ಬೆಂಗಳೂರು, ಮಾರ್ಚ್ 27: ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ 13 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 60 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.
ಮೈಸೂರಿನ 12 ಸ್ಥಳಗಳಲ್ಲಿ, ಬೆಂಗಳೂರು, ಉಡುಪಿ ಮತ್ತು ಕೋಲಾರದಲ್ಲಿ ತಲಾ ಐದು; ಕಾರವಾರ, ಬೀದರ್, ವಿಜಯಪುರ ಮತ್ತು ಮಂಡ್ಯದಲ್ಲಿ ತಲಾ ನಾಲ್ಕು; ಬೆಳಗಾವಿಯಲ್ಲಿ ಮೂರು; ಮತ್ತು ಕೊಡಗಿನಲ್ಲಿ ಎರಡು ಕಡೆ ದಾಳಿ ನಡೆದಿದೆ..

ರಂಗನಾಥ್ ಎಸ್ಪಿ ಮುಖ್ಯ ಇಂಜಿನಿಯರ್, ಬ್ಯಾಟರಾಯನಪುರ ಮತ್ತು ಯಲಹಂಕ ಬಿಬಿಎಂಪಿ, ರೂಪ ಉಪ ಆಯುಕ್ತರು, ಅಬಕಾರಿ ಇಲಾಖೆ ಉಡುಪಿ; ಪ್ರಕಾಶ್ ಕಿರಿಯ ಅಭಿಯಂತರರು, ಕಾರವಾರ; ಫಯಾಜ್ ಅಹಮದ್ ಸಹಾಯಕ ಇಂಜಿನಿಯರ್, ಮೈಸೂರು; ಯತೀಶ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ, ಬಿಡದಿ ರಾಮನಗರ; ಮಹೇಶ ಚಂದ್ರಯ್ಯ ಹಿರೇಮಠ, ವಲಯ ಅರಣ್ಯಾಧಿಕಾರಿ ಇವರ ಮೇಲೆ ಲೋಕಾಯುಕ್ತರಿಂದ ಶೋಧ ನಡೆಯುತ್ತಿದೆ.
ಅದೇ ಸಮಯದಲ್ಲಿ ಬೀದರ್‌ನ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ ಸ್ವಾಮಿ ಅವರ ಆಸ್ತಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೋಲಾರ ಸಹಾಯಕ ನಿರ್ದೇಶಕ ನಾಗರಾಜಪ್ಪ ಎಚ್. ಷಣ್ಮುಖಪ್ಪ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, ಜಮಖಂಡಿ, ಬಾಗಲಕೋಟ; ಸದಾಶಿವಯ್ಯ, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಚಿಕ್ಕಬಳ್ಳಾಪುರ; ಕೃಷ್ಣೇಗೌಡ, ಎರಡನೇ ವಿಭಾಗದ ಲೆಕ್ಕ ಸಹಾಯಕರು, ಅಗಸನಪುರ ಗ್ರಾ.ಪಂ., ಮಳವಳ್ಳಿ; ಮತ್ತು ಸದಾಶಿವ ಜಯಪ್ಪ, ಪ್ರಭಾರ ಕಾರ್ಯದರ್ಶಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ನಿಡಗುಂದಿ ಗ್ರಾಮ, ಬೆಳಗಾವಿಯಲ್ಲಿ ದಾಳಿ ಮಾಡಲಾಗಿದೆ.
13 ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್‌ಪಿ), 13 ಡಿಎಸ್‌ಪಿಗಳು, 25 ಪೊಲೀಸ್ ಇನ್‌ಸ್ಪೆಕ್ಟರ್‌ಗಳು (ಪಿಐ) ಮತ್ತು 80 ಸಿಬ್ಬಂದಿ ಸೇರಿದಂತೆ ಸುಮಾರು 130 ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಎರಡು ತಿಂಗಳ ಹಿಂದೆ ಪರಿಷ್ಕರಿಸಿದ ನಂತರ ಲೋಕಾಯುಕ್ತ ಆರಂಭಿಸಿದ ಮೊದಲ ಅತಿ ದೊಡ್ಡ ದಾಳಿ ಇದಾಗಿದೆ.


Click it and Unblock the Notifications