ಕಳೆದ ವರ್ಷದಲ್ಲಿ ಆರಂಭವಾದ ಉದ್ಯೋಗ ಕಡಿತ ಪ್ರಕ್ರಿಯೆ ಇನ್ನೂ ಕೂಡಾ ಕೊನೆಯಾಗಿಲ್ಲ. ಈ ಹಿಂದೆ ಲೇಆಫ್ ಅನ್ನು ಮಾಡಿದ್ದ ಲಿಂಕ್ಡಿನ್, ಈಗ ಎರಡನೇ ಹಂತದ ಉದ್ಯೋಗ ಕಡಿತವನ್ನು ಮಾಡಲು ಮುಂದಾಗಿದೆ. ಎಂಜಿನಿಯರಿಂಗ್, ಹಣಕಾಸು ವಿಭಾಗದಲ್ಲಿ 668 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಮೈಕ್ರೋಸಾಫ್ಟ್‌ನ ಲಿಂಕ್ಡ್‌ಇನ್ ಸೋಮವಾರ ಹೇಳಿದೆ.
20,000 ಉದ್ಯೋಗಿಗಳ ಪೈಕಿ ಸುಮಾರು ಶೇಕಡ 3 ರಷ್ಟು ಉದ್ಯೋಗಿಗಳ ಮೇಲೆ ಈ ಲೇಆಫ್ ಪ್ರಭಾವ ಬೀರುವ ನಿರೀಕ್ಷೆಯಿದೆ. ಉದ್ಯೋಗ ಸಂಸ್ಥೆ ಚಾಲೆಂಜರ್, ಗ್ರೇ & ಕ್ರಿಸ್ಮಸ್ ಪ್ರಕಾರ, ಒಂದು ವರ್ಷದ ಹಿಂದೆ ಸುಮಾರು 6,000 ಉದ್ಯೋಗಿಗಳಿಗೆ ಹೋಲಿಸಿದರೆ ಈ ವಲಯವು ವರ್ಷದ ಮೊದಲಾರ್ಧದಲ್ಲಿ 141,516 ಉದ್ಯೋಗಿಗಳನ್ನು ವಜಾಗೊಳಿಸಿದೆ.

ಲಿಂಕ್ಡ್‌ಇನ್ ಜಾಹೀರಾತು ಮಾರಾಟದ ಮೂಲಕ ಮತ್ತು ಸೂಕ್ತವಾದ ಉದ್ಯೋಗ ಅಭ್ಯರ್ಥಿಗಳನ್ನು ಹುಡುಕಲು ನೆಟ್‌ವರ್ಕ್ ಅನ್ನು ಬಳಸುವ ನೇಮಕಾತಿ ಮತ್ತು ಮಾರಾಟ ವೃತ್ತಿಪರರಿಗೆ ಚಂದಾದಾರಿಕೆಗಳನ್ನು ವಿಧಿಸುವ ಮೂಲಕ ಹಣವನ್ನು ಗಳಿಸುತ್ತದೆ.
ಅದರ ಹಣಕಾಸಿನ 2023 ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ, ಹಿಂದಿನ ತ್ರೈಮಾಸಿಕದಲ್ಲಿ ಶೇಕಡ 10ಕ್ಕೆ ಹೋಲಿಸಿದರೆ, ಲಿಂಕ್ಡ್‌ಇನ್ ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡ 5 ರಷ್ಟು ಹೆಚ್ಚಳವಾಗಿದೆ. ಮೈಕ್ರೋಸಾಫ್ಟ್ ತನ್ನ 950 ಮಿಲಿಯನ್ ಸಮುದಾಯಕ್ಕೆ ಹೊಸ ಸದಸ್ಯರನ್ನು ಸೇರಿಸುವುದನ್ನು ಮುಂದುವರೆಸಿದ್ದರೂ, ಲಿಂಕ್ಡ್‌ಇನ್‌ಗೆ ಜಾಹೀರಾತು ವೆಚ್ಚದಲ್ಲಿನ ಕುಸಿತದ ಜೊತೆಗೆ ನೇಮಕಾತಿಯನ್ನು ಕೂಡಾ ಇಳಿಕೆ ಮಾಡಲಾಗಿದೆ.
ಮೊದಲ ಹಂತದ ಉದ್ಯೋಗ ಕಡಿತ
ಉದ್ಯೋಗ ಹುಡುಕಾಟಕ್ಕೆ ಸಹಾಯವಾಗುವ ಆಪ್ ಆಗಿಯೇ ಪ್ರಸಿದ್ಧಿಯನ್ನು ಪಡೆದಿರುವ ಲಿಂಕ್ಡಿನ್ ಈ ಹಿಂದೆ ಸುಮಾರು 716 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿದೆ. ಹಾಗೆಯೇ ಚೀನಾದ ಮೇಲೆ ಹೆಚ್ಚು ಕೇಂದ್ರಿಕರಿಸಿದ ಉದ್ಯೋಗ ಹುಡುಕಾಟ ಮಾಡಲು ಸಹಾಯವಾಗುವ ಆಪ್ ಅನ್ನು ಸ್ಥಗಿತಗೊಳಿಸಿದೆ. ಜಾಗತಿಕವಾಗಿ ಆರ್ಥಿಕ ಸ್ಥಿತಿಯನ್ನು ನೋಡಿಕೊಂಡು, ಬೇಡಿಕೆ ಕಡಿಮೆಯಾಗುತ್ತಿರುವಂತೆ ಲಿಂಕ್ಡಿನ್ ಈ ನಿರ್ಧಾರ ತೆಗೆದುಕೊಂಡಿದೆ.
ಮೈಕ್ರೋಸಾಫ್ಟ್ ಮೂಲದ ಸಂಸ್ಥೆಯಾದ ಲಿಂಕ್ಡಿನ್‌ನಲ್ಲಿ ಕಳೆದ ವರ್ಷ ಪ್ರತಿ ತ್ರೈಮಾಸಿಕದಲ್ಲಿ ಆದಾಯವು ಹೆಚ್ಚಳವಾಗುತ್ತಾ ಸಾಗಿದೆ. ಆದರೆ ಈಗ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತ ಮಾಡಿರುವಂತೆ ಲಿಂಕ್ಡಿನ್‌ನಲ್ಲಿಯೂ ಉದ್ಯೋಗ ಕಡಿತವನ್ನು ಮಾಡಲಾಗಿದೆ. ಲಿಂಕ್ಡಿನ್‌ನಲ್ಲಿ ಒಟ್ಟಾಗಿ ಸುಮಾರು 20 ಸಾವಿರ ಉದ್ಯೋಗಿಗಳಿದ್ದು, 716 ಉದ್ಯೋಗ ಕಡಿತವೆಂದರೆ ಸುಮಾರು ಶೇಕಡ 3.5ರಷ್ಟು ಜನರಿಗೆ ಪಿಂಕ್ ಸ್ಲಿಪ್ ನೀಡಲಾಗಿದೆ.
ಲಿಂಕ್ಡಿನ್ ಸಾಮಾನ್ಯವಾಗಿ ಜಾಹೀರಾತು ಮಾರಾಟ ಹಾಗೂ ನೇಮಕಾತಿ ಮತ್ತು ಮಾರಾಟ ವೃತ್ತಿಪರರ ಚಂದಾದಾರಿಕೆಯ ಮೂಲಕ ಆದಾಯವನ್ನು ಗಳಿಸಲಾಗುತ್ತದೆ. ಸಿಇಒ ರಿಯಾನ್ ರೋಸ್ಲಾನ್ಸ್ಕಿ ಉದ್ಯೋಗಿಗಳಿಗೆ ಪತ್ರವನ್ನು ಬರೆದಿದ್ದಾರೆ. ಉದ್ಯೋಗ ಕಡಿತವು ಕಂಪನಿಯ ಕಾರ್ಯಾಚರಣೆಗಳನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ ಮತ್ತು ವೇಗವಾಗಿ ನಿರ್ಧಾರವನ್ನು ಕೈಗೊಳ್ಳಲು ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.


Click it and Unblock the Notifications