ಏಪ್ರಿಲ್ 20ರಿಂದ ಕೆಲ ವೃತ್ತಿಯವರಿಗೆ ಲಾಕ್ ಡೌನ್ ವಿನಾಯಿತಿ; ಆದರೆ ಷರತ್ತುಗಳು ಅನ್ವಯ

ಕೊರೊನಾ ವೈರಾಣು ನಿಯಂತ್ರಿಸುವ ಉದ್ದೇಶದಿಂದ ಲಾಕ್ ಡೌನ್ ಅವಧಿಯನ್ನು ಮೇ 3ನೇ ತಾರೀಕಿನ ತನಕ ವಿಸ್ತರಣೆ ಮಾಡಲಾಗಿದೆ. ಆದರೆ ಸ್ವಂತ ವೃತ್ತಿ ಕೈಗೊಳ್ಳುವವರು ಅಂದರೆ, ಎಲೆಕ್ಟ್ರಿಷಿಯನ್ಸ್, ಐಟಿ ರಿಪೇರಿ ಮಾಡುವವರು, ಪ್ಲಂಬರ್ ಗಳು, ಮೋಟಾರ್ ಮೆಕಾನಿಕ್ಸ್ ಮತ್ತು ಕಾರ್ಪೆಂಟರ್ ಗಳಿಗೆ ಏಪ್ರಿಲ್ 20ನೇ ತಾರೀಕಿನಿಂದಲೇ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ.

ಗೃಹ ವ್ಯವಹಾರಗಳ ಸಚಿವಾಲಯವು ಈ ಬಗ್ಗೆ ಆದೇಶವನ್ನು ಹೊರಡಿಸಲಾಗಿದೆ. ಯಾವ್ಯಾವ ವಲಯದಲ್ಲಿ ಕೊರೊನಾ ವೈರಾಣು ನಿಯಂತ್ರಣದಲ್ಲಿ ಇದೆ ಎಂದು ಆಯಾ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ತೀರ್ಮಾನ ಮಾಡಲಾಗುತ್ತದೋ ಅಂಥಲ್ಲಿ ಈ ಎಲ್ಲ ವೃತ್ತಿಪರರಿಗೆ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬಹುದು ಎನ್ನಲಾಗಿದೆ.

ಏಪ್ರಿಲ್ 20ರಿಂದ ಕೆಲ ವೃತ್ತಿಯವರಿಗೆ ಲಾಕ್ ಡೌನ್ ವಿನಾಯಿತಿ

ಕಡಿಮೆ ಆದಾಯ ವರ್ಗದಡಿ ಬರುವವರಿಗೆ ಉದ್ಯೋಗ ಹಾಗೂ ಆದಾಯ ನಷ್ಟ ಆಗಬಹುದು ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಅಂದ ಹಾಗೆ ಭಾರತದಲ್ಲಿ ಈ ತನಕ 11,933 ಕೊರೊನಾ ಪಾಸಿಟಿವ್ ಹಾಗೂ 392 ಸಾವಿನ ಪ್ರಕರಣಗಳು ದಾಖಲಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+