ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್‌ನ ಪೋಷಕ ಸಂಸ್ಥೆಯಾದ ಮೆಟಾ ಇನ್ನೊಂದು ಹಂತದ ಉದ್ಯೋಗ ಕಡಿತವನ್ನು ಈಗಾಗಲೆ ಘೋಷಣೆ ಮಾಡಿದೆ. ಈ ಉದ್ಯೋಗ ಕಡಿತ ಪ್ರಕ್ರಿಯೆಯು ಮುಂದಿನ ವಾರದಿಂದ ಆರಂಭವಾಗಲಿದೆ ಎಂದು ಗುರುವಾರ ಉದ್ಯೋಗಿಗಳಿಗೆ Q&A ಸೆಷನ್ ನಡೆಸಿದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಈ ಹಿಂದೆ ಮೇ ತಿಂಗಳಲ್ಲಿ ಉದ್ಯೋಗ ಕಡಿತವನ್ನಯ ಆರಂಭ ಮಾಡಲಾಗುತ್ತದೆ ಎಂದು ತಿಳಿಸಿದರೂ ಕೂಡಾ, ಸಭೆಯ ಸಮಯದಲ್ಲಿ ನಿಖರವಾದ ಸಮಯವನ್ನು ದೃಢಪಡಿಸಲಾಗಿದೆ. ಈ ಉದ್ಯೋಗ ಕಡಿತವು ಪ್ರಾಥಮಿಕವಾಗಿ ಮೆಟಾದ ವ್ಯಾಪಾರ ವಿಭಾಗಗಳ ಮೇಲೆ ಪ್ರಭಾವ ಉಂಟು ಮಾಡಲಿದೆ. ಹಾಗೆಯೇ ಸಾವಿರಾರು ಉದ್ಯೋಗಿಗಳ ಮೇಲೆ ಪರಿಣಾಮ ಬೀರಬಹುದು ಎಂದು ವೋಕ್ಸ್ ವರದಿ ಮಾಡಿದೆ.

ಸಂಸ್ಥೆಯ ಸಭೆಯ ರೆಕಾರ್ಡಿಂಗ್ ಅನ್ನು ವೋಕ್ಸ್ ಪಡೆದಿದೆ ಎಂದು ತಿಳಿಸಿದೆ. ಈ ಸಭೆಯಲ್ಲಿ ಜಾಗತಿಕ ವ್ಯವಹಾರಗಳ ಮೆಟಾದ ಅಧ್ಯಕ್ಷ ನಿಕ್ ಕ್ಲೆಗ್ ಮಾತನಾಡಿದ್ದಾರೆ ಎಂದು ಉಲ್ಲೇಖಿಸಿದೆ. "ಇದು ಕೇವಲ ದೊಡ್ಡ ಆತಂಕ ಮತ್ತು ಅನಿಶ್ಚಿತತೆಯ ಸಮಯವಾಗಿದೆ. ನಾನು ಬೇಕಾದ ಸೌಕರ್ಯವನ್ನು ಒದಗಿಸಲು ಕೆಲವು ಸುಲಭ ಮಾರ್ಗವನ್ನು ಹೊಂದಲು ಬಯಸುತ್ತೇನೆ," ಎಂದು ತಿಳಿಸಿದ್ದಾರೆ.
ಇನ್ನು ಏಪ್ರಿಲ್‌ನಲ್ಲಿ ನಡೆದ ಉದ್ಯೋಗ ಕಡಿತಕ್ಕೆ ಇದೇ ವಿಧಾನವನ್ನು ಅನುಸರಿಸುತ್ತದೆ ಎಂದು ಕ್ಲೆಗ್ ಹೇಳಿದ್ದಾರೆ. ಏಪ್ರಿಲ್‌ನಲ್ಲಿ ಮೆಟಾದ ತಂತ್ರಜ್ಞಾನ ವಿಭಾಗಗಳಿಂದ 4,000 ಸ್ಥಾನಗಳನ್ನು ವಜಾಗೊಳಿಸಲಾಗಿದೆ. ಉದ್ಯೋಗ ಕಡಿತ ನಡೆಸಲಾಗುವ ಹಿಂದಿನ ದಿನದಿಂದ ಮೆಟಾದ ಮುಖ್ಯಸ್ಥ ಸಮಯ ಮತ್ತು ಯಾವ ತಂಡಕ್ಕೆ ಈ ಉದ್ಯೋಗ ಕಡಿತ ಪ್ರಭಾವ ಉಂಟು ಮಾಡಲಿದೆ ಎಂದು ತಿಳಿಸಲಿದ್ದಾರೆ.
ಕಳೆದ ವರ್ಷದಿಂದಲೇ ಆರಂಭವಾದ ಉದ್ಯೋಗ ಕಡಿತ
ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲೇ ಮೆಟಾ ಹಾಗೂ ಟ್ವಿಟ್ಟರ್ ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಿದೆ. ಮೆಟಾ ಸುಮಾರು 1,100 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಸುಮಾರು ಶೇಕಡ 13ರಷ್ಟು ಉದ್ಯೋಗಿಗಳನ್ನು ದಿಡೀರ್ ವಜಾಗೊಳಿಸಿದೆ. ಫೇಸ್‌ಬುಕ್ ಅನ್ನು ನಿರ್ವಹಣೆ ಮಾಡುವ ಮೆಟಾದ ಷೇರುಗಳು ಈ ವರ್ಷ ಭಾರೀ ನಷ್ಟವನ್ನು ಅನುಭವಿಸಿದೆ. ಮೆಟಾ ಷೇರುಗಳು ಶೇಕಡ 70ರಷ್ಟು ಕುಸಿದಿದೆ. ಸುಮಾರು 255.79 ಬಿಲಿಯನ್ ಡಾಲರ್ ಕುಸಿತ ಕಂಡಿದೆ.
ಅದಾದ ಬಳಿಕ ಗೂಗಲ್ ಕೂಡಾ ಉದ್ಯೋಗ ಕಡಿತವನ್ನು ಆರಂಭಿಸಿದೆ. ಕಳೆದ ವರ್ಷದಲ್ಲಿ ಉದ್ಯೋಗ ಕಡಿತ ಮಾಡಿದ್ದ ಮೆಟಾ ಈ ವರ್ಷವೂ ಉದ್ಯೋಗ ಕಡಿತವನ್ನು ಮುಂದುವರಿಸಿದೆ. ಫೇಸ್‌ಬುಕ್‌ನ ಪೋಷಕ ಸಂಸ್ಥೆಯಾದ ಮೆಟಾ ಮತ್ತೊಮ್ಮೆ ಉದ್ಯೋಗ ಕಡಿತ ಘೋಷಣೆ ಮಾಡಿದೆ. ಸಂಸ್ಥೆಯಲ್ಲಿ ಸುಮಾರು 11 ಸಾವಿರ ಉದ್ಯೋಗಿಗಳನ್ನು ಅಂದರೆ ಸುಮಾರು ಶೇಕಡ 13ರಷ್ಟು ಸಿಬ್ಬಂದಿಗಳು ವಜಾಗೊಳಿಸಲಾಗುವುದು ಎಂದು ಮೆಟಾ ಘೋಷಣೆ ಮಾಡಿದೆ. ಇದು ಭಾರತದಲ್ಲಿಯೂ ಸಾವಿರಾರು ಮೆಟಾ ಉದ್ಯೋಗಿಗಳ ಮೇಲೆ ಪ್ರಭಾವ ಬೀರಿದೆ.
ಬೇರೆ ಬೇರೆ ಸಂಸ್ಥೆಗಳಲ್ಲಿ ಉದ್ಯೋಗ ಕಡಿತ
ಗೂಗಲ್, ಟ್ವಿಟ್ಟರ್, ಮೆಟಾ, ಎಚ್‌ಪಿ, ಅಮೆಜಾನ್, ಸ್ವಿಗ್ಗಿ, ಗೋಲ್ಡ್‌ಮ್ಯಾನ್ ಸ್ಯಾಚ್, ಒಲಾ, ಕ್ರಿಪ್ಟೊ.ಕಾಮ್, ಶೇರ್‌ಚಾಟ್, ಭಾರತ್‌ಪೇ, ಜೂಮ್, ಯಾಹೂ, ಗೋಡ್ಯಾಡಿ, ಡಿಸ್ನಿ, ಗಿಟ್‌ಹಬ್, ಡೊನ್ಜೊ, ಕೂ, ಕ್ಲಬ್‌ಹೌಸ್, ಮೈಕ್ರೋಸಾಫ್ಟ್, ಲಿಂಕ್ಡಿನ್, ಜೊಮ್ಯಾಟೊ, ವೊಡಾಫೋನ್ ಸೇರಿದಂತೆ ಹಲವಾರು ಸಂಸ್ಥೆಗಳಲ್ಲಿ ಉದ್ಯೋಗ ಕಡಿತವನ್ನು ಮಾಡಲಾಗಿದೆ. ಹಾಗೆಯೇ ಸಂಸ್ಥೆಗಳು ಪರಿಹಾರವನ್ನು ಕೂಡಾ ಉದ್ಯೋಗಿಗಳಿಗೆ ನೀಡಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?



Click it and Unblock the Notifications