ಈಗಲೇ ಸಿದ್ಧರಾಗಿ! ಗಾಯದ ಮೇಲೆ ಬರೆ ಎಳೆದಾಯಿತು.. ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳವೂ ಆಯಿತು. ಹೌದು, ಹೊಸ ವರ್ಷದ ಮರು ದಿನವೇ ಜನರಿಗೆ ರಾಜ್ಯ ಸರ್ಕಾರ ಶಾಕಿಂಗ್ ಸುದ್ದಿ ಕೊಟ್ಟಿತ್ತು. ಸಚಿವ ಸಂಪುಟ ಸಭೆಯಲ್ಲಿ ಬಸ್ ಪ್ರಯಾಣ ದರ (bus fare hike) ಶೇ.15ರಷ್ಟು ಹೆಚ್ಚಳ ಮಾಡುವುದಕ್ಕೆ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆ. ಅದರಂತೆ, ಇಂದು ಮಧ್ಯರಾತ್ರಿಯಿಂದಲೇ ಹೊಸ ಬಸ್ ಟಿಕೆಟ್ ದರ ಜಾರಿಗೆ ಬರಲಿದೆ. ಹಾಗಿದ್ರೆ, ಯಾವ ಊರಿಗೆ ಎಷ್ಟು ದರ ಏರಿಕೆಯಾಗಿದೆ? ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.
ಹೌದು, ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಲ್ಲಿ ಶೇ.15ರಷ್ಟು ಪ್ರಯಾಣ ದರ ಪರಿಷ್ಕರಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಇಂದು ಮಧ್ಯರಾತ್ರಿಯಿಂದ ಶೇ 15ರಷ್ಟು ಟಿಕೆಟ್ ಏರಿಕೆಯ ಹೊಸ ದರ ಅನ್ವಯವಾಗುತ್ತದೆ.

ಬಸ್ ಪ್ರಯಾಣದ ದರ ಹೆಚ್ಚಳದ ಪಟ್ಟಿ
ಕೆಎಸ್ಆರ್ಟಿಸಿ ಎಕ್ಸ್‌ಪ್ರೆಸ್ ಬಸ್ಗಳ ಹೊಸ ದರ ಪಟ್ಟಿ ಬಿಡುಗಡೆ ಮಾಡಿದೆ. ಹೊಸ ಟಿಕೆಟ್ ದರ ಪಟ್ಟಿ ಈ ಕೆಳಗಿನಂತೆ ಇದೆ ನೋಡಿ.
- ಬೆಂಗಳೂರು - ತುಮಕೂರು ಪ್ರಯಾಣ ದರ: ಹಳೆಯ ದರ - 80 ರೂ. ಹೊಸ ದರ - 91 ರೂ.
- ಬೆಂಗಳೂರು-ಮಂಡ್ಯ ಪ್ರಯಾಣ ದರ: ಹಳೆಯ ದರ- 116ರೂ. ಹೊಸ ದರ - 131 ರೂ.
- ಬೆಂಗಳೂರು - ಮಂಗಳೂರು ಪ್ರಯಾಣ ದರ: ಹೊಸ ದರ 454 ರೂ.
- ಬೆಂಗಳೂರಿನಿಂದ ಹಾಸನ ಟಿಕೆಟ್ ದರ 246 ರೂ.ಗೆ ಹೆಚ್ಚಳವಾಗಿದೆ.
- ಬೆಂಗಳೂರು ನಿಂದ ಮೈಸೂರು ಟಿಕೆಟ್ ದರ 162 ರೂ.ಗೆ ಹೆಚ್ಚಳವಾಗಿದೆ.
- ಬೆಂಗಳೂರು - ಬೆಳಗಾವಿ ಟಿಕೆಟ್ ದರ : ಹೊಸ ದರ 697 ರೂ.
- ಬೆಂಗಳೂರು - ಹುಬ್ಬಳ್ಳಿಟಿಕೆಟ್ ದರ : ಹೊಸ ದರ 563 ರೂ.
- ಬೆಂಗಳೂರು-ಹಾವೇರಿ ಟಿಕೆಟ್ ದರ: ಹೊಸ ದರ 474 ರೂ.
- ಬೆಂಗಳೂರು-ಕಲಬುರಗಿ ಟಿಕೆಟ್ ದರ: ಹೊಸ ದರ 805 ರೂ.
- ಬೆಂಗಳೂರು-ಶಿವಮೊಗ್ಗ ಟಿಕೆಟ್ ದರ: ಹೊಸ ದರ 356 ರೂ.
- ಬೆಂಗಳೂರು-ಬಳ್ಳಾರಿ ಟಿಕೆಟ್ ದರ: ಹೊಸ ದರ 424 ರೂ.

ಸಾರಿಗೆ ಸಂಸ್ಥೆಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ
ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು ಆರ್ಥಿಕವಾಗಿ ಮುಂದುವರಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿಯ ಸುಧಾರಣೆಗೆ ಹಾಗೂ ಹಮ್ಮಿಕೊಳ್ಳಲಾಗಿರುವ ಯೋಜನೆಗಳನ್ನು ಜಾರಿಗೊಳಿಸಲು ಪ್ರಯಾಣಿಕ ಬಸ್ ದರಗಳನ್ನು ಶೇ.33ರಷ್ಟು ಹೆಚ್ಚಿಸಲು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಶೇ.42ರಷ್ಟು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು ಇದಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ಸಭೆಯಲ್ಲಿ ಚರ್ಚಿ ಮಾಡಿದ ನಂತರ ಶೇ.15ರಷ್ಟು ಟಿಕೆಟ್ ದರ ಪರಿಷ್ಕರಣೆ ಮಾಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ.
ಬೆಲೆ ಏರಿಕೆ ಎನ್ನುವುದು ಅಚ್ಚರಿಯ ವಿಷಯ ಅಲ್ಲ
ನಮ್ಮ ರಾಜ್ಯದಲ್ಲಿ ದರ ಏರಿಕೆ, ಬೆಲೆ ಏರಿಕೆ ಎನ್ನುವುದು ಅಚ್ಚರಿಯ ವಿಷಯ ಅಲ್ಲ. ಸರ್ಕಾರ ಪ್ರಯಾಣ ದರವನ್ನು ಶೇ.15ರಷ್ಟು ಏರಿಕೆ ಮಾಡಿ ಜನರ ಮೇಲೆ ದೊಡ್ಡ ಬರೆ ಹಾಕಿದೆ. ಜನರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನರಿಗೂ ಅಭ್ಯಾಸವಾಗಿ ಹೋಗಿದೆ. ಎರಡು ದಿನ ಆಕ್ರೋಶ ವ್ಯಕ್ತಪಡಿಸಿ ಮೂರನೇ ದಿನ ಮರೆತು ಹೋಗಿ, ಪ್ರಯಾಣ ದರ ಏರಿಕೆಗೆ ಅಡ್ಜೆಸ್ಟ್ ಆಗುತ್ತಾರೆ. ಇದು ನೈಜ ಪರಿಸ್ಥಿತಿ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಸಿಬ್ಬಂದಿಗಳ ಭವಿಷ್ಯ ನಿಧಿ, ನಿವೃತ್ತ ನೌಕರರ ವೇತನ,ಗ್ರಾಚ್ಯುಟಿ, ಪೂರೈಕೆದಾರರ ಬಾಕಿ ಬಿಲ್‌ಗಳು, ಡೀಸೆಲ್ ಸರಬರಾಜು ಬಿಲ್, ಮೋಟಾರ್ ವಾಹನ ತೆರಿಗೆ ಪಾವತಿ ಮಾಡದಿರುವುದು ಮತ್ತು ಇತರ ಬಿಲ್‌ಗಳ ಬಾಕಿಯಿಂದಾಗಿ ನಾಲ್ಕು ಸಾರಿಗೆ ಸಂಸ್ಥೆಗಳ ಮೇಲೆ ಆರ್ಥಿಕ ಹೊಣೆಗಾರಿಕೆ ಜಾಸ್ತಿ ಇದೆ.


Click it and Unblock the Notifications