ಕೊರೊನಾ ಲಾಕ್ ಡೌನ್ 4.0 ಮೇ 31ನೇ ತಾರೀಕಿಗೆ ಕೊನೆಯಾಗುತ್ತದೆ. ಜೂನ್ 1ನೇ ತಾರೀಕಿನಿಂದ ಆರ್ಥಿಕತೆ ಪುನರಾರಂಭಕ್ಕೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು (MHA) ಹೊಸ ಮಾರ್ಗದರ್ಶಿ ಸೂತ್ರವನ್ನು ನೀಡಿದೆ. ಇದನ್ನು 'Unlock 1' ಎಂದು ಕರೆಯಲಾಗುತ್ತಿದೆ.
ಈ ಹೊಸ ನಿಯಮದ ಪ್ರಕಾರ, ಜೂನ್ 8ರಿಂದ ಧಾರ್ಮಿಕ ಸ್ಥಳಗಳು, ಶಾಪಿಂಗ್ ಮಾಲ್ ಗಳು, ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಪುನರಾರಂಭ ಆಗಲಿವೆ. ಕಂಟೇನ್ ಮೆಂಟ್ ಝೋನ್ ಹೊರಗೆ ಎಲ್ಲ ಚಟುವಟಿಕೆಗಳನ್ನು ಹಂತಹಂತವಾಗಿ ಆರಂಭಿಸಲು ಅನುವು ಮಾಡಿಕೊಡುವುದಕ್ಕೆ ಸರ್ಕಾರ ನಿರ್ಧರಿಸಿದೆ.

ಜೂನ್ 1ರಿಂದ ದೇಶದಾದ್ಯಂತ ನಿರ್ಬಂಧ ಹೇರಿರುವ ಚಟುವಟಿಕೆಗಳು:
* ಅಂತರರಾಷ್ಟ್ರೀಯ ವಿಮಾನಗಳು
* ಮೆಟ್ರೋ ರೈಲು ಸೇವೆ
* ಚಿತ್ರಮಂದಿರ, ಜಿಮ್ ಗಳು, ಈಜುಕೊಳ, ಮನರಂಜನಾ ಪಾರ್ಕ್, ಥಿಯೇಟರ್ ಗಳು, ಬಾರ್ ಮತ್ತು ಆಡಿಟೋರಿಯಂ, ಅಸೆಂಬ್ಲಿ ಹಾಲ್ ಗಳು ಮುಂತಾದವು.
* ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಮುಂತಾದ ದೊಡ್ಡ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ.
ಈ ಮೇಲ್ಕಂಡ ಚಟುವಟಿಕೆಗಳ ಪುನರಾರಂಭವು ಕೊರೊನಾ ವೈರಾಣು ಹಬ್ಬುವಿಕೆಯ ಪ್ರಮಾಣದ ಮೇಲೆ ನಿರ್ಧಾರ ಆಗುತ್ತದೆ.


Click it and Unblock the Notifications