ಒಂದು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಅಮೆರಿಕದ ಉದ್ಯಮಿ ಮತ್ತು ಲಿಂಕ್ಡಿನ್ ಸಿಇಒ ಜೆಫ್ ವೀನರ್ ಜೂನ್ 1ರಂದು ಕಂಪನಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ (ಸಿಇಒ) ಸ್ಥಾನದಿಂದ ಕೆಳಗಿಳಿಯಲಿದ್ದಾರೆ.
ಜೆಫ್ ವೀನರ್ 11 ವರ್ಷಗಳ ಕಾಲ ಲಿಂಕ್ಡಿನ್ ಏರಿಳಿತಗಳನ್ನು ಕಂಡಿದ್ದಾರೆ. ಅವರ ನಾಯಕತ್ವದಲ್ಲಿ 2008 ರಲ್ಲಿ 33 ದಶಲಕ್ಷದಿಂದ ಸುಮಾರು 675 ದಶಲಕ್ಷಕ್ಕೆ ತನ್ನ ಸದಸ್ಯತ್ವನ್ನು ವಿಸ್ತರಿಸಿದೆ. ಅಲ್ಲದೆ ಆದಾಯವು 78 ದಶಲಕ್ಷದಿಂದ, 7.5 ಶತಕೋಟಿಗಿಂತಲೂ ಹೆಚ್ಚಾಗಿದೆ.
2009 ಜೂನ್‌ನಲ್ಲಿ ಲಿಂಕ್ಡಿನ್ ಸಿಇಒ ಆಗಿ ಆಯ್ಕೆಯಾದ ಜೆಫ್ ಕಂಪನಿಯ ಲಾಭ ಹೆಚ್ಚಾಗಲು ಬಹಳಷ್ಟು ಶ್ರಮಿಸಿದ್ದಾರೆ. ಇದೀಗ ತಮ್ಮ ಸ್ಥಾನದಿಂದ ಕೆಳಗಿಳಿಯಲು ಮುಂದಾಗಿದ್ದು ಮೈಕ್ರೋಸಾಫ್ಟ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮತ್ತು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರಿಗೆ ವರದಿ ಮಾಡಿಕೊಳ್ಳುತ್ತಾರೆ ಎಂದು ಲಿಂಕ್ಡಿನ್ ಪೋಸ್ಟ್ ಹೇಳಿದೆ.

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ ಈ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ್ದು ''ವೀನರ್ ಅವರಿಗೆ ಆತ್ಮೀಯ ಸ್ವಾಗತ. ಜೆಫ್‌ನಿಂದ ನಾನು ಸಾಕಷ್ಟು ಕಲಿತಿದ್ದೇನೆ ಮತ್ತು ಅವರ ಹೊಸ ಪಾತ್ರಕ್ಕಾಗಿ ಉತ್ಸುಕರಾಗಿದ್ದಾರೆ'' ಎಂದು ಹೇಳಿದ್ದಾರೆ.
"ಜೆಫ್, ನಿಮ್ಮ ಲಿಂಕ್ಡಿನ್‌ನ ನಾಯಕತ್ವಕ್ಕೆ ಧನ್ಯವಾದಗಳು. ಕಳೆದ ಕೆಲವು ವರ್ಷಗಳಿಂದ ನಾನು ನಿಮ್ಮಿಂದ ಅಪಾರವಾದುದನ್ನು ಕಲಿತಿದ್ದೇನೆ. ವಿಶೇಷವಾಗಿ ದೃಷ್ಟಿಯಿಂದ ಮೌಲ್ಯಗಳಿಗೆ ನಿಮ್ಮ ಸ್ಪಷ್ಟ ಗಮನ. ನಿಮ್ಮ ಮುಂದುವರಿದ ನಾಯಕತ್ವಕ್ಕೆ ನಾನು ಕೃತಜ್ಞನಾಗಿದ್ದೇನೆ ಮತ್ತು ನಿಮ್ಮ ಹೊಸ ಪಾತ್ರದಲ್ಲಿ ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ "ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ ಹೇಳಿದ್ದಾರೆ.
ಇನ್ನು ಜೆಫ್ ಅವರು ಕಷ್ಟಪಟ್ಟು ಕೆಲಸ ಮಾಡಿ ಲಿಂಕ್ಡಿನ್ ಬ್ರಾಂಡ್ ಬೆಳೆಸಿ ಇದೀಗ ಅದನ್ನು ತೊರೆಯುವುದನ್ನು ನೋಡಿ ಲಿಂಕ್ಡಿನ್ ಕುಟುಂಬವು(ಸಹೋದ್ಯೋಗಿಗಳು) ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ.


Click it and Unblock the Notifications