For Quick Alerts
ALLOW NOTIFICATIONS  
For Daily Alerts

ಕಳೆದ ವಾರದ ಟಾಪ್ 10 ಮೌಲ್ಯ: ಇನ್ಫೋಸಿಸ್, ಟಿಸಿಎಸ್‌ಗೆ ಹೆಚ್ಚು ಲಾಭ

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಎಂಭತ್ತು ಕಂಪನಿಗಳು ಒಟ್ಟಾರೆ 2,34,161.58 ಕೋಟಿ ರು ಮೌಲ್ಯ ಹೆಚ್ಚಿಸಿಕೊಂಡಿವೆ. ಇದಕ್ಕೂ ಹಿಂದಿನ ವಾರದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಭಾರಿ ಲಾಭ ಗಳಿಸಿದ್ದವು. ಈ ವಾರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL), ಇನ್ಫೋಸಿಸ್ ಹಾಗೂ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ (ಟಿಸಿಎಸ್) ಹೆಚ್ಚು ಲಾಭಗಳಿಸಿವೆ.

ಕಳೆದ ವಾರ ಬಿಎಸ್ಇ 30 ಷೇರುಗಳ ಬೆಂಚ್ ಮಾರ್ಕ್ ಸೂಚ್ಯಂಕ ಶೇ 2.47 ರಷ್ಟು ಏರಿಕೆಯಾಗಿ 1,478.38 ಅಂಕಗಳನ್ನು ಮುಟ್ಟಿತ್ತು. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಕಡಿಮೆ ಕಂಪನಿ ಮೌಲ್ಯ ಗಳಿಸಿಕೊಂಡಿವೆ. ಟಾಪ್ 10 ರಲ್ಲಿ 8 ಕಂಪನಿಗಳ ಮೌಲ್ಯ ಬದಲಾಗಿದೆ. ಓಮಿಕ್ರಾನ್ ಭೀತಿ ನಡುವೆ ಷೇರುಪೇಟೆಯಲ್ಲಿ ಸುಧಾರಣೆ ಕಂಡು ಬಂದಿದೆ. ಕಳೆದ ವಾರ ಮೂರಕ್ಕೂ ಅಧಿಕ ಕಂಪನಿಗಳು ನಷ್ಟ ಅನುಭವಿಸಿದ್ದವು.

ಕೊರೊನಾವೈರಸ್ ಹೊಸ ರೂಪಾಂತರಿ ಅಲೆಯಿಂದ ಷೇರುಪೇಟೆ ವಹಿವಾಟು ಭಾರಿ ನಷ್ಟ ಅನುಭವಿಸಿದ್ದವು, ಟಾಪ್ ಕಂಪನಿಗಳು ಭಾರಿ ನಷ್ಟ ಅನುಭವಿಸಿದ್ದವು. ಯಾವ ಕಂಪನಿ ಮೌಲ್ಯ ಎಷ್ಟಾಗಿದೆ ಎಂಬ ವಿವರ ಮುಂದೆ ಓದಿ..

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ ಮೌಲ್ಯ 69,503.71 ಕೋಟಿ ರು ಇಳಿಕೆ ಕಂಡು 17,17,265.94 ರು ಆಗಿದೆ. ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ಕಳೆದ ಒಂದು ವಾರದಲ್ಲಿ 48,385.63 ಕೋಟಿ ರು ಮೌಲ್ಯ ಇಳಿಸಿಕೊಂಡು 8,10,927.25 ಕೋಟಿ ರು ಮೌಲ್ಯ ಹೊಂದಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) 42,317.15 ಕೋಟಿ ರು ಕುಸಿತ ಕಂಡು 14,68,245.97 ಕೋಟಿ ರು ಮೌಲ್ಯ ಕಂಡಿದೆ. ಎಚ್‌ಡಿಎಫ್‌ಸಿ 21,125.41 ಕೋಟಿ ರು ಇಳಿಕೆ ಕಂಡು 4,91,426.13 ಕೋಟಿ ರು ತಲುಪಿದೆ.

ಐಸಿಐಸಿಐ ಬ್ಯಾಂಕ್

ಐಸಿಐಸಿಐ ಬ್ಯಾಂಕ್

ಐಸಿಐಸಿಐ ಬ್ಯಾಂಕ್ 18,650.77 ಕೋಟಿ ರು ಏರಿಕೆ ಕಂಡು 5,69,511.37 ಕೋಟಿ ರು ತಲುಪಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 15,127.22 ಕೋಟಿ ರು ಏರಿಸಿಕೊಂಡು 4,53,593.38 ಕೋಟಿ ರು ಮೌಲ್ಯಕ್ಕೆ ಏರಿದೆ.

ಬಜಾಜ್ ಫೈನಾನ್ಸ್

ಬಜಾಜ್ ಫೈನಾನ್ಸ್

ಬಜಾಜ್ ಫೈನಾನ್ಸ್ 10,291.28 ಕೋಟಿ ರು ಏರಿಸಿಕೊಂಡು 4,72,686.80 ಕೋಟಿ ರುಗೆ ಹೆಚ್ಚಳ ಕಂಡಿದೆ. ಭಾರ್ತಿ ಏರ್ ಟೆಲ್ ಸಂಸ್ಥೆ ಮೌಲ್ಯಗಳು 8,760.41 ಕೋಟಿ ರು ಏರಿಸಿಕೊಂಡು 3,95,810.41 ಕೋಟಿ ರುಗೆ ಹೆಚ್ಚಳ ಕಂಡಿದೆ.

ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್

ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್

ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ 12,217.88 ಕೋಟಿ ರು ಏರಿಕೆ ಕಂಡು 5,55,560.85 ಕೋಟಿ ರು ಮೌಲ್ಯ ಉಳಿಸಿಕೊಂಡಿದೆ. ಇದೇ ವೇಳೆ ಎಚ್‌ಡಿಎಫ್‌ಸಿ ಬ್ಯಾಂಕ್ 2,854.33 ಕೋಟಿ ರು ಮೌಲ್ಯ ಇಳಿಕೆ ಕಂಡು 8,56,439.28 ಕೋಟಿ ರು ತಲುಪಿದೆ.

ಟಾಪ್ 10 ಕಂಪನಿಗಳು

ಟಾಪ್ 10 ಕಂಪನಿಗಳು

ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಎಚ್‌ಡಿಎಫ್‌ಸಿ, ಬಜಾಜ್ ಫೈನಾನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಭಾರ್ತಿ ಏರ್ ಟೆಲ್.

English summary

M-cap of 8 of top-10 cos jumps over 2.34 lakh cr; RIL, Infosys, TCS top gainers

Eight of the top-10 most-valued firms together added Rs 2.34 lakh cr in market valuation last week, with Infosys, TCS top gainers.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X