ದೇಶೀಯ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಲಾಗಿದೆ. ಭಾರತದಲ್ಲಿ ಪೆಟ್ರೋಲ್ ಬೆಲೆ ದಾಖಲೆಯ ಮಟ್ಟವನ್ನು ತಲುಪಿದ ಸಮಯದಲ್ಲಿ ಎಲ್‌ಪಿಜಿ ಬೆಲೆ ಹೆಚ್ಚಳವಾಗಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ.
ಗ್ಯಾಸ್ ಸಿಲಿಂಡರ್ ಬೆಲೆಯನ್ನು 50 ರೂ.ಗೆ ಹೆಚ್ಚಿಸಲಾಗಿದೆ. ಹೆಚ್ಚಿದ ದರಗಳು ಇಂದಿನಿಂದಲೇ ಅನ್ವಯವಾಗಿವೆ. ದೆಹಲಿಯಲ್ಲಿ 14.2 ಕೆಜಿ ದೇಶೀಯ ಅನಿಲ ಸಿಲಿಂಡರ್ ಬೆಲೆ 769 ರೂ. ತಲುಪಿದೆ.

ಡಿಸೆಂಬರ್‌ನಲ್ಲಿ ತೈಲ ಕಂಪನಿಗಳು 14.2 ಕೆಜಿ ದೇಶೀಯ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ತಲಾ 50-50 ರೂ.ಗೆ ಹೆಚ್ಚಿಸಿವೆ. ಇದರ ನಂತರ, ಜನವರಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ನಂತರ ಫೆಬ್ರವರಿ ಮೊದಲ ದಿನ ಯಾವುದೇ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಲಿಲ್ಲ. ಆದರೆ 3 ದಿನಗಳ ನಂತರ 4 ರಂದು ತೈಲ ಕಂಪನಿಗಳು ಸದ್ದಿಲ್ಲದೆ ಗ್ಯಾಸ್ ಸಿಲಿಂಡರ್ ಅನ್ನು 25 ರೂ. ಏರಿಕೆ ಮಾಡಿದವು.
ಈಗಿನಂತೆ, 14.2 ಕೆಜಿ ದೇಶೀಯ ಅನಿಲ ಸಿಲಿಂಡರ್‌ಗಳ ಬೆಲೆ ಮುಂಬೈ, ದೆಹಲಿಯಲ್ಲಿ 719 ರೂ , ಕೋಲ್ಕತ್ತಾದಲ್ಲಿ 745.50 ರೂ. ಮತ್ತು ಚೆನ್ನೈನಲ್ಲಿ 735 ರೂ. ತಲುಪಿದೆ. ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆ ದೆಹಲಿಯಲ್ಲಿ 1,533 ರೂ., ಮುಂಬೈನಲ್ಲಿ 1,482.50 ರೂ., ಕೋಲ್ಕತ್ತಾದಲ್ಲಿ 1,598.50 ಮತ್ತು ಚೆನ್ನೈನಲ್ಲಿ 1,649 ರೂಪಾಯಿಗೆ ಏರಿಕೆಯಾಗಿದೆ.
ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಿರ್ಧರಿಸುತ್ತವೆ. ಎಲ್‌ಪಿಜಿ ಬೆಲೆಗಳನ್ನು ಮಾಸಿಕ ಆಧಾರದ ಮೇಲೆ ಪರಿಷ್ಕರಿಸಲಾಗುತ್ತದೆ. ಅಂತರರಾಷ್ಟ್ರೀಯ ಇಂಧನ ದರಗಳು ಮತ್ತು ಯುಎಸ್ ಡಾಲರ್-ರೂಪಾಯಿ ವಿನಿಮಯ ದರಗಳ ಆಧಾರದ ಮೇಲೆ ಬೆಲೆಗಳು ಹೆಚ್ಚಾಗುತ್ತವೆ.


Click it and Unblock the Notifications