ಅಯೋಧ್ಯೆ ರಾಮಮಂದಿರವನ್ನು ಜನವರಿ 22 ರಂದು ಮಹಾಮಸ್ತಕಾಭಿಷೇಕ ನಡೆಸುವ ಮೂಲಕ ತೆರೆಯಲಾಗುತ್ತದೆ. ಈ ನಡುವೆ ರಾಮಮಂದಿರಕ್ಕೆ ದೇಶ, ವಿದೇಶಗಳಿಂದ ಭಕ್ತರು ದೇಣಿಗೆ, ಉಡುಗೊರೆಯನ್ನು ನೀಡಿದ್ದಾರೆ. ಅದು ಕೂಡಾ ವಿಭಿನ್ನ, ವಿಶಿಷ್ಟವಾದ ಉಡುಗೊರೆಗಳನ್ನು ನೀಡಲಾಗಿದೆ.
108 ಅಡಿ ಉದ್ದದ ಅಗರಬತ್ತಿ, 2,100 ಕೆಜಿ ಗಂಟೆ, 1,100 ಕೆಜಿ ತೂಕದ ದೈತ್ಯ ದೀಪ, ಚಿನ್ನದ ಪಾದರಕ್ಷೆಗಳು, 10 ಅಡಿ ಎತ್ತರದ ಲಾಕ್ ಮತ್ತು ಕೀ, ಎಂಟು ದೇಶಗಳಲ್ಲಿ ಏಕಕಾಲದಲ್ಲಿ ಸಮಯವನ್ನು ಸೂಚಿಸುವ ಗಡಿಯಾರ ಹೀಗೆ ಹಲವಾರು ವಿಶೇಷ ಉಡುಗೊರೆಗಳನ್ನು ರಾಮಮಂದಿರಕ್ಕೆ ನೀಡಲಾಗಿದೆ. ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ...

ನೇಪಾಳದ ಜನಕ್‌ಪುರದಿಂದ ಉಡುಗೊರೆ
ನೇಪಾಳದ ಜನಕ್‌ಪುರದಲ್ಲಿರುವ ಸೀತೆಯ ಜನ್ಮಸ್ಥಳದಿಂದ ಶ್ರೀರಾಮನಿಗೆ 3,000 ಕ್ಕೂ ಹೆಚ್ಚು ಉಡುಗೊರೆಗಳು ಅಯೋಧ್ಯೆಗೆ ಆಗಮಿಸಿವೆ. ಬೆಳ್ಳಿ ಪಾದರಕ್ಷೆ, ಆಭರಣಗಳು ಮತ್ತು ಬಟ್ಟೆಗಳು ಸೇರಿದಂತೆ ಹಲವಾರು ಉಡುಗೊರೆಗಳನ್ನು ಈ ವಾರ ನೇಪಾಳದ ಜನಕ್‌ಪುರ ಧಾಮ್ ರಾಮಜಾನಕಿ ದೇವಸ್ಥಾನದಿಂದ ಅಯೋಧ್ಯೆಗೆ ಸುಮಾರು 30 ವಾಹನಗಳ ಬೆಂಗಾವಲು ಪಡೆಗಳಲ್ಲಿ ಸಾಗಿಸಲಾಗಿದೆ.
ಅಶೋಕ್ ವಾಟಿಕಾದಿಂದ ವಿಶೇಷ ಉಡುಗೊರೆಯೊಂದಿಗೆ ಶ್ರೀಲಂಕಾದ ನಿಯೋಗವೂ ಅಯೋಧ್ಯೆಗೆ ಭೇಟಿ ನೀಡಿದೆ. ನಿಯೋಗವು ರಾವಣನು ಸೀತೆಯನ್ನು ವಶಪಡಿಸಿಕೊಂಡ ರಾಮಾಯಣ ಮಹಾಕಾವ್ಯದಲ್ಲಿ ಉಲ್ಲೇಖಿಸಲಾದ ಅಶೋಕ್ ವಾಟಿಕಾದಿಂದ ಒಂದು ಬಂಡೆಯನ್ನು ಪ್ರಸ್ತುತಪಡಿಸಿದೆ.
108 ಅಡಿ ಉದ್ದದ ಅಗರಬತ್ತಿ!
ಅದ್ಧೂರಿ ಸಮಾರಂಭಕ್ಕೆ ಮುಂಚಿತವಾಗಿ, ದೇವಾಲಯದ ಅಧಿಕಾರಿಗಳು ಹಲವಾರು ಉಡುಗೊರೆಗಳನ್ನು ಸ್ವೀಕರಿಸುತ್ತಿದ್ದಾರೆ. 3,610 ಕೆಜಿ ತೂಕ ಮತ್ತು ಸುಮಾರು 3.5 ಅಡಿ ಅಗಲವಿರುವ 108 ಅಡಿ ಉದ್ದದ ಧೂಪವನ್ನು (ಅಗರಬತ್ತಿ) ಆರು ತಿಂಗಳ ಅವಧಿಯಲ್ಲಿ ಗುಜರಾತ್‌ನ ವಡೋದರಾದಲ್ಲಿ ಸಿದ್ಧಪಡಿಸಲಾಗಿದೆ.
"ಈ ಅಗರಬತ್ತಿ ಪರಿಸರ ಸ್ನೇಹಿಯಾಗಿದೆ ಮತ್ತು ಸುಮಾರು ಒಂದೂವರೆ ತಿಂಗಳವರೆಗೆ ಇರುತ್ತದೆ. ಹಲವಾರು ಕಿಲೋಮೀಟರ್‌ಗಳವರೆಗೆ ಅದರ ಪರಿಮಳ ಹರಡಲಿದೆ," ಎಂದು ಇದನ್ನು ಸಿದ್ಧಪಡಿಸಿದ ವಡೋದರ ನಿವಾಸಿ ವಿಹಾ ಭಾರವಾಡ್ ಪಿಟಿಐಗೆ ತಿಳಿಸಿದ್ದಾರೆ.
376 ಕೆಜಿ ಗುಗ್ಗುಲ್ (ಗಮ್ ರಾಳ), 376 ಕೆಜಿ ತೆಂಗಿನ ಚಿಪ್ಪುಗಳು, 190 ಕೆಜಿ ತುಪ್ಪ, 1,470 ಕೆಜಿ ಹಸುವಿನ ಸಗಣಿ, 420 ಕೆಜಿ ಗಿಡಮೂಲಿಕೆಗಳನ್ನು ಬಳಸಿ ಈ ಧೂಪವನ್ನು ತಯಾರಿಸಲಾಗಿದೆ. ಇದರ ಎತ್ತರವು ದೆಹಲಿಯ ಕುತಾಬ್ ಮಿನಾರ್‌ನ ಅರ್ಧದಷ್ಟು ಇದೆ. ಕುತಾಬ್ ಮಿನಾರ್ 237 ಅಡಿ ಎತ್ತರವಿದೆ. ಭಾರವಾಡ್ ಮತ್ತು ಇತರ 25 ಭಕ್ತರು ಜನವರಿ 1 ರಂದು ಬೃಹತ್ ಅಗರಬತ್ತಿಯೊಂದಿಗೆ ವಡೋದರಾದಿಂದ ಹೊರಟಿದ್ದು, ಅವರ ಬೆಂಗಾವಲು ಪಡೆ ಜನವರಿ 18 ರಂದು ಅಯೋಧ್ಯೆಗೆ ತಲುಪಲಿದೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಕಳೆದ ವಾರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕಾಗಿ ಅಹಮದಾಬಾದ್‌ನಲ್ಲಿ 44 ಅಡಿ ಉದ್ದದ ಹಿತ್ತಾಳೆಯ ಧ್ವಜಸ್ತಂಭ ಮತ್ತು ಇತರ ಸಣ್ಣ ಆರು ಧ್ವಜಸ್ತಂಭಗಳನ್ನು ಅನಾವರಣ ಮಾಡಿದ್ದಾರೆ. ಗುಜರಾತ್ ದರಿಯಾಪುರದಲ್ಲಿ ಅಖಿಲ ಭಾರತ ದಬ್ಗರ್ ಸಮಾಜದಿಂದ ರಚಿಸಲಾದ ನಾಗಾರು (ಟೆಂಪಲ್ ಡ್ರಮ್) ಅನ್ನು ಕಳುಹಿಸಿದೆ. ದೇವಾಲಯದ ಪ್ರಾಂಗಣದಲ್ಲಿ ಚಿನ್ನದ ಹಾಳೆಯಿಂದ ಮಾಡಿದ 56 ಇಂಚಿನ ನಾಗಾರು ಪ್ರತಿಷ್ಠಾಪಿಸಲಾಗುವುದು.
400 ಕೆಜಿ ತೂಕದ ಬೀಗ, ಕೀ!
ಉತ್ತರ ಪ್ರದೇಶದ ಅಲಿಗಢದ ಬೀಗದ ಕೆಲಸಗಾರ ಸತ್ಯ ಪ್ರಕಾಶ್ ಶರ್ಮಾ ಅವರು 10 ಅಡಿ ಎತ್ತರ, 4.6 ಅಡಿ ಅಗಲ ಮತ್ತು 9.5 ಇಂಚು ದಪ್ಪದ 400 ಕೆಜಿ ತೂಕದ ಬೀಗ ಮತ್ತು ಕೀಯನ್ನು ಸಿದ್ಧಪಡಿಸಿದ್ದಾರೆ. "ಇದು ವಿಶ್ವದ ಅತಿದೊಡ್ಡ ಲಾಕ್ ಮತ್ತು ಕೀ. ನಾನು ಅದನ್ನು ಟ್ರಸ್ಟ್‌ಗೆ ಉಡುಗೊರೆಯಾಗಿ ನೀಡಿದ್ದೇನೆ. ಇದನ್ನು ದೇವಾಲಯದ ಸಾಂಕೇತಿಕ ಬೀಗವಾಗಿ ಬಳಸಬಹುದು," ಎಂದು ಹೇಳಿದ್ದಾರೆ.
ಎಂಟು ಲೋಹಗಳ ಗಂಟೆ!
ಉತ್ತರ ಪ್ರದೇಶದ ಇಟಾಹ್‌ನ ಜಲೇಸರ್‌ನಲ್ಲಿ 'ಅಷ್ಟಧಾತು' (ಎಂಟು ಲೋಹಗಳ ಮಿಶ್ರಲೋಹ) ದಿಂದ ಮಾಡಿದ 2,100 ಕೆಜಿ ತೂಕದ ಗಂಟೆಯನ್ನು ಸಿದ್ಧಪಡಿಸಲಾಗಿದೆ. "ಗಂಟೆಯನ್ನು ಸಿದ್ಧಪಡಿಸಲು ಎರಡು ವರ್ಷಗಳನ್ನು ತೆಗೆದುಕೊಳ್ಳಲಾಗಿದೆ. ಸಕಲ ವಿಧಿವಿಧಾನಗಳನ್ನು ನೆರವೇರಿಸಿ ವೈಭವೋಪೇತವಾಗಿ ಗಂಟೆಯನ್ನು ಅಯೋಧ್ಯೆಗೆ ಕಳುಹಿಸಲಾಗುತ್ತಿದೆ," ಎಂದು ಗಂಟೆ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿರುವ ಕುಶಲಕರ್ಮಿಯೊಬ್ಬರು ತಿಳಿಸಿದರು.
ಎಂಟು ದೇಶಗಳ ಸಮಯ ತೋರಿಸುವ ಗಡಿಯಾರ
ಲಕ್ನೋ ಮೂಲದ ತರಕಾರಿ ಮಾರಾಟಗಾರರೊಬ್ಬರು ವಿಶೇಷವಾಗಿ ಎಂಟು ದೇಶಗಳಲ್ಲಿ ಒಂದೇ ಸಮಯದಲ್ಲಿ ಸಮಯವನ್ನು ಸೂಚಿಸುವ ಗಡಿಯಾರವನ್ನು ವಿನ್ಯಾಸಗೊಳಿಸಿದ್ದಾರೆ. ಅನಿಲ್ ಕುಮಾರ್ ಸಾಹು (52) ಅವರು 75 ಸೆಂ.ಮೀ ವ್ಯಾಸದ ಗಡಿಯಾರವನ್ನು ದೇವಸ್ಥಾನದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ಗೆ ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಿದರು.
ಸಾಹು ಅವರು ಗಡಿಯಾರವನ್ನು ಮೊದಲ ಬಾರಿಗೆ 2018 ರಲ್ಲಿ ತಯಾರಿಸಿದರು. ಅದಕ್ಕೆ ಭಾರತ ಸರ್ಕಾರದ ಪೇಟೆಂಟ್ ಕಚೇರಿಯಿಂದ 'ವಿನ್ಯಾಸದ ನೋಂದಣಿ ಪ್ರಮಾಣಪತ್ರ' ನೀಡಲಾಗಿದೆ ಎಂದು ಹೇಳಿದರು. ಗಡಿಯಾರವು ಭಾರತ, ಟೋಕಿಯೊ (ಜಪಾನ್), ಮಾಸ್ಕೋ (ರಷ್ಯಾ), ದುಬೈ (ಯುಎಇ), ಬೀಜಿಂಗ್ (ಚೀನಾ), ಸಿಂಗಾಪುರ್, ಮೆಕ್ಸಿಕೊ ಸಿಟಿ (ಮೆಕ್ಸಿಕೊ), ವಾಷಿಂಗ್ಟನ್ ಡಿಸಿ ಮತ್ತು ನ್ಯೂಯಾರ್ಕ್ (ಯುಎಸ್) ಸಮಯವನ್ನು ತೋರಿಸುತ್ತದೆ.
ರಾಮ್ ಹಲ್ವಾ
ನಾಗ್ಪುರದಲ್ಲಿ ನೆಲೆಸಿರುವ ಬಾಣಸಿಗ ವಿಷ್ಣು ಮನೋಹರ್ ಅವರು 7,000 ಕೆಜಿ ರಾಮ್ ಹಲ್ವಾವನ್ನು ಸಾಂಪ್ರದಾಯಿಕ ಸಿಹಿ ಖಾದ್ಯವನ್ನು ಸಿದ್ಧಪಡಿಸುವುದಾಗಿ ಘೋಷಿಸಿದ್ದಾರೆ. ಮಥುರಾದ ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನವು 200 ಕಿಲೋಗ್ರಾಂಗಳಷ್ಟು ಲಡ್ಡುವನ್ನು ಅಯೋಧ್ಯೆಗೆ 'ಯಾಗ'ಕ್ಕಾಗಿ ನೈವೇದ್ಯವಾಗಿ ಕಳುಹಿಸಲು ಸಿದ್ಧತೆ ನಡೆಸಿದೆ.
ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದ ಅಧಿಕೃತ ಉಸ್ತುವಾರಿ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಕೂಡ ದೊಡ್ಡ ದಿನದಂದು ಭಕ್ತರಿಗೆ ವಿತರಿಸಲು ಒಂದು ಲಕ್ಷ ಲಡ್ಡುಗಳನ್ನು ಕಳುಹಿಸುವುದಾಗಿ ಘೋಷಿಸಿದೆ. ದೇಶದ ಪ್ರಮುಖ ಜವಳಿ ಕೇಂದ್ರವಾದ ಗುಜರಾತ್‌ನ ಸೂರತ್ ನಗರದಲ್ಲಿ ತಯಾರಾದ ವಿಶೇಷ ಸೀರೆಯನ್ನು ದೇವಾಲಯದ ಅಧಿಕಾರಿಗಳಿಗೆ ಕಳುಹಿಸಲಾಗುವುದು.
ಸೂರತ್‌ನ ವಜ್ರದ ವ್ಯಾಪಾರಿಯೊಬ್ಬರು 5,000 ಅಮೇರಿಕನ್ ವಜ್ರಗಳು ಮತ್ತು 2 ಕೆಜಿ ಬೆಳ್ಳಿಯನ್ನು ಬಳಸಿ ರಾಮ ಮಂದಿರದ ವಿಷಯದ ಮೇಲೆ ಹಾರ ಮಾಡಿದ್ದಾರೆ. ನಲವತ್ತು ಕುಶಲಕರ್ಮಿಗಳು 35 ದಿನಗಳಲ್ಲಿ ವಿನ್ಯಾಸವನ್ನು ಪೂರ್ಣಗೊಳಿಸಿದ್ದಾರೆ. ಹಾರವನ್ನು ರಾಮಮಂದಿರ ಟ್ರಸ್ಟ್‌ಗೆ ಉಡುಗೊರೆಯಾಗಿ ನೀಡಲಾಗಿದೆ.
ಭಗವಾನ್ ರಾಮನ ಮೇಲಿನ ಅಚಲ ಭಕ್ತಿ ಮತ್ತು ತನ್ನ ಕರ ಸೇವಕ ತಂದೆಯ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಹೈದರಾಬಾದ್‌ನ 64 ವರ್ಷದ ಚಲ್ಲ ಶ್ರೀನಿವಾಸ ಶಾಸ್ತ್ರಿ ಅವರು ಚಿನ್ನದ ಲೇಪಿತ ಪಾದರಕ್ಷೆಗಳನ್ನು ಅರ್ಪಿಸಲು ಕಾಲ್ನಡಿಗೆಯಲ್ಲಿ ಸುಮಾರು 8,000 ಕಿ.ಮೀ ದೂರವನ್ನು ಕ್ರಮಿಸಿ ಅಯೋಧ್ಯೆಗೆ ತಲುಪಿದ್ದಾರೆ.
ವಡೋದರಾದಲ್ಲಿ ನೆಲೆಸಿರುವ ಅರವಿಂದಭಾಯಿ ಮಂಗಳಭಾಯ್ ಪಟೇಲ್ ಎಂಬ ರೈತ 1,100 ಕೆಜಿ ತೂಕದ ಬೃಹತ್ ದೀಪವನ್ನು ತಯಾರಿಸಿದ್ದಾರೆ. "ದೀಪವು 9.25 ಅಡಿ ಎತ್ತರ ಮತ್ತು 8 ಅಡಿ ಅಗಲವಿದೆ. ಇದು 851 ಕೆಜಿ ತುಪ್ಪದ ಸಾಮರ್ಥ್ಯವನ್ನು ಹೊಂದಿದೆ. ದೀಪವನ್ನು 'ಪಂಚಧಾತು' (ಚಿನ್ನ, ಬೆಳ್ಳಿ, ತಾಮ್ರ, ಸತು ಮತ್ತು ಕಬ್ಬಿಣ) ನಿಂದ ತಯಾರಿಸಲಾಗುತ್ತದೆ," ಎಂದು ಪಟೇಲ್ ಹೇಳಿದರು.
More From GoodReturns

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ



Click it and Unblock the Notifications