ಎಲ್ ಪಿಜಿ ಸಿಲಿಂಡರ್ ಗಳ ದರವನ್ನು ಪ್ರತಿ ವಾರ ಪರಿಷ್ಕರಣೆ ಮಾಡುವ ಬಗ್ಗೆ ಭಾರತೀಯ ತೈಲ ಕಂಪೆನಿಗಳು ಯೋಜನೆ ರೂಪಿಸುತ್ತಿವೆ ಎಂದು ವರದಿ ಆಗಿದೆ. ಸದ್ಯಕ್ಕೆ ತಿಂಗಳಿಗೊಮ್ಮೆ ದರ ಪರಿಷ್ಕರಣೆ ಮಾಡುವ ಪದ್ಧತಿ ಇದ್ದು, ಅದನ್ನು ಮುಂದಿನ ವರ್ಷದಿಂದ ವಾರಕ್ಕೆ ಒಮ್ಮೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಸದ್ಯಕ್ಕೆ ಪೆಟ್ರೋಲಿಯಂ ಉತ್ಪನ್ನಗಳ ದರದಲ್ಲಿ ಪ್ರತಿ ದಿನವೂ ಏರಿಳಿತ ಆಗುತ್ತಿದೆ. ಆ ಹಿನ್ನೆಲೆಯಲ್ಲಿ ವಾರಕ್ಕೆ ಒಮ್ಮೆ ಎಲ್ ಪಿಜಿ ಸಿಲಿಂಡರ್ ದರ ಪರಿಷ್ಕರಣೆಗೆ ಆಲೋಚನೆ ಮಾಡಲಾಗಿದೆ. ಈಗಾಗಲೇ ತೈಲ ಮಾರ್ಕೆಟಿಂಗ್ ಕಂಪೆನಿಗಳಿಂದ ಪೆಟ್ರೋಲ್- ಡೀಸೆಲ್ ದರ ಪರಿಷ್ಕರಣೆ ಪ್ರತಿ ದಿನವೂ ಆಗುತ್ತಿದೆ. ಸಾಮಾನ್ಯವಾಗಿ ಎಲ್ ಪಿಜಿ ದರವು ಪ್ರತಿ ತಿಂಗಳ 1ನೇ ತಾರೀಕಿಗೆ ಆಗುತ್ತಿದೆ.
ಈ ಮಧ್ಯೆ ನಾನಾ ಸಬ್ಸಿಡೈಸ್ಡ್ ಎಲ್ ಪಿಜಿ ಸಿಲಿಂಡರ್ ದರವು ದೆಹಲಿ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಡಿಸೆಂಬರ್ 15ರಂದು ಏರಿಕೆ ಆಗಿದೆ. ಈಗ 14.2 ಕೇಜಿ ತೂಕದ ಸಿಲಿಂಡರ್ ದರ ದೆಹಲಿ ಮತ್ತು ಮುಂಬೈನಲ್ಲಿ 644 ರುಪಾಯಿ ಇದೆ. ಕೋಲ್ಕತ್ತಾದಲ್ಲಿ 670 ರುಪಾಯಿ ಇದೆ.

ಅಡುಗೆ ಅನಿಲ ಸಿಲಿಂಡರ್ ಬೆಲೆಯು ಡಿಸೆಂಬರ್ 1ನೇ ತಾರೀಕಿನಂದು ಸತತ ಆರನೇ ತಿಂಗಳು ತೈಲ ಮಾರ್ಕೆಟಿಂಗ್ ಕಂಪೆನಿಗಳು ಬದಲಿಸಿಲ್ಲ. 14.2 ಕೇಜಿ ತೂಕದ ಇಂಡೇನ್ ಗ್ಯಾಸ್ ಬೆಲೆ ಮೆಟ್ರೋ ನಗರಗಳಲ್ಲಿ ಅಂದರೆ, ದೆಹಲಿ 549 ರುಪಾಯಿ, ಕೋಲ್ಕತ್ತಾ 620 ರುಪಾಯಿ, ಮುಂಬೈ 594 ರುಪಾಯಿ, ಚೆನ್ನೈ 610 ರುಪಾಯಿ ಇದೆ.
ದೇಶೀಯ ಬಳಕೆದಾರರು 14.2 ಕೇಜಿ ತೂಕದ ಹನ್ನೆರಡು ಸಿಲಿಂಡರ್ ಗಳನ್ನು ಒಂದು ವರ್ಷದಲ್ಲಿ ಸಬ್ಸಿಡಿ ದರದಲ್ಲಿ ಪಡೆಯಬಹುದು. ಇನ್ನು ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಡಿಸೆಂಬರ್ 1ರಿಂದ ಏರಿಕೆ ಆಗಿದೆ. ಅತಿ ಹೆಚ್ಚಿನ ಏರಿಕೆ, 55 ರುಪಾಯಿ ಚೆನ್ನೈನಲ್ಲಿ ಆಗಿದೆ.


Click it and Unblock the Notifications