ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಆರಂಭವಾದ ಉದ್ಯೋಗ ಕಡಿತವು ಇನ್ನು ಕೂಡಾ ಕೊನೆಯಾಗಿಲ್ಲ. 2022ರಲ್ಲಿಯೂ ಹಲವಾರು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. 2023ರಲ್ಲಿಯೂ ಸಾವಿರಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ.
2023 ರಲ್ಲಿ 2.61 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಜಾಗತಿಕವಾಗಿ ಉದ್ಯೋಗಗಳನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ ಲೇಆಫ್-ಫೈ ಬಹಿರಂಗಪಡಿಸಿದೆ. ವಜಾಗೊಂಡವರ ಪೈಕಿ ಶೇಕಡ 70 ರಷ್ಟು ಮಂದಿ ಯುನೈಟೆಡ್ ಸ್ಟೇಟ್ಸ್ (ಯುಎಸ್) ಗೆ ಸೇರಿದವರಾಗಿದ್ದಾರೆ. ಇನ್ನು ನಂತರದ ಸ್ಥಾನದಲ್ಲಿ ಭಾರತ, ಜರ್ಮನಿ, ಸ್ವೀಡನ್ ಮತ್ತು ಯುನೈಟೆಡ್ ಕಿಂಗ್‌ಡಮ್ (ಯುಕೆ) ಇದೆ.

ದೇಶವಾರು ಪಟ್ಟಿ ಇಲ್ಲಿದೆ
ಯುನೈಟೆಡ್ ಸ್ಟೇಟ್ಸ್: 179.2 ಸಾವಿರ
ಭಾರತ: 16.4 ಸಾವಿರ
ಜರ್ಮನಿ: 13.1 ಸಾವಿರ
ಸ್ವೀಡನ್: 11.1 ಸಾವಿರ
ಯುನೈಟೆಡ್ ಕಿಂಗ್ಡಮ್: 9.4 ಸಾವಿರ
ಕೃತಕ ಬುದ್ಧಿಮತ್ತೆ ಪರಿಣಾಮ: 30,000 ಉದ್ಯೋಗಿಗಳನ್ನು ತೆಗೆಯಲು ಮುಂದಾದ ಗೂಗಲ್?
ಎಜುಕೇಷನ್ ಟೆಕ್ನಾಲಜಿ ವಲಯದಲ್ಲಿ ಸುಮಾರು 4,700 ವ್ಯಕ್ತಿಗಳನ್ನು ವಜಾಗೊಳಿಸಲಾಗಿದೆ. ನಂತರ ಆಹಾರ (2,765), ಹಣಕಾಸು (2,141), ರಿಟೇಲ್ (1,772), ಗ್ರಾಹಕ (1,488), ಮತ್ತು ಆರೋಗ್ಯ (991) ವಲಯಗಳಲ್ಲಿ ಉದ್ಯೋಗಗಳನ್ನು ವಜಾಗೊಳಿಸಲಾಗಿದೆ.
ಭಾರತೀಯ ಕಂಪನಿಗಳು ಈ ವರ್ಷ ಸುಮಾರು 18,000 ಉದ್ಯೋಗಿಗಳನ್ನು ವಜಾಗೊಳಿಸಿವೆ. ಭಾರತದಲ್ಲಿ 2023 ರಲ್ಲಿ ಕೆಲವು ದೊಡ್ಡ ವಜಾ ಪ್ರಕ್ರಿಯೆಯ ವಿವರ ಇಲ್ಲಿದೆ.
ಉಡಾನ್: ಬಿ2ಬಿ ಇ-ಕಾಮರ್ಸ್ ಯುನಿಕಾರ್ನ್ ಉಡಾನ್ ಡಿಸೆಂಬರ್ 2023 ರಲ್ಲಿ ಸುಮಾರು 150 ಉದ್ಯೋಗಿಗಳನ್ನು ಅಥವಾ ಅದರ ಸಂಪೂರ್ಣ ಉದ್ಯೋಗಿಗಳ ಶೇಕಡ 10 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ಮನಿ ಕಂಟ್ರೋಲ್ ವರದಿಯ ಪ್ರಕಾರ ಕಂಪನಿಯು ಕಾರ್ಯನಿರ್ವಹಿಸುವ ರೀತಿಯಲ್ಲಿ ಮೂಲಭೂತ ಬದಲಾವಣೆಯ ಕಾರಣದಿಂದ ಸಿಬ್ಬಂದಿಗಳನ್ನು ವಜಾಗೊಳಿಸಿದೆ.
ಪೇಟಿಎಂ: ಒನ್ 97 ಕಮ್ಯುನಿಕೇಷನ್ಸ್‌ನ ಪೇಟಿಎಂ ತನ್ನ ಕಾರ್ಯಾಚರಣೆಗಳನ್ನು ಸುಗಮಗೊಳಿಸುವ ಮತ್ತು ವೆಚ್ಚಗಳನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಡಿಸೆಂಬರ್ 2023 ರಲ್ಲಿ 1,000 ಕ್ಕೂ ಹೆಚ್ಚು ಜನರನ್ನು ವಜಾಗೊಳಿಸಿದೆ.
ಅಕ್ಸೆಂಚರ್: ಆಕ್ಸೆಂಚರ್ ಪಿಎಲ್‌ಸಿ ತನ್ನ ಸುಮಾರು 350,000 ಉದ್ಯೋಗಿಗಳಲ್ಲಿ ಕನಿಷ್ಠ 7,000 ಉದ್ಯೋಗಿಗಳನ್ನು ನವೆಂಬರ್ 2023 ರಲ್ಲಿ ಭಾರತದಲ್ಲಿ ವಜಾಗೊಳಿಸಿದೆ. ವಿಶ್ವದ ಅತಿದೊಡ್ಡ ತಂತ್ರಜ್ಞಾನ ಸೇವಾ ಕಂಪನಿಯಾದ ಇದು ಮುಂದಿನ 18 ತಿಂಗಳುಗಳಲ್ಲಿ 19,000 ಜನರನ್ನು ಅಥವಾ ಅದರ ಜಾಗತಿಕ ಉದ್ಯೋಗಿಗಳಲ್ಲಿ ಶೇಕಡ 2.5ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ.
ಬೈಜುಸ್: ಎಜುಕೇಷನ್ ಟೆಕ್ನಾಲಜಿ ದೈತ್ಯ ಬಹು ಸುತ್ತುಗಳಲ್ಲಿ 3,500-4,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಅಕ್ಟೋಬರ್ 2023 ರಲ್ಲಿ ಅದರ ಕಂಟೆಂಟ್ ಮತ್ತು ಮಾರ್ಕೆಟಿಂಗ್ ತಂಡಗಳಿಂದ ಸುಮಾರು 600 ಉದ್ಯೋಗಿಗಳನ್ನು ವಜಾಗೊಳಿಸಿದೆ.
ಅಮೆಜಾನ್ ಇಂಡಿಯಾ: ಅಮೆಜಾನ್ ಮೇ 2023 ರಲ್ಲಿ ಹಲವಾರು ವ್ಯವಹಾರಗಳು ಮತ್ತು ಕಾರ್ಯಾಚರಣೆಗಳಲ್ಲಿ ಭಾರತದಲ್ಲಿ ಸುಮಾರು 500 ಉದ್ಯೋಗಿಗಳನ್ನು ವಜಾಗೊಳಿಸಿದೆ.
ವಿಶ್ವದಾದ್ಯಂತ ಉದ್ಯೋಗ ಕಡಿತ
2023 ರ ವರ್ಷವು ಜಾಗತಿಕವಾಗಿ ಪ್ರಮುಖ ಕಾರ್ಪೊರೇಶನ್‌ಗಳಾದ ಲಿಂಕ್ಡ್‌ಇನ್, ಅಮೆಜಾನ್, ಗೂಗಲ್, ಮೈಕ್ರೋಸಾಫ್ಟ್ ಮತ್ತು ಮೆಟಾದಲ್ಲಿ ಉದ್ಯೋಗಿಗಳಿಗೆ ಅಸಮಾಧಾನವನ್ನುಂಟುಮಾಡಿದೆ. ಒಟ್ಟಾಗಿ ವಿಶ್ವದಾದ್ಯಂತ ಸುಮಾರು 2 ಲಕ್ಷ ಜನರನ್ನು ವಜಾಗೊಳಿಸಿದೆ.
ಹಿಂದಿನ ಎರಡು ವರ್ಷಗಳಲ್ಲಿ, ಈ ಕಂಪನಿಗಳು ಸುಮಾರು 4.25 ಮಿಲಿಯನ್ ಕಾರ್ಮಿಕರನ್ನು ವಜಾಗೊಳಿಸಿವೆ. 2020 ರಿಂದ 2023 ರವರೆಗೆ, ವಿಶ್ವಾದ್ಯಂತ ಸುಮಾರು 5.2 ಲಕ್ಷ ವ್ಯಕ್ತಿಗಳನ್ನು ವಜಾಗೊಳಿಸಲಾಗಿದೆ. ಯುನೈಟೆಡ್ ಸ್ಟೇಟ್ಸ್ ಶೇಕಡ 66.6 ರಷ್ಟು ವಜಾಗೊಳಿಸಿದೆ, ಭಾರತವು ಶೇಕಡ 9.1ರಷ್ಟು ನೆದರ್‌ಲ್ಯಾಂಡ್ ಶೇಕಡ 3.4 ರಷ್ಟು ಉದ್ಯೋಗ ಕಡಿತ ಮಾಡಿದೆ.
ಲಿಂಕ್ಡ್‌ಇನ್, ಸಾಮಾನ್ಯವಾಗಿ, ಉದ್ಯೋಗಗಳನ್ನು ಹುಡುಕುವಲ್ಲಿ ಜನರಿಗೆ ಸಹಾಯ ಮಾಡುತ್ತದೆ. ಆದರೆ ಇದು ಉದ್ಯೋಗಿಗಳನ್ನು ವಜಾಗೊಳಿಸುವ ನಿಗಮಗಳ ಪಟ್ಟಿಯಲ್ಲಿದೆ. ಲಿಂಕ್ಡ್‌ಇನ್ ಈ ವರ್ಷದ ಮೇ ತಿಂಗಳಲ್ಲಿ 716 ಉದ್ಯೋಗಗಳನ್ನು ಕಡಿತಗೊಳಿಸಿದೆ.
More From GoodReturns

Lunar Eclipse 2026: ವರ್ಷದ ಮೊದಲ ಚಂದ್ರಗ್ರಣ...ಯಾವ ರಾಶಿಯವರಿಗೆ ಶುಭ, ಯಾವ ರಾಶಿಯವರಿಗೆ ಎಚ್ಚರಿಕೆ? ತಿಳಿಯಿರಿ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications