ಇತ್ತೀಚೆಗೆ ಭಾರೀ ಜನಪ್ರಿಯವಾದ ಆಡಿಯೋ ಆಧಾರಿತ ಸಾಮಾಜಿಕ ಮಾಧ್ಯಮ ಆಪ್ ಆದ ಕ್ಲಬ್‌ಹೌಸ್ ಉದ್ಯೋಗ ಕಡಿತವನ್ನು ಘೋಷಣೆ ಮಾಡಿದೆ. ಹಲವಾರು ಟೆಕ್ ಸಂಸ್ಥೆಗಳು, ಇತರೆ ಸಂಸ್ಥೆಗಳು ಉದ್ಯೋಗ ಕಡಿತ ನಡೆಸುತ್ತಿರುವ ನಡುವೆ ಕ್ಲಬ್‌ಹೌಸ್ ಶೇಕಡ 50ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ. ಈ ಬಗ್ಗೆ ಉದ್ಯೋಗಿಗಳಿಗೆ ನೋಟಿಸ್ ಮೂಲಕ ಮಾಹಿತಿ ನೀಡಲಾಗಿದೆ.
ತಮ್ಮ ಉದ್ಯೋಗಿಗಳಿಗೆ ಪತ್ರದ ಮೂಲಕ ಮಾಹಿತಿ ನೀಡಿರುವ ಕ್ಲಬ್‌ಹೌಸ್ ಸಹಸಂಸ್ಥಾಪಕರಾದ ಪೌಲ್ ಡೇವಿಸನ್ ಮತ್ತು ರೋಹನ್ ಸೇತ್ ಸಂಸ್ಥೆಯಲ್ಲಿ ರಚನಾತ್ಮಕ ಬದಲಾವಣೆ ಮಾಡಿ ರಿಸೆಟ್ ಮಾಡಲು ಈ ನಿರ್ಧಾರವನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಸಣ್ಣ ಹಾಗೂ ಉತ್ಪಾದನೆ ಆಧಾರಿಯ ತಂಡದ ಮೇಲೆ ಗಮನಹರಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಮ್ಮ ಉದ್ಯೋಗಿಗಳಿಗೆ ತಿಳಿಸಿದ್ದಾರೆ.

ಇನ್ನು ಇತರೆ ಸಂಸ್ಥೆಗಳು ತಾನು ಪಿಂಕ್ ಸ್ಲಿಪ್ ನೀಡಿದ ಉದ್ಯೋಗಿಗಳಿಗೆ ಪರಿಹಾರವನ್ನು ಒದಗಿಸಿದಂತೆ ಕ್ಲಬ್‌ಹೌಸ್ ಕೂಡಾ ಪರಿಹಾರವನ್ನು ನೀಡಿದೆ. ಸಂಸ್ಥೆಯಿಂದ ಹೊರನಡೆಯುವ ಉದ್ಯೋಗಿಗೆ ವೇತನ, ಈಕ್ವಿಟಿ ಲಭ್ಯತೆ, ಆರೋಗ್ಯ ರಕ್ಷಣೆ, ಮತ್ತು ವೃತ್ತಿ ಮತ್ತು ವಲಸೆ ಬೆಂಬಲವನ್ನು ಒದಗಿಸುತ್ತಿದೆ. ಇನ್ನು ಸಂಸ್ಥೆಯು ನೀಡಿರುವ ಲ್ಯಾಪ್‌ಟಾಪ್ ಅನ್ನು ಉದ್ಯೋಗಿಗಳು ಹಿಂದಕ್ಕೆ ನೀಡಬೇಕಾಗಿಲ್ಲ. ಹೊಸ ಉದ್ಯೋಗಕ್ಕೆ ಸಹಾಯವಾಗುವಂತೆ ತಮ್ಮ ಬಳಿಯೇ ಇಟ್ಟುಕೊಳ್ಳಬಹುದಾಗಿದೆ.
