ಪ್ರಸ್ತುತ ಉದ್ಯೋಗ ಕಡಿತ ಎಂಬುವುದು ಹೊಸ ವಿಷಯವೇನಲ್ಲ. ಸಂಸ್ಥೆ ಯಾವುದು, ಸಂಸ್ಥೆಯಲ್ಲಿ ಎಷ್ಟು ಜನರು ಇದ್ದಾರೆ, ಎಷ್ಟು ಜನರನ್ನು ವಜಾ ಮಾಡಲಾಗಿದೆ ಎಂಬ ಬಗ್ಗೆ ಪ್ರತಿದಿನ ಸುದ್ದಿಯಾಗುತ್ತಿದೆ. ಹಲವಾರು ಸಂಸ್ಥೆಗಳು ಈಗಾಗಲೇ ಉದ್ಯೋಗ ಕಡಿತವನ್ನು ಮಾಡಿದೆ. ಆದರೆ ಎಲ್ಲ ಸಂಸ್ಥೆಗಳು ನೀಡಿರುವ ಪ್ರಮುಖ ಕಾರಣ ಸಂಸ್ಥೆಯಲ್ಲಿ ವೆಚ್ಚ ಕಡಿತ ಮಾಡುವುದು ಆಗಿದೆ.
ಈ ನಡುವೆ ಸಂಸ್ಥೆಗಳು ವೆಚ್ಚ ಕಡಿತ ಮಾಡಲು ಯಾಕೆ ನಿರ್ಧಾರ ಮಾಡಿದೆ ಎಂಬ ಪ್ರಶ್ನೆ ಹುಟ್ಟುತ್ತದೆ. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಬರುವ ಉತ್ತರ ನಷ್ಟವನ್ನು ಕಡಿಮೆ ಮಾಡುವುದು ಆಗಿದೆ. ಆದರೆ ಸಂಸ್ಥೆಗಳ ಈ ನಿರ್ಧಾರದಿಂದಾಗಿ ಸಂಸ್ಥೆಯ ಲಾಭ ಹೆಚ್ಚಾಗುವುದಲ್ಲ, ಸಂಸ್ಥೆಗಳ ಮೇಲೆ ಪ್ರತಿಕೂಲ ಪ್ರಭಾವ ಉಂಟಾಗಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಟ್ವಿಟ್ಟರ್ ಮೇಲೆ ಉದ್ಯೋಗ ಕಡಿತದ ಪ್ರಭಾವ?
ಟ್ವಿಟ್ಟರ್‌ನಲ್ಲಿ ಒಟ್ಟಾಗಿ ಶೇಕಡ 80ರಷ್ಟು ಉದ್ಯೋಗ ಕಡಿತ ಮಾಡಲಾಗಿದೆ ಎಂದು ಸಂಸ್ಥೆಯ ಮಾಲೀಕ ಎಲಾನ್ ಮಸ್ಕ್ ಏಪ್ರಿಲ್‌ನಲ್ಲಿ ತಿಳಿಸಿದ್ದಾರೆ. ಟ್ವಿಟ್ಟರ್ ಅನ್ನು ಎಲಾನ್ ಮಸ್ಕ್ ಖರೀದಿ ಮಾಡಿದಾಗ ಸಂಸ್ಥೆಯಲ್ಲಿ 8000 ಮಂದಿ ಉದ್ಯೋಗಿಗಳು ಇದ್ದರು. ಆದರೆ ಉದ್ಯೋಗ ಕಡಿತದ ಬಳಿಕ 1500ಕ್ಕೆ ಇಳಿಕೆಯಾಗಿದೆ.
ನವೆಂಬರ್ 8ರಂದು ಟ್ವಿಟರ್‌ನ ಆಗಿನ ಟ್ರಸ್ಟ್ ಮತ್ತು ಸೇಫ್ಟಿ ಮುಖ್ಯಸ್ಥ ಯೋಯೆಲ್ ರಾತ್ ಸರಣಿ ಟ್ವೀಟ್‌ಗಳನ್ನು ಮಾಡಿದ್ದರು, ಟ್ವಿಟ್ಟರ್‌ನ ಉದ್ಯೋಗ ಕಡಿತ ಉತ್ಪಾದಕತೆಯ ಮೇಲೆ ಯಾವುದೇ ಪ್ರಭಾವ ಉಂಟು ಮಾಡಲಾರದು ಎಂದು ಹೇಳಿದ್ದರು. ಇದನ್ನು ಎಲಾನ್ ಮಸ್ಕ್ ರೀಟ್ವೀಟ್ ಕೂಡಾ ಮಾಡಿದ್ದರು.
ಆದರೆ ಎಲಾನ್ ಮಸ್ಕ್ ಟ್ವಿಟ್ಟರ್ ಬ್ಲ್ಯೂ ಚಂದಾದಾರಿಕೆಗೆ ಪ್ರತಿ ತಿಂಗಳಿಗೆ 8 ಡಾಲರ್ ಶುಲ್ಕವನ್ನು ವಿಧಿಸಿದರು. ಇದಾದ ಬಳಿಕ ನವೆಂಬರ್ 10ರಂದು ಯೋಯೆಲ್ ರಾತ್ ರಾಜೀನಾಮೆಯನ್ನು ನೀಡಿದ್ದಾರೆ. ಹಾಗೆಯೇ ಸಂದರ್ಶನವೊಂದರಲ್ಲಿ ಹೇಳಿಕೆಯನ್ನು ಕೂಡಾ ನೀಡಿದ್ದಾರೆ.
"ನಾನು ನಿರಂತರ ಆಧಾರದ ಮೇಲೆ ಸಾಧಕ- ಬಾಧಕಗನ್ನು ನೋಡಿದ್ದೇನೆ. ನನ್ನ ಮಿತಿಗಳು ಏನೆಂದು ನನಗೆ ತಿಳಿದಿತ್ತು. ನಾನು ರಾಜೀನಾಮೆ ನೀಡುವ ಮುನ್ನ ಪರಿಣಾಮಗಳ ಬಗ್ಗೆ ತಿಳಿದಿದ್ದೆ. ಟ್ವಿಟ್ಟರ್‌ನ ಬ್ಲ್ಯೂ ವೇರಿಫಿಕೇಷನ್ ಬಗ್ಗೆ ನಾವು ನಮ್ಮ ತಂಡ ಲಿಖಿತ ಸಲಹೆಯನ್ನು ನೀಡಿದ್ದೆವು. ಮುಂದೆ ಏನಾಗುತ್ತದೆ ಎಂದು ನಮಗೆ ತಿಳಿದಿತ್ತು. ಆದರೆ ಆಗಿದ್ದೆ ಬೇರೆ," ಎಂದು ಸಂದರ್ಶನವೊಂದರಲ್ಲಿ ಯೋಯೆಲ್ ರಾತ್ ಹೇಳಿದ್ದಾರೆ.
ನಿನ್ನೆ, ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ರಿಪಬ್ಲಿಕನ್ ಅಧ್ಯಕ್ಷೀಯ ನಾಮನಿರ್ದೇಶನಕ್ಕೆ ಸ್ಪರ್ಧಿಸುವುದಾಗಿ ಘೋಷಿಸಿ ಟ್ವಿಟ್ಟರ್ ಸ್ಪೇಸ್‌ನಲ್ಲಿ ಎಲಾನ್ ಮಸ್ಕ್ ಜೊತೆ ನೇರ ಸಂವಾದದಲ್ಲಿದ್ದಾಗ, ಕೆಲವು ದೋಷಗಳಿಂದಾಗಿ ಸೈಟ್ ಅನೇಕ ಬಾರಿ ಕ್ರ್ಯಾಶ್ ಆಗಿತ್ತು. ಟ್ವಿಟ್ಟರ್ ಪೋಸ್ಟ್ ಮಸ್ಕ್ ಸ್ವಾಧೀನಪಡಿಸಿಕೊಂಡಾಗ ಅನೇಕ ಬಾರಿ ಸೈಟ್ ಕ್ರ್ಯಾಷ್ ಆಗಿದೆ. ಪ್ರಮುಖವಾಗಿ ಉದ್ಯೋಗ ಕಡಿತದ ಬಳಿಕ ಹಲವಾರು ಸಮಸ್ಯೆಗಳು ಕಂಡು ಬಂದಿದೆ.
ಮೆಟಾದಲ್ಲಿ ಉದ್ಯೋಗ ಕಡಿತ?
ಈ ಹಿಂದೆ ಘೋಷಿಸಿದ ಉದ್ಯೋಗ ಕಡಿತದ ಅಂತಿಮ ಸುತ್ತು ನಡೆಯಲಿದೆ ಎಂದು ಮೆಟಾ ಉದ್ಯೋಗಿಗಳಿಗೆ ತಿಳಿಸಲಾಗಿದೆ. ಕಂಪನಿಯು 10,000 ಹುದ್ದೆಗಳನ್ನು ತೆಗೆದುಹಾಕುವುದಾಗಿ ಮಾರ್ಚ್‌ನಲ್ಲಿ ಮಾರ್ಕ್ ಜುಕರ್‌ಬರ್ಗ್ ಘೋಷಿಸಿದ್ದರು. ಆದರೆ ಇದಾದ ಬಳಿಕ ಸಂಸ್ಥೆಯ ರಚನೆಯ ಬಗ್ಗೆ ಇನ್ನೂ ಕೂಡಾ ಹಲವಾರು ಗೊಂದಲಗಳು ಇದೆ.
ಉದ್ಯೋಗ ಕಡಿತ ವಿಚಾರದಲ್ಲಿ ಸಂಸ್ಥೆಗಳು ಮಾಡಿದ ತಪ್ಪು
ಉದ್ಯೋಗ ಕಡಿತದ ಸಾಂಪ್ರದಾಯಿಕ ಕಲ್ಪನೆಯು ಹಣವನ್ನು ಉಳಿಸಲು ಆರ್ಥಿಕ ಹಿಂಜರಿತದ ಸಮಯದಲ್ಲಿ ಉದ್ಯೋಗದಾತರ ಕೊನೆಯ ಉಪಾಯವಾಗಿದೆ. ಪ್ರಸ್ತುತ ಉದ್ಯೋಗ ಕಡಿತ ಮಾಡುವುದರಿಂದ ಸಂಸ್ಥೆಗಳು ಸುಲಭವಾಗಿ ನಷ್ಟದಿಂದ ಹೊರಬರಬಹುದು ಎಂಬ ಕಲ್ಪನೆಯನ್ನು ಸಂಸ್ಥೆಗಳು ಹೊಂದಿದೆ. ಆದರೆ ಉದ್ಯೋಗಿಗಳನ್ನು ಸರಿಯಾಗಿ ನೋಡಿಕೊಳ್ಳದೆ ಇರುವುದು ಕಂಪನಿಗಳ ಸ್ವಂತ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ.
ಉದ್ಯೋಗ ಕಡಿತದಿಂದಾಗಿ ನಂಬಿಕೆಗೆ ಏಟು: ಒಂದು ಸಂಶೋಧನೆಗೆ ಬಂದ ಪ್ರತಿಕ್ರಿಯೆಯಲ್ಲಿ ಶೇಕಡ 85ರಷ್ಟು ಪ್ರತಿಕ್ರಿಯೆ ನೀಡಿದವರು ಉದ್ಯೋಗ ಕಡಿತದಿಂದಾಗಿ ಸಂಸ್ಥೆಯ ಮೇಲಿನ ನಂಬಿಕೆ ಹೋಗುತ್ತದೆ ಎಂದು ಹೇಳಿದ್ದಾರೆ.
ಜನರ ಆರೋಗ್ಯ ಮತ್ತು ಹಣಕಾಸುಗಳ ಮೇಲೆ ದೀರ್ಘಾವಧಿಯ ಪ್ರಭಾವ: ಉದ್ಯೋಗ ಕಳೆದುಕೊಂಡು ಅತ್ಯಂತ ಒತ್ತಡದ ಜೀವನವು ಜನರ ಆರೋಗ್ಯದ ಮೇಲೆ ಹಣಕಾಸು ಸ್ಥಿತಿಯ ಮೇಲೆ ಪ್ರಭಾವ ಉಂಟು ಮಾಡಿದೆ. ಹೆಚ್ಚಿನ ಜನರು ಉದ್ಯೋಗ ಕಳೆದುಕೊಂಡ ಚಿಂತೆಯಲ್ಲಿಯೇ ಇದ್ದಾರೆ ಎಂದು ಸಂಶೋಧನೆಯು ಹೇಳಿದೆ.
ಕಂಪನಿಗಳ ಮೇಲೆ ಉದ್ಯೋಗ ಕಡಿತ ಪ್ರಭಾವ: ಹಾರ್ವರ್ಡ್ ಬ್ಯುಸಿನೆಸ್ ರಿವ್ಯೂನಲ್ಲಿ ಉದ್ಯೋಗ ಕಡಿತವು ಕಂಪನಿಗಳ ಮೇಲೆ ಪ್ರಭಾವ ಉಂಟು ಮಾಡಿದೆ ಎಂಬುವುದನ್ನು ಉಲ್ಲೇಖ ಮಾಡಿದೆ. ಉದ್ಯೋಗ ಕಡಿತ ಮಾಡಿದ ಬಹುತೇಕ ಸಂಸ್ಥೆಗಳು ಹೆಚ್ಚಿನ ಲಾಭವನ್ನು ಕಂಡಿಲ್ಲ ಎಂದು ಈ ಸಂಶೋಧನೆಯು ಹೇಳಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications