ಜೊಮಾಟೊ ಕಟ್ಟಿಬೆಳೆಸಿ ಈಗ ಹೊರನಡೆದ ಮೋಹಿತ್ ಗುಪ್ತಾ; ಕಾರಣ ಏನು?

ನವದೆಹಲಿ, ನ. 19: ಆಹಾರ ಸರಬರಾಜು ಕ್ಷೇತ್ರ ಪ್ರಮುಖ ಕಂಪನಿಗಳಲ್ಲೊಂದಾದ ಜೊಮಾಟೋದ ಸಹ-ಸಂಸ್ಥಾಪಕ ಮೋಹಿತ್ ಗುಪ್ತಾ ನಿನ್ನೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ನಾಲ್ಕೂವರೆ ವರ್ಷಗಳಿಂದ ಗುಪ್ತಾ ಜೊಮಾಟೋದಲ್ಲಿದ್ದರು. ಅಳಿವಿನಂಚಿನಲ್ಲಿದ್ದ ಸಂಸ್ಥೆಗೆ ಮರುಜೀವ ಕೊಟ್ಟು ಪ್ರಬಲ ಕಂಪನಿಯಾಗಿ ರೂಪಿಸಿದ ಶ್ರೇಯಸ್ಸು ಪಡೆದಿದ್ದ ಗುಪ್ತಾ ಈಗ ರಾಜೀನಾಮೆ ನೀಡಿರುವುದು ಕೌತುಕ ಮೂಡಿಸಿದೆ.

ಜೊಮಾಟೋದಲ್ಲಿ ಉನ್ನತ ಹಂತದಲ್ಲಿದ್ದ ವ್ಯಕ್ತಿಗಳು ರಾಜೀನಾಮೆ ನೀಡಿದ್ದು ಇತ್ತೀಚಿನ ದಿನಗಳಲ್ಲಿ ಇದು ಮೂರನೇ ಬಾರಿ. ಜೊಮಾಟೋದಲ್ಲಿ 5 ವರ್ಷ ಕೆಲಸ ಮಾಡಿದ್ದ ಮತ್ತು ಕಂಪನಿಯ ನ್ಯೂ ಇನಿಷಿಯೇಟಿವ್ಸ್ (ಹೊಸ ಪ್ರಯೋಗ) ವಿಭಾಗದ ಮುಖ್ಯಸ್ಥರಾಗಿದ್ದ ರಾಹುಲ್ ಗಂಜೂ ಕೆಲ ದಿನಗಳ ಹಿಂದಷ್ಟೇ ರಾಜೀನಾಮೆ ನೀಡಿದ್ದರು. ಈ ತಿಂಗಳ ಆರಂಭದಲ್ಲಿ ಜೊಮಾಟೋದ ಉಪಾಧ್ಯಕ್ಷರಾಗಿದ್ದ ಸಿದ್ಧಾರ್ಥ್ ಝವರ್ ಕೂಡ ತಾನು ಕಂಪನಿ ಬಿಡುತ್ತಿರುವುದಾಗಿ ನಿರ್ಧಾರ ಪ್ರಕಟಿಸಿದ್ದರು. ಸಿದ್ಧಾರ್ಥ್ ಅವರು ಜೊಮಾಟೊದ ಜಾಗತಿಕ ಬೆಳವಣಿಗೆ ವಿಭಾಗದ ಉಪಾಧ್ಯಕ್ಷರಾಗಿದ್ದರು. ಈಗ ಮಾಜಿ ಸಿಇಒ ಮತ್ತು ಸಹ-ಸಂಸ್ಥಾಪಕ ಮೋಹಿತ್ ಗುಪ್ತಾ ಸರದಿಯಾಗಿದೆ.

ಮೋಹಿತ್ ರಾಜೀನಾಮೆಗೆ ಕಾರಣವೇನು?

ಮೋಹಿತ್ ರಾಜೀನಾಮೆಗೆ ಕಾರಣವೇನು?

ಜೊಮಾಟೋ ವ್ಯವಹಾರ ನಷ್ಟದಿಂದಲಾಗಲೀ, ವಿವಾದಗಳಿಂದಲಾಗಲೀ ಮೋಹಿತ್ ಗುಪ್ತಾ ರಾಜೀನಾಮೆ ನೀಡಿದ್ದಲ್ಲ. ಅವರೇ ಹೇಳಿಕೊಂಡಿರುವ ಪ್ರಕಾರ ತಮ್ಮ ಜೀವನದಲ್ಲಿ ಇನ್ನೂ ಬಾಕಿ ಇರುವ ಸಾಹಸಗಳನ್ನು ಎದುರಿಸುವ ಸಲುವಾಗಿ ಅವರು ಸಂಸ್ಥೆ ಬಿಟ್ಟು ಹೋಗುತ್ತಿದ್ದಾರೆ. ಮೋಹಿತ್ ಗುಪ್ತಾ ಅನುಪಸ್ಥಿತಿಯಲ್ಲಿ ಜೊಮಾಟೋವನ್ನು ದೀಪಿಂದರ್ ಗೋಯಲ್ ಪೂರ್ಣವಾಗಿ ಮುನ್ನಡೆಸಲಿದ್ದಾರೆ.

"ಕಳೆದ ಕೆಲ ವರ್ಷಗಳಿಂದ ದೀಪಿ (ದೀಪಿಂದರ್ ಗೋಯಲ್) ಹೆಚ್ಚು ಪ್ರಬುದ್ಧರಾಗಿ ಮತ್ತು ಹೆಚ್ಚು ಆತ್ಮವಿಶ್ವಾಸಿ ನಾಯಕನಾಗಿ ರೂಪುಗೊಳ್ಳುವುದನ್ನು ನಾನು ಕಂಡಿದ್ದೇನೆ. ನಿಮ್ಮೆಲ್ಲರ ಜೊತೆ ಉಜ್ವಲ ಭವಿಷ್ಯದತ್ತ ವ್ಯವಹಾರವನ್ನು ಮುನ್ನಡೆಸಬಲ್ಲ ನಾಯಕರಾಗಿ ಬೆಳೆದಿದ್ದಾರೆ. ಈ ಒಂದು ವಿಶ್ವಾಸದಲ್ಲಿ ನಾನು ಜೊಮಾಟೋ ಬಿಟ್ಟು ಹೊರಗೆ ಹೋಗುತ್ತಿದ್ದೇನೆ" ಎಂದು ಮೋಹಿತ್ ಗುಪ್ತಾ ತಮ್ಮ ಬೀಳ್ಕೊಡುಗೆಯ ಭಾಷಣದಲ್ಲಿ ಹೇಳಿರುವುದು ತಿಳಿದುಬಂದಿದೆ.

 

ದೀಪಿಂದರ್ ಪ್ರತಿಕ್ರಿಯೆ

ದೀಪಿಂದರ್ ಪ್ರತಿಕ್ರಿಯೆ

ದೀಪಿಂದರ್ ಗೋಯಲ್ ಅವರು ಜೊಮಾಟೋದ ಮೂಲ ಸ್ಥಾಪಕರು. ಮತ್ತು ಈಗ ಸಿಇಒ ಆಗಿದ್ದಾರೆ. ತಮ್ಮ ಈಗಿನ ಸ್ಥಿತಿಗೆ ಮೋಹಿತ್ ಗುಪ್ತಾ ಕಾರಣ ಎಂದು ದೀಪಿಂದರ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

"ಎಂಜಿ (ಮೋಹಿತ್ ಗುಪ್ತಾ) ನೀವು ಕಳೆದ ಕೆಲ ವರ್ಷಗಳಲ್ಲಿ ನನಗೆ ಸಹೋದರ ಮತ್ತು ಸ್ನೇಹಿತರಾಗಿದ್ದೀರಿ. ಇಲ್ಲಿ ನೀವು ಮಾಡಿದ ಕೆಲಸ ಅದ್ಭುತವಾದುದು. ಮುಳುತ್ತಿದ್ದ ಸಂಸ್ಥೆಯನ್ನು ಎತ್ತಿ ನಿಲ್ಲಿಸಿದಿರಿ. ಹೊಸ ಎತ್ತರಕ್ಕೆ ಎತ್ತೊಯ್ದಿರಿ. ಲಾಭದಾಯಕ ಸಂಸ್ಥೆಯಾಗಿ ರೂಪಿಸಿದಿರಿ. ಎಲ್ಲಕ್ಕಿಂತ ಹೆಚ್ಚಾಗಿ ಇಂಥ ದೊಡ್ಡ ಮತ್ತು ಸಂಕೀರ್ಣ ಉದ್ಯಮವನ್ನು ಸಮರ್ಥವಾಗಿ ನಿಭಾಯಿಸುವಂತೆ ನನಗೆ ಮಾರ್ಗದರ್ಶನ ಕೊಟ್ಟಿರಿ" ಎಂದು ದೀಪಿಂದರ್ ಗೋಯಲ್ ಬಹಳ ಭಾವನಾತ್ಮಕ ಸಂದೇಶದಲ್ಲಿ ತಿಳಿಸಿದ್ದಾರೆ.

 

ಮೋಹಿತ್ ಗುಪ್ತಾ ಬಗ್ಗೆ

ಮೋಹಿತ್ ಗುಪ್ತಾ ಬಗ್ಗೆ

ಐಐಟಿ ಕಲ್ಕತ್ತಾದಲ್ಲಿ ಪದವಿ ಮಾಡಿರುವ ಮೋಹಿತ್ ಗುಪ್ತಾ ಹಲವು ವರ್ಷಗಳ ಕಾಲ ಮೇಕ್ ಮೈ ಟ್ರಿಪ್ ಡಾಟ್ ಕಾಮ್, ಪೆಪ್ಸಿಕೋ ಇಂಟರ್ನ್ಯಾಷನಲ್ ಸಂಸ್ಥೆಗಳಲ್ಲಿ ಕೆಲಸ ಮಾಡಿ ಬಳಿಕ 2018ರಲ್ಲಿ ಜೊಮಾಟೋ ಸೇರಿದ್ದರು. ಸಿಇಒ ಆಗಿದ್ದ ಅವರನ್ನು 2020ರಲ್ಲಿ ಕಂಪನಿಯ ಸಹ-ಸಂಸ್ಥಾಪಕ ಸ್ಥಾನಕ್ಕೆ ಏರಿಸಲಾಯಿತು.

ಒಂದು ಹಂತದಲ್ಲಿ ಜೊಮಾಟೋ ಮುಚ್ಚಿಹೋಗುವ ಹಂತದಲ್ಲಿತ್ತು. ಆದರೆ, ಜೊಮಾಟೊಗೆ ಹೂಡಿಕೆಗಳು ಸಿಕ್ಕು ಮತ್ತೆ ಹಳಿಗೆ ತರುವಲ್ಲಿ ಮೋಹಿತ್ ಗುಪ್ತಾ ಪಟ್ಟಿರುವ ಶ್ರಮ ಬಹಳ ಗಮನಾರ್ಹವಾದುದು. ಜೊಮಾಟೋ ಇದೇ ಜುಲೈ ತಿಂಗಳಲ್ಲಿ ಐಪಿಒಗೆ ತೆರೆದುಕೊಂಡು 9 ಸಾವಿರ ರೂ ಬಂಡವಾಳವನ್ನೂ ಕಲೆಹಾಕಿತು. 72-76 ರೂಪಾಯಿಗೆ ಐಪಿಒದಲ್ಲಿ ಬೆಲೆ ಪಡೆದಿದ್ದ ಜೊಮಾಟೋ ಷೇರು ಈಗ ಸದ್ಯ 67.20 ರೂ ಬೆಲೆಯಲ್ಲಿದೆ.

ಈಗ ಮೋಹಿತ್ ಗುಪ್ತಾ ಜೊಮಾಟೋದಿಂದ ಸಂಪೂರ್ಣವಾಗಿ ಹೊರಬೀಳುತ್ತಿಲ್ಲ. ಹೂಡಿಕೆದಾರರಾಗಿ ಅವರಿಗೆ ಜೊಮಾಟೋದಲ್ಲಿ ನಂಟು ಮುಂದುವರಿಯುತ್ತದೆ. ಕಂಪನಿಯ ವ್ಯವಹಾರಗಳಲ್ಲಿ ಅವರ ಪಾತ್ರ ಇರುವುದಿಲ್ಲ. ಆದರೆ, ತಾವು ಸಹ-ಸಂಸ್ಥಾಪಕರಾಗಿದ್ದ ಜೊಮಾಟೋ ಸಂಸ್ಥೆ ಮುಂದಿನ ದಿನಗಳಲ್ಲಿ ವಿಶ್ವದರ್ಜೆಯ ತಂತ್ರಜ್ಞಾ ವ್ಯವಹಾರವಾಗಿ ಬೆಳೆಯಬಹುದು ಎಂಬ ವಿಶ್ವಾಸವನ್ನು ಮೋಹಿತ್ ಗುಪ್ತಾ ವ್ಯಕ್ತಪಡಿಸಿದ್ದಾರೆ. ವಿಶ್ವದರ್ಜೆಯ ಸಂಸ್ಥೆಯಾಗುವ ನಿಟ್ಟಿನಲ್ಲಿ ಜೊಮಾಟೋ 1 ಪ್ರತಿಶತದಷ್ಟು ಬೆಳೆದಿದೆ. ಮುಂದಿನ ಹಾದಿಯನ್ನು ಯಶಸ್ವಿಯಾಗಿ ಕ್ರಮಿಸಬಹುದು ಎಂಬುದು ಅವರ ಎಣಿಕೆ.

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+