ಈ ನಿರ್ಧಾರದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕ್ಲಬ್‌ಹೌಸ್ ಸಹಸಂಸ್ಥಾಪಕರಾದ ಪೌಲ್ ಡೇವಿಸನ್ ಮತ್ತು ರೋಹನ್ ಸೇತ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. "ಸಂಸ್ಥೆಯಲ್ಲಿ ರಚನಾತ್ಮಕ ಬದಲಾವಣೆ ತರಬೇಕಾದ ಅಗತ್ಯವಿದ್ದ ಕಾರಣ, ಉದ್ಯೋಗ ಕಡಿತವನ್ನು ಮಾಡಲಾಗುತ್ತಿದೆ. ಸಣ್ಣ ಹಾಗೂ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡುವ ತಂಡದ ಅಗತ್ಯವಿದೆ. ಇಷ್ಟವಿಲ್ಲದಿದ್ದರೂ ಈ ತೀರ್ಮಾನಕ್ಕೆ ಬರಬೇಕಾಯಿತು," ಎಂದು ಸ್ಪಷ್ಪಪಡಿಸಿದ್ದಾರೆ.
ಯಾಕಾಗಿ ಈ ಉದ್ಯೋಗ ಕಡಿತ?
"ನಾವು ಇಷ್ಟವಿಲ್ಲದೆ ಈ ತೀರ್ಮಾನಕ್ಕೆ ಬಂದಿದ್ದೇವೆ. ನಾವು ಇನ್ನಷ್ಟು ವರ್ಷಗಳ ಕಾಲ ಬೆಳವಣಿಗೆ ಕಾಣಬೇಕಾಗಿದೆ. ವೆಚ್ಚವನ್ನು ಕಡಿಮೆ ಮಾಡಲು ತಕ್ಷಣದ ಒತ್ತಡ ನಮಗೆ ಇಲ್ಲ. ಆದರೆ ಸಣ್ಣ ತಂಡವು ನಮಗೆ ಗಮನ ಮತ್ತು ವೇಗವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ. ಹಾಗೆಯೇ ಈ ಸಣ್ಣ ತಂಡದಿಂದ ಉತ್ಪಾದನೆಯ ಮೇಲೆ ಹೆಚ್ಚು ಗಮನ ಹರಿಸಲು ಸಾಧ್ಯವಾಗಲಿದೆ," ಎಂದು ಸಹಸಂಸ್ಥಾಪಕರುಗಳು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಉದ್ಯೋಗ ಕಳೆದುಕೊಂಡವರಿಗೆ ಏನು ಪರಿಹಾರ?
ಸಂಸ್ಥೆಯು ಉದ್ಯೋಗ ಕಳೆದುಕೊಂಡವರಿಗೆ ಏಪ್ರಿಲ್ ತಿಂಗಳ ಸಂಪೂರ್ಣ ಅವಧಿಯ ವೇತನವನ್ನು ಉದ್ಯೋಗಿಗಳಿಗೆ ನೀಡಲಿದೆ. ಹಾಗೆಯೇ ಎಲ್ಲ ಉದ್ಯೋಗಿಗಳಿಗೆ ನಾಲ್ಕು ತಿಂಗಳ ಹೆಚ್ಚುವರಿ ವೇತನವನ್ನು ನೀಡಲಿದೆ. ಹೆಚ್ಚುವರಿಯಾಗಿ ಕ್ಲಬ್‌ಹೌಸ್ COBRA (Consolidated Omnibus Budget Reconciliation Act) ಅಡಿಯಲ್ಲಿ ಆಗಸ್ಟ್ 31, 2023ರ ಒಳಗಾಗಿ ಪರಿಹಾರ ನೀಡಲಿದೆ. ಆದ್ದರಿಂದಾಗಿ ಉದ್ಯೋಗಿಗಳಿಗೆ ಈ ಅವಧಿಯಲ್ಲಿ ಆರೋಗ್ಯ ವಿಮೆ ಇರಲಿದೆ.
ಈ ಹಿಂದೆ ವಿಟ್ಟರ್‌ಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಹುಟ್ಟಿಕೊಂಡ ಭಾರತದ ಕೂ ಸಂಸ್ಥೆಯು ಕೂಡಾ ಈಗ ಉದ್ಯೋಗ ಕಡಿತವನ್ನು ಘೋಷಣೆ ಮಾಡಿದೆ. ಒಂದು ವರ್ಷದ ಅವಧಿಯಲ್ಲಿ ಶೇಕಡ 30ರಷ್ಟು ಅಥವಾ 260 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂಬ ಮಾಹಿತಿಯನ್ನು ನೀಡಿದೆ. ಹಾಗೆಯೇ ಇನ್ನು ಹೆಚ್ಚಿನ ಉದ್ಯೋಗ ಕಡಿತವನ್ನು ಮಾಡುವ ಉದ್ದೇಶವನ್ನು ಕೂ ಸಂಸ್ಥೆ ಹೊಂದಿಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications