ವಾಲ್ಟ್ ಡಿಸ್ನಿ ಕೋ. ಈ ಹಿಂದೆ ಫೆಬ್ರವರಿಯಲ್ಲಿ ಘೋಷಣೆ ಮಾಡಿದ್ದ ಮೊದಲ ಹಂತದ ಉದ್ಯೋಗ ಕಡಿತ ಪ್ರಕ್ರಿಯೆಯನ್ನು ಆರಂಭ ಮಾಡಿದೆ. ಈ ಮೊದಲ ಹಂತದ ಉದ್ಯೋಗ ಕಡಿತದಲ್ಲಿ ಸುಮಾರು ಏಳು ಸಾವಿರ ಮಂದಿಗೆ ಸಂಸ್ಥೆಯು ಪಿಂಕ್ ಸ್ಲಿಪ್ ನೀಡಲಿದೆ. ಮುಖ್ಯವಾಗಿ 5.5 ಬಿಲಿಯನ್ ಡಾಲರ್ ಉಳಿತಾಯ ಮಾಡುವ ಪ್ರಕ್ರಿಯೆ ಇದಾಗಿದೆ ಎಂದು ಸಂಸ್ಥೆಯು ಹೇಳಿಕೊಂಡಿದೆ. ಮೊದಲ ಒಂದು ಉದ್ಯೋಗಿಗಳ ಗುಂಪಿಗೆ ಮುಂದಿನ ನಾಲ್ಕು ದಿನಗಳಲ್ಲಿ ವಜಾಗೊಳಿಸುವ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಸಂಸ್ಥೆಯ ಸಿಇಒ ಬಾಬ್ ಈಗರ್ ತಿಳಿಸಿದ್ದಾರೆ.
ಡಿಸ್ನಿಯು ಸೋಮವಾರ ತನ್ನ ಸಂಸ್ಥೆಯ ಸಿಬ್ಬಂದಿಗಳಿಗೆ ಸುತ್ತೋಲೆಯೊಂದನ್ನು ಕಳುಹಿಸಿದ್ದಾರೆ. ಇದರಲ್ಲಿ ಉದ್ಯೋಗ ಕಡಿತದ ಬಗ್ಗೆ ವಿವರಣೆ ನೀಡಿದ್ದಾರೆ. ಮುಂದಿನ ನಾಲ್ಕು ದಿನಗಳಲ್ಲಿ ಒಂದು ಗುಂಪನ್ನು ವಜಾಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ. ಹಾಗೆಯೇ ಏಪ್ರಿಲ್‌ನಲ್ಲಿ ಎರಡನೇ ಹಂತದಲ್ಲಿ ಅತೀ ದೊಡ್ಡ ಗುಂಪನ್ನು ಸಂಸ್ಥೆಯಿಂದ ಹೊರಕ್ಕೆ ಇಡಲಾಗುತ್ತದೆ. ಇದು ಸಾವಿರಾರು ಉದ್ಯೋಗಿಗಳ ಮೇಲೆ ಪ್ರಭಾವ ಬೀರಲಿದೆ ಎಂದು ಮಾಹಿತಿ ನೀಡಿದ್ದಾರೆ. ಬೇಸಿಗೆ ಆರಂಭಕ್ಕೂ ಮುನ್ನವೇ ವಜಾಗೊಳ್ಳುವ ಉದ್ಯೋಗಿಗಳಿಗೆ ನೋಟಿಸ್ ಅನ್ನು ಸಂಸ್ಥೆಯು ನೀಡಲಿದೆ.

ಮೂರನೇ ತ್ರೈಮಾಸಿಕದಲ್ಲಿ ನಷ್ಟ ಕಂಡ ಡಿಸ್ನಿ
ಸುಮಾರು 15 ವರ್ಷಗಳ ಕಾಲ ಡಿಸ್ನಿಯಲ್ಲೇ ತನ್ನ ವೃತ್ತಿ ಜೀವನವನ್ನು ಕಳೆದಿರುವ ಬಾಬ್ ಈಗರ್ ನವೆಂಬರ್‌ನಲ್ಲಿ ಮತ್ತ ಡಿಸ್ನಿಯ ಸಿಇಒ ಆಗಿದ್ದಾರೆ. ಡಿಸ್ನಿಯ ಹಣಕಾಸು ಉನ್ನತಿಗಾಗಿ ಬಾಬ್ ಹಲವಾರು ಕ್ರಮಗಳ್ನು ಕೈಗೊಂಡಿದ್ದಾರೆ. ಹಲವಾರು ಸವಾಲುಗಳ ನಡುವೆ ಸಂಸ್ಥೆಯು ಡಿಸೆಂಬರ್‌ನಲ್ಲಿ ಅಂತ್ಯವಾಗುವ ತ್ರೈಮಾಸಿಕದಲ್ಲಿ ಸುಮಾರು 1 ಬಿಲಿಯನ್ ಡಾಲರ್‌ಗೂ ಅಧಿಕ ನಷ್ಟವನ್ನು ಕಂಡಿದೆ. ಇದಾದ ಬೆನ್ನಲ್ಲೇ ಸಂಸ್ಥೆಯು ಇತರೆ ಐಟಿ ಸಂಸ್ಥೆಗಳು ನಡೆಸುತ್ತಿರುವ ಉದ್ಯೋಗ ಕಡಿತ ಹಾದಿಯನ್ನು ತುಳಿದಿದ್ದು, ಸಂಸ್ಥೆಯಲ್ಲಿ ವೆಚ್ಚ ಕಡಿಮೆ ಮಾಡಲು ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು ಎಂದು ಘೋಷಣೆ ಮಾಡಿದೆ.
ಬಾಬ್ ಈಗರ್ ನೇತೃತ್ವದಲ್ಲಿ ಸಂಸ್ಥೆಯು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಸಂಸ್ಥೆಯು ಟಿವಿ ಹಾಗೂ ಸಿನಿಯಾ ವಹಿವಾಟನ್ನು ಕೂಡಾ ನಡೆಸುತ್ತಿದೆ. ಹಾಗೆಯೇ ಈಗರ್ ಹಲವಾರು ಕ್ರಿಯಾತ್ಮಕ ವ್ಯಕ್ತಿಗಳಿಗೆ ಸಂಸ್ಥೆಯಲ್ಲಿ ಅವಕಾಶ ನೀಡಿದ್ದಾರೆ. ಟಿವಿ ವಹಿವಾಟಿನ ನೇತೃತ್ವ ವಹಿಸಿರುವ ಡಾನಾ ವಾಲ್ಡನ್, ಸಿನಿಮಾ ಸ್ಟುಡಿಯೋವನ್ನು ನಡೆಸುವ ಅಲಾನ್ ಬರ್ಗ್‌ಮ್ಯಾನ್‌ನಂತಹ ನಾಯಕತ್ವಕ್ಕೆ ಸಿಇಒ ಸ್ಥಾನದಲ್ಲಿರುವ ಬಾಬ್ ಈಗರ್ ಅವಕಾಶ ಮಾಡಿಕೊಟ್ಟಿದ್ದಾರೆ. ಇನ್ನು ಡಿಸ್ನಿ ಸ್ಟಾಕ್ ಸೋಮವಾರ 1.6ರಷ್ಟು ಏರಿಕೆಯಾಗಿ 95.62 ಯುಎಸ್ ಡಾಲರ್‌ಗೆ ವಹಿವಾಟು ಅಂತ್ಯಗೊಳಿಸಿದೆ. ಇನ್ನು ಮಂಗಳವಾರ ಈ ಸಮಯಕ್ಕೆ (10:40) ಶೇಕಡ 1.64ರಷ್ಟು ಜಿಗಿದು 95.62 ಯುಎಸ್ ಡಾಲರ್‌ಗೆ ತಲುಪಿದೆ. 2022ರಲ್ಲಿ ವಾರ್ಷಿಕವಾಗಿ ಡಿಸ್ನಿ ಶೇಕಡ 44ರಷ್ಟು ಕುಸಿತ ಕಂಡಿದೆ.
ಮೊದಲ ಹಂತದ ಉದ್ಯೋಗ ಕಡಿತ
ಮೊದಲ ಹಂತದ ಉದ್ಯೋಗ ಕಡಿತದಲ್ಲಿ ಹಿರಿಯ ಅಧಿಕಾರಿಗಳು ಕೂಡಾ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಹುಲು ಹಾಗೂ ಫ್ರೀಡಮ್ ನೆಟ್‌ವರ್ಕ್ ಅನ್ನು ನಡೆಸುವ ಅಧಿಕಾರಿಗಳು ಉದ್ಯೋಗ ಕಳೆದುಕೊಳ್ಳುವ ನಿರೀಕ್ಷೆಯಿದೆ. ಟಿವಿ ಡಿವಿಜನ್‌ಗೆ ಅವರ ಕಾರ್ಯವನ್ನು ಸೇರ್ಪಡೆ ಮಾಡಿ ವಜಾಗೊಳಿಸಲಾಗುತ್ತದೆ. ಅಕ್ಟೋಬರ್ 1, 2022ರ ಮಾಹಿತಿ ಪ್ರಕಾರ ವಿಶ್ಯದಾದ್ಯಂತ ಡಿಸ್ನಿಯಲ್ಲಿ ಸುಮಾರು 220,000 ಉದ್ಯೋಗಿಗಳು ಕಾರ್ಯನಿರ್ವಹಣೆ ಮಾಡಯತ್ತಿದ್ದಾರೆ. ಈ ಪೈಕಿ ಸುಮಾರು ಶೇಕಡ 25ರಷ್ಟು ಉದ್ಯೋಗಿಗಳು ಪಾರ್ಟ್‌ಟೈಮ್ ಅಥವಾ ಸೀಸನ್‌ಗೆ ಅನುಗುಣವಾಗಿ ಕಾರ್ಯನಿರ್ವಹಣೆ ಮಾಡುವವರು ಆಗಿದ್ದಾರೆ.
"ಯಾರು ಉದ್ಯೋಗ ಕಡಿತ ಪ್ರಕ್ರಿಯೆಗೆ ಒಳಗಾಗುವುದಿಲ್ಲವೋ ಆ ಉದ್ಯೋಗಿಗಳಿಗೆ ನಾನು ಮಾತೊಂದನ್ನು ಹೇಳಲು ಬಯಸುತ್ತೇನೆ. ಸಂಸ್ಥೆಯಲ್ಲಿ ರಚನಾತ್ಮಕ ಹಾಗೂ ಕಾರ್ಯಾತ್ಮಕ ಬದಲಾವಣೆಗನ್ನು ಮಾಡುತ್ತಾ ಸಾಗಿದಂತೆ ಮುಂದಿನ ದಿನಗಳಲ್ಲಿ ಹಲವಾರು ಸವಾಲುಗಳು ಎದುರಾಗಲಿದೆ. ಇದು ನಮ್ಮನ್ನು ಯಶಸ್ವಿಯೆಡೆಗೆ ಕೊಂಡಯ್ಯಲಿದೆ ಎಂಬುವುದು ತಿಳಿದಿರಲಿ," ಎಂದು ಡಿಸ್ನಿ ಸಿಇಒ ಬಾಬ್ ಈಗರ್ ಸುತ್ತೋಲೆಯಲ್ಲಿ ತನ್ನ ಉದ್ಯೋಗಿಗಳಿಗೆ ತಿಳಿಸಿದ್ದಾರೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications