀವು ಪಡೆಯಲು ಬಯಸಿದರೆ ವೆಬ್‌ಸೈಟ್‌ನ ಅಧಿಕೃತ ಪೋರ್ಟಲ್‌ನಲ್ಲಿ ತಿಳಿಯಬಹುದು.

KEA ನೇಮಕಾತಿ 2025: ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸಲ ಬಯಸುವವರು KEA ಪೋರ್ಟಲ್‌ ಮೂಲಕ ತಮ್ಮ ಅರ್ಜಿಯನ್ನ ಸಲ್ಲಿಸಬಹುದು ಹಾಗೆ ನೋಂದಣಿ ಮಾಡಬಹುದು. ಮೊದಲು ಸೂಚನೆಗಳನ್ನ ಎಚ್ಚರಿಕೆಯಿಂದ ಓದಬೇಕು ನಂತರ ಅರ್ಜಿಗೆ ಬೇಕಾದ ದಾಖಲೆಗಳನ್ನ ಸಿದ್ದಪಡಿಸಿಟ್ಟುಕೊಳ್ಳಬೇಕು.

-ಮೊದಲು cetonline.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

-ನಂತರ ನೇಮಕಾತಿ 2025 ಲಿಂಕ್‌ ಕ್ಲಿಕ್‌ ಮಾಡಿ ನಿಮ್ಮ ಇಮೇಲ್‌ ಐಡಿ ಮತ್ತು ಫೋನ್‌ ಸಂಖ್ಯೆಯನ್ನ ಹಾಕಿ ನೋಂದಾಯಿಸಿಕೊಳ್ಳಬೇಕು.

-ನಿಮ್ಮ ಇಮೇಲ್‌ ಅಥವಾ ಫೋನ್‌ನಂಬರ್‌ಗೆ ಬಂದ ಒಟಿಪಿಯನ್ನ ಬಳಸಿಕೊಂಡು ಲಾಗ್‌ಇನ್‌ ಮಾಡಬೇಕು.

-ಶಿಕ್ಷಣ ಮತ್ತು ವೃತ್ತಿಪರ ವಿವರಗಳನ್ನ ನಮೂದಿಸಬೇಕು. ಇದರ ಜೊತೆಗೆ ಛಾಯಾಚಿತ್ರಗಳು, ಸಹಿಗಳು ಮತ್ತು ಪ್ರಮಣಪತ್ರಗಳಂತಹ ದಾಖಲೆಗಳನ್ನ ಅಪ್‌ಲೋಡ್‌ ಮಾಡಬೇಕು.

-ನಂತರ ಆನ್‌ಲೈನ್‌ ಪಾವತಿ ಆಯ್ಕೆಗಳನ್ನ ಆರಿಸಿಕೊಂಡು ಅರ್ಜಿ ಶುಲ್ಕವನ್ನ ಪಾವತಿಸಬೇಕು.

-ಕೊನೆಯಲ್ಲಿ ಅರ್ಜಿ ನಮೂನೆಯನ್ನ ಸಲ್ಲಿಸಿ ಮತ್ತು ದೃಢೀಕರಿಸಿದ ರಶೀದಿಯನ್ನ ಡೌನ್‌ಲೋಡ್‌ ಮಾಡಿ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+