ಲೋಕಸಭೆಯಲ್ಲಿ ಬುಧವಾರ ನೇರ ತೆರಿಗೆ ವಿವಾದ್ ಸೇ ವಿಶ್ವಾಸ್ ಮಸೂದೆ- 2020ಕ್ಕೆ ಒಪ್ಪಿಗೆ ಸಿಕ್ಕಿದೆ. ನೇರ ತೆರಿಗೆಗೆ ಸಂಬಂಧಿಸಿದ 4,83,000 ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಅನುಕೂಲ ಆಗುತ್ತದೆ ಮತ್ತು ವಿಚಾರಣೆಯಿಂದ ಕೂಡ ರಕ್ಷಣೆ ದೊರೆಯುತ್ತದೆ. ದೆಹಲಿ ಹಿಂಸಾಚಾರ ವಿಚಾರವಾಗಿ ವಿರೋಧ ಪಕ್ಷಗಳು ಎಬ್ಬಿಸಿದ ಗಲಾಟೆ ಮಧ್ಯೆಯೇ ಮಸೂದೆಗೆ ಒಪ್ಪಿಗೆ ಸಿಕ್ಕಿದೆ.
ನೇರ ತೆರಿಗೆ ಮೊತ್ತ 9.32 ಲಕ್ಷ ಕೋಟಿ ರುಪಾಯಿ ವ್ಯಾಜ್ಯ ಬಾಕಿ ಉಳಿದಿದೆ. ಈ ಮಸೂದೆಯನ್ನು ಕಳೆದ ತಿಂಗಳು ಸಂಸತ್ ನಲ್ಲಿ ಮಂಡಿಸಲಾಗಿತ್ತು. ಒಂದು ವೇಳೆ ಈ ಯೋಜನೆಯು ಯಶಸ್ವಿಯಾದಲ್ಲಿ ಸರ್ಕಾರದ ಬೊಕ್ಕಸಕ್ಕೆ ಆದಾಯ ಬರುತ್ತದೆ. ಕೋರ್ಟ್- ನ್ಯಾಯ ಮಂಡಳಿಯಲ್ಲಿ ವಿಳಂಬ ಆಗುತ್ತಿರುವ ನೇರ ತೆರಿಗೆ ವ್ಯಾಜ್ಯಗಳನ್ನು ಕೂಡ ಇದರಲ್ಲಿ ಬಗೆ ಹರಿಸಿಕೊಳ್ಳಬಹುದು.
ಈ ಸ್ಕೀಂ ಅಡಿಯಲ್ಲಿ ಫಲಾನುಭವಿಗಳಿಗೆ ಬಾಕಿ ಇರುವ ತೆರಿಗೆ ಮೊತ್ತವನ್ನು ಬಡ್ಡಿ ಹಾಗೂ ದಂಡ ಇಲ್ಲದೆ ಪಾವತಿಸುವುದಕ್ಕೆ ಅವಕಾಶ ಇದೆ. ಆದರೆ ಅದನ್ನು ಮಾರ್ಚ್ 31ಕ್ಕೆ ಮುಂಚಿತವಾಗಿ ಪಾವತಿಸಬೇಕು. 2021ರ ಆರ್ಥಿಕ ವರ್ಷದ ಮೊದಲ ತ್ರೈ ಮಾಸಿಕದಲ್ಲಿ ಪಾವತಿ ಮಾಡಿದರೆ ಮೊತ್ತವು 10 ಪರ್ಸೆಂಟ್ ಹೆಚ್ಚಾಗುತ್ತದೆ.

ಒಂದು ವೇಳೆ ತೆರಿಗೆ ವ್ಯಾಜ್ಯವು ದಂಡ, ಬಡ್ಡಿ ಅಥವಾ ಶುಲ್ಕಕ್ಕಿಂತ ಹೆಚ್ಚಾಗಿದ್ದಲ್ಲಿ ಮಾರ್ಚ್ ಅಂತ್ಯದೊಳಗೆ ಪಾವತಿಸಿದರೆ 25% ತೀರುವಳಿಯಾಗಿ ಆಗುತ್ತದೆ. ಒಂದು ವೇಳೆ ಮುಂದಿನ ತ್ರೈ ಮಾಸಿಕದಲ್ಲಿ ಪಾವತಿಸಿದರೆ ಆ ಮೊತ್ತ 30%ಗೆ ಏರಿಕೆ ಆಗುತ್ತದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications