ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಇಂದು(ಮೇ 30) ರಂದು 4ನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ಮಾರ್ಚ್ 31, 2022ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಒಟ್ಟಾರೆ, ₹2,409.39 ಕೋಟಿಗಳಷ್ಟು ಲಾಭವನ್ನು ದಾಖಲಿಸಿದೆ, ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ದಾಖಲಾದ ₹ 2,917.33 ಕೋಟಿಗಳಿಗೆ ಹೋಲಿಸಿದರೆ ಶೇ 17.41 ರಷ್ಟು ಕುಸಿತವಾಗಿದೆ.
ಷೇರುದಾರರ ಒಪ್ಪಿಗೆಗೆ ಒಳಪಟ್ಟು 2021-22 (FY22) ಹಣಕಾಸು ವರ್ಷದಲ್ಲಿ ತಲಾ ₹ 10 ಮುಖಬೆಲೆಯ ಪ್ರತಿ ಈಕ್ವಿಟಿ ಷೇರಿಗೆ ₹ 1.50 ರಷ್ಟು ಲಾಭಾಂಶವನ್ನು ರಾಜ್ಯ-ವಿಮಾದಾರರ ನಿರ್ದೇಶಕರ ಮಂಡಳಿಯು ಘೋಷಿಸಿದೆ.
ಜೀವ ವಿಮಾ ನಿಗಮ ಸಂಸ್ಥೆ ತನ್ನ ಮೆಗಾ-ಇನಿಶಿಯಲ್ ಪಬ್ಲಿಕ್ ಆಫರಿಂಗ್ (ಐಪಿಒ) ಯಿಂದ ಹೆಚ್ಚಿನ ನಿರೀಕ್ಷೆ ಹೊಂದಿತ್ತು. ಆದರೆ, ಕ್ಷೀಣ ಪ್ರತಿಕ್ರಿಯೆಯನ್ನು ಪಡೆದುಕೊಂಡು ಹೂಡಿಕೆದಾರರಿಗೆ ನಷ್ಟ, ನಿರಾಶೆ ಉಂಟು ಮಾಡಿದೆ. ₹ 949 ರ ಇಶ್ಯೂ ಬೆಲೆಯೊಂದಿಗೆ ಷೇರುಪೇಟೆ ಅಂಗಳಕ್ಕೆ ಇಳಿದ ಎಲ್ ಐಸಿ ನಂತರ ₹ 801.55 ರ ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ಮುಟ್ಟಿತ್ತು.

ಏತನ್ಮಧ್ಯೆ, ಎಲ್‌ಐಸಿ ಇಂದು ಷೇರುಪೇಟೆಯಲ್ಲಿ ಅಲ್ಪ ಏರಿಕೆ ಕಂಡಿದೆ. ಷೇರುಗಳು ಇಂದು ಶೇ 1.89 ರಷ್ಟು ಏರಿಕೆಯಾಗಿ ₹ 837.05 ಕ್ಕೆ ಸ್ಥಿರವಾಯಿತು. ಮಾರುಕಟ್ಟೆಯ ಅವಧಿ ಮುಗಿಯುತ್ತಿದ್ದಂತೆ ನಾಲ್ಕನೇ ತ್ರೈಮಾಸಿಕ ವರದಿಯನ್ನು ಎಲ್ ಐಸಿ ಪ್ರಕಟಿಸಿದೆ.
ಎಲ್‌ಐಸಿಯ ಮೌಲ್ಯಮಾಪನವು ಅದರ ವಿತರಣೆಯಿಂದ ₹80,000 ಕೋಟಿಗಿಂತ ಕಡಿಮೆಯಾಗಿದೆ, ಸುಮಾರು ₹ 42,500 ಕೋಟಿ ಮಾರುಕಟ್ಟೆ ಬಂಡವಾಳೀಕರಣ (m-ಕ್ಯಾಪ್) ಮೇ 12 ರಂದು ಅದರ ನೀರಸ ಚೊಚ್ಚಲದಿಂದ ಮತ್ತು ನಂತರ ₹ 38,000 ಕೋಟಿಗಳಷ್ಟು ಕಳೆದುಕೊಂಡಿದೆ. ಆದರೂ ಟಾಪ್ 10 ಅತಿ ಹೆಚ್ಚು ಮೌಲ್ಯ ಹೊಂದಿರುವ ಕಂಪನಿಗಳ ಪೈಕಿ 6ನೇ ಸ್ಥಾನಕ್ಕೇರಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications