For Quick Alerts
ALLOW NOTIFICATIONS  
For Daily Alerts

ರಿಸರ್ವ್ ಬ್ಯಾಂಕ್ ಇನೊವೇಷನ್ ಹಬ್ ಅಧ್ಯಕ್ಷರಾಗಿ ಕ್ರಿಸ್ ಗೋಪಾಲಕೃಷ್ಣನ್ ನೇಮಕ

By ಅನಿಲ್ ಆಚಾರ್
|

ಇನ್ಫೋಸಿಸ್ ಸಹಸಂಸ್ಥಾಪಕ ಹಾಗೂ ಮಾಜಿ ಕೋ ಛೇರ್ಮನ್ ಸೇನಾಪತಿ (ಕ್ರಿಸ್) ಗೋಪಾಲಕೃಷ್ಣನ್ ಅವರನ್ನು ರಿಸರ್ವ್ ಬ್ಯಾಂಕ್ ಇನೊವೇಷನ್ ಹಬ್ ನ ಮೊದಲ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಆರ್ಥಿಕ ವಲಯದಲ್ಲಿ ಆವಿಷ್ಕಾರವನ್ನು ಪ್ರಚುರ ಪಡಿಸುವ ಸಲುವಾಗಿ ರಿಸರ್ವ್ ಬ್ಯಾಂಕ್ ಇನೊವೇಷನ್ ಹಬ್ (RBIH) ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರವು ಕಳೆದ ಆಗಸ್ಟ್ ನಲ್ಲಿ ಘೋಷಣೆ ಮಾಡಿತ್ತು.

ಇನ್ಫೋಸಿಸ್ ಸಹಸಂಸ್ಥಾಪಕ ಹಾಗೂ ಮಾಜಿ ಕೋ ಛೇರ್ಮನ್ ಸೇನಾಪತಿ (ಕ್ರಿಸ್) ಗೋಪಾಲಕೃಷ್ಣನ್ ಅವರನ್ನು RBIH ಮೊದಲ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಆರ್ ಬಿಐ ಹೇಳಿಕೆಯಲ್ಲಿ ಮಂಗಳವಾರ ತಿಳಿಸಲಾಗಿದೆ. ಆರ್ ಬಿಐನಿಂದ RBIH ಮಾರ್ಗದರ್ಶನ ಹಾಗೂ ನಿರ್ವಹಣೆ ಮಾಡಲಾಗುವುದು. ಅದನ್ನು ಅಧ್ಯಕ್ಷರು ಮುನ್ನಡೆಸಲಿದ್ದಾರೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.

50,000 ರುಪಾಯಿ ಮತ್ತು ಮೇಲ್ಪಟ್ಟ ಮೊತ್ತದ ಚೆಕ್ ಗೆ ಬರಲಿದೆ ಹೊಸ ನಿಯಮ50,000 ರುಪಾಯಿ ಮತ್ತು ಮೇಲ್ಪಟ್ಟ ಮೊತ್ತದ ಚೆಕ್ ಗೆ ಬರಲಿದೆ ಹೊಸ ನಿಯಮ

ಸಮಿತಿಯ ಇತರ ಸದಸ್ಯರಾಗಿ ಸಿಇಒ (ನೇಮಕ ಆಗಬೇಕು). ಅಶೋಕ್ ಜುಂಜುನ್ ವಾಲಾ, ಎಚ್. ಕೃಷ್ಣಮೂರ್ತಿ, ಗೋಪಾಲ್ ಶ್ರೀನಿವಾಸನ್, ಎ.ಪಿ. ಹೋತಾ, ಮೃತ್ಯುಂಜಯ್ ಮಹಾಪಾತ್ರ, ಟಿ. ರಬಿ ಶಂಕರ್, ದೀಪಕ್ ಕುಮಾರ್, ಕೆ. ನಿಖಿಲ. RBIHನಿಂದ ಹಣಕಾಸು ಒಳಗೊಳ್ಳುವಿಕೆ ಕೂಡ ಉತ್ತೇಜನ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ರಿಸರ್ವ್ ಬ್ಯಾಂಕ್ ಇನೊವೇಷನ್ ಹಬ್ ಅಧ್ಯಕ್ಷರಾಗಿ ಕ್ರಿಸ್ ಗೋಪಾಲಕೃಷ್ಣನ್

ಆರ್ಥಿಕ ವಲಯದ ಸಂಸ್ಥೆಗಳು, ತಂತ್ರಜ್ಞಾನ ಕೈಗಾರಿಕೆ ಮತ್ತು ಶೈಕ್ಷಣಿಕ ಸಂಸ್ಥೆಗಳ ಜತೆಗೆ ಹಬ್ ಸಹಯೋಗ ವಹಿಸಲಿದೆ. ಆ ನಂತರ ಹಣಕಾಸು ವಲಯದ ಆವಿಷ್ಕಾರ ಹಾಗೂ ಆಲೋಚನೆಗಳ ವಿನಿಮಯ ಮತ್ತು ಅಭಿವೃದ್ಧಿಗೆ ಸಮನ್ವಯ ಮಾಡಲಿದೆ. ಹಣಕಾಸು ತಂತ್ರಜ್ಞಾನ ಸಂಶೋಧನೆಗೆ ಉತ್ತೇಜನ ಹಾಗೂ ಆಂತರಿಕ ಮೂಲಸೌಕರ್ಯದ ಅಭಿವೃದ್ಧಿಯಲ್ಲಿ ತೊಡಗಿರುವ ಸ್ಟಾರ್ಟ್ ಅಪ್ ಗಳಿಗೆ ಮತ್ತು ಆವಿಷ್ಕಾರ ನಡೆಸುವುದಕ್ಕೆ RBIH ಸಹಾಯ ಮಾಡುತ್ತದೆ.

English summary

Kris Gopalakrishnan appointed as first chairperson of Reserve Bank Innovation Hub

Infosys co founder Kris Gopalakrishnan appoints as first chairperson of Reserve Bank innovation hub.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X