ಈ ಹಿಂದೆ ಮಹಿಳೆಯರಿಗೆ ಶಕ್ತಿ ಯೋಜನೆ ಮೂಲಕ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಅವಕಾಶವನ್ನು ನೀಡಿದ ಕರ್ನಾಟಕ ರಾಜ್ಯ ಸರ್ಕಾರವು ಈಗ ಕೆಎಸ್‌ಆರ್‌ಟಿಸಿ ಉದ್ಯೋಗಿಗಳಿಗೆ ಸಿಹಿಸುದ್ದಿಯನ್ನು ನೀಡಿದೆ. ಉದ್ಯೋಗಿ ಸ್ನೇಹಿಯಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಉದ್ಯೋಗಿಗಳ ಪರಿಹಾರ ಮೊತ್ತವನ್ನು 3 ಲಕ್ಷ ರೂಪಾಯಿ 10 ಲಕ್ಷ ರೂಪಾಯಿಗೆ ಏರಿಸಿದೆ.
ಇದು ಸಾರಿಗೆ ಸೌಲಭ್ಯವು ಇತಿಹಾಸದಲ್ಲಿಯೇ ಅತೀ ಅಧಿಕ ಮೊತ್ತವಾಗಿದೆ. ಅನಾರೋಗ್ಯ ಅಥವಾ ಅಪಘಾತದಿಂದ ಕೆಎಸ್‌ಆರ್‌ಟಿಸಿ ಉದ್ಯೋಗಿಯು ಮರಣ ಹೊಂದಿದ ಸಂದರ್ಭದಲ್ಲಿ ನೌಕರನ ಕುಟುಂಬಕ್ಕೆ ಪರಿಹಾರ ಮೊತ್ತವನ್ನು ನೀಡಲಾಗುತ್ತದೆ. ನೌಕರರ ಕುಟುಂಬ ಕಲ್ಯಾಣ ಯೋಜನೆ ಎಂದು ಕರೆಯಲ್ಪಡುವ, ಪರಿಹಾರ ಮೊತ್ತವು ಕೆಎಸ್‌ಆರ್‌ಟಿಸಿಯ ನೌಕರರಿಗೆ ಮಾತ್ರ ಅನ್ವಯಿಸುತ್ತದೆ.

ಬಿಎಂಟಿಸಿ ಮತ್ತು ಇತರ ಎರಡು ಸಾರಿಗೆ ನಿಗಮಗಳು ವಿಭಿನ್ನ ಯೋಜನೆಯನ್ನು ಹೊಂದಿವೆ. ಈ ಪರಿಹಾರ ಮೊತ್ತವು 1 ಕೋಟಿ ರೂಪಾಯಿ ಅಪಘಾತ ಪರಿಹಾರದ ಹೊರತಾಗಿ ಕರ್ತವ್ಯದಲ್ಲಿರುವಾಗ ಅಥವಾ ಹೊರಗಿರುವಾಗ ಪ್ರಾಣ ಕಳೆದುಕೊಳ್ಳುವ ನೌಕರರ ಕುಟುಂಬಕ್ಕೆ ನೀಡಲಾಗುವ ಮೊತ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೆ ಏಳು ಪ್ರಕರಣಗಳಿಗೆ ಈ ಪರಿಹಾರ ಸಿಕ್ಕಿದೆ.
ಕ್ಯಾನ್ಸರ್, ಪಾರ್ಶ್ವವಾಯು, ಹೃದಯಾಘಾತ, ಮೂತ್ರಪಿಂಡ ವೈಫಲ್ಯ ಮುಂತಾದ ಕಾಯಿಲೆಗಳಿಂದ ವರ್ಷಕ್ಕೆ 100 ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿಯ ಉದ್ಯೋಗಿಗಳು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಇದು ಕೆಲಸದ ಕಠಿಣ ಸ್ವಭಾವವನ್ನು ಸೂಚಿಸುತ್ತದೆ ಎಂದು ವರದಿಯು ಉಲ್ಲೇಖಿಸಿದೆ.
ಯೋಜನೆಯ ಭಾಗವಾಗಿ, ನೌಕರರು ತಿಂಗಳಿಗೆ 100 ರೂಪಾಯಿ ಬದಲಾಗಿ 200 ರೂಪಾಯಿಗಳನ್ನು ನೀಡಲಿದ್ದು, ನಿಗಮವು ಪ್ರತಿ ಉದ್ಯೋಗಿಯ ಪರವಾಗಿ ತನ್ನ ಕೊಡುಗೆಯನ್ನು 50 ರೂಪಾಯಿಯಿಂದ 100 ರೂಪಾಯಿಗೆ ಹೆಚ್ಚಿಸಲಿದೆ. ಈ ಪರಿಷ್ಕೃತ ಯೋಜನೆಯು ನವೆಂಬರ್ 1, 2023 ರಿಂದ ಜಾರಿಗೆ ಬರಲಿದೆ.


Click it and Unblock the Notifications