ಜೊಮ್ಯಾಟೊದಿಂದಲೂ ಲಿಕ್ಕರ್ ಹೋಮ್ ಡಿಲಿವರಿ ಸೇವೆ ಪ್ರಾರಂಭ

ಆನ್‌ಲೈನ್ ಫುಡ್ ಆರ್ಡರ್ ಮಾಡುವ ಪ್ಲಾಟ್‌ಫಾರ್ಮ್ ಜೊಮ್ಯಾಟೊ ಕೂಡ ಪ್ರತಿಸ್ಪರ್ಧಿ ಸ್ವಿಗ್ಗಿಯಂತೆಯೇ ಲಿಕ್ಕರ್ ಹೋಂ ಡಿಲಿವರಿ ನೀಡಲು ಪ್ರಾರಂಭಿಸಿದೆ. ಮೊದಲಿಗೆ ಈ ಸೇವೆ ಜಾರ್ಖಂಡ್‌ನಲ್ಲಿ ಪ್ರಾರಂಭವಾಗಿದ್ದು, ಕಂಪನಿಯು ಇತರ ಹಲವು ರಾಜ್ಯಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಜೊಮ್ಯಾಟೊ ಗುರುವಾರ (ಮೇ 21) ತಿಳಿಸಿದೆ.

"ಸರಿಯಾದ ಅನುಮತಿಗಳು ಮತ್ತು ಪರವಾನಗಿಗಳು ಜಾರಿಯಲ್ಲಿರುವಾಗ, ನಾವು ಜಾರ್ಖಂಡ್‌ನಲ್ಲಿ ಮನೆಗೆ ಮದ್ಯ ವಿತರಣೆಯನ್ನು ಪ್ರಾರಂಭಿಸುತ್ತಿದ್ದೇವೆ. ಇಂದು ರಾಂಚಿಯಲ್ಲಿ ಮತ್ತು ಮುಂದಿನ ಎರಡು ದಿನಗಳಲ್ಲಿ ಜಾರ್ಖಂಡ್‌ನ ಏಳು ನಗರಗಳಲ್ಲಿ ಹೋಮ್ ಡಿಲಿವರಿ ನೀಡುತ್ತೇವೆ'' ಎಂದು ಗುರುಗ್ರಾಮ ಮೂಲದ ಕಂಪನಿ ತಿಳಿಸಿದೆ.

ಜೊಮ್ಯಾಟೊದಿಂದಲೂ ಲಿಕ್ಕರ್ ಹೋಮ್ ಡಿಲಿವರಿ ಸೇವೆ ಪ್ರಾರಂಭ

ಇತ್ತೀಚೆಗಷ್ಟೇ, ಸ್ವಿಗ್ಗಿ ಕೂಡ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಲಿಕ್ಕರ್ ಹೋಮ್ ಡಿಲಿವರಿ ಪ್ರಾರಂಭಿಸಿತು. ತನ್ನ ತಕ್ಷಣದ ಸ್ಪರ್ಧೆಯಂತೆ, ಬೆಂಗಳೂರು ಮೂಲದ ಕಂಪನಿ ಸ್ವಿಗ್ಗಿ ಇತರ ರಾಜ್ಯಗಳೊಂದಿಗೆ ಮದ್ಯ ವಿತರಣೆಗಾಗಿ ಮಾತನಾಡುತ್ತಿದೆ.

ಲಿಕ್ಕರ್ ಆರ್ಡರ್ ಮಾಡಲು ಗ್ರಾಹಕರು ವಯಸ್ಸಿನ ದಾಖಲೆ ಪತ್ರಗಳನ್ನು ಸಲ್ಲಿಸಬೇಕಾಗುತ್ತದೆ. ಮಾರ್ಚ್‌ 24ರಂದು ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದಾಗ ಮದ್ಯ ಮಾರಾಟವನ್ನು ನಿಷೇಧಿಸಲಾಗಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+