ಎರಡು ಹಂತಗಳಲ್ಲಿ ಒಟ್ಟಾಗಿ 21 ಸಾವಿರ ಮಂದಿಯನ್ನು ಉದ್ಯೋಗದಿಂದ ತೆಗೆದು ಹಾಕಿದ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ಪೋಷಕ ಸಂಸ್ಥೆಯಾದ ಮೆಟಾ ಬುಧವಾರ ಮತ್ತೊಂದು ಹಂತದ ಉದ್ಯೋಗ ಕಡಿತವನ್ನು ಘೋಷಣೆ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ. ಈ ಹಿಂದೆ ಮೆಟಾ ಸಂಸ್ಥೆಯಲ್ಲಿ ವೆಚ್ಚವನ್ನು ಕಡಿತ ಮಾಡುವ ನಿಟ್ಟಿನಲ್ಲಿ ಉದ್ಯೋಗ ಕಡಿತವನ್ನು ಮಾಡಲಾಗಿದೆ.
ಮೆಟಾ ಸಂಸ್ಥೆಯ ಸಿಇಒ ಮಾರ್ಕ್ ಜುಕರ್‌ಬರ್ಗ್‌ರ ಸಂಸ್ಥೆಯಲ್ಲಿನ ದಕ್ಷತೆ ಹೆಚ್ಚಿಸಬೇಕೆಂಬ ಉದ್ದೇಶ ಮತ್ತು ಸಂಸ್ಥೆಯಲ್ಲಿ ರಚನಾತ್ಮಕ ಬದಲಾವಣೆಯನ್ನು ಮಾಡುವ ನಿಟ್ಟಿನಲ್ಲಿ ಈ ಉದ್ಯೋಗ ಕಡಿತವನ್ನು ಮಾಡಲಾಗುತ್ತಿದೆ. ಈ ನಡುವೆ ವಾಲ್ಟ್ ಡಿಸ್ನಿ ಕೂಡಾ ಉದ್ಯೋಗ ಕಡಿತವನ್ನು ಮಾಡುವ ಘೋಷಣೆಯನ್ನು ಮಾಡಿದೆ. ಮುಂದಿನ ವಾರದಲ್ಲಿ ಈ ಉದ್ಯೋಗ ಕಡಿತವನ್ನು ಮಾಡುವ ನಿರ್ಧಾರ ಮಾಡಲಾಗಿದೆ ಎಂದು ವರದಿಯು ಉಲ್ಲೇಖಿಸಿದೆ.

ಡಿಸ್ನಿಯಲ್ಲಿಯೂ ಉದ್ಯೋಗ ಕಡಿತ
ಡಿಸ್ನಿ ಸಂಸ್ಥೆಯಲ್ಲಿ ಈ ಹಿಂದೆಯೂ ಕೂಡಾ ಉದ್ಯೋಗ ಕಡಿತ ಮಾಡಲಾಗಿದೆ. ಇದು ಎರಡನೇ ಹಂತದ ಉದ್ಯೋಗ ಕಡಿತವಾಗಿದೆ. ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಡಿಸ್ನಿ ಸುಮಾರು 7 ಸಾವಿರ ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕಿದೆ. ಅದಾದ ಬಳಿಕ ಈಗ ಮತ್ತೆ ಮುಂದಿನ ವಾರದಲ್ಲಿ ಉದ್ಯೋಗ ಕಡಿತ ಮಾಡುವ ನಿರ್ಧಾರವವನ್ನು ಡಿಸ್ನಿ ಮಾಡಿಕೊಂಡಿದೆ.
ಮೆಟಾ ತನ್ನ ಸಂಸ್ಥೆಯಲ್ಲಿ ಉದ್ಯೋಗ ಕಡಿತದ ಬಗ್ಗೆ ಈಗಾಗಲೇ ಮ್ಯಾನೇಜರ್‌ಗಳಿಗೆ ಅಧಿಸೂಚನೆಯನ್ನು ನೀಡಿದೆ. ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಂ, ರಿಯಾಲಿಟಿ ಲ್ಯಾಬ್ಸ್ ಮೇಲೆ ಕೂಡಾ ಈ ಉದ್ಯೋಗ ಕಡಿತದ ಪ್ರಭಾವ ಉಂಟಾಗಲಿದೆ. ಮೆಟಾ ಇತ್ತೀಚೆಗೆ ಮಾಡಿದ ಉದ್ಯೋಗ ಕಡಿತವು ಎರಡನೇ ಅತೀ ದೊಡ್ಡ ಉದ್ಯೋಗ ಕಡಿತವಾಗಿದೆ. ನವೆಂಬರ್ 2022ರಲ್ಲಿ 11 ಸಾವಿರ ಮಂದಿಯನ್ನು ಮತ್ತು ಮಾರ್ಚ್ 2023ರಲ್ಲಿ 10 ಸಾವಿರ ಮಂದಿಯನ್ನು ಸೇರಿದಂತೆ ಒಟ್ಟಾಗಿ 21 ಸಾವಿರ ಮಂದಿಯನ್ನು ಮೆಟಾ ಉದ್ಯೋಗದಿಂದ ತೆಗೆದುಹಾಕಿದೆ.
ಮೆಟಾಗೂ ಮೊದಲ ಸ್ಥಾನದಲ್ಲಿ ಅಮೆಜಾನ್ ಇದೆ. ಅಂದರೆ ವಿಶ್ವದಲ್ಲೇ ಅತೀ ಅಧಿಕ ಉದ್ಯೋಗ ಕಡಿತವನ್ನು ಅಮೆಜಾನ್ ಮಾಡುತ್ತದೆ. ಅಮೆಜಾನ್ 27 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ಆರ್ಥಿಕ ಅಸ್ಥಿರತೆಯ ಸಂದರ್ಭದಲ್ಲಿ ವೆಚ್ಚ ಕಡಿತವನ್ನು ಮಾಡುವ ನಿಟ್ಟಿನಲ್ಲಿ ಮೆಟಾ ಸಂಸ್ಥೆಯು ಈ ಹಿಂದೆ ಉದ್ಯೋಗ ಕಡಿತವನ್ನು ಮಾಡಿದೆ. ಈಗ ಸಂಸ್ಥೆಯಲ್ಲಿ ರಚನಾತ್ಮಕ ಬದಲಾವಣೆಯನ್ನು ಮಾಡುವ ನಿಟ್ಟಿನಲ್ಲಿ ಉದ್ಯೋಗ ಕಡಿತವನ್ನು ಮಾಡಿದೆ.
ಎಷ್ಟು ಸಂಸ್ಥೆಗಳು ಉದ್ಯೋಗ ಕಡಿತ ಮಾಡಿದೆ?
layoffs.fyi ರಲ್ಲಿ ಉಲ್ಲೇಖ ಮಾಡಿದ ಡೇಟಾ ಪ್ರಕಾರ ಈ ವರ್ಷದಲ್ಲಿ ಈವರೆಗೆ ಒಟ್ಟಾಗಿ 594 ಟೆಕ್ ಸಂಸ್ಥೆಗಳು 1,71,308 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. 2022ರಲ್ಲಿ 1,052 ಟೆಕ್ ಸಂಸ್ಥೆಗಳು ಒಟ್ಟಾಗಿ 1,61,411 ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. ಇದಕ್ಕೂ ಮುಂದಿನ ಉದ್ಯೋಗ ಕಡಿತದ ಮೆಟಾ ಸಂಸ್ಥೆಯಲ್ಲಿನ ಉದ್ಯೋಗ ಕಡಿತದ ಬಗ್ಗೆ ಸಂಸ್ಥೆಯ ಸಿಇಒ ಮಾರ್ಕ್ ಜುಕರ್‌ಬರ್ಗ್ ಸ್ಪಷ್ಟಣೆಯನ್ನು ನೀಡಿದ್ದರು.
ಕಂಪನಿಯಿಂದ ನಿರ್ಗಮಿಸಿದ ನಂತರ ಉದ್ಯೋಗಿಗಳಿಗೆ ಏನಾಗುತ್ತದೆ ಎಂಬ ಬಗ್ಗೆ ಜುಕರ್‌ಬರ್ಗ್ ಮಾಹಿತಿ ನೀಡಿದ್ದರು. ಉದ್ಯೋಗ ಕಡಿತದ ಪ್ರಭಾವಕ್ಕೆ ಒಳಗಾಗುವವರಿಗೆ 16 ವಾರಗಳ ವೇತನವನ್ನು ಮೆಟಾ ನೀಡುತ್ತದೆ. ಹಾಗೆಯೇ ಪ್ರತಿ ವರ್ಷಕ್ಕೆ ಎರಡು ಹೆಚ್ಚುವರಿ ವಾರಗಳು, ಪೇಡ್ ಟೈಮ್ ಆಫ್, ಆರೋಗ್ಯ ವಿಮೆ, ವೃತ್ತಿ ಸೇವೆಗಳು ಮತ್ತು ವಲಸೆ ಬೆಂಬಲವನ್ನು ನೀಡುತ್ತದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications