ಇತ್ತೀಚೆಗೆ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡುತ್ತಿದೆ. ಟ್ವಿಟ್ಟರ್‌ನಿಂದ ಆರಂಭವಾದ ಈ ಉದ್ಯೋಗ ಕಡಿತ ಸೀಸನ್ ದೇಶದ ಟೆಕ್ ದೈತ್ಯ ಗೂಗಲ್ ಕೂಡಾ ಉದ್ಯೋಗ ಕಡಿತಕ್ಕೆ ಧುಮುಕಿದೆ. ಇತ್ತೀಚೆಗೆ ಗೂಗಲ್ ಸುಮಾರು 12 ಸಾವಿರ ಮಂದಿಯನ್ನು ಕೆಲಸದಿಂದ ತೆಗೆದುಹಾಕಿದೆ. ಈ ನಡುವೆಯೇ ಅಭ್ಯರ್ಥಿಯನ್ನು ಸಂದರ್ಶನ ಮಾಡುತ್ತಿದ್ದ ಗೂಗಲ್ ಎಚ್‌ಆರ್ ಕೂಡಾ ವಜಾ ಆಗಿದ್ದಾರೆ.
ಕೆಲವು ಉದ್ಯೋಗಿಗಳನ್ನು ತಮ್ಮನ್ನು ವಜಾಗೊಳಿಸಿದ ಪ್ರಕ್ರಿಯೆಯೇ ಆಶ್ಚರ್ಯ ಉಂಟು ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ತಾವು ಉದ್ಯೋಗವನ್ನು ಕಳೆದುಕೊಳ್ಳುತ್ತೇವೆ ನಾವು ಅಂದುಕೊಂಡೇ ಇರಲಿಲ್ಲ ಎಂದಿದ್ದಾರೆ. ಅಧಿಕೃತ ಖಾತೆಯನ್ನು ತೆರೆಯಲು ಸಾಧ್ಯವಾಗದ ಸಂದರ್ಭದಲ್ಲೇ ನನ್ನನ್ನು ಉದ್ಯೋಗದಿಂದ ವಜಾ ಮಾಡಲಾಗಿದೆ ಎಂಬ ಮಾಹಿತಿ ನನಗೆ ಲಭ್ಯವಾಗಿದೆ ಎಂದು ಉದ್ಯೋಗ ಕಳೆದುಕೊಂಡ ವ್ಯಕ್ತಿಯೊಬ್ಬರು ಹೇಳಿದ್ದಾರೆ.
ಅಭ್ಯರ್ಥಿಯೊಂದಿಗೆ ಸಂದರ್ಶನ ಮಾಡುತ್ತಿರುವಾಗ ಮಧ್ಯದಲ್ಲೇ ಉದ್ಯೋಗಿಯೊಬ್ಬರಿಗೆ ತಾನು ಕೆಲಸದಿಂದ ವಜಾಗೊಂಡಿರುವ ವಿಚಾರ ಲಭ್ಯವಾಗಿದೆ. ದಿಡೀರ್ ಆಗಿ ಕರೆ ಕಟ್ ಆಯಿತು. ಸಂಸ್ಥೆಯ ಆಂತರಿಕ ವೆಬ್‌ಸೈಟ್ ಅನ್ನು ನಾನು ಎಂದಿನಂತೆ ಲಾಗಿನ್ ಆಗಲು ಹೋದಾಗ ಲಾಗಿನ್ ಆಗಲು ಸಾಧ್ಯವಾಗಲಿಲ್ಲ. ಕರೆಯು ಕಡಿತ, ವೆಬ್‌ಸೈಟ್‌ಗೂ ಲಾಗಿನ್ ಆಗಲು ಸಾಧ್ಯವಾಗದ ಬಳಿಕ ನನಗೆ ಮಾಹಿತಿ ಲಭಿಸಿದೆ ಎಂದಿದ್ದಾರೆ.

ಈ ಬಗ್ಗೆ ಗೂಗಲ್ ಎಚ್‌ಆರ್ ಆಗಿದ್ದ ಡ್ಯಾನ್ ಲ್ಯಾನ್‌ಗ್ಯಾನ್ ರಿಯಾನ್, ಲಿಂಕ್ಡಿಂನ್‌ನಲ್ಲಿ ತನ್ನ ಉದ್ಯೋಗದ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ. ಗೂಗಲ್‌ನಿಂದ ಒಂದು ವರ್ಷದ ಹಿಂದೆ ಉದ್ಯೋಗವಕಾಶ ಲಭ್ಯವಾದಾಗ ನಾನು ಅತೀ ಸಂತೋಷಪಟ್ಟಿದ್ದೆ. ಆದರೆ ಒಂದು ವರ್ಷದಲ್ಲೇ ನನ್ನನ್ನು ಕೆಲಸದಿಂದ ತೆಗೆಯಲಾಗಿದೆ. ನಾನು ಇದರ ಊಹೆ ಕೂಡಾ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ.
ಗೂಗಲ್‌ನ ಮಾಜಿ ಎಚ್‌ಆರ್ ಹೇಳಿದ್ದೇನು?
ದುರದೃಷ್ಟವಶಾತ್ ನಾನು ಗೂಗಲ್ ಉದ್ಯೋಗ ಕಡಿತ ಪ್ರಕ್ರಿಯೆಯ ಪರಿಣಾಮಕ್ಕೆ ಒಳಗಾದ ವ್ಯಕ್ತಿಯಾಗಿದ್ದೇನೆ. ಕೇವಲ ಒಂದು ವರ್ಷದ ಹಿಂದಷ್ಟೇ ನಾನು ಸಂಸ್ಥೆಗೆ ಸೇರ್ಪಡೆಯಾಗಿದ್ದೇನೆ. ನನಗೆ ಉದ್ಯೋಗ ಲಭಿಸಿದೆ ಎಂದು ಸಂಸ್ಥೆಯು ಮಾಹಿತಿ ನೀಡುವಾಗ ನಾನು ನನ್ನ ಸಾಕು ನಾಯಿಯನ್ನು ವಾಕಿಂಗ್ ಕರೆದೊಯ್ದಿದ್ದೆ. ನಾನು ಆ ಸಂದರ್ಭದಲ್ಲಿ ಅತೀ ಸಂತೋಷಕ್ಕೆ ಒಳಗಾದೆ ಎಂದು ಹೇಳಿದ್ದಾರೆ.
ಆದರೆ 16 ತಿಂಗಳಲ್ಲಿ ನಾನು ಉದ್ಯೋಗವನ್ನು ಕಳೆದುಕೊಳ್ಳುತ್ತೇನೆ ಅಂದುಕೊಂಡಿರಲಿಲ್ಲ. ನಾನು ಸಂದರ್ಶನ ಮಾಡುತ್ತಾ ಕರೆಯಲ್ಲಿ ಇರುವಾಗಲೇ ನನ್ನ ಸಿಸ್ಟಮ್ ಅನ್ನು ಬ್ಲಾಕ್ ಮಾಡಲಾಗಿದೆ. ನನ್ನ ಕಾಂಟ್ರಾಕ್ಟ್ ಅನ್ನು ಇತ್ತೀಚೆಗೆ ಒಂದು ವರ್ಷಕ್ಕೆ ವಿಸ್ತರಣೆ ಮಾಡಲಾಗಿತ್ತು. ನನ್ನನ್ನು ಕ್ಲೌಡ್ ಸೇಲ್ಸ್ ರಿಕ್ರೂಟ್‌ಮೆಂಟ್ ಟೀಮ್‌ಗೆ ಸೇರ್ಪಡೆ ಮಾಡಲಾಗಿತ್ತು. ಹಾಗೆಯೇ ಒಂದು ವಾರದ ಹಿಂದಷ್ಟೇ ನನ್ನ ವೇತನ ಏರಿಕೆಯ ಬಗ್ಗೆ ಮಾತುಕತೆ ನಡೆದಿತ್ತು. ಆದರೆ ಈಗ ದಿಢೀರ್ ಕೆಲಸದಿಂದ ತೆಗೆದು ಹಾಕಲಾಗಿದೆ ತಿಳಿಸಿದ್ದಾರೆ.
ಆದರೆ ನಾನು ಸಂಸ್ಥೆಯ ಎಲ್ಲ ಕಾರ್ಯಗಳಿಗೆ ಋಣಿಯಾಗಿದ್ದೇನೆ. ಎಲ್ಲ ಅದ್ಭುತ ಜನರಿಗೆ ನಾನು ಅಭಾರಿ. ಅವರೊಂದಿಗೆ ಕೆಲಸ ಮಾಡಿರುವುದು ನನ್ನ ಹೆಮ್ಮೆ. ನನ್ನ ಮ್ಯಾನೆಜರ್‌ಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಈಗ ಬೇರೆಡೆ ಕೆಲಸದ ಹುಡುಕಾಟದಲ್ಲಿದ್ದೇನೆ ಮಾಹಿತಿ ನೀಡಿದ್ದಾರೆ.
More From GoodReturns

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ



Click it and Unblock the Notifications