ಎರಡೇ ವಾರದಲ್ಲಿ 7500 ಕೋಟಿ ರೂ ಹಿಂಪಡೆದ ವಿದೇಶೀ ಹೂಡಿಕೆದಾರರು

ನವದೆಹಲಿ, ಅ. 16: ಅಮೆರಿಕದ ಫೆಡರಲ್ ಬ್ಯಾಂಕ್ ಸೇರಿದಂತೆ ವಿಶ್ವಾದ್ಯಂತ ಸೆಂಟ್ರಲ್ ಬ್ಯಾಂಕ್‌ಗಳು ಹಣದುಬ್ಬರ ತಡೆಯಲು ಬಡ್ಡಿದರಗಳನ್ನು ಹೆಚ್ಚಿಸುತ್ತಿವೆ. ಇದರ ಫಲವಾಗಿ ಭಾರತದಿಂದ ವಿದೇಶೀ ಹೂಡಿಕೆಗಳು ನಶಿಸುತ್ತಿವೆ. ಎಫ್‌ಪಿಐಗಳಿಂದ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹಿಂತೆಗೆತಗಳಾಗುತ್ತಿವೆ. ಈ ತಿಂಗಳ ಮೊದಲೆರಡು ವಾರಗಳಲ್ಲೇ ಭಾರತೀಯ ಈಕ್ವಿಟಿ ಮಾರುಕಟ್ಟೆಗಳಿಂದ 7500 ಕೋಟಿ ರೂ ಮೊತ್ತದಷ್ಟು ಹೂಡಿಕೆಗಳನ್ನು ಎಫ್‌ಪಿಐಗಳು (ಫಾರೀನ್ ಪೋರ್ಟ್‌ಫೋಲಿಯೋ ಇನ್ವೆಸ್ಟರ್ಸ್) ಹಿಂಪಡೆದುಕೊಂಡಿವೆ ಎಂದು ವರದಿಯೊಂದು ಹೇಳಿದೆ.

ಇಲ್ಲಿ ಪೋರ್ಟ್‌ಪೋಲಿಯೋ ಇನ್ವೆಸ್ಟ್‌ಮೆಂಟ್ ಎಂದರೆ ಷೇರು, ಬಾಂಡು ಮತ್ತಿತರ ಹಣಕಾಸು ಆಸ್ತಿಯನ್ನು ಖರೀದಿಸುವುದು. ಈ ವರ್ಷ ಭಾರತದ ಈಕ್ವಿಟಿ ಮಾರುಕಟ್ಟೆಗಳಿಂದ ಎಫ್‌ಪಿಐಗಳು ಹಿಂತೆಗೆದುಕೊಂಡಿರುವ ಹೂಡಿಕೆಗಳ ಮೊತ್ತ ಬರೋಬ್ಬರಿ 1.76 ಲಕ್ಷ ರೂ ಆಗಿದೆ. ಹಣದುಬ್ಬರ, ಜಾಗತಿಕ ರಾಜಕೀಯ ಸ್ಥಿತ್ಯಂತರ ಇತ್ಯಾದಿ ಕಾರಣದಿಂದ ವಿದೇಶೀ ಪೋರ್ಟ್‌ಫೋಲಿಯೋ ಹೂಡಿಕೆಗಳ ಹರಿವಿನ ಮೇಲೆ ಪರಿಣಾಮವಾಗುವ ನಿರೀಕ್ಷೆ ಇದೆ.

ಅಮೆರಿಕದ ಹಣದುಬ್ಬರದ ಸೂಚಕವಾದ ಕನ್ಸೂಮರ್ ಪ್ರೈಸ್ ಇಂಡೆಕ್ಸ್‌ನ ವರದಿಯನ್ನು ಸದ್ಯದಲ್ಲೇ ಪ್ರಕಟಿಸುವ ಸಾಧ್ಯತೆ ಇದೆ. ಇದರ ಆಧಾರದ ಮೇಲೆ ಅಮೆರಿಕದಲ್ಲಿ ಬಡ್ಡಿ ದರ ಹೆಚ್ಚಳ ಮಾಡಬೇಕಾ ಬೇಡವಾ, ಮಾಡಿದರೆ ಎಷ್ಟು ಮಾಡಬೇಕು ಎಂಬುದು ನಿರ್ಧಾರಿತವಾಗುತ್ತದೆ. ಹೀಗಾಗಿ ಜಾಗತಿಕ ಮಾರುಕಟ್ಟೆಗಳು ಅಲರ್ಟ್ ಸ್ಥಿತಿಯಲ್ಲಿವೆ. ಇದೇ ಕಾರಣಕ್ಕೆ ಮುನ್ನೆಚ್ಚರಿಕೆ ಎಂಬಂತೆ ವಿದೇಶೀ ಹೂಡಿಕೆದಾರರು ಭಾರತದ ಈಕ್ವಿಟಿ ಮಾರುಕಟ್ಟೆಯಿಂದ ಬಂಡವಾಳ ವಾಪಸ್ ಪಡೆಯುತ್ತಿರುವಂತೆ ತೋರುತ್ತಿದೆ.

2021ರ ಅಕ್ಟೋಬರ್‌ನಿಂದ 9 ತಿಂಗಳವರೆಗೆ ವಿದೇಶೀ ಹೂಡಿಕೆದಾರರು ಭಾರತದ ಈಕ್ವಿಟಿಗಳನ್ನು ಹೆಚ್ಚು ಮಾರಿದ್ದಿಲ್ಲ. ಎಫ್‌ಪಿಐಗಳಿಂದ ಜುಲೈ ತಿಂಗಳಲ್ಲಿ 5000 ಕೋಟಿ ರೂ, ಆಗಸ್ಟ್ ತಿಂಗಳಲ್ಲಿ 51,200 ಕೋಟಿ ರೂ ಹೂಡಿಕೆಗಳಾಗಿದ್ದವು.

ಆದರೆ, ಆಗಸ್ಟ್ ತಿಂಗಳ ಬಳಿಕ ಭಾರತೀಯ ಈಕ್ವಿಟಿ ಮಾರುಕಟ್ಟೆಯಲ್ಲಿ ತಲ್ಲಣಗಳಾಗುತ್ತಿವೆ. ಎಫ್‌ಪಿಐಗಳು ಸತತವಾಗಿ ಬಂಡವಾಳ ಹಿಂಪಡೆದುಕೊಳ್ಳುತ್ತಿವೆ. ಆದರೆ, ಎಫ್‌ಪಿಐಗಳ ಹರಿವಿನಲ್ಲಿ ಅನಿಶ್ಚಿತತೆ ಅಥವಾ ಅಸ್ಥಿರತೆ ಎದ್ದು ಕಾಣುತ್ತಿರುವುದಂತೂ ಹೌದು. ಇದು ಜಾಗತಿಕ ಆರ್ಥಿಕ ಪರಿಸ್ಥಿತಿಯ ಅನಿಶ್ಚಿತತೆಗೆ ಪ್ರತಿಸ್ಪಂದನೆ ಇರಬಹುದು.

ಏನು ಕಾರಣ?

ಏನು ಕಾರಣ?

ಎಫ್‌ಪಿಐಗಳ ಆತಂಕಕ್ಕೆ ಕಾರಣವಾಗಿರುವುದು ಅಮೆರಿಕದ ಆರ್ಥಿಕ ಸ್ಥಿತಿ. ಡಾಲರ್ ಮೌಲ್ಯ ಹೆಚ್ಚುತ್ತಿರುವುದು, ಹಾಗು ಮುಂದಿನ ದಿನಗಳಲ್ಲೂ ಡಾಲರ್ ಪ್ರಾಬಲ್ಯ ಹೀಗೇ ಮುಂದುವರಿಯಬಹುದಾದ ಸ್ಥಿತಿಯಲ್ಲಿರುವುದು ಎಫ್‌ಪಿಐಗಳ ವರ್ತನೆಗೆ ಕಾರಣವಾಗಿದೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್‌ನ ಚೀಫ್ ಇನ್ವೆಸ್ಟ್‌ಮೆಂಟ್ ಸ್ಟ್ರಾಟಿಜಿಸ್ಟ್ ವಿ.ಕೆ. ವಿಜಯಕುಮಾರ್ ಅಭಿಪ್ರಾಯಪಡುತ್ತಾರೆ.

"ಅಮೆರಿಕದ ಫೆಡರಲ್ ಬ್ಯಾಂಕ್‌ನ ದರ ಏರಿಕೆ, ರೂಪಾಯಿ ಮೌಲ್ಯ ಕುಸಿತ, ಆರ್ಥಿಕ ಹಿಂಜರಿತದ ಭಯ, ರಷ್ಯಾ ಉಕ್ರೇನ್ ಯುದ್ಧ ಮುಂದುವರಿಕೆಯ ಭಯ ಇವೆಲ್ಲವೂ ಭಾರತೀಯ ಈಕ್ವಿಟಿ ಮಾರುಕಟ್ಟೆಯಲ್ಲಿನ ವಿದೇಶೀ ಹೂಡಿಕೆದಾರರ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಒಟ್ಟಾರೆ ಪರಿಸ್ಥಿತಿ ಅನಿಶ್ಚಿತ ಎನಿಸುವಂತಹ ಭಾವನೆ ಹುಟ್ಟುಹಾಕಿದೆ. ಇದು ಎಫ್‌ಪಿಐಗಳ ಧೈರ್ಯಗೆಡಿಸಿರುವುದು ಹೌದು" ಎನ್ನುತ್ತಾರೆ ಮಾರ್ನಿಂಗ್ ಸ್ಟಾರ್ ಇಂಡಿಯಾದ ಅಸೋಷಿಯೇಟ್ ಡೈರೆಕ್ಟರ್ ಹಿಮಾಂಶು ಶ್ರೀವಾಸ್ತವ ಹೇಳುತ್ತಾರೆ.

ಬೇರೆ ದೇಶಗಳಲ್ಲೂ ಇದೇ ಕಥೆ

ಬೇರೆ ದೇಶಗಳಲ್ಲೂ ಇದೇ ಕಥೆ

ಎಫ್‌ಪಿಐಗಳು ಈಕ್ವಿಟಿಗಳ ಮಾರಾಟ ಹೆಚ್ಚಾಗಿ ಮಾಡಿದ್ದಾರೆ. ಹಣಕಾಸು ವಲಯ, ಐಟಿ ವಲಯದಲ್ಲಿ ಹೆಚ್ಚು ಈಕ್ವಿಟಿಗಳ ಮಾರಾಟವಾಗಿದೆ. ತೈಲ ಮತ್ತು ಅನಿಲ, ಲೋಹ ಇತ್ಯಾದಿ ಕ್ಷೇತ್ರಗಳ ಈಕ್ವಿಟಿಗಳನ್ನೂ ಎಫ್‌ಪಿಐಗಳು ಮಾರುತ್ತಿರುವ ಟ್ರೆಂಡಿಂಗ್ ಇದೆ. ಜಾಗತಿಕ ಆರ್ಥಿಕ ಹಿಂಜರಿತವಾದರೆ ಈ ಕ್ಷೇತ್ರಗಳಿಗೆ ಹಿನ್ನಡೆಯಾಗುವುದರಿಂದ ಮುನ್ನೆಚ್ಚರಿಕೆಯಾಗಿ ವಿದೇಶೀ ಹೂಡಿಕೆದಾರರು ಈ ಕ್ರಮ ಕೈಗೊಳ್ಳುತ್ತಿರುವಂತೆ ತೋರುತ್ತಿದೆ.

ಈಕ್ವಿಟಿಗಳನ್ನು ಮಾತ್ರವಲ್ಲ ಬಾಂಡ್‌ಗಳನ್ನೂ ವಿದೇಶಿಗರು ಮಾರುತ್ತಿದ್ದಾರೆ. ಈ ಅಕ್ಟೋಬರ್ ತಿಂಗಳಲ್ಲಿ 2079 ಕೋಟಿ ರೂ ಮೌಲ್ಯದ ಬಾಂಡ್‌ಗಳನ್ನು ಎಫ್‌ಪಿಐಗಳು ಮಾರಿವೆ ಎನ್ನಲಾಗಿದೆ.

ಎಫ್‌ಪಿಐಗಳ ಈ ವರ್ತನೆ ಭಾರತದಲ್ಲಿ ಮಾತ್ರವಲ್ಲ ಬೇರೆಡೆಯೂ ಇದೆ. ಈ ಅಕ್ಟೋಬರ್ ತಿಂಗಳಲ್ಲಿ ಫಿಲಿಪ್ಪೈನ್ಸ್, ತೈವಾನ್ ಮತ್ತು ಥಾಯ್ಲೆಂಡ್ ದೇಶಗಳಿಂದಲೂ ಎಫ್‌ಪಿಐಗಳು ಹೂಡಿಕೆ ಹಿಂಪಡೆದಿವೆ.

ಈಕ್ವಿಟಿ ಎಂದರೇನು?

ಈಕ್ವಿಟಿ ಎಂದರೇನು?

ಈಕ್ವಿಟಿ ಮತ್ತು ಷೇರು ಬಹುತೇಕ ಒಂದೇ ಆದರೂ ಕೆಲ ಪ್ರಮುಖ ವ್ಯತ್ಯಾಸಗಳಿವೆ. ಎಲ್ಲಾ ಷೇರುಗಳೂ ಈಕ್ವಿಟಿ ಅನಿಸಬಹುದು, ಆದರೆ ಎಲ್ಲಾ ಈಕ್ವಿಟಿಗಳು ಷೇರು ಎನಿಸುವುದಿಲ್ಲ. ಒಂದು ಕಂಪನಿಯ ಷೇರುದಾರರು ಆ ಕಂಪನಿಯಲ್ಲಿ ಪಾಲುದಾರರೂ ಹೌದು. ಈಕ್ವಿಟಿ ಹೊಂದಿರುವವರೂ ಕೂಡ ಕಂಪನಿಯ ಪಾಲುದಾರಿಕೆ ಹೊಂದಿರುತ್ತಾರಾದರೂ ಜೊತೆಗೆ ಜವಾಬ್ದಾರಿಯನ್ನೂ ಹೊಂದಿರುತ್ತಾರೆ. ಒಂದು ವೇಳೆ ಕಂಪನಿ ದಿವಾಳಿಯಾದಲ್ಲಿ ಆ ಕಂಪನಿಯ ಸಾಲ ತೀರಿಸುವ ಹೊಣೆಗಾರಿಕೆ ಈಕ್ವಿಟಿದಾರರಿಗೆ ಇರುತ್ತದೆ.

ಷೇರುಪೇಟೆಯಂತಹ ಪಬ್ಲಿಕ್ ಎಕ್ಸ್‌ಚೇಂಜ್ ಮಾರುಕಟ್ಟೆಯಲ್ಲಿ ವಹಿವಾಟು ನಡೆಸದ ಕಂಪನಿಯ ಭಾಗಶಃ ಮಾಲಕತ್ವ ಪಡೆಯುವುದಕ್ಕೆ ಪ್ರೈವೇಟ್ ಈಕ್ವಿಟಿ ಎನ್ನುತ್ತಾರೆ. ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಟ್ರೇಡ್ ಆಗುವುದು ಪಬ್ಲಿಕ್ ಷೇರುಗಳು. ಹೀಗಾಗಿ ಈಕ್ವಿಟಿ ಮತ್ತು ಷೇರುಗಳನ್ನು ಪ್ರತ್ಯೇಕವಾಗಿಯೇ ಕೆಲವರು ಸಂಬೋಧಿಸುತ್ತಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+