ಏಳರಿಂದ ಎಂಟು ಲಕ್ಷ ಭಾರತೀಯರನ್ನು ಕುವೈತ್ ಬಿಟ್ಟು ತೆರಳುವಂತೆ ಸೂಚನೆ ನೀಡುವ ಸಾಧ್ಯತೆ ಇದೆ. ಅಲ್ಲಿ ವಲಸಿಗರ ಬಗ್ಗೆ ಮಸೂದೆಯೊಂದನ್ನು ಸಿದ್ಧಪಡಿಸಿದ್ದು, ಅದು ಕಾಯ್ದೆಯಾದಲ್ಲಿ ಭಾರತೀಯರು ಕುವೈತ್ ಬಿಡಬೇಕಾಗುತ್ತದೆ. ವಲಸಿಗರ ಕೋಟಾ ಮಸೂದೆ ಕರಡನ್ನು ಕುವೈತ್ ರಾಷ್ಟ್ರೀಯ ಅಸೆಂಬ್ಲಿಯ ಕಾನೂನು ಹಾಗೂ ಶಾಸಕಾಂಗ ಸಮಿತಿಯು ಒಪ್ಪಿಕೊಂಡಿದೆ.
ಆ ಕರಡಿನ ಪ್ರಕಾರ, ಕುವೈತ್ ಒಟ್ಟು ಜನಸಂಖ್ಯೆಯ ಶೇಕಡಾ 15ಕ್ಕಿಂತ ಹೆಚ್ಚು ಭಾರತೀಯರು ಅಲ್ಲಿರುವಂತಿಲ್ಲ. ಈ ಮಸೂದೆಯನ್ನು ಸಂಬಂಧಪಟ್ಟ ಸಮಿತಿಗೆ ವರ್ಗಾವಣೆ ಮಾಡಲಾಗುತ್ತದೆ. ಆ ನಂತರ ಸಮಗ್ರ ಯೋಜನೆ ರೂಪಿಸಲಾಗುತ್ತದೆ. ವಲಸಿಗ ಕೋಟಾ ಮಸೂದೆಯ ಕರಡು ಸಾಂವಿಧಾನಿಕವಾದುದು ಎಂದು ಸಮಿತಿ ನಿರ್ಧರಿಸಿದೆ ಎಂದು ಸ್ಥಳೀಯ ವರದಿಯನ್ನು ಆಧರಿಸಿ ಗಲ್ಫ್ ನ್ಯೂಸ್ ವರದಿ ಮಾಡಿದೆ.
ಕುವೈತ್ ನಲ್ಲಿ 14.5 ಲಕ್ಷ ಭಾರತೀಯರು
ಕುವೈತ್ ಒಟ್ಟು ಜನಸಂಖ್ಯೆಯಲ್ಲಿ ಭಾರತೀಯ ವಲಸಿಗರ ಸಂಖ್ಯೆ 14.5 ಲಕ್ಷ ಇದೆ. ಆ ಪೈಕಿ ಎಂಟು ಲಕ್ಷ ಮಂದಿ ಕುವೈತ್ ಬಿಡಬೇಕಾಗುತ್ತದೆ. ಕುವೈತ್ ಒಟ್ಟು ಜನಸಂಖ್ಯೆಯೇ 43 ಲಕ್ಷ ಇದ್ದರೆ, ಅದರಲ್ಲಿ 30 ಲಕ್ಷ ಮಂದಿ ವಲಸಿಗರಿದ್ದಾರೆ. ಈ ಮಸೂದೆಯಲ್ಲಿ ಹೇಳಿರುವ ಪ್ರಕಾರ, ಈಜಿಪ್ಷಿಯನ್ನರ ಸಂಖ್ಯೆಯನ್ನು ಸಹ ಇಳಿಸುವಂತೆ ತಿಳಿಸಲಾಗಿದೆ. ಕುವೈತ್ ನ ಒಟ್ಟು ಜನಸಂಖ್ಯೆಯ ಶೇಕಡಾ 10ರಷ್ಟು, ಎರಡನೇ ಅತಿ ದೊಡ್ಡ ಜನಸಂಖ್ಯೆಯಲ್ಲಿ ಇರುವವರು ಈಜಿಪ್ಷಿಯನ್ನರು.
ಭಾರತಕ್ಕೆ ಬರುತ್ತಿರುವ ಹಣದಲ್ಲಿ ಅತಿ ದೊಡ್ಡ ಪ್ರಮಾಣ
ಭಾರತಕ್ಕೆ ಬರುತ್ತಿರುವ ವಿದೇಶಿ ಹಣದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಬರುತ್ತಿರುವುದು ಕುವೈತ್ ನಿಂದ. 2018ರಲ್ಲಿ ಭಾರತಕ್ಕೆ 480 ಕೋಟಿ ಅಮೆರಿಕನ್ ಡಾಲರ್ ಬಂದಿತ್ತು. ಕುವೈತ್ ನ ಮೂಲ ನಿವಾಸಿಗರೇ ಅಲ್ಪಸಂಖ್ಯಾತರಾಗುತ್ತಿರುವ ಹಿನ್ನೆಲೆಯಲ್ಲಿ ಕುವೈತ್ ವಿದೇಶೀ ಕಾರ್ಮಿಕರ ಮೇಲೆ ಅವಲಂಬನೆ ಕಡಿಮೆ ಮಾಡಲು ನಿರ್ಧರಿಸಿದೆ.
ಶೇಕಡಾ 70ರಷ್ಟಿರುವ ವಲಸಿಗರ ಸಂಖ್ಯೆ 30ಕ್ಕೆ ಇಳಿಸಬೇಕು
ಈ ಮಸೂದೆಯ ಉದ್ದೇಶವೇ ಭವಿಷ್ಯದಲ್ಲಿ ಕುವೈತ್ ಅನ್ನು ವಲಸಿಗರೇ ಬಹುಸಂಖ್ಯಾತರಿರುವ ದೇಶ ಎಂಬ ಹಣೆಪಟ್ಟಿಯಿಂದ ಹೊರತರುವುದು. ಇನ್ನು ಈ ಉದ್ದೇಶಕ್ಕೆ ಪೂರಕ ಎಂಬಂತೆ ಕೊರೊನಾ ವ್ಯಾಪಕವಾಗಿ ಹಬ್ಬುತ್ತಿರುವುದು ಹಾಗೂ ತೈಲ ಬೆಲೆ ಕುಸಿತ ಕೂಡ ಕೆಲಸ ಮಾಡಿದೆ. ಕುವೈತ್ ನ ಒಟ್ಟು ಜನಸಂಖ್ಯೆಯ ಶೇಕಡಾ 70ರಷ್ಟಿರುವ ವಲಸಿಗರ ಸಂಖ್ಯೆಯನ್ನು 30ಕ್ಕೆ ಇಳಿಸಬೇಕು ಎಂಬುದು ಈಗಿನ ಉದ್ದೇಶ.
ಕಾರ್ಮಿಕರಿಗೆ 24X7 ಉಚಿತ ದೂರವಾಣಿ ಸಹಾಯವಾಣಿ
2009ರಲ್ಲಿ ಭಾರತ ರಾಯಭಾರ ಕಚೇರಿಯು ಭಾರತೀಯ ನೌಕರರ ಕಲ್ಯಾಣ ಕೇಂದ್ರವನ್ನು ಕುವೈತ್ ನಲ್ಲಿ ಆರಂಭಿಸಿದೆ. ಆ ದೇಶದಲ್ಲಿ ಭಾರತೀಯ ಕಾರ್ಮಿಕರಿಗೆ ಕಾನೂನು ನೆರವು ನೀಡುತ್ತಿದೆ. ಸಮಸ್ಯೆಗಳನ್ನು ಪರಿಹರಿಸುತ್ತಿದೆ. 24X7 ಉಚಿತ ದೂರವಾಣಿ ಸಹಾಯವಾಣಿ ಆರಂಭಿಸಿದ್ದು, ಕಾನೂನು ನೆರವು ನೀಡುತ್ತದೆ. ಈಗಿನ ಬೆಳವಣಿಗೆಯನ್ನು ಸಹ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ತಿಳಿಸಲಾಗಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications