ಇ-ಕಾಮರ್ಸ್ ದೈತ್ಯ ಅಮೆಜಾನ್‌ನಲ್ಲಿ ಸುಮಾರು 18 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಾಗುವುದು ಎಂದು ಘೋಷಣೆ ಮಾಡಲಾಗಿದೆ. ಈ ಬಗ್ಗೆ ಸಿಬ್ಬಂದಿಗಳಿಗೆ ಅಮೆಜಾನ್ ಸಂಸ್ಥೆಯ ಸಿಇಒ ಆಂಡಿ ಜಾಸ್ಸಿ ನೋಟಿಸ್ ನೀಡಿದ್ದಾರೆ. ಅಮೆಜಾನ್‌ನಲ್ಲಿ ಉದ್ಯೋಗಿಗಳ ವಜಾಗೊಳಿಸುವ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ತಮ್ಮ ಸಿಬ್ಬಂದಿಗಳಿಗೆ ಅಮೆಜಾನ್ ಸಿಇಒ ಆಂಡಿ ಜಾಸ್ಸಿ ನೀಡಿದ ನೋಟಿಸ್‌ನಲ್ಲಿ, "ನವೆಂಬರ್‌ನಲ್ಲಿ ನಾವು ಉದ್ಯೋಗ ಕಡಿತ ಮಾಡಿದ ಬಳಿಕ ಈಗ ಮತ್ತೊಮ್ಮೆ ಘೋಷಣೆಯನ್ನು ಮಾಡುತ್ತೇವೆ. ನಾವು 18 ಸಾವಿರ ಜನರನ್ನು ಉದ್ಯೋಗದಿಂದ ಕಡಿತ ಮಾಡುತ್ತೇವೆ," ಎಂದು ತಿಳಿಸಿದ್ದಾರೆ. ನವೆಂಬರ್‌ನಲ್ಲಿ 10 ಸಾವಿರ ಮಂದಿಯನ್ನು ಉದ್ಯೋಗದಿಂದ ವಜಾ ಮಾಡಲಾಗುವುದು ಎಂದು ತಿಳಿಸಿತ್ತು.
"ಇಷ್ಟೊಂದು ಮಂದಿಯನ್ನು ಕೆಲಸದಿಂದ ವಜಾ ಮಾಡುವುದರಿಂದ ಜನರಿಗೆ ತೊಂದರೆ ಉಂಟಾಗಲಿದೆ ಎಂದು ನಾವು ತಿಳಿದಿದ್ದೇವೆ. ನಾವು ಈ ನಿರ್ಧಾರವನ್ನು ಅತೀ ಸರಳವಾಗಿ ತೆಗೆದುಕೊಂಡಿಲ್ಲ," ಎಂದು ಕೂಡಾ ಸಂಸ್ಥೆಯ ಸಿಇಒ ಉಲ್ಲೇಖ ಮಾಡಿದ್ದಾರೆ.

"ಅಮೆಜಾನ್ ಈ ಹಿಂದೆ ಆರ್ಥಿಕ ಸಂಕಷ್ಟದಿಂದಾಗಿ ಹೊಡೆತ ಎದುರಿಸಿದೆ. ಆದ್ದರಿಂದಾಗಿ ನಾವೀಗ ಉದ್ಯೋಗ ಕಡಿತವನ್ನು ಮಾಡಬೇಕಾಗಿದೆ. ಈ ನಿರ್ಧಾರದಿಂದಾಗಿ ಸಂಸ್ಥೆಯ ವೆಚ್ಚವು ಕಡಿಮೆಯಾಗಲಿದೆ. ಹಾಗೆಯೇ ದೀರ್ಘಕಾಲ ಸಂಸ್ಥೆಗೆ ಸಹಾಯಕವಾಗಲಿದೆ," ಎಂದು ಕೂಡಾ ತಿಳಿಸಲಾಗಿದೆ.
ಈ ಹಿಂದಿನ ಲೆಕ್ಕಾಚಾರ ಹೇಗಿತ್ತು?
ಇನ್ನು ಟ್ವಿಟ್ಟರ್, ಎಚ್‌ಪಿ ಸೇರಿದಂತೆ ಹಲವಾರು ಸಂಸ್ಥೆಗಳಲ್ಲಿ ನಷ್ಟದ ಕಾರಣದಿಂದಾಗಿ ಉದ್ಯೋಗ ಕಡಿತವನ್ನು ಮಾಡಲಾಗಿದೆ. ಈ ಸಂದರ್ಭದಲ್ಲೇ ಅಮೆಜಾನ್‌ನಲ್ಲಿಯೂ ಉದ್ಯೋಗವನ್ನು ಕಡಿತ ಮಾಡಲಾಗುತ್ತದೆ ಎಂಬ ಬಗ್ಗೆ ಸುದ್ದಿಗಳು ಆಗಿದ್ದವು. ಈ ಹಿಂದೆ ಅಮೆಜಾನ್‌ನಿಂದ 20 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಸುದ್ದಿಯಾಗಿತ್ತು. ಅದಕ್ಕೂ ಮೊದಲು 10 ಸಾವಿರ ಮಂದಿಯನ್ನು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಗುತ್ತದೆ ಎಂದು ಸುದ್ದಿಯಾಗಿತ್ತು.
ಆ ಸಂದರ್ಭದಲ್ಲೇ ನಮ್ಮ ವಾರ್ಷಿಕ ಯೋಜನೆಯು ಹೊಸ ವರ್ಷದಲ್ಲಿಯೂ ಮುಂದುವರಿಯಲಿದೆ. ಅಂದರೆ ಹಲವಾರು ಮಂದಿಯನ್ನು ನಾವು ಕೆಲಸದಿಂದ ವಜಾಗೊಳಿಸುತ್ತೇವೆ. ಯಾರು ಕೆಲಸ ಕಳೆದುಕೊಳ್ಳುತ್ತಾರೆ ಎಂದು ನಾವು ಆ ಉದ್ಯೋಗಿಗಳಿಗೆಯೇ ಮಾಹಿತಿ ನೀಡುತ್ತೇವೆ. ಈ ಮಾಹಿತಿಯನ್ನು 2023ರಲ್ಲಿ ನೀಡಲಾಗುತ್ತದೆ ಎಂದು ಈ ಹಿಂದೆ ತಿಳಿಸಲಾಗಿತ್ತು.


Click it and Unblock the Notifications