ಇತ್ತೀಚೆಗೆ ನಡೆದಿರುವ ಒಡಿಶಾ ರೈಲು ಅಪಘಾತವು ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಅಪಘಾತದಲ್ಲಿ ಹಲವಾರು ಮಂದಿ ಸಾವನ್ನಪ್ಪಿದ್ದಾರೆ, ಹಾಗೆಯೇ ಹಲವಾರು ಮಂದಿ ಗಾಯಗೊಂಡಿದ್ದಾರೆ. ಸಂತ್ರಸ್ತರಿಗೆ ಸಹಾಯ ಮಾಡಲು ಈಗಾಗಲೇ ಹಲವಾರು ಸಂಸ್ಥೆಗಳು ಮುಂದಾಗಿದೆ. ಈಗಾಗಲೇ ನಿಯಮ ಸಡಿಲಿಕೆ ಮಾಡಿದ್ದ ಎಲ್‌ಐಸಿ ಈಗ ರೈಲು ನಿಲ್ದಾಣಗಳಲ್ಲಿ ಸಹಾಯ ಕೇಂದ್ರ ತೆರೆಯಲು ಸಜ್ಜಾಗಿದೆ.
ಭಾರತದ ಅತೀ ದೊಡ್ಡ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಒಡಿಶಾ ರೈಲು ಅಪಘಾತದ ಸಂತ್ರಸ್ತರ ಕುಟುಂಬಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಸಹಾಯ ಕೇಂದ್ರ ತೆರೆಯಲು ಮುಂದಾಗಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ಹೌರಾ, ಶಾಲಿಮಾರ್, ಖರಗ್‌ಪುರ ಮತ್ತು ಮೇದಿನಿಪುರ್ ಸೇರಿದಂತೆ ಹಲವಾರು ರೈಲು ನಿಲ್ದಾಣಗಳಲ್ಲಿ ಎಲ್‌ಐಸಿಯು ಸಹಾಯ ಕೇಂದ್ರವನ್ನು ತೆರೆಯಲು ನಿರ್ಧಾರ ಮಾಡಿದೆ. ಮಾಹಿತಿ ಪ್ರಕಾರ ಈ ಸಹಾಯ ಕೇಂದ್ರವನ್ನು ಬುಧವಾರ ಆರಂಭ ಮಾಡಲಾಗುತ್ತದೆ. ಒಡಿಶಾ ರೈಲು ಅಪಘಾತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಹಾಯ ಮಾಡುವ ಕಾರ್ಯವನ್ನು ಈ ಸಹಾಯ ಕೇಂದ್ರವು ಮಾಡಲಿದೆ.
ಎಲ್‌ಐಸಿ ಸಹಾಯ ಕೇಂದ್ರ
ಈ ಬಗ್ಗೆ ಮಾಹಿತಿ ನೀಡಿದ ಎಲ್‌ಐಸಿಯ ಜೋನಲ್ ಮ್ಯಾನೆಜರ್ (ಈಸ್ಟ್) ಅಜಯ್ ಕುಮಾರ್, "ನಾನು ರೈಲ್ವೆಯಿಂದ ಈ ರೈಲು ಅಪಘಾತದಲ್ಲಿ ಸಾವನ್ನಪ್ಪಿದವರ ಪಟ್ಟಿಗಾಗಿ ಕಾಯುತ್ತಿದ್ದೇನೆ. ಈ ಪಟ್ಟಿಯ ಆಧಾರದಲ್ಲಿ ನಾವು ಅವರ ಕುಟುಂಬ ಸದಸ್ಯರನ್ನು ಸಂಪರ್ಕ ಮಾಡಬಹುದಾಗಿದೆ. ಕ್ಲೈಮ್ ಅನ್ನು ಮಾಡಲು ಅವರಿಗೆ ಸಹಾಯ ಮಾಡಲಾಗುತ್ತದೆ," ಎಂದು ಮಾಹಿತಿ ನೀಡಿದ್ದಾರೆ.
"ಅಗತ್ಯ ಬಂದಲ್ಲಿ ಎಲ್‌ಐಸಿಯು ಇನ್ನಷ್ಟು ಸಹಾಯ ಕೇಂದ್ರಗಳನ್ನು ತೆರೆಯಲು ಸಿದ್ಧವಾಗಿದೆ. ಕ್ಲೈಮ್ ಪ್ರಕ್ರಿಯೆಯಲ್ಲಿ ಇನ್ನಷ್ಟು ಸರಳವಾದ ವಿಧಾನವನ್ನು ಜಾರಿ ಮಾಡಲಾಗುವುದು. ಈ ಮೂಲಕ ಒಡಿಶಾ ರೈಲು ಅಪಘಾತ ಸಂತ್ರಸ್ತರಿಗೆ ಸಹಾಯ ಮಾಡುವ ಪ್ರಯತ್ನ ಮಾಡಲಾಗುತ್ತದೆ," ಎಂದು ತಿಳಿಸಿದ್ದಾರೆ.
ಐಆರ್‌ಡಿಎಐ ಸೂಚನೆ
ಈ ಹಿಂದೆ, ದುರಂತದ ಸಂತ್ರಸ್ತರಿಗೆ ಸಹಾಯ ಮಾಡಲು ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಎಲ್ಲಾ ವಿಮಾ ಕಂಪನಿಗಳಿಗೆ ತಿಳಿಸಿದೆ. ಆಗನ್ ಲೈಫ್, ಡಿಜಿಟಲ್ ವಿಮಾದಾರ ಮತ್ತು ಲಿಬರ್ಟಿ ಜನರಲ್ ಇನ್ಶುರೆನ್ಸ್, ಐಆರ್‌ಸಿಟಿಸಿ ರೈಲು ಪ್ರಯಾಣಿಕರಿಗೆ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ನೀಡುತ್ತದೆ. ಇದು ರೈಲು ಅಪಘಾತ ಸಂತ್ರಸ್ತರಿಗೆ ಸಹಾಯ ಮಾಡಲು ಕೆಲವು ಸೌಲಭ್ಯಗಳನ್ನು ಸ್ಥಾಪಿಸಿರುವ ಇತರ ಎರಡು ವಿಮಾ ಕಂಪನಿಗಳಾಗಿವೆ.
ಈ ಹಿಂದೆ ಒಡಿಶಾದಲ್ಲಿ ನಡೆದ ಭೀಕರ ರೈಲು ಅಪಘಾತದ ಬಳಿಕ ಭಾರತದ ವಿಮಾ ದೈತ್ಯ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಲು ಮುಂದಾಗಿದೆ. ಎಲ್‌ಐಸಿ ತ್ವರಿತ ಕ್ರಮದ ಅಗತ್ಯವನ್ನು ಗುರುತಿಸಿದೆ. ಎಲ್‌ಐಸಿಯು ಪೀಡಿತ ಕುಟುಂಬಗಳಿಗೆ ಕ್ಲೈಮ್ ಪ್ರಕ್ರಿಯೆಯನ್ನು ಸರಳಗೊಳಿಸಿದೆ.
ಶನಿವಾರ ಸಂಜೆಯ ವೇಳೆಗೆ ಈ ಬಗ್ಗೆ ಭಾರತೀಯ ಜೀವ ವಿಮಾ ನಿಗಮ ಹೇಳಿಕೆಯನ್ನು ನೀಡಿದೆ. "ಬಾಲಸೋರ್ ರೈಲು ಅಪಘಾತದ ಬಗ್ಗೆ ನಮ್ಮ ಸಂತಾಪವನ್ನು ನಾವು ವ್ಯಕ್ತಪಡಿಸುತ್ತೇವೆ. ಈ ರೈಲು ಅಪಘಾತದಿಂದ ಪ್ರಭಾವಕ್ಕೆ ಒಳಗಾದವರ ಪರವಾಗಿ ನಿಲ್ಲಲು ಎಲ್ಐಸಿಯು ಬದ್ಧವಾಗಿದೆ," ಎಂದು ಎಲ್‌ಐಸಿ ಅಧ್ಯಕ್ಷ ಸಿದ್ಧಾರ್ಥ್ ಮೊಹಾಂತಿ ಪುನರುಚ್ಚರಿಸಿದ್ದಾರೆ.
ಭಾರತೀಯ ಜೀವ ವಿಮಾ ನಿಗಮವು ಎಲ್‌ಐಸಿ ಪಾಲಿಸಿಗಳು ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿ ಪಾಲಿಸಿದಾರರಿಗೆ ರಿಯಾಯಿತಿಗಳನ್ನು ಘೋಷಿಸಿದೆ. ಇನ್ನು ಗಮನಾರ್ಹವಾಗಿ ರಿಜಿಸ್ಟಾರ್ಡ್ ಡೆತ್ ಬೆನಿಫಿಟ್ ಅಗತ್ಯವಿಲ್ಲ. ರೈಲ್ವೇ, ಪೊಲೀಸ್ ಅಥವಾ ಯಾವುದೇ ರಾಜ್ಯ ಮತ್ತು ಕೇಂದ್ರ ಪ್ರಾಧಿಕಾರದಿಂದ ನೀಡಲಾದ ಪಟ್ಟಿಗಳನ್ನು ಸಾವಿನ ಪುರಾವೆಯನ್ನು ಸ್ವೀಕಾರ ಮಾಡಲು ಎಲ್‌ಐಸಿ ನಿರ್ಧರಿಸಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications