ಕೇಂದ್ರ ಸರ್ಕಾರ ದೇಶಾದ್ಯಂತ 21 ದಿನಗಳ ಲಾಕ್‌ಡೌನ್ ಮುಗಿದ ಬಳಿಕ ಮೇ 3ರವರೆಗೆ ಲಾಕ್‌ಡೌನ್ 2.0 ವನ್ನು ಪರಿಚಯಿಸಿದೆ. ಮೊದಲ ಲಾಕ್‌ಡೌನ್‌ಗಿಂತ ಹೆಚ್ಚಿನ ಬಿಗಿಯಾಗಿರುವ ಈ ಲಾಕ್‌ಡೌನ್‌ನಲ್ಲಿ ಐಟಿ ಕಂಪನಿಗಳು ಸೇರಿದಂತೆ ಬಹುತೇಕ ಕಚೇರಿಗಳಿಗೆ ಅನೇಕ ಮಾರ್ಗಸೂಚಿಗಳನ್ನು ನೀಡಿದೆ.
ಕೊರೊನಾವೈರಸ್ ವಿರುದ್ದ ಹೋರಾಡಲು ರಾಷ್ಟ್ರವ್ಯಾಪಿ ಈ ಎರಡನೇ ಹಂತದ ಲಾಕ್‌ಡೌನ್ ಇಂದಿನಿಂದ(ಏಪ್ರಿಲ್ 15) ಪ್ರಾರಂಭವಾಗಿದೆ. ಪ್ರಧಾನಿ ಮೋದಿ ಘೋಷಿಸಿದಂತೆ ಕೆಲಸದ ಸ್ಥಳಗಳಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ಮಾರ್ಗಸೂಚಿಗಳನ್ನು ಅನುಸರಿಸಿದರೆ ಕಾರ್ಯನಿರ್ವಹಿಸಲು ಅನುಮತಿ
ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗ ಸೂಚಿಗಳನ್ನು ಅನುಸರಿಸಿದರೆ ಹಲವಾರು ಕಚೇರಿಗಳು ಮತ್ತು ಕೈಗಾರಿಕೆಗಳು ಲಾಕ್‌ಡೌನ್ ಸಮಯದಲ್ಲಿ ಕಾರ್ಯ ನಿರ್ವಹಿಸಲು ಅನುಮತಿಸಲಾಗುತ್ತದೆ. ಆದರೆ ಈ ಮಾರ್ಗ ಸೂಚಿಗಳನ್ನು ಪಾಲಿಸದ ಕಂಪನಿಗಳಿಗೆ ಲಾಕ್‌ಡೌನ್ ಮುಗಿದರು ಕಾರ್ಯ ನಿರ್ವಹಿಸಲು ಅವಕಾಶವಿಲ್ಲ
50 ಪರ್ಸೆಂಟ್ ಉದ್ಯೋಗಿಗಳಿಗೆ ಅವಕಾಶ
ಲಾಕ್‌ಡೌನ್ ಸಮಯದಲ್ಲಿ ಐಟಿ ಕಂಪನಿಗಳು ಕಾರ್ಯ ನಿರ್ವಹಿಸಲು 50 ಪರ್ಸೆಂಟ್ ಉದ್ಯೋಗಿಗಳನ್ನು ಮಾತ್ರ ಹೊಂದಲು ಅವಕಾಶವಿದೆ. ಅಂದರೆ ನೂರು ಉದ್ಯೋಗಿಗಳಿದ್ದರೆ ಅವರಲ್ಲಿ 50 ಜನರನ್ನು ಬಳಸಿಕೊಂಡು ಕಂಪನಿಯನ್ನು ನಡೆಸಬಹುದು. ಆದರೆ ಎಲ್ಲಾ ಕೆಲಸದ ಸ್ಥಳಗಳು ತಾಪಮಾನ ತಪಾಸಣೆಗೆ ಸಾಕಷ್ಟು ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಬೇಕು. ಈ ಅವಧಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಕಚೇರಿಗಳಲ್ಲಿ ಸ್ಯಾನಿಟೈಜರ್‌ಗಳನ್ನು ಒದಗಿಸಬೇಕು.
