ತಿಂಗಳ ಪರಿಷ್ಕರಣೆಯಲ್ಲಿ ಸಬ್ಸಿಡಿರಹಿತ 14.2 ಕೇಜಿ ಎಲ್ ಪಿಜಿ (ಲಿಕ್ವಿಡ್ ಪೆಟ್ರೋಲಿಯಂ ಗ್ಯಾಸ್) ಬೆಲೆಯಲ್ಲಿ ಭಾನುವಾರ ಸರಾಸರಿ 54 ರುಪಾಯಿ ಇಳಿಕೆಯಾಗಿದೆ. ಆರು ತಿಂಗಳು ನಿರಂತರವಾಗಿ ಬೆಲೆಯನ್ನು ಏರಿಕೆ ಮಾಡುತ್ತಾ ಬಂದಿದ್ದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿ) ಮೊದಲ ಬಾರಿಗೆ ದರ ತಗ್ಗಿಸಿದೆ.
ಮಾರ್ಚ್ 1, 2020ರಿಂದ ಅನ್ವಯ ಆಗುವಂತೆ ಪ್ರಮುಖ ನಗರಗಳಲ್ಲಿನ ಎಲ್ ಪಿಜಿ ಸಿಲಿಂಡರ್ ಗಳ ದರದ ಮಾಹಿತಿ ಇಂತಿದೆ.
ದೆಹಲಿ 805.50 ರುಪಾಯಿ
ಕೋಲ್ಕತ್ತಾ 839.50 ರುಪಾಯಿ
ಮುಂಬೈ 776.50 ರುಪಾಯಿ
ಚೆನ್ನೈ 826 ರುಪಾಯಿ

ಕಳೆದ ತಿಂಗಳು ಪ್ರಮುಖ ನಗರಗಳಲ್ಲಿ ಅಡುಗೆ ಅನಿಲದ ಬೆಲೆಯು ರು. 144.50ರಿಂದ ರು. 149ರ ತನಕ ಏರಿಕೆ ಆಗಿತ್ತು. 2014ರ ಜನವರಿ ನಂತರ ಏರಿಕೆಯಾದ ಅತಿ ದೊಡ್ಡ ಮೊತ್ತ ಅದಾಗಿತ್ತು. ಆದರೆ ಈ ಸಿಲಿಂಡರ್ ಗಳ ಮೇಲಿನ ಸಬ್ಸಿಡಿ ಸಹ ಅದಕ್ಕೆ ತಕ್ಕಂತೆ ಏರಿಕೆ ಮಾಡಲಾಗಿತ್ತು.
ಅಂತರರಾಷ್ಟ್ರೀಯ ಮಟ್ಟದಲ್ಲಿನ ಕಚ್ಚಾ ತೈಲದ ಬೆಲೆ ಮತ್ತು ರುಪಾಯಿ ವಿನಿಮಯದ ದರವನ್ನು ಆಧಾರವಾಗಿ ಇಟ್ಟುಕೊಂಡು ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಬೆಲೆ ನಿರ್ಧರಿಸುತ್ತವೆ. ಭಾರತದಲ್ಲಿ ಒಂದು ಕುಟುಂಬಕ್ಕೆ ವರ್ಷಕ್ಕೆ 12 ಸಿಲಿಂಡರ್ ಸಬ್ಸಿಡಿ ದರದಲ್ಲಿ ದೊರೆಯುತ್ತವೆ. ಆ ನಂತರ ಪೂರ್ತಿ ದರವನ್ನು ಪಾವತಿಸಬೇಕಾಗುತ್ತದೆ. ಅಂದಹಾಗೆ ಸಬ್ಸಿಡಿ ಮೊತ್ತವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
More From GoodReturns

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

LPG cylinder Price: ದೇಶದ ಜನರಿಗೆ ಅಡುಗೆ ಅನಿಲ ದರ ಶಾಕ್… LPG ಸಿಲಿಂಡರ್ ಬೆಲೆಯಲ್ಲಿ 60 ರೂ. ಏರಿಕೆ!

Siddaramaiah: ಹೋಟೆಲ್ ಉದ್ಯಮಿಗಳ ಸಂಕಷ್ಟಕ್ಕೆ ಧ್ವನಿಯಾದ ಸಿಎಂ ಸಿದ್ದರಾಮಯ್ಯ; ಪತ್ರ ಬರೆದು ಮನವಿ

LPG Gas Cylinder: ಎಲ್ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತ, ಹೋಟೆಲ್ ಉದ್ಯಮಕ್ಕೆ ಅಡ್ಡಿ; ಪ್ರಧಾನಿಗೆ ಪತ್ರ

Hotel Bandh: ಬೆಂಗಳೂರಿಗೂ ತಟ್ಟಿದ ಯುದ್ಧದ ಬಿಸಿ; ಇಂದಿನಿಂದ ಹಲವು ಹೋಟೆಲ್ ಬಂದ್

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ



Click it and Unblock the Notifications