Accenture: 19,000 ಉದ್ಯೋಗ ಕಡಿತಗೊಳಿಸಲು ಮುಂದಾದ ಆಕ್ಸೆಂಚರ್, ವಿವರ ತಿಳಿಯಿರಿ

ಆಕ್ಸೆಂಚರ್ ಗುರುವಾರ ತನ್ನ ಆದಾಯ ಮತ್ತು ಲಾಭದ ಲೆಕ್ಕಾಚಾರವನ್ನು ಕಡಿಮೆ ಮಾಡಿದೆ. ಹಾಗೆಯೇ ಕಂಪನಿಯು ಸುಮಾರು 19,000 ಉದ್ಯೋಗಗಳನ್ನು ಕಡಿತಗೊಳಿಸಲಿದೆ ಎಂದು ತಿಳಿಸಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿಯು ಹಲವಾರು ಐಟಿ ಸಂಸ್ಥೆ, ಇತರೆ ಸಂಸ್ಥೆಗಳ ಮೇಲೆ ಪ್ರಭಾವ ಉಂಟು ಮಾಡಿದೆ. ಇದರಿಂದಾಗಿ ಹಲವಾರು ಕಂಪನಿಯು ಉದ್ಯೋಗಿಗಳನ್ನು ವಜಾಗೊಳಿಸುವ ನಿರ್ಧಾರವನ್ನು ಮಾಡಿದೆ. ಅಕ್ಸೆಂಚರ್ ಕೂಡಾ ಸಂಸ್ಥೆಯಲ್ಲಿ ಉದ್ಯೋಗ ಕಡಿತವನ್ನು ಮಾಡುವ ತೀರ್ಮಾನಕ್ಕೆ ಬಂದಿದ್ದು, ಈ ಬಗ್ಗೆ ಘೋಷಣೆ ಮಾಡಿದೆ.

ಆದಾಯ ಮತ್ತು ಲಾಭದ ಅಂದಾಜು ಕಡಿತವು ಆರ್ಥಿಕ ಹಿಂಜರಿತದ ಎಚ್ಚರಿಕೆಯಾಗಿದೆ. ಇದರಿಂದಾಗಿ ಪ್ರಸ್ತುತ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡುವ ನಿರೀಕ್ಷೆ ಹೆಚ್ಚಳವಾಗಿದೆ. ಈಗಾಗಲೇ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತ ಮಾಡಿದೆ. ಸಂಸ್ಥೆಯಲ್ಲಿ ವಾರ್ಷಿಕ ಆದಾಯ ಬೆಳವಣಿಗೆಯು ಶೇಕಡ 8ರಿಂದ ಶೇಕಡ 10 ಅಂದಾಜು ಮಾಡಾಗಿದೆ. ಈ ಹಿಂದೆ ಆಕ್ಸೆಂಚರ್ ಸಂಸ್ಥೆಯಲ್ಲಿ ಶೇಕಡ 8ರಿಂದ ಶೇಕಡ 11ರಷ್ಟು ಬೆಳವಣಿಗೆ ಅಂದಾಜು ಮಾಡಲಾಗಿತ್ತು. ಅದನ್ನು ತಗ್ಗಿಸಲಾಗಿದೆ.

 19,000 ಉದ್ಯೋಗ ಕಡಿತಗೊಳಿಸಲು ಮುಂದಾದ ಆಕ್ಸೆಂಚರ್, ವಿವರ ತಿಳಿಯಿರಿ

ಪ್ರತಿ ಷೇರಿನ ಮೌಲ್ಯ ಎಷ್ಟಿದೆ ನೋಡಿ

ಸಂಸ್ಥೆಯು ಪ್ರತಿ ಷೇರಿಗೆ ಲಭ್ಯವಾಗುವ ಆದಾಯವು 10.84 ಡಾಲರ್‌ನಿಂದ 11.06 ಡಾಲರ್‌ವರೆಗೆ ಇರಲಿದೆ ಎಂದು ಅಂದಾಜು ಮಾಡಲಾಗಿದೆ. ಈ ಹಿಂದೆ ಪ್ರತಿ ಷೇರಿನಿಂದ ಲಭ್ಯವಾಗುವ ಆದಾಯವನ್ನು 11.20 ಡಾಲರ್‌ನಿಂದ 11.52 ಡಾಲರ್ ಎಂದು ಅಂದಾಜು ಮಾಡಲಾಗಿತ್ತು. ಕಂಪನಿಯು ಪ್ರಸ್ತುತ ತ್ರೈಮಾಸಿಕ ಆದಾಯವು 16.1 ಬಿಲಿಯನ್ ಡಾಲರ್‌ನಿಂದ 16.7 ಬಿಲಿಯನ್ ಡಾಲರ್‌ ನಡುವೆ ಇರಲಿದೆ ಎಂದು ಅಂದಾಜು ಮಾಡಲಾಗಿದೆ.

ಇನ್ನು ಅರ್ಧಕ್ಕಿಂತ ಹೆಚ್ಚು ಉದ್ಯೋಗ ಕಡಿತವು ಸಂಸ್ಥೆಯಲ್ಲಿನ ಕಾರ್ಪೊರೇಟ್ ಕಾರ್ಯಗಳಲ್ಲಿ ಸಿಬ್ಬಂದಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಕಂಪನಿಯು ಮಾಹಿತಿ ನೀಡಿದೆ. ಇನ್ನು ಮಾರ್ಚ್ 23ರಂದು ವಹಿವಾಟಿನ ಅಂತ್ಯದಲ್ಲಿ ಆಕ್ಸೆಂಚರ್ ಷೇರು ಶೇಕಡ 0.067ರಷ್ಟು ಏರಿಕೆಯಾಗಿದ್ದು, 253.27ಕ್ಕೆ ತಲುಪಿದೆ.

ಇತರೆ ಸಂಸ್ಥೆಗಳಲ್ಲಿ ಉದ್ಯೋಗ ಕಡಿತ

ಜನವರಿಯಲ್ಲಿ ಅಮೆಜಾನ್ ಸುಮಾರು 18 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವ ಘೋಷಣೆಯನ್ನು ಮಾಡಿದೆ. ಇದೀಗ ಎರಡನೇ ಹಂತದ ಉದ್ಯೋಗ ಕಡಿತವನ್ನು ಅಮೆಜಾನ್ ಮಾಡಿದೆ. ಈ ಎರಡನೇ ಹಂತದ ಉದ್ಯೋಗ ಕಡಿತದಲ್ಲಿ ಸಂಸ್ಥೆಯು ಸುಮಾರು 9 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವುದಾಗಿ ಹೇಳಿಕೊಂಡಿದೆ.

ಡಿಸ್ನಿಯು ಮತ್ತೆ ಸಂಸ್ಥೆಯಲ್ಲಿ ಉದ್ಯೋಗ ಕಡಿತ ಮಾಡಲು ಮತ್ತು ಸಂಸ್ಥೆಯಲ್ಲಿ ಪುನರ್‌ ರಚನೆ ಮಾಡಲು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಫೆಬ್ರವರಿ ಸುಮಾರು 7000 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿದ್ದ ಡಿಸ್ನಿ ಸಂಸ್ಥೆಯು ಈಗ ಸುಮಾರು 4000 ಮಂದಿಯನ್ನು ವಜಾಗೊಳಿಸುವ ಸಿದ್ಧತೆಯನ್ನು ಮಾಡಿಕೊಂಡಿದೆ. ಜನಪ್ರಿಯ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನ ಪೋಷಕ ಸಂಸ್ಥೆಯಾದ ಮೆಟಾ ಉದ್ಯೋಗಿಗಳನ್ನು ವಜಾಗೊಳಿಸುವ ನಿರ್ಧಾರ ಮಾಡಿದೆ.

ಜರ್ಮನ್‌ನ ರಾಸಾಯನಿಕ ಸಂಸ್ಥೆಯಾದ ಬಿಎಎಸ್‌ಎಫ್‌ ಸುಮಾರು 2600 ಮಂದಿಯನ್ನು ಕೆಲಸದಿಂದ ತೆಗೆದುಹಾಕುವ ನಿರ್ಧಾರವನ್ನು ಮಾಡಿದೆ. ಜಾಗತಿಕವಾಗಿ ಶೇಕಡ 2ರಷ್ಟು ಉದ್ಯೋಗ ಕಡಿತ ಮಾಡುವುದನ್ನು ಘೋಷಣೆ ಮಾಡಿದೆ.

ಮೈಕ್ರೋಸಾಫ್ಟ್: ಶೇಕಡ 5ರಷ್ಟು ಅಥವಾ 10,000 ಉದ್ಯೋಗ ಕಡಿತ
ಅಮೆಜಾನ್: ಶೇಕಡ 3ರಷ್ಟು ಅಥವಾ 8,000 ಉದ್ಯೋಗ ಕಡಿತ
ಸೇಲ್ಸ್‌ಫೋರ್ಸ್‌: ಶೇಕಡ 10ರಷ್ಟು ಅಥವಾ 8,000 ಉದ್ಯೋಗ ಕಡಿತ
ಡೆಲ್: ಶೇಕಡ 5ರಷ್ಟು ಅಥವಾ 6,650 ಉದ್ಯೋಗ ಕಡಿತ
ಐಬಿಎಂ: ಶೇಕಡ 2ರಷ್ಟು ಅಥವಾ 3,900 ಉದ್ಯೋಗ ಕಡಿತ
ಎಸ್‌ಎಪಿ: ಶೇಕಡ 3ರಷ್ಟು ಅಥವಾ 3,000 ಉದ್ಯೋಗ ಕಡಿತ
ಜೂಮ್: ಶೇಕಡ 15ರಷ್ಟು ಅಥವಾ 1,300 ಉದ್ಯೋಗ ಕಡಿತ
ಕಾಯಿನ್‌ಬೇಸ್: ಶೇಕಡ 20ರಷ್ಟು ಅಥವಾ 950 ಉದ್ಯೋಗ ಕಡಿತ
ಯಾಹೂ: ಶೇಕಡ 20ರಷ್ಟು ಅಥವಾ 1,600 ಉದ್ಯೋಗ ಕಡಿತ
ಗಿಟ್‌ಹಬ್: ಶೇಕಡ 10ರಷ್ಟು ಅಥವಾ 300 ಉದ್ಯೋಗ ಕಡಿತ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+