ಹೊರಗಿನಿಂದ ಬರುವ ಕಾರ್ಮಿಕರಿಗೆ ವಿಶೇಷ ಸಾರಿಗೆ ವ್ಯವಸ್ಥೆ ಮಾಡಬೇಕು
ಕಂಪನಿಯ ಕಾರ್ಯ ನಿರ್ವಹಣೆ ಆರಂಭಿಸಲು ಮುಂದಾದರೆ ಹೊರಗಿನಿಂದ ಬರುವವರಿಗೆ ಕಚೇರಿಯಿಂದ ವಿಶೇಷ ಸಾರಿಗೆ ವ್ಯವಸ್ಥೆ ಮಾಡಬೇಕು. ಈ ಅವಧಿಯಲ್ಲಿ ಸಾರ್ವಜನಿಕ ಸಾರಿಗೆಯನ್ನು ತಪ್ಪಿಸಬೇಕು. ಅದರಲ್ಲೂ ಕಚೇರಿಯ ವಾಹನಗಳಿಗೆ 30 ರಿಂದ 40 ಪರ್ಸೆಂಟ್ ಪ್ರಯಾಣಿಕರ ಸಾಮರ್ಥ್ಯದೊಂದಿಗೆ ಮಾತ್ರ ಕೆಲಸ ಮಾಡಲು ಅವಕಾಶ ನೀಡಬೇಕು. ಸಾರಿಗೆಗಾಗಿ ಬಳಸುವ ಎಲ್ಲಾ ಕಚೇರಿ ವಾಹನಗಳನ್ನು ಸೋಂಕುರಹಿತಗೊಳಿಸಬೇಕು.
ಇದರ ಜೊತೆಗೆ ಗೇಟ್‌ನಲ್ಲಿರುವ ನೌಕರರಿಗೆ ಉಷ್ಣ ತಪಾಸಣೆ ಕಡ್ಡಾಯವಾಗಿದೆ. ಕಂಪನಿಯೊಳಗೆ ಬರುವ ಯಾವುದೇ ವಾಹನ ಅಥವಾ ಯಂತ್ರೋಪಕರಣಗಳನ್ನು ಸೋಂಕುರಹಿತಗೊಳಿಸಬೇಕು.
'ಸಾಮಾಜಿಕ ದೂರ' ಕಟ್ಟುನಿಟ್ಟಾಗಿ ಪಾಲಿಸಬೇಕು
ಸೋಶಿಯಲ್ ಡಿಸ್ಟೆನ್ಸಿಂಗ್ ಅಥವಾ ಸಾಮಾಜಿಕ ದೂರವನ್ನು ಕಂಪನಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಎರಡು ಶಿಫ್ಟ್‌ನಲ್ಲಿ(ಪಾಳಿ) ಕೆಲಸ ಮಾಡುವವರ ನಡುವೆ ಒಂದು ಗಂಟೆಯ ಅಂತರವಿರಬೇಕು. ಎಲ್ಲಾ ಕಚೇರಿಗಳನ್ನು ಶಿಫ್ಟ್‌ಗಳ ನಡುವಿನ ಸಮಯದಲ್ಲಿ ಕಚೇರಿಯನ್ನು ಸ್ವಚ್ಛಗೊಳಿಸಬೇಕು. ಇದರ ಜೊತೆಗೆ ಊಟದ, ಟೀ ವಿರಾಮದ ಸಮಯದಲ್ಲಿಯೂ ಸಹ ನೌಕರರು ಸಾಕಷ್ಟು ಸಾಮಾಜಿಕ ದೂರವನ್ನು ಖಚಿತಪಡಿಸಿಕೊಳ್ಳಬೇಕು.
10 ಅಥವಾ ಹೆಚ್ಚಿನ ಜನರೊಂದಿಗೆ ಮೀಟಿಂಗ್ ನಿಷೇಧ
ಕೊರೊನಾವೈರಸ್ ಲಾಕ್‌ಡೌನ್ ಮಧ್ಯೆ 10 ಅಥವಾ ಹೆಚ್ಚಿನ ಜನರೊಂದಿಗೆ ದೊಡ್ಡ ಮೀಂಟಿಗ್ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಉದ್ಯೋಗಿಗಳು ಕೆಲಸ ಮಾಡುವಾಗ ಪರಸ್ಪರ ಕನಿಷ್ಠ 6 ಅಡಿ ದೂರದಲ್ಲಿ ಕುಳಿತುಕೊಳ್ಳಬೇಕು. ಸಭೆ ಮತ್ತು ತರಬೇತಿ ಅವಧಿಗಳಲ್ಲಿಯೂ ಈ ದೂರವನ್ನು ಕಾಯ್ದುಕೊಳ್ಳಬೇಕು.
ಹಿರಿಯ ನಾಗರಿಕರು, ವಿಶೇಷವಾಗಿ ಅಸ್ವಸ್ಥ ಸ್ಥಿತಿಯನ್ನು ಹೊಂದಿರುವವರು ಮನೆಯಿಂದ ಕೆಲಸ ಮಾಡಲು ಪ್ರೋತ್ಸಾಹಿಸಬೇಕು. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪೋಷಕರು ಸಹ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯವನ್ನು ಬಳಸಬೇಕು. ಪ್ರತಿಯೊಬ್ಬ ಉದ್ಯೋಗಿಗಳಿಗೆ ವೈದ್ಯಕೀಯ ವಿಮೆಯನ್ನು ಒದಗಿಸಬೇಕು.
ಕಚೇರಿಯ ಆವರಣದಲ್ಲಿ ತಂಬಾಕು, ಗುಟ್ಕಾ ನಿಷೇಧ
ಕಚೇರಿಯ ಆವರಣದಲ್ಲಿ ಕೆಲಸದ ಸ್ಥಳಗಳಲ್ಲಿ ತಂಬಾಕು, ಗುಟ್ಕಾ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಲಿಫ್ಟ್‌ಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ಅನುಮತಿಸಲಾಗುವುದಿಲ್ಲ.
ಜೊತೆಗೆ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ಉದ್ಯೋಗಿಗಳಿಗೆ ಆರೋಗ್ಯ ಸೇತು ಅಪ್ಲಿಕೇಶನ್ ಬಳಸಲು ಉತ್ತೇಜನ ನೀಡಬೇಕು. ಅನಿವಾರ್ಯವಲ್ಲದ ಸಂದರ್ಶಕರನ್ನು ಕಚೇರಿ ಆವರಣದಲ್ಲಿ ನಿಷೇಧಿಸಬೇಕು.
ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ಉದ್ಯೋಗಿಗಳಿಗೆ ಆರೋಗ್ಯ ಸೇತು ಅಪ್ಲಿಕೇಶನ್ ಬಳಸಲು ಉತ್ತೇಜನ ನೀಡಬೇಕು. ಆರೋಗ್ಯ ಸೇತು ಭಾರತದಲ್ಲಿ COVID-19 ಏಕಾಏಕಿ ಪತ್ತೆಹಚ್ಚಲು ವಿನ್ಯಾಸಗೊಳಿಸಲಾದ ಮೊಬೈಲ್ ಅಪ್ಲಿಕೇಶನ್ ಆಗಿದೆ.
ಅನಿವಾರ್ಯವಲ್ಲದ ಸಂದರ್ಶಕರನ್ನು ಕಚೇರಿ ಆವರಣದಲ್ಲಿ ನಿಷೇಧಿಸಲಾಗಿದೆ. ಕೆಲಸದ ಸ್ಥಳದಲ್ಲಿ ತಂಬಾಕು, ಗುಟ್ಕಾ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಲಿಫ್ಟ್‌ಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ಅನುಮತಿಸಲಾಗುವುದಿಲ್ಲ.
ಈ ಮೇಲಿನ ಮಾರ್ಗಸೂಚಿಗಳನ್ನು ಅನುಸರಿಸುವ ಕಂಪನಿಗಳು ಲಾಕ್‌ಡೌನ್ ಸಂದರ್ಭದಲ್ಲಿ ಕಾರ್ಯ ನಿರ್ವಹಣೆಗೆ ಅನುಮತಿ ನೀಡಲಾಗುತ್ತದೆ.


Click it and Unblock the Notifications